ಚಹಾ ಪ್ರಿಯರಿಗೆ ಕಹಿ ಸುದ್ದಿ! ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ!

By: Hemanth
Subscribe to Boldsky

ನಿದ್ರೆಯಿಂದ ಬೆಳಿಗ್ಗೆ ಎದ್ದ ಬಳಿಕ ದೇಹಕ್ಕೆ ಉಲ್ಲಾಸವನ್ನು ನೀಡಲು ಒಂದು ಕಪ್ ಚಹಾ ಅಥವಾ ಕಾಫಿ ತುಂಬಾ ಮುಖ್ಯವಾಗಿರುತ್ತದೆ. ಹೆಚ್ಚಿನವರಿಗೆ ಚಹಾ ಅಥವಾ ಕಾಫಿ ಕುಡಿಯದೆ ದಿನವನ್ನು ಆರಂಭಿಸುವುದು ತುಂಬಾ ಕಷ್ಟವಾಗುತ್ತದೆ. ಚಹಾ ಅಥವಾ ಕಾಫಿ ಇಲ್ಲವೆಂದಾದರೆ ನಿದ್ರೆಯಿಂದ ಎದ್ದರೂ ನಮ್ಮಲ್ಲಿ ಉಲ್ಲಾಸವಿರುವುದಿಲ್ಲ.  ಆದರೆ ಬೆಳ್ಳಂಬೆಳಗ್ಗೆ ಚಹಾ ಕುಡಿಯುವುದರಿಂದ ನಮ್ಮ ದೇಹಕ್ಕೆ ಅಡ್ಡಪರಿಣಾಮಗಳು ಉಂಟಾಗುತ್ತದೆ.         ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ-ಅಪಾಯ ಬೆನ್ನೇರಿ ಕಾಡಲಿದೆ!

ಚಹಾ ಕುಡಿಯುವಾಗ ನಾವು ಮಾಡುವಂತಹ ಕೆಲವೊಂದು ತಪ್ಪುಗಳ ಬಗ್ಗೆ ಮತ್ತು ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಕೆಲವರಿಗೆ ಎದ್ದ ಕೂಡಲೇ ಚಹಾ ಬೇಕು. ಮತ್ತೆ ಕಚೇರಿಗೆ ಹೋಗಿ ಅಲ್ಲಿ ಚಹಾ ಕುಡಿಯುತ್ತೇವೆ. ಅಲ್ಲಿಂದ ಮನೆಗೆ ಬಂದರೆ, ಅಥವಾ ಮನೆಗೆ ಅತಿಥಿಗಳು ಬಂದಿದ್ದರೆ ಅವರೊಂದಿಗೆ ಕುಳಿತು ಒಂದು ಕಪ್ ಚಹಾ ಕುಡಿಯುತ್ತೇವೆ.

ಚಹಾ ಕುಡಿಯುವುದರಿಂದ ಮೆದುಳಿನ ಕಾರ್ಯ ಉದ್ದೀಪನಗೊಳ್ಳಬಹುದು. ಆದರೆ ಅದೇ ಚಹಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮದ್ಯಪಾನ ಮಾಡಿದಂತೆ ಚಹಾ ಕೂಡ ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಅತಿಯಾಗಿ ಚಹಾ ಕುಡಿಯುವುದು ಆರೋಗ್ಯಕ್ಕೆ ಮಾರಕವಾಗಬಲ್ಲದು. ಚಹಾ ಕುಡಿಯುವಾಗ ಮಾಡುವಂತಹ ಕೆಲವೊಂದು ಸಾಮಾನ್ಯ ತಪ್ಪುಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುವ....  

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹದಲ್ಲಿ ಆಸಿಡಿಟಿ ಮಟ್ಟವು ಹೆಚ್ಚಾಗುತ್ತದೆ. ಇದು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್ಯಾಡಿಕಲ್ ನ್ನು ವೃದ್ಧಿಸುತ್ತದೆ ಮತ್ತು ವಯಸ್ಸಾಗುವ ಲಕ್ಷಣವನ್ನು ಹೆಚ್ಚಿಸುವುದು. ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕು. ನೀರು ಕುಡಿದು ಅರ್ಥ ಗಂಟೆಯ ಬಳಿಕ ಚಹಾ ಕುಡಿಯಿರಿ.

ಅತಿಯಾಗಿ ಕುದಿಸಿದ ಚಹಾ ಕುಡಿಯುವುದು

ಅತಿಯಾಗಿ ಕುದಿಸಿದ ಚಹಾ ಕುಡಿಯುವುದು

ಹೆಚ್ಚಿನವರಿಗೆ ತುಂಬಾ ಕುದಿಸಿದ ಚಹಾ ಇಷ್ಟವಾಗುತ್ತದೆ. ಅತಿಯಾಗಿ ಕುದಿಸಿದ ತುಂಬಾ ಸ್ಟ್ರಾಂಗ್ ಚಹಾ ಕುಡಿಯುವುದು ಮಾಡುವಂತಹ ದೊಡ್ಡ ತಪ್ಪು. ಇದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಉಂಟಾಗುತ್ತದೆ. ನೀರು ಸರಿಯಾಗಿ ಕುದಿಯುತ್ತಿರುವಾಗ ಚಹಾ ಹುಡಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ತೆಗೆಯಿರಿ.

ಚಹಾಗೆ ಗಿಡಮೂಲಿಕೆ ಹಾಕುವುದು

ಚಹಾಗೆ ಗಿಡಮೂಲಿಕೆ ಹಾಕುವುದು

ತುಳಸಿ ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿ ಚಹಾಗೆ ಅದನ್ನು ಹಾಕುತ್ತೇವೆ. ಆದರೆ ಇದು ನಾವು ಮಾಡುವಂತಹ ದೊಡ್ಡ ತಪ್ಪು. ಯಾಕೆಂದರೆ ಚಹಾದಲ್ಲಿರುವ ಕೆಫಿನ್ ಈ ಗಿಡಮೂಲಿಕೆಗಳ ಆರೋಗ್ಯ ಲಾಭಗಳನ್ನು ಹೀರಿಕೊಳ್ಳಲು ಬಿಡುವುದಿಲ್ಲ.

ಊಟವಾದ ತಕ್ಷಣ ಚಹಾ ಕುಡಿಯುವುದು

ಊಟವಾದ ತಕ್ಷಣ ಚಹಾ ಕುಡಿಯುವುದು

ಊಟವಾದ ತಕ್ಷಣ ನಾವು ಚಹಾ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿರುತ್ತೇವೆ. ಹೀಗೆ ಮಾಡುವುದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಚಹಾ ಬಿಡುವುದಿಲ್ಲ. ಆಹಾರ ಸೇವನೆಯ ಸುಮಾರು ಅರ್ಧ ಗಂಟೆಯ ಬಳಿಕ ಚಹಾ ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು.

 
English summary

These are the correct ways to Drink tea

You keep drinking cups after cups of tea but do you know drinking too much of tea is bad for our health? Like the alcohol we drink, tea might give that stimulation to the brain but when there is overdose of alcohol then it might harm the body. In a similar way an overdose of tea will also harm the body. Here is a list of common mistakes that most of us make while drinking tea. Take a look.
Subscribe Newsletter