For Quick Alerts
ALLOW NOTIFICATIONS  
For Daily Alerts

ಬೆಳ್ಳಂಬೆಳಗ್ಗೆ ತುಳಸಿ ಎಲೆ ಜಗಿಯಿರಿ, ಆರೋಗ್ಯ ಪಡೆಯಿರಿ

By Manu
|

ಆರೋಗ್ಯವೇ ಮಹಾಭಾಗ್ಯ, ರೋಗ ನಿರೋಧಕ ಶಕ್ತಿಯನ್ನು ಸರಿಯಾಗಿ ಇರಿಸಿಕೊಂಡರೆ ಆರೋಗ್ಯ ಎಂಬುದು ನಮ್ಮ ಸ್ವತ್ತಾಗಿರುತ್ತದೆ. ಪದೇ ಪದೇ ಕಾಯಿಲೆ ಬೀಳುವುದರಿಂದ ನಮ್ಮ ದೇಹವು ಬಳಲುತ್ತದೆ ಮತ್ತು ಅದಕ್ಕಾಗಿ ಮಾಡುವ ಖರ್ಚಿನಿಂದಾಗಿ ನಾವು ಆರ್ಥಿಕವಾಗಿ ನಷ್ಟ ಹೊಂದುತ್ತೇವೆ. ಜೊತೆಗೆ ಮಾನಸಿಕವಾಗಿ ಸಹ ಕುಗ್ಗಿ ಹೋಗುವಂತೆ ಮಾಡುತ್ತದೆ ಈ ಕಾಯಿಲೆಗಳು.

Here’s how chewing tulsi early in the morning can boost immunity

ಆದ್ದರಿಂದ ಕಾಯಿಲೆ ಬೀಳದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಲು ಇರುವ ಒಂದೇ ಒಂದು ಮಾರ್ಗ ಪರಿಹಾರವಲ್ಲ, ಕಾಯಿಲೆಯೇ ಬರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಒಂದು ಮಾರ್ಗ ಈ ನಿಟ್ಟಿನಲ್ಲಿ ನಿಮಗೆ ಸಹಾಯಕ್ಕೆ ಬರುತ್ತದೆ. ಇದಕ್ಕಾಗಿ ಹಲವಾರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉಪಾಯಗಳು ನಿಮಗಾಗಿ ದೊರೆಯುತ್ತವೆ. ಅದರಲ್ಲಿ ಬೆಳಗ್ಗೆ ಎದ್ದ ಕೂಡಲೆ, ಬೆಚ್ಚಗಿನ ನೀರು, ನಿಂಬೆ ಮತ್ತು ಜೇನು ತುಪ್ಪ ಬೆರೆಸಿರುವ ರಸವನ್ನು ಸೇವಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಇದರಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಅಡಗಿರುವುದು ಈಗಾಗಲೇ ದೃಢಪಟ್ಟಿದೆ. ಆದರೆ ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅದಕ್ಕಾಗಿ ಈ ರಸದ ಜಾಗದಲ್ಲಿ ತುಳಸಿ ಎಲೆಗಳನ್ನು ಸೇವಿಸುವುದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತವೆ ಎಂದು ತಿಳಿದುಬಂದಿದೆ. ಹಿಂದೂ ಧರ್ಮದ ಪವಿತ್ರ ಗಿಡ, ಮನೆಯಂಗಳದ ತುಳಸಿ

ತುಳಸಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದು ಉದ್ದೀಪಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಒಂದು ರಾಸಾಯನಿಕವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಕಾಪಾಡುವ ಗುಣವನ್ನು ಹೊಂದಿರುತ್ತದೆ. ಇದು ಕೇವಲ ಅಪಾಯಕಾರಿ ಕಾಯಿಲೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾ, ವೈರಸ್‌ಗಳ ವಿರುದ್ಧ ಹೋರಾಡುವುದರ ಜೊತೆಗೆ ಆರೋಗ್ಯಕರವಾದ ರೋಗ ನಿರೋಧಕ ಕೋಶಗಳ ಉತ್ಪಾದನೆಗೆ ಸಹಕರಿಸುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಸಹ ಅಧಿಕ ಪ್ರಮಾಣದಲ್ಲಿ ಇರುತ್ತವೆ. ಇವು ಆರೋಗ್ಯಕಾರಿ ಕೋಶಗಳನ್ನು ವಿಷಕಾರಿ ಕಣಗಳಿಂದ ಕಾಪಾಡುತ್ತದೆ ಮತ್ತು ಇದು ಅಧಿಕ ಆಕ್ಸಿಡೇಶನ್‌ನಿಂದ ಹಾನಿಯಾಗುವಿಕೆಯನ್ನು ತಪ್ಪಿಸುತ್ತದೆ. ಗಿಡಮೂಲಿಕೆಗಳ ರಾಣಿ 'ತುಳಸಿ'-ಆರೋಗ್ಯದ ಸಂಜೀವಿನಿ

ಬಳಸುವುದು ಹೇಗೆ?
ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ನಾಲ್ಕು ತುಳಸಿ ಎಲೆಗಳನ್ನು ಅಗಿದು ನುಂಗಿ. ಈ ಎಲೆಗಳನ್ನು ನುಂಗುವ ಮೊದಲು ಅವುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಅವುಗಳನ್ನು ನುಂಗಿದ ನಂತರ ಒಂದು ಅಥವಾ ಎರಡು ಲೋಟ ನೀರನ್ನು ಕುಡಿಯಿರಿ. ಇದನ್ನು ಸೇವಿಸಿದ ಮೇಲೆ 30 ನಿಮಿಷ ಏನನ್ನು ಸೇವಿಸಬೇಡಿ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದನ್ನು ಒಂದು ತಿಂಗಳಿನವರೆಗೆ ಪುನರಾವರ್ತಿಸಿ. ಬಹುಶಃ ಇದನ್ನು ಸಹ ನೀವು ಓದಲು ಇಷ್ಟಪಡಬಹುದು. ನಿಮ್ಮ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ 12 ಸೂಪರ್ ಫುಡ್‌ಗಳು.

English summary

Here’s how chewing tulsi early in the morning can boost immunity

if fall sick frequently due to low immunity and most of your time goes into visiting your doctor, make this simple change in your daily routine. Although drinking warm water, lemon and honey is a healthy idea as it has numerous health benefits, its role in improving immunity is unknown. But replacing this morning routine with tulsi leaves can help you improve your immunity naturally,
Story first published: Monday, February 8, 2016, 14:25 [IST]
X
Desktop Bottom Promotion