For Quick Alerts
ALLOW NOTIFICATIONS  
For Daily Alerts

ಆರೋಗ್ಯ ವೃದ್ಧಿಗೆ ದಿನಕ್ಕೊಂದು 'ಬಾಳೆ ಹಣ್ಣು' ತಿಂದರೂ ಸಾಕು!

By Lekhaka
|

ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿರಿಸಬಹುದು ಎಂಬುದೊಂದು ಆಂಗ್ಲ ಗಾದೆ. ಆದರೆ ಭಾರತೀಯರ ಮಟ್ಟಿಗೆ ದಿನಕ್ಕೊಂದು ಬಾಳೆಹಣ್ಣು ತಿನ್ನುವ ಮೂಲಕ ವೈದ್ಯರನ್ನು ದೂರವಿಡುವುದು ಮಾತ್ರವಲ್ಲ, ಇನ್ನೂ ಹೆಚ್ಚಿನದನ್ನು ಪಡೆಯಬಹುದು. ಸರ್ವ ರೋಗಕ್ಕೂ ದಿವ್ಯೌಷಧ ಕೆಂಪು ಬಾಳೆಹಣ್ಣು

ನಿಸರ್ಗ ಪ್ರತಿ ಹಣ್ಣು ತರಕಾರಿಯಲ್ಲಿಯೂ ಪ್ರತ್ಯೇಕವಾದ ಪೋಷಕಾಂಶಗಳನ್ನು ನೀಡಿದೆ. ಆದರೆ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಬಹುತೇಕ ಎಲ್ಲವನ್ನೂ ಕೆಲವು ಹಣ್ಣು ತರಕಾರಿಗಳಲ್ಲಿ ಮಾತ್ರ ಇರಿಸಿದೆ. ಬಾಳೆಹಣ್ಣು ಇಂತಹ ಒಂದು ಹಣ್ಣಾಗಿದ್ದು ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಪೊಟ್ಯಾಶಿಯಂ, ಕರಗುವ ನಾರು ಮತ್ತು ನೈಸರ್ಗಿಕ ಸಕ್ಕರೆ ಇದೆ. ಬಡವರ ಹಣ್ಣು- 'ಬಾಳೆಹಣ್ಣಿನ' ಶ್ರೀಮಂತ ಗುಣಗಳು!

ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲದೇ ಇರುವ ಕಾರಣ ಇದು ಯಾರು ಬೇಕಾದರೂ ತಿನ್ನಬಹುದಾದ ಆಹಾರವಾಗಿದೆ. ವಿಶೇಷವಾಗಿ ಇದರಲ್ಲಿರುವ ಹೆಚ್ಚಿನ ಮೆಗ್ನೇಶಿಯಂ ಪ್ರಮಾಣದ ಕಾರಣದಿಂದ ಮಗ್ನೇಶಿಯಂ ಮಾರಕವಾದ ಕೆಲವು ಮಧುಮೇಹ ರೋಗಿಗಳು ತಿನ್ನಕೂಡದು ಎಂದು ವೈದ್ಯರು ಅಪ್ಪಣೆ ನೀಡುವವರೆಗೂ ಉಳಿದವರೆಲ್ಲರೂ ಯಾವುದೇ ಅನುಮಾನ ಅಳುಕಿಲ್ಲದೇ ನಿತ್ಯವೂ ತಿನ್ನಲೇಬೇಕಾದ ಹಣ್ಣಾಗಿದೆ. ಬನ್ನಿ, ಇದನ್ನು ನಿತ್ಯವೂ ತಿನ್ನುವುದರಿಂದ ಇನ್ನೂ ಯಾವ ಪ್ರಯೋಜನಗಳಿವೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ಎದೆಯುರಿ

ಎದೆಯುರಿ

ಜಠರದಲ್ಲಿ ಆಮ್ಲೀಯತೆ ಹೆಚ್ಚಾಗಿ ಅನ್ನನಾಳದ ಮೂಲಕ ಹೊರಬರಲು ಯತ್ನಿಸುವಾಗ ಉಂಟಾಗುವ ಉರಿಯನ್ನು ಶಮನಗೊಳಿಸಲು ತಕ್ಷಣ ಒಂದೆರಡು ಬಾಳೆಹಣ್ಣು ತಿನ್ನುವುದು ಉತ್ತಮ.

ಮಲಬದ್ಧತೆ

ಮಲಬದ್ಧತೆ

ಒಂದು ವೇಳೆ ನಿಮಗೆ ಸತತವಾಗಿ ಮಲಬದ್ಧತೆಯ ತೊಂದರೆ ಕಾಡುತ್ತಿದ್ದರೆ ನಿತ್ಯವೂ ಚೆನ್ನಾಗಿ ಕಳಿತ ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಈ ತೊಂದರೆಯನ್ನು ನಿವಾರಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಲಬದ್ಧತೆ

ಮಲಬದ್ಧತೆ

ಇದರಲ್ಲಿರುವ ಉತ್ತಮ ಪ್ರಮಾಣದ ಕರಗುವ ನಾರು ಜೀರ್ಣಕ್ರಿಯೆ ಮತ್ತು ವಿಸರ್ಜನಾಕ್ರಿಯೆಯನ್ನು ಸುಗಮಗೊಳಿಸಿ ಮಲಬದ್ಧತೆಯಿಂದ ಕಾಪಾಡುತ್ತದೆ. ಆದರೆ ಉತ್ತಮ ಪರಿಣಾಮ ಪಡೆಯಲು ಕನಿಷ್ಠ ಒಂದು ತಿಂಗಳಾದರೂ ಸತತವಾಗಿ ಸೇವಿಸಬೇಕು.

ನಿತ್ಯದ ಚಟುವಟಿಕೆಗೆ ಬೇಕಾದ ಶಕ್ತಿ

ನಿತ್ಯದ ಚಟುವಟಿಕೆಗೆ ಬೇಕಾದ ಶಕ್ತಿ

ಬಾಳೆಹಣ್ಣಿನಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಮತ್ತು ಮುಖ್ಯವಾಗಿ ಪೊಟ್ಯಾಶಿಯಂ ಮೂಲಕ ನಿತ್ಯದ ಚಟುವಟಿಕೆಗೆ ಬೇಕಾದ ಶಕ್ತಿ ದೊರಕುತ್ತದೆ. ಅಲ್ಲದೇ ಇದು ನಿಧಾನವಾಗಿ ಬಿಡುಗಡೆಯಾಗುವ ಮೂಲಕ ಹೆಚ್ಚು ಹೊತ್ತು ಆಯಾಸವಿಲ್ಲದೇ ಕೆಲಸ ನಿರ್ವಹಿಸಲು ನೆರವಾಗುತ್ತದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಬಾಳೆಹಣ್ಣಿನಲ್ಲಿ ಅತಿ ಹೆಚ್ಚಿನ ಪೊಟ್ಯಾಶಿಯಂ ಮತ್ತು ಅತಿ ಕಡಿಮೆ ಸೋಡಿಯಂ ಲವಣಗಳಿವೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ತನ್ಮೂಲಕ ಹೃದಯದ ಮೇಲಿನ ಭಾರವನ್ನು ಕಡಿಮೆಗೊಳಿಸಿ ಸ್ತಂಭನದ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಜೊತೆಗೇ ಕರಗುವ ನಾರೂ ಇರುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ನಿತ್ಯವೂ ನಿಯಮಿತವಾಗಿ ಒಂದು ಬಾಳೆಹಣ್ಣನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಯಲ್ಲಿ ಆಗಿದ್ದ ತೊಡಕು ನಿವಾರಣೆಯಾಗಿ ಆರೋಗ್ಯ ವೃದ್ದಿಸುತ್ತದೆ.

ಕಣ್ಣುಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ಕಣ್ಣುಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ಕಣ್ಣುಗಳ ಆರೋಗ್ಯಕ್ಕೆ ವಿಟಮಿನ್ ಎ ಅತಿ ಅಗತ್ಯವಾಗಿದ್ದು ಬಾಳೆಹಣ್ಣಿನಲ್ಲಿ ಈ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಣ್ಣುಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ಕಣ್ಣುಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ವಿಶೇಷವಾಗಿ ಕಣ್ಣಿನ ಪಾಪೆ ಮತ್ತು ಮಸೂರ (cornea) ದ ಆರೋಗ್ಯಕ್ಕೆ ವಿಟಮಿನ್ ಎ ಅಗತ್ಯವಾಗಿದ್ದು ನಿತ್ಯವೂ ಬಾಳೆಹಣ್ಣೊಂದನ್ನು ಸೇವಿಸುವ ಮೂಲಕ ಕಣ್ಣುಗಳ ಆರೋಗ್ಯ ಉತ್ತಮವಾಗಿರಿಸಿಕೊಳ್ಳಬಹುದು.

ಹೋಲಿಕೆ ಮಾಡಿ ಮತ್ತು ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Surprising Health Benefits Of Eating one Bananas a Day

The banana is one of the few fruits which contains all kinds of nutrients. It is rich in vitamins, potassium, fibre and natural sugar. It is fat and cholesterol free. Hence, this is the reason why bananas should be included in your everyday diet.
X
Desktop Bottom Promotion