Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸತಾಯಿಸುವ 'ಹೊಟ್ಟೆ ನೋವಿಗೆ', ಇಲ್ಲಿದೆ ಸಿಂಪಲ್ ಮನೆಮದ್ದು
ಹೊಟ್ಟೆ ನೋವು ಎನ್ನುವುದು ಎಲ್ಲಾ ವಯಸ್ಸಿನಲ್ಲಿ ವಿವಿಧ ಕಾರಣಗಳಿಂದ ಬರುವಂತಹ ಸಾಮಾನ್ಯ ಆರೋಗ್ಯ ಸಮಸ್ಯೆ. ಇದಕ್ಕೆಲ್ಲಾ ಮುಖ್ಯ ಕಾರಣ, ಯಾವುದೋ ಅಗ್ಗದ ಅಥವಾ ಹಾಳಾದ, ಕ್ರಿಮಿಗಳಿಂದ ಕೂಡಿದ ಆಹಾರ ಹೊಟ್ಟೆ ಸೇರಿದರೆ, ಅಜೀರ್ಣ ಸಮಸ್ಯೆ, ಆಹಾರ ವಿಷವಾಗುವುದು, ಆಹಾರದ ಅಲರ್ಜಿ, ಅಲ್ಸರ್, ಮಲಬದ್ಧತೆ, ಹೊಟ್ಟೆಯ ವೈರಸ್, ಗ್ಯಾಸ್ ಹರ್ನಿಯಾ, ಹೀಗೆ ಮುಂತಾದ ಹಲವಾರು ಸಮಸ್ಯೆಗಳಿರಬಹುದು, ಹಾಗಂತ ಸಮಸ್ಯೆ ಚಿಕ್ಕದೆಂದು ಉದಾಸೀನ ಮಾಡುವಂತಿಲ್ಲ!
ಆದರೆ, ಕೆಲವರು ಇಂತಹ ಸಮಸ್ಯೆ ಬಗ್ಗೆ ಗೆಳೆಯ/ತಿಯರಲ್ಲೂ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಳ್ಳುತ್ತಾರೆ, ಇಲ್ಲಿ ಪ್ರತಿಷ್ಠೆಯ ಪ್ರಶ್ನೆಯೇ ಅವರಿಗೆ ಮುಖ್ಯವಾಗಿರುತ್ತದೆ!, ಅದರಲ್ಲೂ ಹಿಂದಿನ ಕಾಲದ ನಮ್ಮ ಅಜ್ಜ, ಅಜ್ಜಿ ಹೇಳುವ ಟಿಪ್ಸ್ ಈ ಕಾಲದವರಿಗೆ ರುಚಿಸುವುದಿಲ್ಲ. ಡಾಕ್ಟರ್ ಹತ್ತಿರ ಹೋಗಿ ಹಣ ತೆತ್ತು ಬಂದು ತಾತ್ಕಾಲಿಕ ಪರಿಹಾರ ಪಡೆಯುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ! ಚಿಂತಿಸದಿರಿ ಹೊಟ್ಟೆನೋವಿನಿಂದ ಸ್ವಲ್ಪ ಮಟ್ಟಿನ ಆರಾಮ ಕೊಡುವ ಸರಳವಾದ ಮನೆಮದ್ದನ್ನು ನೀಡಿದ್ದೇವೆ ಮುಂದೆ ಓದಿ..... ಅಪ್ಪಿತಪ್ಪಿಯೂ ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ
ದಯವಿಟ್ಟು ಗಮನಿಸಿ: ಒಂದು ವೇಳೆ, ಹೊಟ್ಟೆನೋವು ತೀವ್ರವಾಗಿದ್ದರೆ ಮತ್ತು ನಿರಂತರವಾಗಿದ್ದರೆ ಆಗ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಸಲಹೆ ಪಡೆದುಕೊಳ್ಳಿ

ಶುಂಠಿ
ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣ ಮತ್ತು ಇತರ ಆರೋಗ್ಯಕಾರಿ ಲಾಭಗಳಿವೆ. ಇದು ಜೀರ್ಣಕ್ರಿಯೆ ಸರಾಗವಾಗಿಸಿ ಹೊಟ್ಟೆ ನೋವು ಕಡಿಮೆ ಮಾಡುತ್ತದೆ. ಒಣಗಿದ ಶುಂಠಿಗಿಂತ ಹಸಿ ಶುಂಠಿ ಹೆಚ್ಚು ಪರಿಣಾಮಕಾರಿ.ಇದಕ್ಕಾಗಿ ಹಸಿಶುಂಠಿಯ ಒಂದಿಂಚಿನ ತುಂಡನ್ನು ಜಜ್ಜಿ ಹಾಲಿಲ್ಲದ ಟೀ ಜೊತೆ ಕುದಿಸಿ ಸೋಸಿ ಬಿಸಿಯಾಗಿರುವಂತೆಯೇ ಸೇವಿಸುವುದರಿಂದ ಹೊಟ್ಟೆನೋವು ಕೂಡಲೇ ಕಡಿಮೆಯಾಗುತ್ತದೆ. ಜೊತೆಗೆ ಹುಳಿತೇಗು, ವಾಕರಿಕೆ ಮತ್ತು ವಾಂತಿಯನ್ನೂ ನಿಲ್ಲಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ಕೊಂಚ ಜೇನನ್ನೂ ಸೇರಿಸಬಹುದು.

ಲಿಂಬೆ ಹಣ್ಣು ಮತ್ತು ಅಡುಗೆ ಸೋಡ....
ಒಂದು ಲೋಟ ನೀರಿಗೆ ಒಂದು ಲಿಂಬೆ ಹಣ್ಣಿನ ರಸ ಹಿಂಡಿ, ಅರ್ಧ ಟೀ ಚಮಚ ಅಡಿಗೆ ಸೋಡ ಸೇರಿಸಿ, ದಿನಕ್ಕೆ ಒಂದು ಗ್ಲಾಸ್ ಸೇವಿಸಿದರೆ ಹೊಟ್ಟೆನೋವಿನ ಸಮಸ್ಯೆಯೊಂದಿಗೆ, ಅಜೀರ್ಣದ ಸಮಸ್ಯೆಯೂ ನಿವಾರಣೆಯಾಗುವುದು.

ಉಗುರುಬೆಚ್ಚನೆಯ ನೀರು+ಉಪ್ಪು
ಒಂದು ವೇಳೆ ಹೊಟ್ಟೆಯುಬ್ಬರಿಸಿ ಹೊಟ್ಟೆನೋವಾಗುತ್ತಿದ್ದರೆ, ಒಂದು ಲೋಟ ಉಗುರುಬೆಚ್ಚನೆಯ ಬಿಸಿನೀರಿಗೆ ಒಂದು ಚಿಕ್ಕ ಚಮಚ(ತೀವ್ರವಾಗಿದ್ದರೆ ಎರಡು ಚಮಚ) ಅಡುಗೆ ಉಪ್ಪು ಹಾಕಿ ಕದಡಿ ಕುಡಿಯಿರಿ. ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು

ಪುದೀನಾ ಎಲೆಗಳ ಜ್ಯೂಸ್
ಹೊಟ್ಟೆನೋವು, ವಾಕರಿಕೆ ಮತ್ತು ವಾಂತಿಗೆ ಪುದೀನಾ ಎಲೆಗಳ ರಸ ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಆರು ದೊಡ್ಡ ಪುದೀನಾ ಎಲೆಗಳ ಪ್ರಮಾಣದಲ್ಲಿ ಜ್ಯೂಸರ್‌ನಲ್ಲಿ ಅಗತ್ಯವಿದ್ದಷ್ಟು ರಸವನ್ನು ಸಿದ್ಧಪಡಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುದೀನಾ ಎಲೆಗಳ ಜ್ಯೂಸ್
ಈ ನೀರನ್ನು ಒಂದರಿಂದ ಮೂರು ಲೋಟಗಳವರೆಗೂ ಕುಡಿಯಬಹುದು. ಇನ್ನೂ ಉತ್ತಮ ಪರಿಣಾಮಕ್ಕಾಗಿ ಒಂದು ಬಾರಿಗೆ ಆರು ಎಲೆಗಳನ್ನು ಹಸಿಯಾಗಿ ಜಗಿದು ನೀರಿನೊಂದಿಗೆ ನುಂಗಬಹುದು. ಈ ರಸವನ್ನು ಊಟದ ಬಳಿಕ ಸೇವಿಸಬೇಕು.

ಏಲಕ್ಕಿ+ ಜೀರಿಗೆ
ಅಜೀರ್ಣದ ಕಾರಣದಿಂದ ಹೊಟ್ಟೆನೋವಾಗಿದ್ದರೆ ಒಂದು ಲೋಟ ನೀರಿಗೆ ಸುಮಾರು ಐದರಿಂದ ಆರು ಏಲಕ್ಕಿಗಳ ಸಿಪ್ಪೆ ಸುಲಿದು ಕೇವಲ ಬೀಜಗಳನ್ನು ಮತ್ತು ಒಂದು ಚಿಕ್ಕ ಚಮಚ ಜೀರಿಗೆಯನ್ನು ಹಾಕಿ ಕುದಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಏಲಕ್ಕಿ+ ಜೀರಿಗೆ
ಸುಮಾರು ಮೂರು ನಿಮಿಷ ಕುದಿದ ಬಳಿಕ ಒಲೆಯಿಂದಿಳಿಸಿ ತಣಿಯಲು ಬಿಡಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟದ ಬಳಿಕ ಕುಡಿಯಬಹುದು.



Click it and Unblock the Notifications
