ಇನ್ನು ಸಣ್ಣ-ಪುಟ್ಟ ಕಾಯಿಲೆಗಳಿಗೆ ವೈದ್ಯರ ಬಳಿ ಹೋಗಬೇಡಿ!

By: manu
Subscribe to Boldsky

ಮನೆಮದ್ದುಗಳು ಹಿಂದಿನಿಂದಲೂ ಹಲವಾರು ರೀತಿಯ ಕಾಯಿಲೆಗಳನ್ನು ನಿವಾರಣೆ ಮಾಡಲು ಬಳಸಿಕೊಂಡು ಬರಲಾಗುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಮನೆಮದ್ದು ಎಂದರೆ ಕೆಲವರಿಗೆ ನಿರ್ಲಕ್ಷ್ಯ ಧೋರಣೆ. ಮನೆಮದ್ದು ಬಳಸಿಕೊಂಡು ನಮ್ಮ ಹಿರಿಯರು ತುಂಬಾ ಆರೋಗ್ಯವಾಗಿದ್ದರು ಮತ್ತು ಇಂದಿಗೂ ಅವರು ನಮಗಿಂತ ತುಂಬಾ ಆರೋಗ್ಯವಾಗಿದ್ದಾರೆ.

ಹಿಂದಿನವರು ಆಸ್ಪತ್ರೆಗಳಿಗೆ ಹೋಗಿರುವುದೇ ಕಡಿಮೆ. ಯಾಕೆಂದರೆ ಮನೆಯಲ್ಲಿಯೇ ಸಿಗುವಂತಹ ಮನೆಮದ್ದನ್ನುಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಇದ್ದರು. ಎದೆಯುರಿ, ಕೆಮ್ಮು, ಜ್ವರ ಮತ್ತು ಕಫದಂತಹ ಸಮಸ್ಯೆಗಳಿಗೆ ಮನೆಮದ್ದು ತುಂಬಾ ಪರಿಣಾಮಕಾರಿ..... ಮುಂದೆ ಓದಿ.... 

ಬಿಕ್ಕಳಿಗೆ ಬರುತ್ತಾ ಇದ್ದರೆ

ಬಿಕ್ಕಳಿಗೆ ಬರುತ್ತಾ ಇದ್ದರೆ

ನಿಮಗೆ ಬಿಕ್ಕಳಿಗೆ ಬರುತ್ತಾ ಇದ್ದರೆ ಎರಡು ಚಮಚ ಸಕ್ಕರೆ ಬಾಯಿಗೆ ಹಾಕಿ ಅದನ್ನು ಗಬಗಬನೆ ನುಂಗಬೇಕು. ಒಣ ಸಕ್ಕರೆಯ ಹರಳುಗಳು ಧ್ವನಿಫಲಕದ ನರಗಳಲ್ಲಿ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡುವುದು. ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಲು ಟಿಪ್ಸ್

ಗಂಟಲು ಕರೆತ

ಗಂಟಲು ಕರೆತ

ಗಂಟಲು ಕರೆತವಿದ್ದರೆ ನಿಮಗೆ ಬೆಳ್ಳುಳ್ಳಿಯು ತುಂಬಾ ನೆರವಿಗೆ ಬರಲಿದೆ. ಬೆಳ್ಳುಳ್ಳಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಗಂಟಲಿನಲ್ಲಿ ನೋವು ಹಾಗೂ ಕಿರಕಿರಿ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ನಿವಾರಣೆ ಮಾಡುವುದು. ಆರರಿಂದ ಏಳು ಬೆಳ್ಳುಳ್ಳಿಯ ಎಸಲುಗಳನ್ನು ಜಜ್ಜಿಕೊಂಡು ಸ್ವಲ್ಪ ಬಿಸಿ ನೀರಿಗೆ ಹಾಕಿ ಅದರಿಂದ ದಿನದಲ್ಲಿ ಎರಡು ಸಲ ಬಾಯಿ ಮುಕ್ಕಳಿಸಿಕೊಳ್ಳಿ.ಇನ್ನು ಶೀತ, ಗಂಟಲು ಕೆರೆತಕ್ಕೆ ಗುಡ್ ಬೈ ಹೇಳಿ!

ಎದೆಯುರಿ

ಎದೆಯುರಿ

ಎದೆಯುರಿಗೆ ನಾಲ್ಕೈದು ತುಳಸಿ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಎರಡೇ ನಿಮಿಷದಲ್ಲಿ ನಿಮಗೆ ಪರಿಹಾರ ಸಿಗುವುದು. ಭಾರತದಲ್ಲಿ ತುಂಬಾ ಪವಿತ್ರವೆಂದು ನಂಬಲಾಗಿರುವ ತುಳಸಿಯು ಪವಾಡವನ್ನೇ ಮಾಡಲಿದೆ. ಇದು ಜೀರ್ಣಕ್ರಿಯೆಯ ಸಮಸ್ಯೆನ್ನು ಬೇಗನೆ ನಿವಾರಿಸಲಿದೆ.

ತುಟಿಗಳು ಒಡೆಯುವ ಸಮಸ್ಯೆ

ತುಟಿಗಳು ಒಡೆಯುವ ಸಮಸ್ಯೆ

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ತುಟಿಗಳು ಒಡೆಯುವ ಸಮಸ್ಯೆಯನ್ನು ನಿವಾರಣೆ ಮಾಡಬೇಕಾದರೆ ನೀವು ಈಗಾಗಲೇ ಹಲವಾರು ಮಲಾಮ್‌ಗಳನ್ನು ಬಳಸಿರಬಹುದು. ಇದರಿಂದ ಯಾವುದೇ ಪ್ರಯೋಜವಾಗಿರಲಿಕ್ಕಿಲ್ಲ.

ತುಟಿಗಳು ಒಡೆಯುವ ಸಮಸ್ಯೆ

ತುಟಿಗಳು ಒಡೆಯುವ ಸಮಸ್ಯೆ

ಆದರೆ ಆಲಿವ್ ಎಣ್ಣೆಯನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ. ಇದು ಒಡೆದ ತುಟಿಗಳಿಗೆ ತುಂಬಾ ಒಳ್ಳೆಯದು. ಬೆಣ್ಣೆ ಹಚ್ಚಿಕೊಂಡರೂ ಒಡೆದ ತುಟಿಗಳಿಗೆ ಪರಿಹಾರ ಸಿಗುವುದು. ತುಟಿಗಳು ಒಡೆಯದಂತೆ ಸಣ್ಣ ಮಕ್ಕಳ ತುಟಿಗಳಿಗೆ ಇಂದಿಗೂ ಬೆಣ್ಣೆ ಹಚ್ಚುತ್ತಾರೆ.

 
English summary

Natural Home Remedies For Health That Really Work

Read about certain home remedies that actually work. Try these to get excellent results. Are you feeling like throwing up? Then straight away crush about an inch of ginger and squeeze it and have the juice quickly. Ginger has been found to have anti-nausea properties.
Story first published: Monday, December 26, 2016, 23:14 [IST]
Please Wait while comments are loading...
Subscribe Newsletter