For Quick Alerts
ALLOW NOTIFICATIONS  
For Daily Alerts

ಟೀ ಕುಡಿಯುವುದಕ್ಕೂ ನೀತಿ-ನಿಯಮವಿದೆ, ಅಚ್ಚರಿಯಾಯಿತೇ?

By Arshad
|

ಬೆಳಿಗ್ಗೆದ್ದ ತಕ್ಷಣ ಬಿಸಿಬಿಸಿಯಾದ ಟೀ ಕುಡಿಯುವ ಮೂಲಕ ದೇಹ ಮತ್ತು ಮನಸ್ಸಿಗೆ ಸಿಗುವ ಆಹ್ಲಾದ ದಿನವಿಡೀ ಉಲ್ಲಾಸದಿಂದಿರಲು ನೆರವಾಗುತ್ತದೆ. ಆದರೆ ಇದರ ದುಷ್ಪರಿಣಾಮವೇನು ಗೊತ್ತೇ? ಬಿಸಿ ಟೀ ಹೊಟ್ಟೆಗೆ ತಲುಪಿದ ಬಳಿಕ ಜೀರ್ಣಾಂಗಗಳಲ್ಲಿ ಆಮ್ಲೀಯತೆ ಹೆಚ್ಚಿಸುವುದು. ಇದರಿಂದ ಹಲವು ತೊಂದರೆಗಳು, ತಕ್ಷಣವೇ ಅಲ್ಲದಿದ್ದರೂ ಕೆಲಕಾಲದ ಬಳಿಕ ಪ್ರಾರಂಭವಾಗುತ್ತವೆ. ಹೊಟ್ಟೆಯಲ್ಲಿ ಉರಿ, ಹುಳಿತೇಗು, ಅಜೀರ್ಣ, ಕರುಳಿನ ಹುಣ್ಣು, ಹೊಟ್ಟೆ ಉಬ್ಬರಿಕೆ ಮೊದಲಾದವು ಕೆಲಕಾಲದ ನಂತರ ಬಾಧಿಸಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಬೇಡ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದೇ ರೀತಿ ಟೀ ಸೇವನೆ ದಿನದ ಹಲವು ಸಂದರ್ಭಗಳಲ್ಲಿ ಉತ್ತಮವಲ್ಲ. ಈ ಸಂದರ್ಭಗಳು ಯಾವುವು ಎಂಬುದನ್ನು ತಜ್ಞರು ಹೇಳಿದ ಮಾಹಿತಿಯನ್ನು ನೀಡಲಾಗಿದೆ ಮುಂದೆ ಓದಿ....

Times when it's totally wrong to drink tea

* ಬೆಳಿಗ್ಗೆ ಹಾಸಿಗೆಯಲ್ಲಿ ಕುಡಿಯುವ ಟೀ
ತಮ್ಮ ಪ್ರತಿಷ್ಠೆಯನ್ನು ಮೆರೆಯಲು ಬ್ರಿಟಿಷರು ತಂದ ಈ ಪದ್ಧತಿಯನ್ನು ಈಗಲೂ ಕೆಲವೆಡೆ ಅನುಸರಿಸುತ್ತಾರೆ. ಅದೆಂದರೆ ಬೆಳಿಗ್ಗೆ ನಿದ್ದೆಯಿಂದ ಎಚ್ಚರಾದ ಕೂಡಲೇ, ಹಾಸಿಗೆ ಬಿಟ್ಟೇಳುವ ಮುನ್ನವೇ ಒಂದು ಕಪ್ ಟೀ ಕುಡಿಯುವುದು. ಆದರೆ ಈ ಕ್ರಮ ಅತಿ ಅನಾರೋಗ್ಯಕರವಾಗಿದ್ದು ಇದು ವಿಶೇಷವಾಗಿ ಬಾಯಿಯ ಒಳಗೆ ವಿಷಕಾರಿ ಅಂಶವನ್ನು ಹೆಚ್ಚಿಸುವ ಮೂಲಕ ಬಾಯಿ, ಒಸಡು, ಹಲ್ಲು, ನಾಲಿಗೆ, ಗಂಟಲಸೋಂಕು ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುತ್ತದೆ.

*ಊಟದ ಬಳಿಕ ಸೇವಿಸುವ ಟೀ
ಟೀ ಯಲ್ಲಿರುವ ಫಿನಾಲಿಕ್ ಕಣಗಳು ಆಹಾರದಿಂದ ಪ್ರೋಟೀನುಗಳು ಕರುಳುಗಳಿಗೆ ಹೀರಲ್ಪಡುವುದನ್ನು ತಡೆಯುತ್ತವೆ. ಅಂದರೆ ಊಟ ಮಾಡುವ ಮುಖ್ಯ ಉದ್ದೇಶವನ್ನೇ ಹಾಳುಗೆಡವುತ್ತವೆ. ಅಲ್ಲದೇ ಕ್ಯಾಟೆಚಿನ್ ಎಂಬ ಆಂಟಿ ಆಕ್ಸಿಡೆಂಟುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಒಂದು ವೇಳೆ ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದ್ದು ರಕ್ತಹೀನತೆಯಿಂದ ಬಳಲುತ್ತಿದ್ದರೆ ಈ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.

*ರಾತ್ರಿ ಮಲಗುವ ಮುನ್ನ ಕುಡಿಯುವ ಟೀ
ಕೆಲವರಿಗೆ ಮಲಗುವ ಮುನ್ನ ಒಂದು ಕಪ್ ಟೀ ಕುಡಿದು ಮಲಗುವ ಅಭ್ಯಾಸವಿರುತ್ತದೆ. ಆದರೆ ರಾತ್ರಿಯೂಟದ ಬಳಿಕ ಟೀ ಕುಡಿಯುವುದೇ ದೊಡ್ಡ ತಪ್ಪು. ಏಕೆಂದರೆ ಟೀಯಲ್ಲಿರುವ ಕೆಫೀನ್ ಒಂದು ಉತ್ತೇಜಕ ಪೋಷಕಾಂಶವಾಗಿದ್ದು ನಿದ್ದೆ ಬರುವುದರಿಂದ ತಡೆಯುತ್ತದೆ. ಪರಿಣಾಮವಾಗಿ ನಿದ್ರಾಹೀನತೆ ಅಥವಾ ಅಸಮರ್ಪಕ ನಿದ್ದೆಯಾಗುವ ಸಂಭವ ಎದುರಾಗುತ್ತದೆ.

*ಪೂರಕ ಔಷಧಿಗಳೊಂದಿಗೆ ಟೀ ಸೇವನೆ
ಒಂದು ವೇಳೆ ವೈದ್ಯರು ನಿಮ್ಮ ಆರೋಗ್ಯದಲ್ಲಿ ಯಾವುದಾದರೊಂದು ಕೊರತೆ ಕಂಡುಕೊಂಡು ಇದಕ್ಕೆ ಪೂರಕವಾದ ಔಷಧಿಗಳನ್ನು ಅಥವಾ ಆಹಾರಗಳನ್ನು ಸಲಹೆ ಮಾಡಿದ್ದರೆ ಈ ಔಷಧಿಗಳೊಂದಿಗೆ ಟೀ ಸೇವನೆ ಸಲ್ಲದು. ಏಕೆಂದರೆ ಟೀ ಯಲ್ಲಿರುವ ಪೋಷಕಾಂಶಗಳು ಈ ಔಷಧಿಗಳ ಮೇಲೆ ಪರಿಣಾಮ ಬೀರಿ ಅಗತ್ಯವಾದ ಪರಿಣಾಮಗಳನ್ನು ನೀಡದೇ ಅನಗತ್ಯವಾದ ದುಷ್ಪರಿಣಾಮಗಳನ್ನೂ ನೀಡಬಹುದು. ವಿಶೇಷವಾಗಿ ಕಬ್ಬಿಣದ ಕೊರತೆಗೆ ನೀಡಲಾಗುವ ಔಷಧಿಗಳ ಮೇಲೆ ಟೀ ಪರಿಣಾಮ ಬೀರುತ್ತದೆ. ಟೀ ಬದಲಿಗೆ ಕಿತ್ತಳೆ ರಸವನ್ನು ಸೇವಿಸುವುದು ಉತ್ತಮ.

*ನಿಮ್ಮ ಟೀಯಲ್ಲಿ ನೊಣ ಅಥವಾ ಇನ್ನಾವುದಾದರೂ ವಸ್ತು ಬಿದ್ದಿದ್ದಾಗ
ಕೆಲವೊಮ್ಮೆ ಟೀಯಲ್ಲಿ ನೊಣ ಅಥವಾ ಬೇರಾವುದೋ ವಸ್ತು ಬಿದ್ದಿರುತ್ತದೆ. ಈ ಟೀಯನ್ನು ಎಸೆದುಬಿಡಿ. ಜಿಪುಣರಾಗಬೇಡಿ. ಬೇರೆ ಟೀ ತಯಾರಿಸಿ ಕುಡಿಯಿರಿ. ಏಕೆಂದರೆ ಟೀ ಯ ಬಿಸಿಗೆ ಸಾಯುವ ನೊಣದಿಂದ ವಿಷಕಾರಿ ದ್ರವಗಳು ಮತ್ತು ಕಾಯಿಲೆ ಹರಡುವ ಬ್ಯಾಕ್ಟ್ರೀರಿಯಾಗಳು ಟೀಯಲ್ಲಿ ಸೇರಿಕೊಳ್ಳುತ್ತವೆ. ಇದನ್ನು ಕುಡಿದರೆ ಹೊಟ್ಟೆಯಲ್ಲಿ ಸೋಂಕು ಸಹಿತ ಹಲವು ತೊಂದರೆಗಳು ಎದುರಾಗಬಹುದು.

English summary

Times when it's totally wrong to drink tea

Sipping a cup of warm tea at your breakfast table is all you need for refreshing your mind and body and get started. But did you know that drinking tea at the wrong time can cause acidity and other health problems? Here’s when you should not drink your cuppa tea.
X
Desktop Bottom Promotion