Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
“32,34,36” ನಿಮ್ಮ ಬ್ರಾ ಸೈಜ್ ಯಾವುದು?
ಹೆಣ್ಣು ತನ್ನ ಸೌಂದರ್ಯದ ವಿಷ್ಯದಲ್ಲಿ ತುಂಬಾ ಕಾನ್ಸಿಯಸ್ ಆಗಿರ್ತಾಳೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಅದ್ರಲ್ಲೂ ತನ್ನ ಎದೆಗೆ ಸರಿಯಾದ ಆಕಾರ ನೀಡಬೇಕು ಅಂತ ಅವಳು ಮಾಡೋ ಹರಸಾಹಸ ಒಂದೆರಡಲ್ಲ. ಅದಕ್ಕಾಗಿ ಬ್ರಾಗಳನ್ನು ಕೊಂಡುಕೊಳ್ಳುವಾಗ ಆಕೆಗೆ ಹುಟ್ಟುವ ಗೊಂದಲ ಹತ್ತು ಹಲವು. ತೊಂಬತ್ತು ಶೇಕಡಾ ಮಹಿಳೆಯರಿಗೆ ಕಾಡುವ ಪ್ರಶ್ನೆಯಿದು. ಒಂದೆಡೆ ಟ್ರೆಂಡೂ ಇರಬೇಕು, ಮತ್ತೊಂದೆಡೆ ಎದೆಗೆ ಸರಿಯಾಗಿ ಕೂರುವಂತೆಯೂ ಇರಬೇಕು. ಸಿಲಿಕಾನ್ ಬ್ರಾ ಸ್ತನಗಳ ಆರೋಗ್ಯಕ್ಕೆ ಎಷ್ಟು ಸೂಕ್ತ?
ಅದ್ರ ಜೊತೆಗೆ ನ್ಯೂ ಟ್ರೆಂಡ್, ನ್ಯೂ ಫ್ಯಾಷನ್‌ನ ಮಹಿಳೆಯರ ಉಡುಪಿಗೆ ಸರಿ ಹೊಂದುವ ಒಳಉಡುಪುಗಳ ಆಯ್ಕೆ ಒಂದು ಸವಾಲಾಗಿರುತ್ತೆ. ಆದ್ರೆ ಎದೆಯ ಆಕಾರಕ್ಕೆ ಸರಿ ಹೊಂದುವ ಬ್ರಾ ಖರೀದಿಸದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಯಾವ ಬ್ರಾ ಯಾವ ರೀತಿ ಇರುತ್ತೆ. ನಿಮ್ಮ ಸ್ತನಗಳ ಆಕಾರವನ್ನು ಸರಿಯಾಗಿ ಅಳತೆ ಮಾಡಿಕೊಳ್ಳೋದು ಹೇಗೆ, ನಿಮ್ಮ ಸ್ತನಗಳ ಆಕಾರಕ್ಕೆ ತಕ್ಕಂತ ಬ್ರಾ ಖರೀದಿಸೋದು ಹೇಗೆ..? ಎಂಬುದನ್ನು ಮುಂದೆ ಓದಿ....
ಯಾಕೆ ಬೇಕು ಗೊತ್ತಾ ಸರಿಯಾದ ಅಳತೆಯ ಬ್ರಾ?
ಪ್ರತಿ ಮಹಿಳೆಗೂ ತಮ್ಮ ಎದೆಗೆ ಸರಿಯಾದ ಶೇಪ್ ನೀಡುವ ಬ್ರಾ ಯಾವುದು ಅನ್ನೋದೆ ದೊಡ್ಡ ಗೊಂದಲದ ಪ್ರಶ್ನೆಯಾಗಿರುತ್ತೆ. ಒಂದು ಸರಿಯಾದ ಬ್ರಾ ನಿಮ್ಮ ಎದೆಗೆ ಸೂಕ್ತ ಆಧಾರ ಒದಗಿಸಿ ಅವುಗಳ ಆಕಾರ ಕೆಡದಂತೆ ರಕ್ಷಣೆ ನೀಡುತ್ತೆ. ಸ್ತನಗಳ ಜೀವಕೋಶಗಳಿಗೆ ಮತ್ತು ತ್ವಚೆಗೆ ಹಾನಿಯಾಗದಂತೆ ನೋಡಿಕೊಳ್ಳುತ್ತೆ. ಆದ್ರೆ ಆಯ್ಕೆಗೂ ಮುನ್ನ ಅಳತೆ ಪರ್ಫೆಕ್ಟ್ ಆಗಿ ಗೊತ್ತಿರಬೇಕು. ಸರಿಯಾದ ಅಳತೆಯ ಬ್ರಾ ಧರಿಸದೇ ಇದ್ದಲ್ಲಿ ನಿಮ್ಮ ಸ್ತನಗಳು ಕಾಲಕ್ರಮೇಣ ಜೋತುಬಿದ್ದಂತಾಗಿ ಆಕಾರ ಹಾಳಾಗುತ್ತೆ.
ನಿಮ್ಮ ಎದೆಯ ಅಳತೆ ಮಾಡಿಕೊಳ್ಳೋದು ಹೇಗೆ?
ಯಾವ ಎದೆಕಟ್ಟು, ನಿಮ್ಮ ಅಳತೆಗೆ ಸರಿಹೊಂದುತ್ತೆ ಅನ್ನೊದು ತಿಳಿಯಬೇಕು ಅಂದ್ರೆ ಮೊದಲು ನಿಮ್ಮ ಸ್ತನಗಳ ಅಳತೆಯನ್ನು ನೋಡಿಕೊಳ್ಳಬೇಕಾಗುತ್ತೆ. ಹಾಗೆಂದು ಪ್ರತಿಬಾರಿ ಕೊಂಡುಕೊಳ್ಳೋಕೆಂದು ಮಾರ್ಕೆಟ್ ಗೆ ಹೋದಾಗ ಟ್ರಾಯಲ್ ನೋಡುವುದು ಅಸಾದ್ಯ. ಅದಕ್ಕೆ ಈಸಿಯಾಗಿ ನಿಮ್ಮ ಅಳತೆ ನಿಮಗೆ ಗೊತ್ತಾಗೋದು ಹೇಗೆ ಅನ್ನೋದನ್ನು ನಾವು ಹೇಳುತ್ತೇವೆ... ಮೊದಲು ಸ್ತನ ಭಾಗದ ಕೆಳಗಿನ ಒಟ್ಟು ಸುತ್ತಳತೆ ತೆಗೆದುಕೊಳ್ಳಬೇಕು.. ಅದು ಬೆಸ ಸಂಖ್ಯೆಯಾಗಿದ್ದರೆ ಅದಕ್ಕೂ ಮೊದಲಿನ ಸರಿ ಸಂಖ್ಯೆಯನ್ನು ಗುರುತಿಸಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ನಿಮ್ಮ ಎದೆಯ ಅಳತೆ ಮಾಡಿಕೊಳ್ಳೋದು ಹೇಗೆ?
ಯಾಕಂದ್ರೆ ಬ್ರಾ ಸೈಜ್ ಬೆಸಸಂಖ್ಯೆಯಲ್ಲಿ ಇರೋದಿಲ್ಲ. ಉದಾಹರಣೆಗೆ ನಿಮ್ಮ ಅಳತೆ 33 ಅಂತಿಟ್ಟುಕೊಳ್ಳಿ.. ಆಗ ನಿಮ್ಮ ಬ್ರಾ ಸೈಜ್ 32 ಆಗಿರುತ್ತೆ... ಇದು ಪಕ್ಕಾ ಲೆಕ್ಕಾಚಾರ...ಇದೊಂದೆ ಅಂಶ ಬ್ರಾ ಅಳತೆ ಸೂಚಿಸೋದಿಲ್ಲ. ಸ್ತನದ ಅಳತೆ, ಆಕಾರಕ್ಕೆ ತಕ್ಕಂತೆ ಕಪ್ ಅಳತೆಯೂ ಬದಲಾಗುತ್ತೆ. ಒಂದೊಂದು ಕಂಪೆನಿಯ ಪ್ರೊಡಕ್ಟ್ ಒಂದೊಂದು ರೀತಿಯ ಸ್ಪೆಷಲ್ ಕಪ್ ಗಳನ್ನು ಹೊಂದಿರುತ್ತೆ. ಸೋ ಸ್ತನಗಳ ಅತ್ಯುನ್ನದ ಭಾಗದಲ್ಲಿ ಹೀಗೆ ಅಳತೆಪಟ್ಟಿ ಇಟ್ಟು ನೋಡಿ. ಅದ್ರ ಅಳತೆಯನ್ನು ನೋಟ್ ಮಾಡ್ಕೊಳ್ಳಿ . ಟೇಪ್ ಬಿಗಿಯಾಗಿ ಒತ್ತದಂತೆ ಸುತ್ತಳತೆ ಇರಬೇಕು.
ಒಂದೊಂದು ಕಂಪೆನಿಯ ಬ್ರಾ ಸೈಜ್ ಒಂದೊಂದು ರೀತಿ
ಕೆಲವು ಕಂಪೆನಿಯ ಬ್ರಾ ಎ, ಸಿ, ಡಿ ಹೀಗೆ ಇ ವರೆಗೂ ಕಪ್ ಸೈಜ್ ಕೂಡ ಇರುತ್ತೆ.. ಎದೆಯ ಕೆಳಭಾಗದ ಸುತ್ತಳತೆ ಮತ್ತು ಎದೆಯ ಮೇಲ್ಭಾಗದ ಸುತ್ತಳತೆ ಕಳೆಯಿರಿ. ಒಂದು ವೇಳೆ ಉತ್ತರ ಶೂನ್ಯ ಬಂದ್ರೆ ನಿಮ್ಮ ಕಪ್ ಸೈಜ್ ಎಎ ಅಂತ ಅರ್ಥ. ಒಂದು ವೇಳೆ ನಿಮ್ಮ ಉತ್ತರ ಒಂದು ಎಂದು ಬಂದ್ರೆ ನಿಮ್ಮ ಕಪ್ ಸೈಜ್ ಎ ಅಂತ ಅರ್ಥ. 2 ಬಂದ್ರೆ ಕಪ್ ಸೈಜ್ ಸಿ ಹೀಗೆ ಡಿ, ಇ ವರೆಗೂ ಕಪ್ ಸೈಜ್ ಇರುತ್ತೆ. ಆದ್ರೆ ಎಲ್ಲಾ ಬ್ರಾಂಡ್‌ನಲ್ಲೂ ಈ ಕಪ್ ಸೈಜ್ ಇರೋದಿಲ್ಲ ಅನ್ನೋದು ನೆನಪಿರಲಿ..
ಫರ್ಫೆಕ್ಟ್ ಕಪ್ ಸೈಜ್ ಹೇಗೆ ತಿಳಿದುಕೊಳ್ಳೋದು?
ಒಂದು ವೇಳೆ ಸರಿಯಾದ ಅಳತೆಯ ಬ್ರಾ ಕೊಂಡುಕೊಳ್ಳದೇ ಇದ್ರೆ, ಎರಡು ಕಪ್‌ಗಳ ಮಧ್ಯ ಇರುವ ಪಟ್ಟಿಯು ಬಟ್ಟೆ ದೇಹ ಬಿಟ್ಟು ಜೋತು ಬಿದ್ದಂತೆ ಕಾಣತ್ತೆ. ಇಲ್ಲವೇ ದೇಹಕ್ಕೆ ಪಟ್ಟಿ ಬಿರಿಯುವಂತೆ ಬಿಗಿಯಾಗಿ ಎಳೆದು ಕಟ್ಟಿದಂತಿರುತ್ತೆ. ಬ್ರಾ ಹಿಂದೆ ಇರುವ ಬೆನ್ನ ಮೇಲಿನ ಪಟ್ಟಿ ಬೆನ್ನಿನ ಮಧ್ಯಭಾಗ ಬಿಟ್ಟು ಮೇಲೇರಿದ್ರೆ ಆ ಬ್ರಾದ ಕಪ್ ಅಳತೆಯಲ್ಲಿ ನೀವು ಇನ್ನು ಹೆಚ್ಚಿನದ್ದನ್ನು ಕೊಂಡುಕೊಳ್ಳಬೇಕು ಅಂತ ಅರ್ಥ. ಅಷ್ಟೇ ಅಲ್ಲ, ಬ್ರಾ ಕಪ್‌ನೊಳಗೆ ಸ್ತನ ತುಳುಕಿದಂತೆ ಅಲುಗಾಡಿದ್ರೂ ಕೂಡ ನಿಮ್ಗೆ ಕಪ್ ಸೈಜ್ ದೊಡ್ಡದು ಬೇಕು ಅಂತ ಅರ್ಥ.. ಜೊತೆಗೆ ಕಪ್‌ನ ಮೇಲ್ಬಾಗದಲ್ಲಿ ಅರ್ಧ ಸ್ತನ ಹೊರಬಂದಂತೆ ಕಂಡರೂ ದೊಡ್ಡ ಸೈಜಿನ ಕಪ್ ಬೇಕು ಎಂದರ್ಥ.
ಬ್ರಾ ಸೈಜ್ ಹೇಗಿರುತ್ತೆ ಗೊತ್ತಾ?
ಟೀನ್ಸ್ ಕಲೆಕ್ಷನ್ ನಲ್ಲಿ ಬ್ರಾ ಸೈಜ್ 30 ರಿಂದ ಆರಂಭವಾಗುತ್ತೆ.ಅದ್ರಲ್ಲೂ ಪ್ಯಾಡೆಡ್, ವಿತ್ ಔಟ್ ಪ್ಯಾಡ್ ಹೀಗೆ ನಾನಾ ವಿಧಗಳಿವೆ. ಅಡಲ್ಟ್ ಕಲೆಕ್ಷನ್ ಅಂದ್ರೆ 34 ನೇ ಸೈಜ್‌ಯಿಂದ ಆರಂಭಗೊಳ್ಳುತ್ತೆ. 30 ನೇ ಸೈಜ್ ಗಿಂತ ಕಡಿಮೆ ಅಂದ್ರೆ ಅದು ಸ್ಪೋರ್ಟ್ಸ್ ಬ್ರಾ. ಹಾಗಂತ ಅದು ಸ್ಪೋರ್ಟ್ಸ್‌ಗಾಗಿ ಅಂತ ಅಂದುಕೊಳ್ಳಬೇಡಿ.. ಸ್ತನದ ಸೈಜ್ ಸಣ್ಣವಿರುವವರು ಅಥ್ವಾ 13 ವರ್ಷದ ಅಥ್ವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳು ಬಳಸಬಹುದಾದ ಬ್ರಾಗಳಿವು..
ಯಾವಾಗ ಹೆಣ್ಣು ಬ್ರಾ ಧರಿಸಲು ಆರಂಭಿಸಬೇಕು?
ಹೆಚ್ಚು ಕಡಿಮೆ 13ನೇ ವರ್ಷದಿಂದ ಸ್ತನದ ಬೆಳವಣಿಗೆ ಆರಂಭಗೊಳ್ಳುತ್ತೆ. ಟೀನೇಜು ಮುಗಿದ ನಂತ್ರ ಸ್ವಲ್ಪ ಸ್ತನದ ಬೆಳವಣಿಗೆ ನಿಂತು ಹೋಗುತ್ತೆ ಅಂತಾನೇ ಹೇಳ್ಬಹುದು. ಆದ್ರೆ ಮದುವೆಯಾಗಿ ಹಾರ್ಮೋನುಗಳ ಬದಲಾವಣೆ ಆರಂಭಗೊಂಡಾಗ ಕೂಡ ಸ್ತನಗಳ ಸೈಜ್‌ನಲ್ಲಿ ಬದಲಾವಣೆಯಾಗುತ್ತೆ. ಇನ್ನು ಮುಂದೆ ಮಗುವಾಗಿ, ಮಗುವಿಗೆ ಹಾಲು ನೀಡುವವರೆಗೂ ಕೂಡ ಸ್ತನಗಳ ಅಳತೆ ಬದಲಾಗುವ ಸಾಧ್ಯತೆ ಇರುತ್ತೆ. ಹಾಗಾಗಿ ಸ್ತನದ ಅಳತೆಯನ್ನು ಅಳೆದು ಬ್ರಾ ಖರೀದಿಸಬೇಕಾಗುತ್ತೆ. ಹಾಗಾಗಿ ಯಾವಾಗ ಹೆಣ್ಣು ತನ್ನ ಸ್ತನಗಳ ಬದಲಾವಣೆಯನ್ನು ಗುರುತಿಸುತ್ತಾಳೋ ಅಂದ್ರೆ ಹೆಚ್ಚು ಕಡಿಮೆ 12,13 ನೇ ವಯಸ್ಸಿನಲ್ಲಿ ಬ್ರಾ ಧರಿಸಲು ಆರಂಭಿಸಬಹುದು..
ಬೆನ್ನಿನ ಭಾಗದ ಬಟನ್ ಇರುವ ಬ್ರಾ ಧರಿಸುವ ಸುಲಭ ಕ್ರಮ
ಬ್ರಾ ದರಿಸಲೂ ಕೂಡ ನಾವೊಂದಿಷ್ಟು ಟಿಪ್ಸ್ ಕೊಡ್ತೀವಿ.. ಸಿಂಪಲ್ ನಾರ್ಮಲ್ ಬ್ರಾ ಧರಿಸೋದಕ್ಕೆ ಕೆಲವರಿಗೆ ಕಷ್ಟವೋ ಕಷ್ಟ.. ಬೆನ್ನಿನ ಹಿಂದೆ ಬಟನ್ ಹಾಕಿಕೊಳ್ಳೋಕೆ ಒದ್ದಾಡೋರು ಇದಾರೆ. ಆದ್ರೆ ಅದನ್ನು ಈಸಿಯಾಗಿ ಧರಿಸೋದು ಹೇಗೆ ಅನ್ನೋದನ್ನು ನಾವ್ ಹೇಳ್ತೀವಿ ಕೇಳಿ.. ಮೊದಲು ಎದೆಯ ಮುಂಭಾಗದಲ್ಲಿ ಬ್ರಾ ಹಿಂಭಾಗವನ್ನು ಉಲ್ಟಾ ಹಿಡಿದುಕೊಂಡು ಹುಕ್ ಹಾಕಿಕೊಳ್ಳಿ. ನಂತ್ರ ಅದನ್ನು ತಿರುಗಿಸಿಕೊಳ್ಳಿ. ತಿರುಗಿಸಿದ ನಂತ್ರ ಬ್ರಾ ಉಲ್ಟಾ ಮಾಡಿ ಕಪ್‌ಗಳನ್ನು ಎದೆಗೆ ಫಿಕ್ಸ್ ಮಾಡಿಕೊಳ್ಳಿ. ತದನಂತರ ಸ್ಟ್ರೈಪ್ಸ್ ಒಳಗೆ ಕೈ ತೂರಿಸಿಕೊಂಡು ಭುಜದಲ್ಲಿ ನೀಟಾಗಿ ಸ್ಟ್ರೈಪ್ಸ್ ಕೂರುವಂತೆ ನೋಡಿಕೊಳ್ಳಿ ಇದು ಸಿಂಪಲ್ ನಾರ್ಮಲ್ ಬ್ರಾ ಧರಿಸುವ ವಿಧಾನ. ಬೆನ್ನಿಗೆ ಕೈ ಎಟುಕೋದೆ ಇದ್ದಾಗ ಒದ್ದಾಡುವ ಅಗತ್ಯವಿಲ್ಲ.ಈ ಮೆಥೆಡ್ ಫಾಲೋ ಮಾಡಬಹುದು.,,