For Quick Alerts
ALLOW NOTIFICATIONS  
For Daily Alerts

ನೀರು ನಿಜಕ್ಕೂ ನಿಮ್ಮ ಆರೋಗ್ಯಕ್ಕೆ 'ಜೀವ ಜಲ'

By Manu
|

ನಮ್ಮ ದೇಹಕ್ಕೆ ಪ್ರತಿದಿನ ಎಂಟು ಲೋಟದಷ್ಟು ಶುದ್ಧವಾದ ನೀರಿನ ಅಗತ್ಯವಿದೆ ಎಂದು ಪರಿಣಿತರು ತಿಳಿಸುತ್ತಾರೆ. ಆದರೆ ಹೆಚ್ಚಿನವರು ಈ ಮಾತನ್ನು ಉಪೇಕ್ಷಿಸಿ ಕುಡಿಯದಿದ್ದರೆ ಏನಾಗುತ್ತದೆ ಎಂಬ ಮೊಂಡು ಹಠವನ್ನು ಹಿಡಿಯುತ್ತಾರೆ. ಇವರ ನಂಬಿಕೆಯಂತೆ ಮರುಭೂಮಿಯ ಬಿರುಬಿಸಿಲಿನಲ್ಲಿದ್ದವರಿಗೆ ಮಾತ್ರ ನೀರು ಪದೇ ಪದೇ ಕುಡಿಯುವ ಅಗತ್ಯವಿರುತ್ತದೆ.

ನಗರದಲ್ಲಿರುವ ನಮಗೆ ಮೂರು ಹೊತ್ತಿನ ಊಟದ ಜೊತೆ ನೀರು ಕುಡಿದರೆ ಸಾಕು. ಅಷ್ಟಕ್ಕೂ ಪದೇ ಪದೇ ನೀರು ಕುಡಿಯುತ್ತಿದ್ದರೆ ಪದೇ ಪದೇ ಮೂತ್ರಕ್ಕೂ ಹೋಗಬೇಕಾಗುತ್ತದೆ. ಸಮಯವಿಲ್ಲದ ನಮಗೆ ಶೌಚಾಲಯಗಳನ್ನು ಹುಡುಕುತ್ತ ಇರಲಿಕ್ಕೆ ವ್ಯವಧಾನ ಎಂಬ ಮಾತುಗಳನ್ನಾಡುತ್ತಾರೆ. ಆದರೆ ದೇಹ ಈ ಮಾತುಗಳನ್ನು ಕೇಳುವುದಿಲ್ಲ. ಮರುಭೂಮಿಯಲ್ಲಿದ್ದರೂ ಶೀತಲ ಪ್ರದೇಶದಲ್ಲಿದ್ದರೂ ನಮ್ಮ ದೇಹಕ್ಕೆ ನಿಯಮಿತವಾಗಿ ನೀರಿನ ಸರಬರಾಜು ಆಗುತ್ತಲೇ ಇರಬೇಕು. ಇಲ್ಲದಿದ್ದರೆ ದೇಹ ಒಣಗಲು ತೊಡಗುತ್ತದೆ. ಇದರ ಪರಿಣಾಮಗಳು ಥಟ್ಟನೇ ಹೊರಬರುವುದಿಲ್ಲ. ನಿಧಾನವಾಗಿ ಇದರ ಪರಿಣಾಮಗಳು ಹೊರಬರಲು ಪ್ರಾರಂಭವಾಗುತ್ತವೆ. ಊಟದ ಮಧ್ಯೆ ನೀರು ಕುಡಿಯಬಾರದು ಏಕೆ?

ಹೌದು, ನೀರು ಮಾನವರಿಗೆ ಈ ಪ್ರಕೃತಿ ನೀಡಿರುವ ಸಂಜೀವಿನಿಯೆಂದರೆ ತಪ್ಪಾಗಲಾರದು. ಮಾನವನಿಗೆ ಅವಶ್ಯವಾಗಿ ಬೇಕಿರುವ ಮೂಲಭೂತ ಅವಶ್ಯಕತೆಗಳಲ್ಲಿ ನೀರೂ ಸಹ ಒಂದು. ನೀರನ್ನು ಸೇವಿಸದೇ ಯಾವುದೇ ಜೀವ ಸಂತುಲಗಳು ಜೀವಿಸಲಾರವು. ಇದಕ್ಕೆ ಮಾನವರೂ ಸಹ ಹೊರತಾಗಿಲ್ಲ. ನಿಮ್ಮ ದೇಹದ ಸಂಪೂರ್ಣ ವ್ಯವಸ್ಥೆಯನ್ನು ಸಂಚಲನಗೊಳಿಸಲು ನೀರು ಅತ್ಯವಶ್ಯಕ. ಇದರ ಜೊತೆಗೆ ನಿಮ್ಮ ಆರೋಗ್ಯದ ಆರೈಕೆಗೂ ಸಹ ನೀರು ಹೆಚ್ಚು ನೆರವಾಗುತ್ತದೆ. ಈ ನಿಟ್ಟಿನಲ್ಲಿ ನೀರಿನಿಂದ ಆಗುವ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ..

ಎಲೆಕ್ಟ್ರೊಲೈಟ್ಸ್ ಮತ್ತು ಖನಿಜ ಸತ್ವ

ಎಲೆಕ್ಟ್ರೊಲೈಟ್ಸ್ ಮತ್ತು ಖನಿಜ ಸತ್ವ

ನೀರಿನಲ್ಲಿ ಎಲೆಕ್ಟ್ರೊಲೈಟ್ಸ್ ಮತ್ತು ಖನಿಜ ಸತ್ವಗಳು ಹೇರಳವಾಗಿದ್ದು, ನಿಮ್ಮ ದೇಹಕ್ಕೆ ಅವಶ್ಯವಿರುವ ಖನಿಜಸತ್ವಗಳನ್ನು ನೀಡಲು ನೆರವಾಗಲಿದ್ದು, ದೇಹದಲ್ಲಿ ನೀರಿನ ಆಂಶದ ಸಮತೋಲನವನ್ನು ಕಾಪಾಡುತ್ತದೆ. ಅಲ್ಲದೇ ನಿಮ್ಮ ದೇಹದಲ್ಲಿನ ಹಾನಿಕಾರಕ ಮತ್ತು ಅನುಪಯುಕ್ತ ಅಂಶಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತದೆ.

ಲಿಂಬೆ ಮತ್ತು ಜೇನನ್ನು ಬೆರೆಸಿದ ನೀರು

ಲಿಂಬೆ ಮತ್ತು ಜೇನನ್ನು ಬೆರೆಸಿದ ನೀರು

ಬೆಳಗ್ಗೆ ಎದ್ದ ಕೂಡಲೇ ಬೆಚ್ಚನೆಯ ನೀರಿನೊಂದಿಗೆ ಲಿಂಬೆ ಮತ್ತು ಜೇನನ್ನು ಬೆರೆಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ನಿಮ್ಮ ಹೆಚ್ಚುವರಿ ತೂಕವನ್ನು ಕಡಿಮೆ ಮಾಡುತ್ತದೆ. ಜೇನಿನಲ್ಲಿ ವಿಟಮಿನ್ ಗಳು, ಖನಿಜಸತ್ವಗಳು ಮತ್ತು ಅಮೈನೊ ಆಸಿಡ್ ಗಳು ಹೇರಳವಾಗಿದ್ದು ದೇಹದ ಸಂಚಲನ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ. ಲಿಂಬೆಯು ನಿಮ್ಮ ಹಸಿವನ್ನು ಹತೋಟಿಯಲ್ಲಿಡುತ್ತದೆ. ಬೆಚ್ಚನೆಯ ನೀರು ನಿಮ್ಮ ದೇಹದಲ್ಲಿನ ಅನುಪಯುಕ್ತ ಸತ್ವಗಳನ್ನು ಕರುಳಿನಿಂದ ಹೊರಹಾಕಲು ನೆರವಾಗುತ್ತದೆ.

ಬಿಸಿ ನೀರಿನ ಹವೆ

ಬಿಸಿ ನೀರಿನ ಹವೆ

ಬಿಸಿ ನೀರಿನ ಹವೆಯನ್ನು ಒಳತೆಗೆದುಕೊಂಡಲ್ಲಿ ನಿಮ್ಮ ದೇಹದಲ್ಲಿನ ಒತ್ತಡವನ್ನು ನಿವಾರಿಸುತ್ತದೆ. ಬಿಸಿ ನೀರಿನ ಹವೆಯನ್ನು ಒಳಸೆಳೆದುಕೊಳ್ಳುವ ಸಂದರ್ಭದಲ್ಲಿ ಹವೆಯು ನಿಮ್ಮ ಮೂಗಿನ ಮೂಲಕ ಗಂಟಲಿನ ಮೂಲಕ ಶ್ವಾಸಕೋಶವನ್ನು ಸೇರುತ್ತದೆ. ಇದರಿಂದ ಸದರಿ ಮಾರ್ಗದಲ್ಲಿರುವ ಅನುಪಯುಕ್ತ ಮ್ಯುಕಸ್ ಅನ್ನು ಕರಗಿಸಿ ಎದೆಯಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ತಲೆನೋವು ನಿವಾರಣೆಗೆ

ತಲೆನೋವು ನಿವಾರಣೆಗೆ

ನಿಮ್ಮ ಪಾದವನ್ನು ಬೆಚ್ಚನೆಯ ನೀರಿನಲ್ಲಿ ಅದ್ದಿದರೆ ತಲೆನೋವು ನಿವಾರಣೆಯಾಗುತ್ತದೆ. ನಿಮ್ಮ ಪಾದವನ್ನು ಬಿಸಿನೀರಿನಲ್ಲಿ ಅದ್ದಿದರೆ ಎರಡೂ ಪಾದಕ್ಕೂ ರಕ್ತಸಂಚಲನ ಸುಗಮವಾಗುತ್ತದೆ. ನಿಮ್ಮ ರಕ್ತ ನಾಳಗಳಲ್ಲಿ ಉಂಟಾಗುವ ಒತ್ತಡ ಮತ್ತು ಸ್ನಾಯುಗಳ ಒತ್ತಡವನ್ನು ಈ ಪ್ರಕ್ರಿಯೆಯಿಂದ ಸುಲಭವಾಗಿ ನಿವಾರಿಸಬಹುದು. ಇದರಿಂದ ನಿಮ್ಮ ತಲೆನೋವು ಮಾಯವಾಗುತ್ತದೆ.

 ಜಡತ್ವವನ್ನು ನಿವಾರಿಸಲು

ಜಡತ್ವವನ್ನು ನಿವಾರಿಸಲು

ಮೈಭಾರ ಅಥವಾ ಜಡತ್ವವನ್ನು ನಿವಾರಿಸಲು ನೀರು ನಿಜಕ್ಕೂ ಉತ್ತಮ ಪರಿಹಾರ. ನಾಸಿಯಾ ಅನ್ನು ಪರಿಹರಿಸಿ ನಿಮ್ಮ ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ನಾಳಿನ ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಇಂದು ರಾತ್ರಿ ಮಲಗುವ ಮುನ್ನ ನೀರನ್ನು ಸೇವಿಸಿದರೆ ಸಾಕು. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಸುಟ್ಟಗಾಯದ ಸಮಸ್ಯೆಗೆ

ಸುಟ್ಟಗಾಯದ ಸಮಸ್ಯೆಗೆ

ನೀರಿನಿಂದ ಸುಟ್ಟಗಾಯವನ್ನು ನಿವಾರಿಸಬಹುದು. ಸುಟ್ಟಗಾಯದ ಭಾಗವನ್ನು ಹರಿಯುವ ತಣ್ಣನೆಯ ನೀರಿಗೆ ಒಡ್ಡಿದರೆ ಸಾಕು. ಗಾಯದ ನೋವು ಉಪಶಮನವಾಗುತ್ತದೆ. ಅಲ್ಲದೇ ಗಾಯದ ಶೀಘ್ರ ನಿವಾರಣೆಗೆ ತಣ್ಣನೆಯ ನೀರು ಹೆಚ್ಚು ನೆರವಾಗುತ್ತದೆ.

ಬೆಚ್ಚನೆಯ ಉಪ್ಪಿನ ನೀರನ್ನು ಮುಕ್ಕಳಿಸಿ

ಬೆಚ್ಚನೆಯ ಉಪ್ಪಿನ ನೀರನ್ನು ಮುಕ್ಕಳಿಸಿ

ಬೆಚ್ಚನೆಯ ಉಪ್ಪಿನ ನೀರನ್ನು ಮುಕ್ಕಳಿಸಿದರೆ ಗಂಟಲಿನ ಸಮಸ್ಯೆ ನಿವಾರಣೆಯಾಗುತ್ತದೆ. ನಿಮ್ಮ ಗಂಟಲಿನ ಸೋಂಕನ್ನು ನಿವಾರಿಸಿ, ಗಂಟಲಿನ ಮೇಲಿರುವ ಜಿಡ್ಡನ್ನು ಹೋಗಲಾಡಿಸಲು ಉಪ್ಪಿನ ನೀರು ಹೆಚ್ಚು ನೆರವಾಗುತ್ತದೆ. ನಿಮಗೆ ಹಿತಕರವಾದ ಗಂಟಲಿನ ಅನುಭವ ಹೊಂದಲು ಉಪ್ಪಿನ ನೀರನ್ನು ಅವಶ್ಯ ಸಂದರ್ಭಗಳಲ್ಲಿ ಮುಕ್ಕಳಿಸಿ. ಇದರಿಂದ ನಿಮಗೆ ನವಚೈತನ್ಯ ಹೊಂದಬಹುದು.

English summary

Ways you can use water to stay in good health

We all need water to survive. Apart from maintaining your bodily functions, water has many other uses that keep you in good health.
Story first published: Monday, February 1, 2016, 11:57 [IST]
X
Desktop Bottom Promotion