For Quick Alerts
ALLOW NOTIFICATIONS  
For Daily Alerts

ಬಡವರ ಹಣ್ಣು- 'ಬಾಳೆಹಣ್ಣಿನ' ಶ್ರೀಮಂತ ಗುಣಗಳು!

By Manorama Hejmadi
|

ಬಾಳೆಯ ಹಣ್ಣು ಬಡವರ ಹಣ್ಣು ಎಂದೇ ಪ್ರಸಿದ್ಧ. ಹಾಗಂತ ಎಲ್ಲವನ್ನೂ ಕೊಡುವ ದೇವರಿಗೆ ಹಣ್ಣು-ಕಾಯಿ ಮಾಡಿಸುವಾಗಲೂ ಸಲೀಸಾಗಿ ಕೈಗೆಟಕುವುದೂ ಇದೇ ಎನ್ನಿ! ಇದರಲ್ಲಿ ನೂರಾರು ಪ್ರಭೇದಗಳಿದ್ದು, ಇತರ ಯಾವುದೇ ಹಣ್ಣುಗಳಲ್ಲಿ ಇಷ್ಟು ಪ್ರಭೇದಗಳಿಲ್ಲ. ಬೆರಳುದ್ದದ ಪುಟ್ಟ ಬಾಳೆಯಿಂದ ಆರಂಭಿಸಿ, ಮಾರುದ್ದದ ಚುಕ್ಕಿ ಬಾಳೆಯ ವರೆಗೂ ಇದರ ವೈವಿಧ್ಯ ವೈಶಾಲ್ಯ. ಬೆರಳಿನಷ್ಟೆ ದಪ್ಪದ್ದಿದೆ, ಮುಷ್ಟಿಗೆ ಎಟುಕದಷ್ಟು ತೋರದ್ದಿದೆ. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ದೇವ ಬಾಳೆ, ಗಾಳಿ ಬಾಳೆ, ಕಲ್ಲು ಬಾಳೆ, ನೇಂದ್ರ ಬಾಳೆ, ಪಚ್ಚೆ ಬಾಳೆ, ಚಂದ್ರ ಬಾಳೆ, ಬೂದು ಬಾಳೆ, ಕಾಡು ಬಾಳೆ, ಏಲಕ್ಕಿ ಬಾಳೆ, ಮೈಸೂರು ಬಾಳೆ( ಕೆಲವರು ಇದನ್ನು ಹಣ್ಣು ಕಾಯಿ ಬಾಳೆ ಎನ್ನುತ್ತಾರೆ.)...ಇತ್ಯಾದಿಗಳು ಈ ಪೈಕಿ ಕೆಲವು. ಪ್ರಭೇದಗಳಿಗೆ ಅನುಸಾರವಾಗಿ ಇದರ ರುಚಿ ಮತ್ತು ಗುಣಗಳಲ್ಲಿಯೂ ವೈಶಿಷ್ಟ್ಯ ಅಡಗಿದೆ.

Why You Should Eat More Bananas

ನಮ್ಮ ಹಿತ್ತಲಲ್ಲೇ ಬೆಳೆಯುವುದರಿಂದ ನಮಗೆ ಅದರ ಮೌಲ್ಯ ತಿಳಿದಿರದು. ಅದಕ್ಕೇ, ಬಾಳೆ ಹಣ್ಣಿನ ವೈಶಿಷ್ಟ್ಯ ತಿಳಿಸುವುದೇ ಈ ಬರೆಹದ ಉದ್ದೇಶ!! ಬಾಳೆ ಹಣ್ಣಿನಲ್ಲಿ ಸಕ್ಕರೆ, ನಾರಿನಂಶ, ಬಿ6 ವಿಟಮಿನ್, ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಮುಂತಾದ ಖನಿಜಾಂಶಗಳೂ ಸೇರಿಕೊಂಡಿದೆ. ಒಂದು ಸಾಮಾನ್ಯ ಬಾಳೆಯ ಹಣ್ಣಿನಲ್ಲಿ 105 ಕ್ಯಾಲೋರಿಗಳಿದ್ದು, ವ್ಯಾಯಾಮದ ಅನಂತರದ ಆಯಾಸವನ್ನು ಪರಿಹರಿಸುವ ತಕ್ಷಣದ ಸಂಪೂರ್ಣ ಆಹಾರವಿದು.

ಬೆವರಿದ ನಿಮ್ಮ ಶರೀರಕ್ಕೆ ತೇವಾಂಶವನ್ನು ಮರುಪೂರಣ ಗೊಳಿಸುವ ಶಕ್ತಿ ಇದಕ್ಕಿದೆ. ಆದ್ದರಿಂದಲೇ ಬೇಧಿ ಕಾಡಿದಾಗ ಇದು ನಿಮಗೆ ಮರು ಚೈತನ್ಯ ನೀಡುವುದು. ಹಾಗಂತ ಮಲಬದ್ಧತೆಗೂ ಇದು ಸೂಕ್ತ ಪರಿಹಾರವಾಗಬಲ್ಲದು!!

ಕಾಲುಗಳ ಸೆಳೆತ, ಅದರಿಂದಾಗಿ ನಿದ್ರಾಹೀನತೆ, ಋತುಸ್ರಾವದ ಹೊಟ್ಟೆನೋವು, ಮಾಂಸಖಂಡಗಳ ಸೆಳೆತಕ್ಕೆಇದರಲ್ಲಿರುವ ಖನಿಜಾಂಶಗಳು ಸಹಾಯಕ್ಕೆ ಬರುತ್ತವೆ. ಬಾಳೆಯ ಹಣ್ಣು ಕರುಳಿನಲ್ಲಿ ಕೆಲವು ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳೆವಣಿಗೆಯನ್ನು ಉತ್ತೇಜಿಸುವ ಮೂಲಕ, ಆಸಿಡಿಟಿಯನ್ನು ತಡೆಗಟ್ಟುತ್ತದೆ. ಸರ್ವ ರೋಗಕ್ಕೂ ದಿವ್ಯೌಷಧ ಕೆಂಪು ಬಾಳೆಹಣ್ಣು

ನಮ್ಮ ಹಿರಿಯರು ಬಾಳೆಯ ಎಲೆಯಲ್ಲಿ ಊಟ ಮಾಡುತ್ತಿದ್ದರು. (ಈಗಲೂ ಕೆಲವು ಹೋಟೇಲುಗಳು ಈ ಸಂಸ್ಕಾರವನ್ನು ಉಳಿಸಿಕೊಂಡಿವೆ!)ಬಿಸಿಯಾದ ಅನ್ನ ಬಡಿಸಿದಾಗ, ಎಲೆಯಲ್ಲಿರುವ ಪೋಲಿಕ್ ಆಸಿಡ್ ಊಟದಲ್ಲಿ ಸೇರಿಕೊಳ್ಳುತ್ತಿತ್ತು. ( ಗರ್ಭಿಣಿಯರಿಗೆ ಪೋಲಿಕ್ ಆಸಿಡ್ ಅತಿ ಅವಶ್ಯ)

ಬಾಳೆಯ ದಿಂಡಿನಿಂದ ಪಲ್ಯ, ಸಾಂಬಾರು, ಮಜ್ಜಿಗೆ ಹುಳಿ, ಸಾಸಿವೆ ಮುಂತಾದ ಖಾದ್ಯ ತಯಾರಿಸುತ್ತಾರೆ. ಬಾಳೆಯ ಚಿಪ್ಸ್, ಪೋಡಿ, ಹಣ್ಣಿನ ಹಲ್ವ ಯಾರಿಗಾದರೂ ಬಾಯಿ ನೀರೂರಿಸುವಂಥದ್ದು! ಬಾಳೆಯ ಹೂವನ್ನು ಮುಚ್ಚುವ ಕಂದು ಬಣ್ಣದ ಪಕಳೆ( ಪೂಂಬೆ) ಯಿಂದ ಚಟ್ನಿ, ಪಲ್ಯ ತಯಾರಿಸುತ್ತಾರೆ. ಇವೆಲ್ಲವೂ ಅತ್ಯಂತ ಅಮೂಲ್ಯ ಪೋಷಕಾಂಶಗಳಿಂದ ಕೂಡಿವೆ.

ಹಾಂ! ಅಂದಹಾಗೆ, ಒಂದು ವಿಷಯ ಹೇಳುವುದು ಮರೆತೆ. ಯಾವುದೇ ಕೆಲಸ ಅತಿ ಸಲೀಸು ಎಂಬುದನ್ನು ವಿವರಿಸುವಾಗ , ಅದು ' ಬಾಳೆಯ ಹಣ್ಣು ತಿಂದಂತೆ' ಎಂದು ಹೇಳುತ್ತಾರೆ. ಎಂದರೆ, ಇನ್ನು ಈ ಹಣ್ಣನ್ನು ತಿನ್ನದಿರಲು ಯಾರಿಗೂ ಮನ ಬಾರದು! ಹಣ್ಣು ಹಣ್ಣಾದ ಬಾಳೆಹಣ್ಣು, ಸೌಂದರ್ಯದ ಗಣಿ

ಇಷ್ಟೆಲ್ಲ ತಿಳಿದಾಗ, ಇನ್ನು ಮುಂದೆ ಬಾಳೆಯ ಹಣ್ಣನ್ನು ಕಂಡಾಗ ಮೂಗು ಮುರಿಯದೆ, ಆದರದಿಂದ ಕೈಗೆತ್ತಿಕೊಂಡು ಸಿಪ್ಪೆ ಸುಲಿದು ಬಾಯೊಳಗಿರಿಸುತ್ತೀರಲ್ಲ?

English summary

Why You Should Eat More Bananas

When talking about health advantages, bananas are difficult to beat. You may enjoy the fruit on its own or in a fruit salad or a milkshake. Clearly, not to forget the mouth watering banana halwa. Also, the banana stem and flowers are used as a basic ingredient in many South Indian cuisines. Bananas are full of sugar, fibre, vitamin B6 and minerals like potassium and magnesium which make them quite nutritious. Let us discuss the amazing health advantages that the humble fruit offers.
X
Desktop Bottom Promotion