For Quick Alerts
ALLOW NOTIFICATIONS  
For Daily Alerts

ಸರ್ವ ರೋಗಕ್ಕೂ ದಿವ್ಯೌಷಧ ಕೆಂಪು ಬಾಳೆಹಣ್ಣು

By Suma
|

ಪ್ರತಿಯೊಬ್ಬರೂ ತಾವು ಸೇವಿಸುವ ಆಹಾರ ಹೆಚ್ಚು ಶಕ್ತಿ ಮತ್ತು ಪೋಷಕಾಂಶಗಳನ್ನು ನೀಡುವಂತಿದ್ದು. ಅಧಿಕ ಕೊಬ್ಬಿನಂಶವನ್ನು ಹೊಂದಿರದೇ ಆರೋಗ್ಯಪೂರ್ಣವಾಗಿರುವ ಆಹಾರವನ್ನೇ ಎಲ್ಲಾ ಸಮಯದಲ್ಲೂ ಬಯಸುತ್ತಾರೆ, ಹಾಗಾಗಿ ಸೇವಿಸುವ ಆಹಾರದಲ್ಲಿ ಆರೋಗ್ಯದ ಗುಟ್ಟು ಅಡಗಿರುವುದರಿಂದ ಅದನ್ನು ಮನಗಂಡು ದಿನದ ಆಹಾರ ಸೇವನೆಯನ್ನು ಮಾಡಬೇಕಾಗುತ್ತದೆ.

ಆಹಾರ ತಜ್ಞರು ಹೇಳುವಂತೆ ಹಣ್ಣು ಮತ್ತು ತರಕಾರಿಗಳು ದೇಹಕ್ಕೆ ಬೇಕಾದ ಪ್ರೋಟೀನ್ ಮತ್ತು ವಿಟಮಿನ್ ಅನ್ನು ಅಧಿಕವಾಗಿ ನೀಡುವಲ್ಲಿ ಸಹಕಾರಿಯಾಗಿವೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನದೂಟ, ಸಂಜೆಯ ಲಘು ಉಪಹಾರ, ರಾತ್ರಿಯೂಟ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಕೂಡ ಹಣ್ಣು ತರಕಾರಿಗಳ ಸೇವನೆಯನ್ನು ನಿಮಗೆ ಮಾಡಬಹುದಾಗಿರುವುದರಿಂದ ನಿಮ್ಮ ದೇಹಕ್ಕೆ ಅಧಿಕ ಪೋಷಕಾಂಶ ಮತ್ತು ರೋಗನಿರೋಧಕ ಶಕ್ತಿಯನ್ನು ನೀಡುವ ಒಂದು ಅದ್ಭುತ ಹಣ್ಣನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ.

ಅದೇ ಕೆಂಪು ಬಾಳೆಹಣ್ಣು. ಹೌದು, ಹಳದಿ ಬಣ್ಣದ ಬಾಳೆಹಣ್ಣಿಗಿಂತಲೂ ಕೆಂಪು ಬಾಳೆಹಣ್ಣು ವಿಟಮಿನ್ ಸಿ ಅಂಶವನ್ನು ಒಳಗೊಂಡಿದ್ದು ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿರುವ ಬೀಟಾ ಕ್ಯಾರೊಟಿನ್ ಅಂಶವು ದೇಹಕ್ಕೆ ಒಳ್ಳೆಯದಾಗಿದ್ದು ಹೆಚ್ಚಿನ ಪರಿಣಿತರು ಇದರ ಸೇವನೆಯನ್ನು ಸಲಹೆ ಮಾಡಿದ್ದಾರೆ. ಆರೋಗ್ಯಯುತ ತ್ವಚೆ, ಕಣ್ಣಿನ ದೃಷ್ಟಿ ಮತ್ತು ರೋಗನಿರೋಧಕ ಶಕ್ತಿಯನ್ನು ಈ ಬಾಳೆಹಣ್ಣು ಹೆಚ್ಚಿಸುತ್ತದೆ. ಡಯೆಟರಿ ಫೈಬರ್ಸ್ ಈ ಹಣ್ಣಿನಲ್ಲಿ ಅಧಿಕವಾಗಿದ್ದು ಇದನ್ನು ನಿತ್ಯವೂ ಸೇವಿಸುವುದು ಎರಡನೇ ಪ್ರಕಾರದ ಮಧುಮೇಹವನ್ನು ಕಡಿಮೆ ಮಾಡುತ್ತದೆ. ಮುಂದೆ ಓದಿ...

ಕಿಡ್ನಿ ಸ್ಟೋನ್ ತಡೆಯುತ್ತದೆ

Incredible Health Benefits Of Red Banana
ಕೆಂಪು ಬಾಳೆಹಣ್ಣುಗಳು ಹೆಚ್ಚುವರಿ ಪೊಟಾಷಿಯಮ್ ಅನ್ನು ಒಳಗೊಂಡಿದ್ದು ಕಿಡ್ನಿ ಸ್ಟೋನ್ ಅನ್ನು ತಡೆಯುತ್ತದೆ ಮತ್ತು ಹೃದಯ ರೋಗ ಹಾಗೂ ಕ್ಯಾನ್ಸರ್‌ನ ಹುಟ್ಟಡಗಿಸುತ್ತದೆ. ಅಲ್ಲದೆ ಮೂಳೆಗಳ ಆರೋಗ್ಯಕ್ಕೂ ಇದು ಅತ್ಯುತ್ತಮವಾಗಿದೆ. ಹಾಗಾಗಿ ನಿತ್ಯವೂ ಬಾಳೆಹಣ್ಣು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಅನ್ನು ನಿಯಂತ್ರಣದಲ್ಲಿ ಇರಿಸಬಹುದು.

ಹೊಟ್ಟೆಯ ಆಮ್ಲೀಯತೆಯಿಂದ ಮುಕ್ತಿ
ಕೆಂಪು ಬಾಳೆಹಣ್ಣು ಜಠರದಲ್ಲಿ ಕರಗಿದ ಬಳಿಕ ಹೊಟ್ಟೆಯಲ್ಲಿ ವಾಯು ಉತ್ಪನ್ನವಾಗುವ ಪ್ರಮಾಣವನ್ನು ತಗ್ಗಿಸಿ ಹುಳಿತೇಗು, ಹೊಟ್ಟೆಯುರಿ, ಎದೆಯುರಿ, gastroesophageal reflux disease (GERD) ಎಂಬ ಅನ್ನನಾಳದ ಉರಿಯ ತೊಂದರೆಯಿಂದ ರಕ್ಷಿಸುತ್ತದೆ.

ಗರ್ಭಿಣಿಯರಿಗೆ ಆರೋಗ್ಯಕ್ಕೆ
ಗರ್ಭಿಣಿಯರಿಗೆ ಪ್ರಥಮ ಮೂರು ತಿಂಗಳ ಅವಧಿಯಲ್ಲಿ ವಾಂತಿ ಮತ್ತು ವಾಕರಿಕೆ ಸಹಜ. ಇದನ್ನು ಕಡಿಮೆಗೊಳಿಸಲು ಎರಡು ಹೊತ್ತಿನ ಆಹಾರ ಸೇವನೆಯ ನಡುವಣ ಸಮಯಲ್ಲಿ ಒಂದು ಕೆಂಪು ಬಾಳೆಹಣ್ಣು ತಿಂದರೆ ವಾಕರಿಕೆಗೆ ಕಾರಣವಾಗುವ ಕಣಗಳನ್ನು ನಿವಾರಿಸಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸೂಕ್ತಪ್ರಮಾಣದಲ್ಲಿರುವಂತೆ ನೋಡಿಕೊಂಡು ವಾಂತಿ ಮತ್ತು ವಾಕರಿಕೆಯಿಂದ ರಕ್ಷಿಸುತ್ತದೆ.

ಧೂಮಪಾನ ತ್ಯಜಿಸಲು
ಕೆಂಪು ಬಾಳೆಹಣ್ಣಿನಲ್ಲಿರುವ ಬಿ-ವಿಟಮಿನ್, ಪೊಟ್ಯಾಶಿಯಂಗಳು ಧೂಮಪಾನ ತ್ಯಜಿಸುತ್ತಿರುವವರ ರಕ್ತದಲ್ಲಿ ನಿಕೋಟಿನ್ ಇಲ್ಲದೇ ದೇಹ ಎದುರಿಸುವ ವ್ಯಾಕುಲತೆಯನ್ನು ಕಡಿಮೆಗೊಳಿಸಿ ಮತ್ತೆ ಧೂಮಪಾನದತ್ತ ಮನ ಹೊರಳಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಧೂಮಪಾನದ ಚಟದಿಂದ ಬೇಗನೇ ಮುಕ್ತಿ ಪಡೆಯಬಹುದು.

ತೂಕ ಇಳಿಕೆ
ಕೆಂಪು ಬಾಳೆಹಣ್ಣು ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿದೆ. ಆದ್ದರಿಂದ ನಿತ್ಯವೂ ಈ ಹಣ್ಣನ್ನು ಸೇವಿಸುವುದು ತೂಕವನ್ನು ಇಳಿಸುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ನಮ್ಮ ಜೀರ್ಣರಸದಲ್ಲಿರುವ ಅಂಶಗಳಲ್ಲಿ ಪೆಕ್ಟಿನ್ ಸಹಾ ಒಂದು. ಇದು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಹೆಚ್ಚುವರಿ ಪೆಕ್ಟಿನ್ ಆಹಾರದಲ್ಲಿನ ವಿಷಕಾರಿ ವಸ್ತುಗಳನ್ನು ಒಡೆದು ತ್ಯಾಜ್ಯರೂಪದಲ್ಲಿ ದೇಹದಿಂದ ಹೊರಹಾಕಲು ಸಹಕಾರಿಯಾಗಿದೆ. ಜೊತೆಗೇ ದೇಹ ಅರಗಿಸಿಕೊಳ್ಳಲಾರದ ಖನಿಜಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.

ರಕ್ತವನ್ನು ವೃದ್ಧಿಸುತ್ತದೆ
ಕೆಂಪು ಬಾಳೆಹಣ್ಣಿನಲ್ಲಿರುವ ಹೆಚ್ಚುವರಿ ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಹಿಮೋಗ್ಲೋಬಿನ್ ಅನ್ನು ಏರಿಸುತ್ತದೆ. ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಯನ್ನು ನಿರ್ವಹಿಸುತ್ತದೆ ಮತ್ತು ದೇಹದ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಏರಿಸುವುದರ ಜೊತೆಗೆ ವಿಟಮಿನ್ ಬಿ6 ಅವಶ್ಯಕತೆಯನ್ನು ಇದು ಸಂಧಿಸುತ್ತದೆ.

ಶಕ್ತಿಯ ಮೂಲ
ಕೆಂಪು ಬಾಳೆಹಣ್ಣು ಶಕ್ತಿಯ ಮೂಲವಾಗಿದೆ. ನೈಸರ್ಗಿಕ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುವುದರ ಜೊತೆಗೆ ಆಲಸ್ಯವನ್ನು ದೂರಮಾಡುತ್ತದೆ. ಆದ್ದರಿಂದಲೇ ಕೆಂಪು ಬಾಳೆಹಣ್ಣು ನಿಮ್ಮ ಬೆಳಗ್ಗಿನ ಉಪಹಾರದಲ್ಲಿ ಸೇವಿಸಬಹುದಾದ ಉತ್ತಮ ಆಹಾರವಾಗಿದೆ

ಹೃದಯ ಉರಿಯನ್ನು ಕಡಿಮೆ ಮಾಡುತ್ತದೆ
ಕೆಂಪು ಬಾಳೆಹಣ್ಣನ್ನು ನಿತ್ಯವೂ ಸೇವಿಸುವುದರಿಂದ ಹೃದಯ ಉರಿಯಿಂದ ನಿಮಗೆ ಶಮವನ್ನು ನೀಡುತ್ತದೆ. ಇದು ಹಿತವಾದ ಪರಿಣಾಮವನ್ನು ಒದಗಿಸಲಿದ್ದು ಆಗಾಗ್ಗೆ ಹೃದಯ ಉರಿಯಿಂದ ನರಳುವ ಜನರಿಗೆ ಈ ಹಣ್ಣನ್ನು ಸೂಚಿಸಲಾಗಿದೆ. ಹೃದಯ ಉರಿಯಿಂದ ತ್ವರಿತ ಪರಿಹಾರವನ್ನು ಕೆಂಪು ಬಾಳೆಹಣ್ಣು ನೀಡುತ್ತದೆ.

English summary

Incredible Health Benefits Of Red Banana

Bananas are one of the most consumed fruits in the world. However, red bananas are gaining more popularity these days due to their high nutritional value. A red banana is superior to the yellow banana in its nutritional content. In this article, we at Boldsky are listing out some of the health benefits of red banana. Read on to know more about it.
Story first published: Tuesday, January 5, 2016, 20:37 [IST]
X
Desktop Bottom Promotion