Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಇವೇ 'ಲಿವರ್' ಸಮಸ್ಯೆಯ ಲಕ್ಷಣಗಳು! ಯಾವುದಕ್ಕೂ ಇರಲಿ ಎಚ್ಚರ....
ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ ಸಹಾ ಒಂದು. ಆದರೆ ನಮ್ಮಲ್ಲಿ ಹೆಚ್ಚಿನವರು ಇದರ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಏಕೆಂದರೆ ಯಕೃತ್, ಮೂತ್ರಪಿಂಡ, ಮೇದೋಜೀರಕ ಅಂಗ ಮೊದಲಾದವುಗಳಲ್ಲಿ ಒಂದು ವಿಶೇಷವಿದೆ. ಅದೆಂದರೆ ಈ ಅಂಗಗಳು ನಿಧಾನವಾಗಿ ಹಾಳಾಗುತ್ತಾ ಹೋದರೂ ಈ ಬಗ್ಗೆ ಕಿಂಚಿತ್ತೂ ಸುಳಿವು ನೀಡದೇ ಕಡೆಗೊಂದು ದಿನ ಥಟ್ಟನೇ ಕುಸಿಯುತ್ತವೆ.
ಮದ್ಯಪಾನಿಗಳು, ಧೂಮಪಾನಿಗಳು, ಮೂತ್ರಪಿಂಡದಲ್ಲಿ ಕಲ್ಲು ಇರುವವರು ಈ ವಿಶೇಷತೆಯನ್ನು ತಮ್ಮ ಸಾಮರ್ಥ್ಯ ಅಥವಾ 'ಕೆಪಾಸಿಟಿ' ಎಂದು ಬೀಗುತ್ತಾ ತಮ್ಮ ಅಂಗಗಳ ಮೇಲೆ ಅಪರಿಮಿತ ವಿಶ್ವಾಸವಿರಿಸಿಕೊಂಡಿರುತ್ತಾರೆ.

ಆದರೆ ಒಮ್ಮೆ ಈ ಅಂಗಗಳು ಕುಸಿಯಿತೋ, ಆಗ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕುಸಿಯುತ್ತಾರೆ. ಆದರೆ ಕುಸಿಯುವ ಮುನ್ನ ನಮ್ಮ ಯಕೃತ್, ಮೂತ್ರಪಿಂಡ ಮೊದಲಾದವು ನಾವು ಕುಸಿಯುತ್ತಿದ್ದೇವೆ ಎಂಬುದನ್ನು ಸದ್ದಿಲ್ಲದೇ ತಿಳಿಸುತ್ತಿರುತ್ತವೆ. ಜಾಣತನದ ಕ್ರಮವೆಂದರೆ ಈ ಸೂಚನೆಗಳನ್ನು ಗ್ರಹಿಸಿ ತಕ್ಷಣ ಎಚ್ಚೆತ್ತು ಸೂಕ್ತ ಚಿಕಿತ್ಸಾ ಕ್ರಮಗಳನ್ನು ಅನುಸರಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಟಿಪ್ಸ್
ಯಕೃತ್‌ನೊಳಗೆ ಉತ್ಪತ್ತಿಯಾಗುವ ಪಿತ್ತರಸ (bile) ಕರುಳಿಗೆ ತಲುಪಿ ಆಹಾರದಲ್ಲಿರುವ ಕೊಬ್ಬನ್ನು ಕರಗಿಸಿ ಚಿಕ್ಕ ಚಿಕ್ಕ ಕಣಗಳಾಗಿಸಲು ನೆರವಾಗುತ್ತದೆ. ಅಲ್ಲದೇ ಈ ಪಿತ್ತರಸ ರಕ್ತದ ದ್ರವ ಭಾಗ ಅಥವಾ ಪ್ಲಾಸ್ಮಾ ಉತ್ಪತ್ತಿಗೆ ಅಗತ್ಯವಾದ ಪ್ರೋಟೀನುಗಳನ್ನೂ, ಅಗತ್ಯ ಕೊಲೆಸ್ಟ್ರಾಲ್ ಕಣಗಳನ್ನು ಉತ್ಪಾದಿಸಲು ಮತ್ತು ಪೋಷಕಾಂಶಗಳನ್ನು ದೇಹದ ಎಲ್ಲೆಡೆ ಕೊಂಡೊಯ್ಯಲು ನೆರವಾಗುತ್ತದೆ. ಅಲ್ಲದೇ ವಿಟಮಿನ್ನುಗಳು ಮತ್ತು ಕಬ್ಬಿಣದ ಅಂಶಗಳನ್ನು ಸಂಗ್ರಹಿಸಲು ನೆರವಾಗುತ್ತದೆ. ಕರುಳಿನಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುತ್ತದೆ.
ಯಕೃತ್ ನ ಕ್ಷಮತೆ ಉಡುಗುತ್ತಾ ಹೋದರೂ ಈ ತೊಂದರೆ ಇರುವ ಐವತ್ತು ಪ್ರತಿಶತಕ್ಕೂ ಹೆಚ್ಚಿನ ಜನರಿಗೆ ಕೊಂಚವೂ ಅರಿವೇ ಆಗುವುದಿಲ್ಲ. ಇನ್ನಷ್ಟು ಉಡುಗುತ್ತಾ ಹೋದಂತೆ ಇದರ ಸೂಚನೆಗಳು ಕೂಡಾ ದಟ್ಟವಾಗುತ್ತಾ ಹೋಗುತ್ತದೆ. ಅತಿ ಸಾಮಾನ್ಯವೆಂಬಂತೆ ಅನ್ನಿಸುವ ಈ ಸೂಚನೆಗಳು ನಿಜವಾಗಿ ಯಕೃತ್‌ನ ವೈಫಲ್ಯತೆಯನ್ನು ಸಾರುತ್ತಿರುತ್ತವೆ.
ಉದಾಹರಣೆಗೆ ಕಾರಣವಿಲ್ಲದೇ ಸುಸ್ತಾಗುವುದು, ನಿತ್ರಾಣ ಆವರಿಸಿರುವುದು, ಲೈಂಗಿಕ ಶಕ್ತಿಯ ಕೊರತೆ, ದೇಹದ ಅಲ್ಲಲ್ಲಿ ತುರಿಕೆಯಾಗುವುದು ಇತ್ಯಾದಿ ಈ ಸೂಚನೆಗಳಾಗಿವೆ. ಯಕೃತ್ ಸರಿಸುಮಾರು ತೊಂಭತ್ತು ಶೇಖಡಾ ಹಾಳಾಗುವವರೆಗೂ ಹಳದಿ ಕಾಯಿಲೆ ಅಥವಾ ಕಾಮಾಲೆಯ ಸೂಚನೆ ಕಂಡುಬರುವುದಿಲ್ಲ.
ಆ ಬಳಿಕ ಚರ್ಮ, ಕಣ್ಣುಗಳೆಲ್ಲಾ ಹಳದಿಯಾಗಿಬಿಡುತ್ತವೆ. ಅತಿ ಗಾಢ ಹಳದಿ ಬಣ್ಣ ಮೂತ್ರ, ತಿಳಿಬಣ್ಣದ ಮಲ, ಗೊಂದಲ, ಮಲವಿಸರ್ಜನೆಯಲ್ಲಿ ರಕ್ತ ಹೊರಬೀಳುವುದು, ಹೊಟ್ಟೆಯ ಕೆಳಭಾಗದಲ್ಲಿ ನೀರು ತುಂಬಿಕೊಳ್ಳುವುದು ಇತ್ಯಾದಿಗಳು ಕಂಡುಬರುತ್ತವೆ. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!
ಯಕೃತ್ ವೈಫಲ್ಯದಿಂದ ನರಳುತ್ತಿರುವವರು ಆಹಾರ ಸೇವನೆಯಲ್ಲಿ ವಿಪರೀತ ಏರುಪೇರು, ತೂಕದಲ್ಲಿ ಭಾರೀ ಇಳಿಕೆ, ಅತಿಯಾದ ನೀರಡಿಕೆ ಮತ್ತು ಸತತವಾಗಿ ಮೂತ್ರಕ್ಕೆ ಅವಸರವಾಗುವುದು ಕಂಡುಬರುತ್ತದೆ.
ಸೇವಿಸುವ ಆಹಾರದಲ್ಲಿ ಕಡಿಮೆಯಾಗಿರುವ ಕಾರಣ ಪರೋಕ್ಷವಾಗಿ ವಿವಿಧ ತೊಂದರೆಗಳು ಎದುರಾಗುತ್ತವೆ. ರೋಗ ಉಲ್ಬಣಗೊಳ್ಳುತ್ತಾ ಹೋದಂತೆ ಚರ್ಮದ ಬಣ್ಣವೂ ಬದಲಾಗುತ್ತಾ ಹೋಗುತ್ತದೆ. ಯಕೃತ್ ಉಬ್ಬುವ ಕಾರಣ ಹೊಟ್ಟೆ ಉಬ್ಬುವುದು ಹೆಚ್ಚುತ್ತಾ ಹೋಗುತ್ತದೆ. ರೋಗಿಗಳಿಗೆ ಮರೀಚಿಕೆಗಳೂ ಕಾಣತೊಡಗುತ್ತವೆ. ಎಚ್ಚರ: ಬೆಚ್ಚಿ ಬೀಳಿಸುವ ಲಿವರ್ ಕ್ಯಾನ್ಸರ್‌ನ ಲಕ್ಷಣಗಳು!
ಆದರೆ ಯಕೃತ್ ವೈಫಲ್ಯದ ಪ್ರಾರಂಭದ ಹಂತದಲ್ಲಿ ಈ ಕೆಳಗಿನ ಸೂಚನೆಗಳನ್ನು ನೀಡುತ್ತದೆ. ಹಸಿವು ಕಡಿಮೆಯಾಗುವುದು, ಕೊಂಚ ಚಟುವಟಿಕೆ ಹೆಚ್ಚಿದರೂ ವಿಪರೀತ ಸುಸ್ತಾಗುವುದು, ಆಮಶಂಕೆ, ತೂಕದಲ್ಲಿ ನಿಧಾನವಾಗಿ ಇಳಿಕೆಕಂಡುಬರುವುದು, ದಿನವಿಡೀ ಆಯಾಸವಿರುವುದು ಮತ್ತು ಸಾಮಾನ್ಯವಾದ ಕೆಲಸಗಳಿಗೆ ಹೆಚ್ಚಿನ ಹೊತ್ತು ತೆಗೆದುಕೊಳ್ಳುವುದು ಕಂಡುಬರುತ್ತವೆ.
ಕೆಳಹೊಟ್ಟೆಯಲ್ಲಿ ಬಗ್ಗಿದಾಗ ಕೊಂಚವಾಗಿ ನೋವು ಕಂಡುಬರುತ್ತದೆ. ಸೂಕ್ತ ಕ್ರಮ ಅಥವಾ ಚಿಕಿತ್ಸೆ ತೆಗೆದುಕೊಳ್ಳದೇ ಹೋದರೆ ಈ ಸೂಚನೆಗಳು ಹೆಚ್ಚುತ್ತಾ ಹೋಗುತ್ತವೆ. ನಿರ್ಲಕ್ಷ್ಯ ಹೆಚ್ಚಿಸಿದಷ್ಟೂ ಯಕೃತ್ ಇನ್ನಷ್ಟು ಹಾಳಾಗುತ್ತಾ ವೈಫಲ್ಯದತ್ತ ವಾಲತೊಡಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

