Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸೋರೆಕಾಯಿ ಜ್ಯೂಸ್‌ನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?
ಬೆಳಗ್ಗೆ ಎದ್ದು ಇಂದು ಸಾರು ಏನು ಮಾಡುವುದು ಎಂದು ಆಲೋಚಿಸುವಾಗ ಮೊದಲು ನಮಗೆ ನೆನಪಿಗೆ ಬರುವ ತರಕಾರಿಗಳಲ್ಲಿ ಸೋರೆಕಾಯಿಯು ಒಂದು. ಬೇಳೆ ಸಾರಿನ ಜೊತೆಗೆ ಸೋರೆಕಾಯಿಯನ್ನು ಹಾಕಿ ಸಾರು ಮಾಡಿಕೊಂಡು, ಬಿಸಿ ಬಿಸಿ ಅನ್ನದ ಜೊತೆಗೆ ತುಪ್ಪವನ್ನು ಹಾಕಿಕೊಂಡು ಸೇವಿಸುವುದು ಹಲವರಿಗೆ ತುಂಬಾ ಇಷ್ಟವಾಗುವ ಊಟದ ಕ್ರಮವಾಗಿರುತ್ತದೆ. ಆಹಾ! ಬಿಸಿಬಿಸಿ ಸೋರೆಕಾಯಿ ಸೂಪ್!
ಹಾಗೆಂದು ಸೋರೆಕಾಯಿಯನ್ನು ಕೇವಲ ಸಾರಿಗೆ ಮತ್ತು ಪಲ್ಯಕ್ಕೆ ಮಾತ್ರ ಸೀಮಿತ ಮಾಡಬೇಡಿ. ಇದರಲ್ಲಿ ಹಲವಾರು ಸೌಂದರ್ಯದ ಪ್ರಯೋಜನಗಳು ಇರುತ್ತವೆ. ಇವು ನಿಮ್ಮ ತ್ವಚೆ ಮತ್ತು ಕೂದಲಿಗೆ ಉತ್ತಮ ಆರೈಕೆಯನ್ನು ನೀಡುತ್ತದೆ. ಅಲ್ಲದೆ ನಿಮ್ಮ ಸೌಂದರ್ಯ ಸುಮಾರು ವರ್ಷಗಳ ಕಾಲ ಕುಂದದೆ ಇರಲು ಬೇಕಾದ ಸಹಾಯವನ್ನು ಇದು ಮಾಡುತ್ತದೆ.

ಬೆಳ್ಳಂಬೆಳಗ್ಗೆ ಎದ್ದ ಕೂಡಲೆ ಸೋರೆಕಾಯಿಯ ರಸವನ್ನು ಸೇವಿಸಿದರೆ ನಿಮ್ಮ ತ್ವಚೆಗೆ ಆರೋಗ್ಯಕರ ಹೊಳಪನ್ನು ನೀಡುತ್ತದೆ ಮತ್ತು ಮೊಡವೆಗಳು ಬರದಂತೆ ತ್ವಚೆಯ ಒಳಗಿನಿಂದಲೆ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬೆಳಗ್ಗೆ ಎದ್ದ ಕೂಡಲೆ ಇದನ್ನು ಸೇವಿಸುವ ಪರಿಪಾಠವನ್ನು ಇರಿಸಿಕೊಳ್ಳಿ. ಇದರಿಂದ ನಿಮ್ಮ ತ್ವಚೆಗೆ ಉತ್ತಮ ಪ್ರಯೋಜನ ದೊರೆಯುತ್ತದೆ. ಸೋರೆಕಾಯಿಯಲ್ಲಿದೆ ಅನೇಕ ಆರೋಗ್ಯಕರ ಗುಣಗಳು
ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ
ನಿಮ್ಮ ಕೂದಲು ಅಕಾಲಿಕವಾಗಿ ಬೆಳ್ಳಗಾಗುವುದನ್ನು ತಡೆಯಲು ಪ್ರತಿದಿನ ಸೋರೆಕಾಯಿಯ ರಸವನ್ನು ಸೇವಿಸಿ. ಇದು ತಲೆ ಬೋಳಾಗುವುದನು ಸಹ ತಡೆಯುತ್ತದೆ. ಜೊತೆಗೆ ಕೂಡಲು ಬೆಳ್ಳಗಾಗುವುದನ್ನು ಸಹ ತಡೆಯುತ್ತದೆ. ಕೂದಲಿಗೆ ಸ್ವಾಭಾವಿಕ ಹೊಳಪು ಮತ್ತು ಸಿಕ್ಕಾಗುವಿಕೆಯನ್ನು ತಡೆಯುವ ಅಂಶವನ್ನು ಸೋರೆಕಾಯಿ ಹೊಂದಿರುತ್ತದೆ ಎಂದು ತಿಳಿದು ಬಂದಿದೆ.
ತ್ವಚೆಯನ್ನು ವರ್ಧಿಸುತ್ತದೆ
ಸೋರೆಕಾಯಿ ರಸವು ಆಂತರಿಕವಾಗಿ ಶುದ್ಧಿಗೊಳಿಸುವ ಅಂಶಗಳನ್ನು ಹೊಂದಿರುತ್ತದೆ. ಇದು ನಿಮ್ಮ ತ್ವಚೆಯಲ್ಲಿ ಮೊಡವೆಗಳು ಮತ್ತು ಗುಳ್ಳೆಗಳು ಉಂಟಾಗದಂತೆ ತಡೆಯುತ್ತದೆ. ಈ ರಸವು ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ಮುಖವನ್ನು ಮೊಡವೆಗಳಿಂದ ಮುಕ್ತವಾಗಿ ಇರಿಸುತ್ತದೆ. ಜೊತೆಗೆ ತ್ವಚೆಗೆ ಮೃದುತ್ವವನ್ನು ಸಹ ಇದು ನೀಡುತ್ತದೆ.
ಸೋರೆಕಾಯಿ ಸೇವಿಸಿ ಬಿಳಿ ಕೂದಲು ಇಲ್ಲವಾಗಿಸಿ
ಆರ್ಯುರ್ವೇದದಲ್ಲಿ ಸೋರೆಕಾಯಿಯು ಬಿಳಿ ಕೂದಲು ಬರದಂತೆ ತಡೆಯುವ ಸಾಧನವಾಗಿ ಉಲ್ಲೇಖಿಸಲ್ಪಟ್ಟಿದೆ. ಇದರ ರಸವನ್ನು ಪ್ರತಿದಿನ ಸೇವಿಸುವುದರಿಂದ ಬಿಳಿಕೂದಲು ಬರುವುದಿಲ್ಲವಂತೆ. ಮೆಂತ್ಯೆಯು ಹೇಗೆ ಬಿಳಿ ಕೂದಲು ಬರದಂತೆ ತಡೆಯುತ್ತದೆಯೋ, ಹಾಗೆ ಸೋರೆಕಾಯಿಯು ಸಹ ನಿಮ್ಮ ಕೂದಲಿಗೆ ರಕ್ಷಣೆಯನ್ನು ನೀಡುತ್ತದೆಯಂತೆ.



Click it and Unblock the Notifications


