For Quick Alerts
ALLOW NOTIFICATIONS  
For Daily Alerts

  ಬೊಜ್ಜು ಕರಗಿಸುವುದು ಅಂದುಕೊಂಡಷ್ಟು ಸುಲಭವಲ್ಲ!

  By Manu
  |

  ಕುಳಿತಲ್ಲೇ ಕುಳಿತುಕೊಂಡು ಮಾಡುವ ಕೆಲಸ, ದೇಹಕ್ಕೆ ಯಾವುದೇ ವ್ಯಾಯಾಮ ನೀಡದೆ ಇದ್ದಾಗ ಅನಾರೋಗ್ಯಕರ ಬೊಜ್ಜು ನಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ಆರಂಭದಲ್ಲಿ ನಾವು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇದು ನಮ್ಮ ದೇಹವನ್ನು ಕಾಡಲು ಆರಂಭಿಸಿದಾಗ ಇದನ್ನು ಹೇಗಪ್ಪಾ ಕಡಿಮೆ ಮಾಡಿಕೊಳ್ಳುವುದು ಎಂದು ಯೋಚಿಸುತ್ತೇವೆ. ಆದರೆ ಬೊಜ್ಜು ಅದಾಗಲೇ ನಮ್ಮ ದೇಹದಲ್ಲಿ ತನ್ನ ಸಾಮ್ರಾಜ್ಯವನ್ನು ಕಟ್ಟಿರುತ್ತದೆ. ಅದರಲ್ಲೂ ಹೊಟ್ಟೆಯ ಬೊಜ್ಜು ಎನ್ನುವುದು ತುಂಬಾ ಹೇಸಿಗೆ ಮೂಡಿಸುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸುವ ಸರಳ ಉಪಾಯ ಇಲ್ಲಿದೆ

  ಯಾವುದೇ ಕಾರ್ಯಕ್ರಮಕ್ಕೆ ಹೋದರೂ ನಿಮ್ಮ ಹೊಟ್ಟೆಯ ಬಗ್ಗೆ ಚರ್ಚೆಗಳು ಆಗುತ್ತಿರುತ್ತದೆ. ನೀವು ತಿನ್ನುವುದನ್ನು ಕಡಿಮೆ ಮಾಡಿದ್ದರೂ ಹೊಟ್ಟೆಯ ಬೊಜ್ಜು ಮಾತ್ರ ಕೆಳಗಿಳಿಯುವುದೇ ಇಲ್ಲ. ಎಷ್ಟೇ ವ್ಯಾಯಾಮ, ಆಹಾರ ಪಥ್ಯ ಮಾಡಿದರೂ ನಿಮ್ಮ ಹೊಟ್ಟೆಯ ಬೊಜ್ಜು ಕರಗುವುದೇ ಇಲ್ಲ. ಹಾರ್ಮೋನು, ವಯಸ್ಸು, ಲಿಂಗ ಮತ್ತು ಇತರ ಹಲವಾರು ಕಾರಣಗಳು ಇವೆ. ಹೊಟ್ಟೆಯ ಬೊಜ್ಜಿನ ಬಗ್ಗೆ ಇರುವ ಕೆಲವೊಂದು ಸತ್ಯಗಳ ಬಗ್ಗೆ ನಾವು ಇಲ್ಲಿ ಚರ್ಚಿಸಲಾಗಿದೆ, ಮುಂದೆ ಓದಿ... ಹೊಟ್ಟೆಯ ಬೊಜ್ಜನ್ನು ಕರಗಿಸುವ ಸರಳ ಉಪಾಯ ಇಲ್ಲಿದೆ

  ವಾಸ್ತವಾಂಶ #1

  ವಾಸ್ತವಾಂಶ #1

  ಕೆಲವೊಂದು ಜನರು ಸಾಧ್ಯವಾದ ರೀತಿಯಲ್ಲಿ ಬೊಜ್ಜನ್ನು ಕರಗಿಸಲು ಪ್ರಯತ್ನಿಸುತ್ತಾರೆ. ಆದರೆ ವಿಜ್ಞಾನಿಗಳ ಪ್ರಕಾರ ಇದು ಸಾಧ್ಯವಿಲ್ಲ. ನೀವು ದೇಹದ ಒಂದೇ ಭಾಗದ ಕೊಬ್ಬನ್ನು ಕರಗಿಸಲು ಪ್ರಯತ್ನಿಸುತ್ತಿರಬಹುದು. ಆದರೆ ಯಾವುದೇ ವ್ಯಾಯಾಮವು ಒಂದು ಭಾಗಕ್ಕೆ ಸೀಮಿತವಾಗುವುದಿಲ್ಲ. ಇದು ದೇಹದ ಎಲ್ಲಾ ಭಾಗಕ್ಕೂ ಅನ್ವಯವಾಗುವುದು. ಎಲ್ಲಿ ಮತ್ತು ಹೇಗೆ ಕೊಬ್ಬನ್ನು ಇಡಬೇಕು ಎನ್ನುವ ಬಗ್ಗೆ ನಿಮಗೆ ನಿಯಂತ್ರಣವಿರುವುದಿಲ್ಲ. ಅನವಂಶಿಯತೆ ಇದಕ್ಕೆ ಕಾರಣವಾಗಿರಬಹುದು.

  ವಾಸ್ತವಾಂಶ #2

  ವಾಸ್ತವಾಂಶ #2

  ಲಿಂಗ ಮತ್ತು ಅನುವಂಶಿಯತೆ ದೇಹದ ಯಾವ ಭಾಗದಲ್ಲಿ ಕೊಬ್ಬು ಇರಬೇಕೆಂದು ನಿರ್ಧರಿಸುತ್ತದೆ. ಮೊದಲು ಇದು ಹೊಟ್ಟೆ, ಬಳಿಕ ಇತರ ಭಾಗಗಳಲ್ಲಿ ಶೇಖರಣೆಯಾಗುವುದು.

  ವಾಸ್ತವಾಂಶ #3

  ವಾಸ್ತವಾಂಶ #3

  ಹೊಟ್ಟೆಯ ಬೊಜ್ಜನ್ನು ಕರಗಿಸಬೇಕಾದರೆ ವ್ಯಾಯಾಮ ಮತ್ತು ಆಹಾರಕ್ರಮ ತುಂಬಾ ಮುಖ್ಯ. ನಿಮಗೆ ಒತ್ತಡ ಹೆಚ್ಚಿದ್ದರೆ ಆಗ ಸರಿಯಾಗಿ ವ್ಯಾಯಾಮ ಮಾಡಿ ಕೊರ್ಟಿಸೊಲ್ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

  ವಾಸ್ತವಾಂಶ #4

  ವಾಸ್ತವಾಂಶ #4

  ನಿಮಗೆ ಒತ್ತಡ ಹೆಚ್ಚಾದಾಗ ದೇಹವು ಕೊರ್ಟಿಸೊಲ್ ಎನ್ನುವ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಕೊಬ್ಬು ಶೇಖರಣೆಯಾಗಲು ಒತ್ತಡವು ಕಾರಣವಾಗಿದೆ. ಒತ್ತಡಕ್ಕೆ ನಾವು ದೈಹಿಕವಾಗಿ ಯಾವುದೇ ಕೆಲಸ ಮಾಡುವುದಿಲ್ಲ. ಇದರಿಂದ ಕೊಬ್ಬು ಶೇಖರಣೆಯಾಗುವುದು.

  ವಾಸ್ತವಾಂಶ #5

  ವಾಸ್ತವಾಂಶ #5

  ಹೊಟ್ಟೆಯ ಕೊಬ್ಬಿಗೆ ಇನ್ಸುಲಿನ್ ಕೂಡ ಕಾರಣವಾಗಬಹುದು. ಹೆಚ್ಚಿನ ಇನ್ಸುಲಿನ್ ಉತ್ಪಾದನೆಯಿಂದ ನಿಮ್ಮ ಹೊಟ್ಟೆಯ ಕೊಬ್ಬು ಹೆಚ್ಚಾಗಬಹುದು.

  ವಾಸ್ತವಾಂಶ #6

  ವಾಸ್ತವಾಂಶ #6

  ಹೊಟ್ಟೆಯ ಕೊಬ್ಬಿನಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದರಲ್ಲಿ ಪ್ರಮುಖವಾಗಿ ಎರಡನೇ ಹಂತದ ಮಧುಮೇಹ, ರಕ್ತದೊತ್ತಡ, ಕೆಲವು ರೀತಿಯ ಕ್ಯಾನ್ಸರ್ ಇತ್ಯಾದಿ. ಹೊಟ್ಟೆಯ ಕೊಬ್ಬು ಜೀವಕ್ಕೂ ಅಪಾಯಕಾರಿ.

  ವಾಸ್ತವಾಂಶ #7

  ವಾಸ್ತವಾಂಶ #7

  ಇಸ್ಟೋಜನ್ ನಂತಹ ಹಾರ್ಮೋನ್ ಹೊಟ್ಟೆಯ ಕೊಬ್ಬಿಗೆ ಕಾರಣ. ಮುಟ್ಟು ನಿಂತ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿದೆ.

  ವಾಸ್ತವಾಂಶ #8

  ವಾಸ್ತವಾಂಶ #8

  ಇನ್ನೊಂದು ಪ್ರಮುಖ ಕಾರಣವೆಂದರೆ ಅದು ವಯಸ್ಸು. ವಯಸ್ಸಾಗುತ್ತಿದ್ದಂತೆ ಕೆಲವರ ಹೊಟ್ಟೆಯಲ್ಲಿ ಕೊಬ್ಬು ಕಾಣಿಸಿಕೊಳ್ಳುವುದು. ಚಯಾಪಚಯಾ ಕ್ರಿಯೆ ನಿಧಾನವಾದಾಗ ಹೊಟ್ಟೆ ಕೊಬ್ಬು ಹೆಚ್ಚುವುದು.

   

   

  English summary

  Why Belly Fat Is Tough To Lose

  Those who target fat loss, tend to struggle a lot when it comes to losing fat in the belly area. There are so many myths surrounding belly fat and this is why many people embrace all kinds of diet and exercise routines. Even after trying various diets and workouts, losing belly fat seems very tough because there are so many factors that play a role in the accumulation of fat in your body.
  Story first published: Sunday, May 1, 2016, 8:04 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more