For Quick Alerts
ALLOW NOTIFICATIONS  
For Daily Alerts

ತರಕಾರಿಗಳನ್ನು ಬೇಯಿಸಿ ಸೇವಿಸಿದರೆ, ದುಪ್ಪಟ್ಟು ಲಾಭ!

By Arshad
|

ನಾವು ಮಿಶ್ರಾಹಾರಿಗಳು ಅಂದರೆ ನಮ್ಮ ಜೀರ್ಣಾಂಗಗಳು ಸೆಲ್ಯುಲೋಸ್ ಅಥವಾ ಸಸ್ಯಾಹಾರಿ ಪ್ರಾಣಿಗಳಂತೆ ಹುಲ್ಲು, ಎಲೆಗಳಲ್ಲಿರುವ ನಾರು ಪದಾರ್ಥವನ್ನು ಜೀರ್ಣಿಸಿಕೊಳ್ಳಲಾರೆವು. ಅಂತೆಯೇ ಮಾಂಸಾಹಾರಿ ಪ್ರಾಣಿಗಳಂತೆ ಹಸಿಮಾಂಸವನ್ನೂ ಜೀರ್ಣಿಸಿಕೊಳ್ಳಲಾರೆವು. ಅಂತೆಯೇ ನಮ್ಮ ಜೀರ್ಣಾಂಗಗಳು ಇವೆರಡೂ ವರ್ಗದ ನಡುವೆ ಇದೆ. ಆದ್ದರಿಂದ ನಮಗೆ ಅಕ್ಕಿ, ಗೋಧಿ, ತರಕಾರಿಗಳನ್ನು ಜೀರ್ಣಿಸಿಕೊಳ್ಳಲು ಬೇಯಿಸುವುದು ಅಗತ್ಯವಾಗಿದೆ.

ಆದರೆ ಕೆಲವು ಹಣ್ಣು ತರಕಾರಿಗಳನ್ನು ನಾವು ಹಸಿಯಾಗಿ ಜೀರ್ಣಿಸಿಕೊಳ್ಳಬಲ್ಲೆವು. ಸೌತೆ, ಕ್ಯಾರೆಟ್, ಕೆಲವು ಸೊಪ್ಪುಗಳು ಇತ್ಯಾದಿಗಳು ನಮ್ಮ ಆಹಾರದ ತಟ್ಟೆಯಲ್ಲಿ ಪ್ರತಿನಿತ್ಯವೂ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಹಲವು ತರಹದ ಅನುಕೂಲತೆಗಳಿವೆ. ಮುಖ್ಯವಾಗಿ ಇದರಲ್ಲಿರುವ ನಾರು ಮಲಬದ್ಧತೆಯನ್ನು ತಡೆದರೆ ಉಳಿದಂತೆ ಹೃದಯದ ಕ್ಷಮತೆ ಹೆಚ್ಚಿಸುವುದು, ಕ್ಯಾನ್ಸರ್ ತಡೆಗಟ್ಟುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮೊದಲಾದ ಪ್ರಯೋಜನಗಳಿವೆ.

ಆದರೆ ಕೆಲವು ತರಕಾರಿಗಳು ಇವೆರಡೂ ವರ್ಗಕ್ಕೆ ಸೇರುತ್ತವೆ. ಅಂದರೆ ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು. ಉದಾಹರಣೆಗೆ ಕ್ಯಾರೆಟ್ ಅಥವಾ ಗಜ್ಜರಿ. ಹೀಗಿದ್ದಾಗ ಹಸಿಯಾಗಿ ತಿನ್ನುವುದು ಮೇಲೋ ಬೇಯಿಸಿಯೋ ಎಂಬ ಪ್ರಶ್ನೆಗೆ ಆಹಾರ ಪರಿಣಿತರು ಬೇಯಿಸಿ ತಿನ್ನುವುದೇ ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದಾರೆ. ಏಕೆಂದರೆ ಕೆಲವು ಪೋಷಕಾಂಶಗಳು ಹಸಿಯಾಗಿದ್ದಾಗ ನಮ್ಮ ಜೀರ್ಣಾಂಗಗಳಲ್ಲಿ ಜೀರ್ಣವಾಗದೇ ಹಾಗೇ ವ್ಯರ್ಥವಾಗಿ ಹೋಗುತ್ತವೆ. ಬೇಯಿಸಿದ ತರಕಾರಿಗಳ ಸ್ಪೆಷಾಲಿಟಿ ಒಂದೇ ಎರಡೇ

ಅದೇ ಬೇಯಿಸಿದಾಗ ಇವು ಒಡೆದು ಸುಲಭವಾಗಿ ಜೀರ್ಣಗೊಳ್ಳುವಂತಿರುತ್ತವೆ. ಬೇಯಿಸಿದ ಬಳಿಕ ಆ ನೀರನ್ನು ಮಾತ್ರ ಚೆಲ್ಲದೇ ಅಡುಗೆಯಲ್ಲಿ ಬಳಸಿಕೊಳ್ಳುವುದು ಅಗತ್ಯ. ಇನ್ನೂ ಉತ್ತಮವೆಂದರೆ ಹಬೆಯಲ್ಲಿ ಬೇಯಿಸುವುದು. ಇದರಿಂದ ತರಕಾರಿಯೂ ಮೃದುವಾಗುವ ಜೊತೆಗೇ ಪೋಷಕಾಂಶಗಳು ನಷ್ಟವಾಗುವುದರಿಂದ ತಡೆಯಬಹುದು. ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದೂ ಇನ್ನೊಂದು ಉತ್ತಮ ಆಯ್ಕೆ. ಕ್ಯಾರೆಟ್, ಬಸಲೆ ಸೊಪ್ಪು, ಪಾಲಕ್ ಸೊಪ್ಪು, ಅಣಬೆ, ಕೇಲ್ ಎಲೆಗಳು, ಬೀಟ್ರೂಟ್ ಮೊದಲಾದವುಗಳೆಲ್ಲಾ ಈ ವಿಭಾಗಕ್ಕೆ ಸೇರುತ್ತವೆ. ರುಚಿ ಹೆಚ್ಚಿಸಲು ಕೊಂಚ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸಾಕು. ಬನ್ನಿ, ಈ ಬಗ್ಗೆ ವಿವರವಾಗಿ ಕೆಳಗಿನ ಸ್ಲೈಡ್ ಶೋ ಮೂಲಕ ಇತರ ಮಾಹಿತಿಗಳನ್ನು ನೋಡೋಣ...

ಕೇಲ್ ಎಲೆಗಳು

ಕೇಲ್ ಎಲೆಗಳು

ಇವು ಹಸಿಯಾಗಿದ್ದಾಗ ಕೊಂಚ ಕಹಿಯಾಗಿದ್ದರೂ ಬೆಂದ ಬಳಿಕ ರುಚಿಯಾಗಿರುತ್ತದೆ. ರುಚಿಯ ಜೊತೆಗೇ ಇದರಲ್ಲಿರುವ ಕರಗದ ನಾರು ಸಹಾ ಮೃದುವಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದರ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಗಳೂ ಹೆಚ್ಚುತ್ತವೆ. ಇದೇ ಕಾರಣಕ್ಕೆ ಹಸಿಯಾಗಿ ತಿನ್ನಬಹುದಾದುದಕ್ಕಿಂತ ಈ ಎಲೆಗಳು ಬೇಯಿಸಿ ತಿನ್ನುವುದೇ ಹೆಚ್ಚು ಆರೋಗ್ಯಕರವಾಗಿವೆ.

ಪಾಲಕ್ ಸೊಪ್ಪು ಮತ್ತು ಬಸಲೆ ಸೊಪ್ಪು

ಪಾಲಕ್ ಸೊಪ್ಪು ಮತ್ತು ಬಸಲೆ ಸೊಪ್ಪು

ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಕಬ್ಬಿಣ ಹೇರಳವಾಗಿದೆ. ಕಬ್ಬಿಣದ ಅಂಶ ಬಸಲೆ ಸೊಪ್ಪಿನಲ್ಲಿ ಅತಿ ಹೆಚ್ಚಾಗಿದ್ದು ರಕ್ತಹೀನತೆಗೆ ಅತ್ಯುತ್ತಮ ಆಹಾರವಾಗಿದೆ. ಬಾಣಂತಿಯರು ಮತ್ತು ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಸೇವಿಸಲು ಯೋಗ್ಯ ಆಹಾರವಾಗಿದೆ. ಆದರೆ ಈ ಸೊಪ್ಪನ್ನು ಬೇಯಿಸಿದ ಬಳಿಕ, ಅದರಲ್ಲೂ ಪ್ರೆಶರ್ ಕುಕ್ಕರ್ ಬಳಸಿ ಬೇಯಿಸಿದ ಬಳಿಕ ಇದರಲ್ಲಿರುವ ಕ್ಯಾಲ್ಸಿಯಂನ ಪ್ರಮಾಣ ದುಪ್ಪಟ್ಟಾಗುತ್ತದೆ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ಸಹಾ ಬೇಯಿಸಿದ ಬಳಿಕ ತನ್ನ ಪೋಷಕಾಂಶಗಳನ್ನು ಹೆಚ್ಚಿಸಿಕೊಳ್ಳುವ ಒಂದು ಆಹಾರವಾಗಿದೆ. ಇದರಲ್ಲಿರುವ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟುಗಳು ಬೇಯಿಸಿದ ಬಳಿಕ ಒಡೆದು ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ. ಈ ವಿಟಮಿನ್ ಎ ಕಣ್ಣುಗಳಿಗೆ ಅತಿ ಅಗತ್ಯವಾದ ಪೋಷಕಾಂಶವಾಗಿದ್ದು ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದರೆ ಹಸಿಯಾಗಿ ಇದು ಲಭ್ಯವಿಲ್ಲದ ಕಾರಣ ಬೇಯಿಸಿ ತಿನ್ನುವುದೇ ಅಗತ್ಯ.

ಅಣಬೆ

ಅಣಬೆ

ಅಣಬೆ ತರಕಾರಿಯಂತಲ್ಲ, ಒಂದು ಬಗೆಯ ವಿಶಿಷ್ಟ ಆಹಾರವಾಗಿದೆ. ಅಂದರೆ ಅತ್ತ ಪೂರ್ಣ ಮಾಂಸಾಹಾರವೂ ಅಲ್ಲದ, ಇತ್ತ ಪೂರ್ಣ ಸಸ್ಯಾಹಾರವೂ ಅಲ್ಲದ ಆಹಾರವಾಗಿದೆ. ಇವನ್ನು ನಾವು ಹಾಗೇ ಜೀರ್ಣಿಸಿಕೊಳ್ಳಲಾರೆವು. ಅಲ್ಲದೇ ಅಣಬೆ ಬೆಳೆಯುವುದು ಸಹಾ ಮಣ್ಣಿನಲ್ಲಲ್ಲ, ಕೊಳೆಯುತ್ತಿರುವ ಮರ, ನೆಲದಾಳದ ತೇವ ಮೊದಲಾದೆಡೆ ಬೆಳೆಯುವ ಕಾರಣ ಕೆಲವು ವಿಷಕಾರಿ ವಸ್ತುಗಳನ್ನು ಚಿಕ್ಕ ಪ್ರಮಾಣದಲ್ಲಾದರೂ ಹೊಂದಿರುತ್ತದೆ. ಆದ್ದರಿಂದ ಅಣಬೆಯನ್ನು ಎಂದೂ ಬೇಯಿಸದೇ ಸೇವಿಸಲೇಬಾರದು.

ಟೊಮೇಟೊ

ಟೊಮೇಟೊ

ವಾಸ್ತವವಾಗಿ ಟೊಮೇಟೊ ಒಂದು ಹಣ್ಣು. ಇದರ ಬಳಕೆ ಹಣ್ಣಿಗಿಂತಲೂ ತರಕಾರಿಯ ರೂಪದಲ್ಲಿಯೇ ಹೆಚ್ಚು. ಆದರೂ ಟೊಮೇಟೊ ಹಣ್ಣನ್ನು ಬೇಯಿಸದೇ ತಿನ್ನುವ ಬದಲಿಗೆ ಬೇಯಿಸಿಯೇ ತಿನ್ನುವಂತೆ ಆಹಾರ ತಜ್ಞರು ಸಲಹೆ ಮಾಡುತ್ತಾರೆ. ಇದರಿಂದ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣ ಮೂವತ್ತು ಶೇಖಡಾದಷ್ಟು ಹೆಚ್ಚುತ್ತದೆ ಎಂದು ಈಗ ತಿಳಿದುಬಂದಿದೆ.

ಬೀಟ್ ರೂಟ್

ಬೀಟ್ ರೂಟ್

ಕ್ಯಾರೆಟ್ ನಂತೆಯೇ ಬೀಟ್ ರೂಟ್ ನಲ್ಲಿ ಸಹಾ ಬೀಟಾ ಕ್ಯಾರೋಟೀನ್ ಮತ್ತು ಇತರ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ಆದ್ದರಿಂದ ಇವನ್ನು ಬೇಯಿಸಿದ ಬಳಿಕ ಇದರಲ್ಲಿರುವ ವಿಟಮಿನ್ನುಗಳು ಸುಲಭವಾಗಿ ದೇಹ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ತನ್ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಲು ಮತ್ತು ಇತರ ಆರೋಗ್ಯಕರ ಗುಣಗಳು ಹೆಚ್ಚುತ್ತವೆ.

ಬ್ರೋಕೋಲಿ

ಬ್ರೋಕೋಲಿ

ಹಸಿರು ಹೂಕೋಸಿನಂತಿರುವ ಬ್ರೋಕೋಲಿಯಲ್ಲಿ ವಿಟಮಿನ್ ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಬೇಯಿಸಿದ ಬಳಿಕವೇ ದೇಹಕ್ಕೆ ಲಭ್ಯವಾಗುತ್ತದೆ. ಇದೇ ರೀತಿಯಲ್ಲಿ ಉಳಿದ ಹಸಿರು ತರಕಾರಿ ಮತ್ತು ಸೊಪ್ಪುಗಳ ಪೋಷಕಾಂಶಗಳೂ ಬೇಯಿಸಿದ ಬಳಿಕವೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ.

English summary

Vegetables That Taste Better When Cooked Than Raw!

Vegetables should be a must add on your plate every single day. If you don't have sufficient vegetables to complete your meal, you will experience a lot of health issues. Consuming vegetables are good for the heart. Take a look at some of these healthy veggies that taste better when cooked. All you need to do is to add a pinch of salt and a dash of pepper.
X
Desktop Bottom Promotion