For Quick Alerts
ALLOW NOTIFICATIONS  
For Daily Alerts

ಕರಿಮೆಣಸಿನ ಪುಡಿ ಬೆರೆಸಿದ ಚಹಾ-ಸಕತ್ ಪವರ್‌ ಫುಲ್!

By manu
|

ನೂರಾರು ವರ್ಷಗಳಿಂದ ಕರಿಮೆಣಸು ಭಾರತದ ಮಸಾಲೆ ವಸ್ತುಗಳಲ್ಲಿ ಒಂದು ಪ್ರಮುಖ ಅಂಗವಾಗಿದ್ದು ಅಡುಗೆಗಳ ಸ್ವಾದವನ್ನು ಹೆಚ್ಚಿಸುತ್ತಿದೆ. ಬರೆ ರುಚಿಗಾಗಿ ಮಾತ್ರವಲ್ಲ, ಹಲವಾರು ಕಾಯಿಲೆಗಳಿಗೆ ಔಷಧದ ರೂಪದಲ್ಲಿಯೂ ಬಳಸಲ್ಪಡುತ್ತಾ ಬರಲಾಗಿದೆ. ಇದರ ಖಾರವಾದ ರುಚಿಗೆ ಇದರಲ್ಲಿರುವ ಪಿಪೆರಿನ್ ಎಂಬ ಪೋಷಕಾಂಶವೇ ಕಾರಣವಾಗಿದೆ. ಈ ಪೋಷಕಾಂಶ ಒಂದು ಉತ್ತಮ ಉರಿಯೂತ ನಿವಾರಕವಾಗಿದ್ದು ಹಲವು ರೀತಿಯ ನೋವು ಮತ್ತು ಸೋಂಕುಗಳನ್ನು ಶಮನಗೊಳಿಸಲು ಸಮರ್ಥವಾಗಿದೆ. ಕರಿಮೆಣಸಿನ ಪುಡಿ ಬೆರೆಸಿದ ಬಿಸಿನೀರು- ಆಯಸ್ಸು ನೂರು!

ಕಾಳುಮೆಣಸಿನ ಅಥವಾ ಕರಿಮೆಣಸಿನ ಪೂರ್ಣ ಪ್ರಮಾಣದ ಪ್ರಯೋಜನ ಪಡೆಯಲು ಇದನ್ನು ನುಣ್ಣಗೆ ಪುಡಿಮಾಡಿ ಚಿಟಿಕೆಯಷ್ಟು ಪ್ರಮಾಣವನ್ನು ನಮ್ಮ ನಿತ್ಯದ ಪೇಯಗಳಲ್ಲಿ ಬೆರೆಸಿ ಕುಡಿದರೂ ಸಾಕು. ನಮ್ಮೆಲ್ಲರ ನೆಚ್ಚಿನ ಪೇಯವಾದ ಟೀ ಜೊತೆಗೆ ಇದು ಸುಲಭವಾಗಿ ಬೆರೆತು ಇದರ ರುಚಿಯನ್ನು ಹೆಚ್ಚಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸುತ್ತದೆ. ಟೀ ಕುಡಿಯುವವರಿಗೆ ಇಲ್ಲಿದೆ 10 ಸಿಹಿ ಸುದ್ದಿ

ಬನ್ನಿ, ಚಿಟಿಕೆ ಕರಿಮೆಣಸಿನ ಪುಡಿ ಸೇರಿಸುವ ಮೂಲಕ ಯಾವ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದೆಂಬುದನ್ನು ಮುಂದೆ ಓದಿ....

 ಕೆಮ್ಮು ಮತ್ತು ನೆಗಡಿ

ಕೆಮ್ಮು ಮತ್ತು ನೆಗಡಿ

ಕಾಳುಮೆಣಸಿನಲ್ಲಿ ಬ್ಯಾಕ್ಟೀರಿಯಾ ನಿವಾರಕ ಮತ್ತು ಆಂಟಿ ಆಕ್ಸಿಡೆಂಟುಗಳ ಗುಣವಿದೆ. ಕೆಮ್ಮು ಮತ್ತು ನೆಗಡಿಯ ನಿವಾರಣೆಗೆ ಈ ಗುಣಗಳು ತುಂಬಾ ಅಗತ್ಯವಾಗಿದೆ. ನಿಮ್ಮ ನಿತ್ಯದ ಟೀಯಲ್ಲಿ ಕೊಂಚವೇ ಕಾಳುಮೆಣಸಿನ ಪುಡಿಯನ್ನು ಬೆರೆಸಿದಾಗ ಟೀ ಕೊಂಚವೇ ಖಾರವಾದ ರುಚಿ ಪಡೆಯುತ್ತದೆ. ಜೊತೆಗೇ ಇದರ ಸೇವನೆಯಿಂದ ನೆಗಡಿ ಕಡಿಮೆಯಾಗುತ್ತದೆ.

ಗಂಟಲಿನಲ್ಲಿನ ಕಫ ಮಾಯ....

ಗಂಟಲಿನಲ್ಲಿನ ಕಫ ಮಾಯ....

ಅಷ್ಟೇ ಅಲ್ಲದೆ ಗಂಟಲಿನಲ್ಲಿನ ಕಫ ಸಡಿಲವಾಗಿ ಕರಗಿ ಹೋಗುವ ಮೂಲಕ ಕೆಮ್ಮೂ ಇಲ್ಲವಾಗುತ್ತದೆ. ಜೊತೆಗೇ ಗಂಟಲ ಕೆರೆತ ಇಲ್ಲವಾಗುತ್ತದೆ ಹಾಗೂ ಕಟ್ಟಿಕೊಂಡಿದ್ದ ಮೂಗು ಸಹಾ ತೆರೆಯುತ್ತದೆ. ಉತ್ತಮ ಪರಿಣಾಮ ಪಡೆಯಲು ಈ ಟೀ ಯನ್ನು ದಿನಕ್ಕೆ ಎರಡು ಲೋಟ ಬಿಸಿಬಿಸಿಯಾಗಿಯೇ ಸೇವಿಸಬೇಕು.

ಗಂಟಲ ಬೇನೆಗೆ....

ಗಂಟಲ ಬೇನೆಗೆ....

ಒಂದು ವೇಳೆ ಗಂಟಲಿನಲ್ಲಿ ಸೋಂಕು ಹೆಚ್ಚಾಗಿದ್ದು ಬೇನೆಯುಂಟಾಗಿದ್ದರೆ ಇದಕ್ಕೂ ಕಾಳುಮೆಣಸಿನ ಪುಡಿ ಬೆರೆಸಿದ ಟೀ ಉತ್ತಮ ಪರಿಹಾರ ಒದಗಿಸುತ್ತದೆ. ಆದರೆ ಈ ಪೇಯ ಸಾಕಷ್ಟು ಬಿಸಿ ಇರಬೇಕು.....

ದಿನಕ್ಕೆ ಮೂರು ಬಾರಿ ಕುಡಿಯಿರಿ....

ದಿನಕ್ಕೆ ಮೂರು ಬಾರಿ ಕುಡಿಯಿರಿ....

ಈ ಚಹಾವನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಉತ್ತಮ ಪರಿಣಾಮ ಕಂಡುಬರುತ್ತದೆ. ನೂರಾರು ವರ್ಷಗಳಿಂದ ಈ ವಿಧಾನವನ್ನು ನಮ್ಮ ಹಿರಿಯರು ಅನುಸರಿಸುತ್ತಾ ಬಂದಿದ್ದು ಉತ್ತಮ ಆರೋಗ್ಯವನ್ನು ಹೊಂದಿದ್ದರು.

ಸೈನಸ್ ತೊಂದರೆಗೆ

ಸೈನಸ್ ತೊಂದರೆಗೆ

ನಮ್ಮ ಮೂಗಿನ ಮೇಲ್ಭಾಗದಲ್ಲಿ ಒಂದು ಟೊಳ್ಳು ಭಾಗವಿದೆ. ಇದನ್ನೇ ಕುಹರ ಅಥವಾ ಸೈನಸ್ ಎಂದು ಕರೆಯುತ್ತಾರೆ. ಕೆಲವೊಮ್ಮೆ ಈ ಭಾಗದಲ್ಲಿಯೂ ಸೋಂಕು ಆವರಿಸುತ್ತದೆ. ಆಗ ವಿಪರೀತವಾದ ತಲೆನೋವು, ಮೂಗು ಕಟ್ಟಿಕೊಳ್ಳುವುದು, ತಲೆ ಭಾರವಾಗುವುದು ಮೊದಲಾದವು ಕಾಣಿಸಿಕೊಳ್ಳುತ್ತವೆ. ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಸೈನಸ್ ತೊಂದರೆಗೆ

ಸೈನಸ್ ತೊಂದರೆಗೆ

ಈ ತೊಂದರೆಗೂ ಕಾಳುಮೆಣಸಿನ ಪುಡಿಯ ಟೀ ಕುಡಿಯುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ದಿನಕ್ಕೆ ಎರಡು ಬಾರಿ ಈ ಟೀ ಕುಡಿಯುವ ಮೂಲಕ ಕಟ್ಟಿಕೊಂಡಿದ್ದ ಮೂಗು ತೆರೆದು ಕುಹರದ ಸೋಂಕಿನ ನೀರು ಸೋರಿ ಹೋಗುತ್ತದೆ.

ಒತ್ತಡದ ತೊಂದರೆಗೆ

ಒತ್ತಡದ ತೊಂದರೆಗೆ

ಕೆಲಸದ ಅಥವಾ ಇನ್ನಾವುದೋ ಒತ್ತಡದ ಕಾರಣ ತಲೆ ಸಿಡಿಯುವಂತಾಗಿದ್ದರೆ ಇದಕ್ಕೆ ಶಮನ ನೀಡಲು ಪಿಪೆರಿನ್ ನ ಆರೈಕೆ ಅಗತ್ಯ. ಈ ಸಮಯದಲ್ಲಿ ಕೊಂಚ ಕಾಳುಮೆಣಸಿನ ಪುಡಿ ಸೇರಿಸಿದ ಟೀ ಬಿಸಿಬಿಸಿಯಾಗಿ ಚಿಕ್ಕ ಚಿಕ್ಕ ಗುಟುಕಾಗಿ ಸೇವಿಸಿದರೆ ಕೆಲವೇ ನಿಮಿಷಗಳಲ್ಲಿ ಹೊಸ ಹುಮ್ಮಸ್ಸು ಹುಟ್ಟುತ್ತದೆ ಹಾಗೂ ಮೆದುಳು ಹೆಚ್ಚು ಕ್ಷಮತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಕಾಳುಮೆಣಸನ್ನು ಒಂದು ಉತ್ತಮ ಒತ್ತಡ ನಿವಾರಕ ಎಂದು ಕರೆಯುತ್ತಾರೆ.

ಕ್ಯಾನ್ಸರ್‌ನಿಂದ ತಡೆಯುತ್ತದೆ

ಕ್ಯಾನ್ಸರ್‌ನಿಂದ ತಡೆಯುತ್ತದೆ

ಹಲವಾರು ಸಂಶೋಧನೆಗಳ ಮೂಲಕ ಕಾಳುಮೆಣಸಿನ ನಿಯಮಿತವಾದ ಸೇವನೆಯಿಂದ ದೇಹದಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಗಳು ಎದುರಾಗದಂತೆ ತಡೆಯಬಹುದು.

ಕ್ಯಾನ್ಸರ್‌ನಿಂದ ತಡೆಯುತ್ತದೆ

ಕ್ಯಾನ್ಸರ್‌ನಿಂದ ತಡೆಯುತ್ತದೆ

ಇದರಲ್ಲಿರುವ ಪಿಪೆರಿನ್ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಷ್ಟೇಷ್ಟಿತಗೊಳಿಸಿ ಹಲವು ಬಗೆಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

English summary

What Happens When You Add Black Pepper Powder In Your Tea?

Since ancient times pepper has been known and used for the treatment of several health problems. The compound, piperine contained in pepper is known for its anti-inflammatory properties, and this helps in providing relief from pain and inflammation. For best results add a pich of grounded black pepper powder in black tea and then sip it piping hot. Here is a list of what happens when you add black pepper powder to your tea.
X
Desktop Bottom Promotion