For Quick Alerts
ALLOW NOTIFICATIONS  
For Daily Alerts

ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಟಿಪ್ಸ್

By Super
|

ದೇಹದ ಅರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ. ದೇಹದ ಪ್ರತಿಯೊಂದು ಭಾಗಗಳೂ ಕೂಡ ಬಹಳ ಮುಖ್ಯ. ಯಕೃತ್ತು ಕೂಡ ದೇಹದ ಬಹು ಮುಖ್ಯ ಅಂಗ.ಲಿವರ್ ಸರಿಯಾಗಿ ಕೆಲಸ ಮಾಡುತ್ತಿರಬೇಕು ಎಂದರೆ ಅದರ ಕಾಳಜಿ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಅರೋಗ್ಯ ಕಾಪಾಡಲು ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಹಾಗೆ ಲಿವರ್ ಅರೋಗ್ಯ ಕಾಪಾಡಲು ಮಧ್ಯಪಾನ,ಧೂಮಪಾನ ಇವುಗಳಿಂದ ದೂರವಿರುವುದು ತುಂಬಾ ಅಗತ್ಯ.

ಇದು ಕೇವಲ ಅಲ್ಕೋಹಾಲ್ ಮತ್ತು ಸಿಗರೇಟ್ ತಡೆಯುವುದರ ಬಗ್ಗೆ ಮಾತ್ರವಲ್ಲ ನಿಮ್ಮ ದೃಢವಾದ ಆರೋಗ್ಯದ ಬಗ್ಗೆ. ನಮಗೆ ಯಾವುದೇ ಸಮಸ್ಯೆಯ ಸೂಚನೆ ಸಿಗುವವರೆಗೆ ಯಕೃತ್ತಿನ ಬಗ್ಗೆ ಕಾಳಜಿ ವಹಿಸುವುದೇ ಇಲ್ಲ.

ನಿಮಗೆ ಮೊದಲೇ ಕಾಳಜಿ ಇದ್ದಲ್ಲಿ ನೀವು ನಿಮ್ಮ ಹೊಟ್ಟೆಯನ್ನು ಬೆಳೆಯಲು ಬಿಡುತ್ತಿರಲಿಲ್ಲ. ಯಕೃತ್ತಿನ ಅನಾರೋಗ್ಯದ ಮೊದಲ ಸೂಚನೆ ಎಂದರೆ ಹೊಟ್ಟೆ ಊದಿಕೊಳ್ಳುವುದು. ನೀವು ಆರೋಗ್ಯಯುತ ಆಹಾರ ಸೇವನೆ ಮಾಡಿ ವ್ಯಾಯಾಮ ಮಾಡುತ್ತಿದ್ದರೂ ಕೂಡ ನಿಮ್ಮ ಹೊಟ್ಟೆ ಮಾತ್ರ ಊದಿಕೊಳ್ಳುತ್ತಿದೆ ಎಂದರೆ ಅದು ಯಕೃತ್ತಿನ ತೊಂದರೆ ಇರಬಹುದು ಆದ್ದರಿಂದ ವೈದ್ಯರಿಗೆ ತೋರಿಸಲು ಮರೆಯದಿರಿ.

ಕೊಬ್ಬಿನ ಆಹಾರದಿಂದ ದೂರವಿರುವುದು

ಕೊಬ್ಬಿನ ಆಹಾರದಿಂದ ದೂರವಿರುವುದು

ನೀವು ಜಂಕ್ ಮತ್ತು ಕೊಬ್ಬು ಇರುವ ಆಹಾರಗಳನ್ನು ತಿನ್ನುವುದನ್ನು ತಡೆಯಲೇಬೇಕು.ಇದು ನಿಮ್ಮ ಲಿವರ್ ಗೆ ಒಳ್ಳೆಯದಲ್ಲ. ಕೊಲೆಸ್ಟ್ರಾಲ್ ಅಂಶವಿರುವ ಆಹಾರವನ್ನು ಹೆಚ್ಚು ತಿನ್ನುವುದರಿಂದ ಲಿವರ್ ನ ಕಾರ್ಯಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ.

ಕುಡಿತ

ಕುಡಿತ

ನಮಗೆಲ್ಲರಿಗೂ ಮಧ್ಯಪಾನ ಲಿವರ್ ಗೆ ಹಾನಿ ಎಂಬುದು ತಿಳಿದೇ ಇದೆ.ಇದರ ಅರಿವಿರುವವರು ಕೇವಲ 2 - 3 ಪೆಗ್ ಮಾತ್ರ ಹಾಕುತ್ತಾರೆ. ಇದನ್ನು ಹಿಡಿತದಲ್ಲಿ ಇಡಲು ನಿಮಗೆ ಕಷ್ಟವಾದರೆ ವೈದ್ಯರನ್ನು ಭೇಟಿ ಮಾಡಿ.

ಧೂಮಪಾನ

ಧೂಮಪಾನ

ನೀವು ಎಷ್ಟೇ ಎಚ್ಚರಿಕೆ ಪಡೆದರೂ ಧೂಮಪಾನ ಬಿಡುವುದು ಕಷ್ಟವಾಗಬಹುದು.ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತಾ ಹೋಗುತ್ತದೆ.ಆದ್ದರಿಂದ ಇದರ ಸಹವಾಸ ಮಾಡದಿರುವುದು ಒಳ್ಳೆಯದು.

ಸೋಮಾರಿತನ

ಸೋಮಾರಿತನ

ನೀವು ನಿಮ್ಮ ದಿನನಿತ್ಯದ ತರಕಾರಿ ತರಲು ಕೂಡ ಕಾರನ್ನು ಬಳಸುತ್ತಿದ್ದರೆ, ಸದಾ ಕಾಲ ಕುಳಿತು ಕಾಲ ಕಳೆಯುತ್ತಿದ್ದರೆ ಇದು ನಿಮ್ಮ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆಹಾರದ ಒಲವು

ಆಹಾರದ ಒಲವು

ಬಾಯಿಗೆ ರುಚಿಯೆಂದು ಜಂಕ್ ಫುಡ್, ಫಾಸ್ಟ್ ಫುಡ್ಸ್ ತಿನ್ನುವುದರಿಂದ ನಿಮ್ಮ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಜಾಗ್ರತೆ.

ಯಾವುದು ಸಹಾಯಕವಾಗುತ್ತದೆ?

ಯಾವುದು ಸಹಾಯಕವಾಗುತ್ತದೆ?

ಲಿವರ್ ಕಾಯಿಲೆಗಳ ಬಗ್ಗೆ ಮೊದಲೇ ಎಚ್ಚೆತ್ತುಕೊಂಡಲ್ಲಿ ಅದನ್ನು ಹತೋಟಿಯಲ್ಲಿಡಬಹುದು.ಆರೋಗ್ಯಯುತವಾದ ಆಹಾರ ಪದ್ಧತಿ ಮತ್ತು ಚಟುವಟಿಕೆ ಭರಿತ ಜೀವನ ಶೈಲಿ ದೀರ್ಘ ಕಾಲದ ಬದುಕಿಗೆ ಸಹಾಯಕವಾಗುತ್ತದೆ.ಯಕೃತ್ತಿನ ಅರೋಗ್ಯ ಕಾಪಾಡಿಕೊಳ್ಳಲು ಆಗಾಗ ರಕ್ತ ಪರೀಕ್ಷೆ, ಹೆಪಟೈಟಿಸ್ ವಿರುದ್ಧ ವ್ಯಾಕ್ಸಿನೇಶನ್,ಸುರಕ್ಷಿತ ಲೈಂಗಿಕತೆ ಇವುಗಳಲೆಲ್ಲ ಮುಖ್ಯವಾಗುತ್ತವೆ.

English summary

Tips To Avoid Liver Problem

If you think you have been eating well and exercising, yet gaining weight particularly around the abdomen, you need to call the doctor. Here are a few tips that will keep your robust organ in pink of health.
X
Desktop Bottom Promotion