For Quick Alerts
ALLOW NOTIFICATIONS  
For Daily Alerts

ಅತ್ಯಾಧಿಕ ಪೋಷಕಾಂಶವಿರುವ ಹಣ್ಣು-ಕಿವಿ

|

ಕಿವಿ ಹಣ್ಣು ರುಚಿ ಮಾತ್ರವಲ್ಲ ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಈ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ, ಫುಡ್ ಬಜಾರ್ ಗಳಲ್ಲಿ ದೊರೆಯುವುದು. ಈ ಹಣ್ಣು ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ರೂಟ್ಗರ್ಸ್ ವಿಶ್ವವಿಧ್ಯಾನಿಲಯದಲ್ಲಿ ಡಾ. ಪೌಲ್ ಲಾಚಾನ್ಸ್ ನಡೆಸಿದ ಅಧ್ಯಯನದಿಂದ ಧೃಢ ಪಟ್ಟಿದೆ. ಈ ಅಧ್ಯಯನದಲ್ಲಿ ಸಾಮಾನ್ಯವಾಗಿ ದಿನ ನಿತ್ಯ ತಿನ್ನುವ ಸುಮಾರು 27 ಹಣ್ಣುಗಳನ್ನು ತೆಗೆದುಕೊಂಡು ಪರೀಕ್ಷಿಸಿದಾಗ ಅದರಲ್ಲಿ ಕಿವಿ ಹಣ್ಣು ಇತರ ಎಲ್ಲಾ ಹಣ್ಣುಗಳಿಗಿಂತ ಅತ್ಯಾಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ನು ಎಂದು ತಿಳಿದು ಬಂದಿದೆ.

ಕಿವಿ ಹಣ್ಣು ಅತ್ಯಾಧಿಕ ಪೋಷಕಾಂಶವಿರುವ ಹಣ್ಣು ಎಂದು ಗುರುಸಿಕೊಳ್ಳಲು ಈ ಕೆಳಗಿನ ಅಂಶಗಳು ಕಾರಣಗಳಾಗಿವೆ.

Benefit Of Kiwi Fruit

ವಿಟಮಿನ್ ಸಿ: ಕಿವಿಹಣ್ಣಿನಲ್ಲಿ ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪಟ್ಟು ವಿಟಮಿನ್ ಸಿ ಹೊಂದಿದೆ. ವಿಟಮಿನ್ ಸಿ ಅಸ್ತಮಾದಂತಹ ಕಾಯಿಲೆಗಳು ತಡೆಗಟ್ಟಲು ಸಹಾಯ ಮಾಡುತ್ತದೆ. ಮಕ್ಕಳು ವಾರದಲ್ಲಿ 5-6 ಕಿವಿ ಹಣ್ಣು ತಿಂದರೆ ಅವರಿಗೆ ಅಸ್ತಮಾ, ಉಸಿರಾಟದ ತೊಂದರೆಗಳು ಬರದಂತೆ ತಡೆಯುತ್ತದೆ.

ಪೊಟಾಷ್ಯಿಯಂ: ಬಾಳೆ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶದಷ್ಟು ಕಿವಿ ಹಣ್ಣಿನಲ್ಲಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಆರೋಗ್ಯದ ಸ್ವಾಸ್ಥ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಸೋಡಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಾಯಮಾಡುತ್ತದೆ.

ವಿಟಮಿನ್ ಇ:
ಸಾಮಾನ್ಯವಾಗಿ ವಿಟಮಿನ್ ಇ ಇರುವ ಆಹಾರದಲ್ಲಿ ಕೊಬ್ಬಿನಂಶವಿರುತ್ತದೆ. ಆದರೆ ಕಿವಿ ಹಣ್ಣಿನಲ್ಲಿ ಕೊಬ್ಬಿನಂಶ ತುಂಬಾ ಕಡಿಮೆ ಇದ್ದು ವಿಟಮಿನ್ ಇ ಇರುವುದರಿಂದ ತ್ವಚೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಫಾಲಿಕ್ ಆಸಿಡ್: ಕಿವಿ ಹಣ್ಣಿನಲ್ಲಿ ಇತರ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪ್ರಮಾಣದಲ್ಲಿ ಫಾಲಿಕ್ ಆಸಿಡ್ ಇರುವುದರಿಂದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಇದನ್ನು ತಿನ್ನುವುದು ಒಳ್ಳೆಯದು.

ನಾರಿನಂಶ:
ಇದರಲ್ಲಿ ನಾರಿನಂಶ ಅಧಿಕ ಇರುವುದರಿಂದ ಮಲಬದ್ಧತೆ, ಅಜೀರ್ಣತೆ ಸಮಸ್ಯೆ ನಿವಾರಣೆಯಾಗುವುದು. ಅಲ್ಲದೆ ನಾರಿನಂಶ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇದನ್ನು ತಿಂದರೆ ಬೇಗನೆ ಹೊಟ್ಟೆ ತುಂಬುವುದರಿಂದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿಂದರೆ ಸಾಕು. ಇದರಿಂದಾಗಿ ತೂಕ ಇಳಿಕೆಗೆ ಸಹಕಾರಿಯಾಗುವುದು.

ಸತು:
ಕಿವಿ ಹಣ್ಣಿನಲ್ಲಿರುವ ಸತು ಪುರುಷರಲ್ಲಿರುವ ಹಾರ್ಮೋನ್ ಟೆಸ್ಟೋಸ್ಟಿರೋನ್(testosterone) ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ. ಇದು ತ್ವಚೆ, ಕೂದಲು ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

English summary

Benefit Of Kiwi Fruit | Tips For Health | ಕಿವಿ ಹಣ್ಣಿನ ಪ್ರಯೋಜಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Kiwi has the nutritional value. The study found that out of the 27 most commonly consumed fruits; kiwifruit is the most nutrient dense. Let us see what makes kiwi the nutrition powerhouse of fruits
Story first published: Tuesday, May 15, 2012, 12:09 [IST]
X
Desktop Bottom Promotion