For Quick Alerts
ALLOW NOTIFICATIONS  
For Daily Alerts

ಬೆನ್ನೇರಿ ಕಾಡುವ ಶೀತಕ್ಕೆ, ಮುನ್ನೆಚ್ಚರಿಕೆ ಕ್ರಮ ಹೀಗಿರಲಿ

By Arshad
|

ಮಳೆಗಾಲ ಶುರುವಾಗೇ ಬಿಟ್ಟಿದೆ, ಮಕ್ಕಳು ಶಾಲೆಗೆ ಹೋಗುವ ದಿನ ಬಂದಂತೆ! ಈಗ ಬೀಳುವ ಮೊದಲ ಮಳೆಗಳು ನಿಮ್ಮ ಆರೋಗ್ಯವನ್ನು ಏರು ಪೇರು ಮಾಡುವಷ್ಟು ಶಕ್ತಿಯನ್ನು ಹೊಂದಿರುತ್ತವೆ. ಈ ಕಾಲದಲ್ಲಿ ನೀವು ಎರಡು ಮೂರು ಬಾರಿ ನೆಂದರು ಸಹ ಕೆಮ್ಮು ಮತ್ತು ಶೀತ ನಿಮ್ಮನ್ನು ಕಾಡದೆ ಬಿಡುವುದಿಲ್ಲ. ಸಾಮಾನ್ಯವಾಗಿ ಈ ಹವಾಮಾನದ ವೈಪರೀತ್ಯವು ಇದ್ದಕ್ಕಿಂದ್ದಂತೆ ಮಳೆಯನ್ನು ತರುತ್ತದೆ ಮತ್ತು ಮಾನವರ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ

ಇದರ ಜೊತೆಗೆ ಜೀರ್ಣ ಶಕ್ತಿಯ ಮಟ್ಟ ಮತ್ತು ದೇಹದ ಶಕ್ತಿ ಸಹ ಕಡಿಮೆಯಾಗುತ್ತದೆ. ಆಗ ನಾವು ಏನು ಮಾಡುತ್ತೇವೆ. ಮನೆಯಲ್ಲಿರುವ ಕೆಲವು ಔಷಧಿಯನ್ನು ಮತ್ತು ಅಂಗಡಿಯಿಂದ ಆಂಟಿಬಯೋಟಿಕ್‌ಗಳನ್ನು ತೆಗೆದುಕೊಂಡು ಬಂದು ಸೇವಿಸುತ್ತೇವೆ. ಹಾಗೆಂದು ಎಲ್ಲರು ಅಂಗಡಿಯ ಗುಳಿಗೆಗಳ ಮೇಲೆಯೇ ಅವಲಂಬಿತರಾಗಿರುವುದಿಲ್ಲ. ಬದಲಿಗೆ ಅವರಿಗೆ ಆಯುರ್ವೇದದ ರಕ್ಷೆ ಸಹ ಇರುತ್ತದೆ. ಮಳೆಗಾಲದಲ್ಲಿ ನಿಮ್ಮನ್ನು ಕಾಪಾಡಲು ಆಯುರ್ವೇದವು ಉತ್ತಮ ಮಾರ್ಗವಾಗಿರುತ್ತದೆ.

ಶೀತ, ಕೆಮ್ಮು, ನೆಗಡಿ ಮತ್ತಿತರ ಮಳೆಯಿಂದ ಬರುವ ಕಾಯಿಲೆಗಳನ್ನು ನಿವಾರಿಸಲು ಆಯುರ್ವೇದವು ಉತ್ತಮ ಚಿಕಿತ್ಸೆಯನ್ನು ಶತ ಶತಮಾನಗಳಿಂದ ಒದಗಿಸುತ್ತಲೆ ಬರುತ್ತಿದೆ. ಈ ಆಯುರ್ವೇದದ ಪರಿಹಾರಗಳನ್ನು ನೀವು ಸಹ ತಿಳಿದುಕೊಂಡರೆ ಶೀತದಿಂದ ನೀವು ಕೂಡ ಸುಲಭವಾಗಿ ಪಾರಾಗಬಹುದು...

One Secret Ayurvedic Remedy For Cold

ಅರಿಶಿನ ಬೆರೆಸಿದ ಹಾಲು
ತಲೆತಲಾಂತರದಿಂದಲೂ ಕೂಡ ಅರಿಶಿನವು ಭಾರತೀಯ ಅಡುಗೆಯ ಒಂದು ಅವಿಭಾಜ್ಯ ಅಂಗವಾಗಿದೆ. ಇದಕ್ಕೆ ಕಾರಣವು ಇಲ್ಲದ್ದಿಲ್ಲ. ಈ ಚಮತ್ಕಾರಿಕ ಗಿಡಮೂಲಿಕೆಯು ಒಂದು ಅತ್ಯುತ್ತಮವಾದ ನಂಜುನಿರೋಧಕವಾಗಿದ್ದು, ಇದು ಕಡಿಮೆ ಕುದಿಯುವ ಬಿಂದುವುಳ್ಳ ತೈಲಗಳನ್ನು ಯಥೇಚ್ಚವಾಗಿ ಒಳಗೊಂಡಿದೆ. ಅರಿಶಿನದ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಲು ನಿಮ್ಮ ಎಲ್ಲಾ ಆಹಾರ ಪದಾರ್ಥಗಳಲ್ಲಿಯೂ ಅದನ್ನು ಪ್ರತಿನಿತ್ಯವೂ ಸೇರಿಸಿರಿ. ನೀವೊಂದು ವೇಳೆ ಶೀತ, ಗಂಟಲ ಕೆರೆತದ ತೊಂದರೆಯಿಂದ ಬಳಲುತ್ತಿದ್ದರೆ, ಬಿಸಿ ಬಿಸಿ ಅರಿಶಿನ ಬೆರೆಸಿದ ಹಾಲು ಅಥವಾ ಅರಿಶಿನ ಬೆರೆಸಿದ ಚಹಾವನ್ನು ಕುಡಿಯಿರಿ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಶುಂಠಿ
ಆಯುರ್ವೇದದಲ್ಲಿ ಶುಂಠಿಗೆ ಪ್ರತ್ಯೇಕ ಸ್ಥಾನವಿರುತ್ತದೆ. ಶೀತ ಮತ್ತು ಕೆಮ್ಮಿನ ಮುನ್ನೆಚ್ಚರಿಕೆಯ ಕ್ರಮವಾಗಿ, ಪುಡಿಮಾಡಿದ ಅಥವಾ ಪೇಸ್ಟ್ ರೂಪದಲ್ಲಿರುವ ಶುoಠಿಯನ್ನು ಪ್ರತಿಯೊಂದು ತರಕಾರಿ ಪದಾರ್ಥದೊoದಿಗೂ ಸೇರಿಸಿಕೊಳ್ಳಿರಿ. ಶುಂಠಿಯು ಕೇವಲ ಕಟುವಾದ ರುಚಿಯನ್ನು ಹೊಂದಿರುವುದು ಮಾತ್ರವೇ ಅಲ್ಲ, ಜೊತೆಗೆ, ಅದು ನೆಗಡಿಯ ವಿರುದ್ಧ ಹೋರಾಡಲೂ ಸಹ ನೆರವಾಗುತ್ತದೆ. ನಿಮ್ಮ ಚಹಾದ ನೀರಿನೊದಿಗೆ ಶುoಠಿಯನ್ನು ಹಾಕಿ ಕುದಿಸಿ ಶುoಠಿ ಸ್ವಾದದ ಚಹಾದ ಆನಂದವನ್ನು ಅನುಭವಿಸಿರಿ. ಇದು ಗಂಟಲ ಕೆರೆತವನ್ನು ಉಪಶಮನಗೊಳಿಸುತ್ತದೆ ಹಾಗೂ ನೆಗಡಿಗೆ ಕಾರಣವಾದ ವೈರಾಣುಗಳನ್ನು ಬೆನ್ನಟ್ಟಿ ಓಡಿಸುತ್ತದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಕೈಗಳನ್ನು ಕೆಲವು ಬಾರಿಯಾದರೂ ತೊಳೆದುಕೊಳ್ಳಿ
ಹೊಸ ಸ್ಥಳಕ್ಕೆ ಹೋದಾಗ ಅಥವಾ ನೀವು ಭೇಟಿ ನೀಡಿದ ಸ್ಥಳದಲ್ಲಿ ಹೊಸ ವೈರಸ್ಸು ಆಗಮಿಸಿದ್ದರೆ (ಆಗಮಿಸಿದ್ದರೆ ಏನು, ಆಗಮಿಸಿಯೇ ಇರುತ್ತವೆ) ನೀವು ಮುಟ್ಟುವ ಸ್ಥಳದಲ್ಲೆಲ್ಲಾ ಇವು ಕುಳಿತುಕೊಂಡಿರುತ್ತವೆ. ಅನಿವಾರ್ಯವಾಗಿ ಮುಟ್ಟಬೇಕಾಗಿ ಬಂದರೂ ಕೈಗಳನ್ನು ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳುತ್ತಾ ಇರುವ ಮೂಲಕ ಈ ವೈರಸ್ಸುಗಳು ಒಂದು ವೇಳೆ ಕೈಗಳಿಗೆ ಅಂಟಿಕೊಂಡಿದ್ದರೆ ದೇಹಕ್ಕೆ ದಾಟಿಕೊಳ್ಳದಂತೆ ಕಾಪಾಡಿಕೊಳ್ಳಬಹುದು. ಮಳೆಗಾಲದ ಶೀತ, ಕಫ, ಜ್ವರಕ್ಕೆಲ್ಲಾ-ಬೆಳ್ಳುಳ್ಳಿಯೇ ಸಾಕು

ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ
ಶೀತ ಕೆಮ್ಮು ಆವರಿಸಿದ್ದರೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ರೋಗ ನಿರೋಧಕ ಶಕ್ತಿಗೆ ಈ ತೊಂದರೆ ನೀಡಿದ ವೈರಸ್ಸುಗಳನ್ನು ಸದೆಬಡಿಯಲು ಕಾಲಾವಕಾಶ ಸಿಗುತ್ತದೆ.

ಸಾಕಷ್ಟು ಕಾಲ ಬಿಸಿಲಿನಲ್ಲಿ ಕಳೆಯಿರಿ
ಏಸಿ ಇರುವ ಸ್ಥಳದಲ್ಲಿದ್ದಷ್ಟೂ ಹೊಸ ವೈರಸ್ಸುಗಳು ಧಾಳಿ ಇಡುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಸಮಯ ಬಿಸಿಲಿನಲ್ಲಿ ಕಳೆಯಿರಿ. ಸೆಖೆಯಲ್ಲಿ ಹೇಗೆ ಹೋಗುವುದು ಎಂಬ ದ್ವಂದ್ವದಲ್ಲಿ ಹೋಗದೇ ಇರಬೇಡಿ. ಕೊಂಚ ಸೆಖೆಯಾದರೂ ಸೂರ್ಯನ ಕಿರಣದಲ್ಲಿರುವ ಅತಿನೇರಳೆ ಕಿರಣಗಳು ದೇಹಕ್ಕೆ ತಾಕಿದಾಗ ಮತ್ತು ಹೊರಗಿನ ಗಾಳಿಯನ್ನು ಸೇವಿಸಿದಾಗ ವೈರಸ್ಸುಗಳನ್ನು ಸದೆಬಡಿಯಲು ಹೆಚ್ಚಿನ ಶಕ್ತಿ ದೊರಕುತ್ತದೆ.

ಶೀತದ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?


ಆಯುರ್ವೇದದ ಪ್ರಕಾರ ದೇಹದ ದೋಶಗಳಲ್ಲಿ ಏರುಪೇರಾದರೆ ಕಾಯಿಲೆಯುಂಟಾಗುತ್ತದೆ. ಶೀತಕ್ಕೆ ದೇಹದಲ್ಲಿ ಸಂಗ್ರಹವಾಗುವ ಅತಿ ಹೆಚ್ಚಿನ ಕಫವೇ ಕಾರಣ. ಶೀತ ನಿವಾರಣೆಯಾಗಬೇಕಾದರೆ ಕಫ ನಿವಾರಣೆಯಾಗಬೇಕು. ಅಂದರೆ ಕಫಕಾರಕ ಅಥವಾ ಕಫ ಹೆಚ್ಚಿಸುವ ಆಹಾರಗಳನ್ನು ವರ್ಜಿಸಬೇಕು. ಇದರಲ್ಲಿ ಡೈರಿ ಉತ್ಪನ್ನಗಳು, ಗೋಧಿ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಸಕ್ಕರೆ ಮೊದಲಾದವುಗಳನ್ನು ತಿನ್ನಲಿಕ್ಕೇ ಹೋಗಬಾರದು. ಅಲ್ಲದೇ ಶೀತವಾಗಿದ್ದಾಗ ಬಿಸಿಯಾದ ಪೇಯ, ಉಗುರುಬೆಚ್ಚನೆಯ ಸಾಂಬಾರ ಪದಾರ್ಥಗಳು, ಗಿಡ ಮೂಲಿಕೆಗಳನ್ನು ಸೇವಿಸಬೇಕು. ಶೀತವಿದೆ ಎಂದು ನಿತ್ಯದ ಚಟುವಟಿಕೆಗಳನ್ನು ಮೊಟಕುಗೊಳಿಸಬಾರದು. ಇದರಿಂದ ಸಂಗ್ರಹಗೊಂಡಿದ್ದ ಕಫ ಸಡಿಲಗೊಂಡು ಶೀತ ನಿವಾರಣೆಯಾಗಲು ಸುಲಭವಾಗುತ್ತದೆ.
English summary

One Secret Ayurvedic Remedy For Cold

Summer colds are often caused by the heightened use of air conditioners during the summer season. The AC decreases the humidity level in the enclosed area, making your nasal passage more prominent for the virus and bacteria to thrive on. For how long you are affected by the cold depends on your immune system. Get on the path to the speedy recovery by following these simple, old good advices.
X
Desktop Bottom Promotion