For Quick Alerts
ALLOW NOTIFICATIONS  
For Daily Alerts

ದಾಹ ತಣಿಸುವ, ಕಲ್ಲಂಗಡಿ ಜ್ಯೂಸ್‌+ಕಾಳುಮೆಣಸಿನ ಪುಡಿ!

|

ಬೇಸಿಗೆ ಬಂದಿದೆ, ತನ್ನೊಂದಿಗೆ ಸೆಖೆ ಮತ್ತು ಬಳಲಿಕೆಯನ್ನೂ ತಂದಿದೆ. ಸೆಖೆಯಿಂದ ಪಾರಾಗಲು ತಾಜಾ ಹಣ್ಣಿನ ರಸಕ್ಕಿಂತ ಇನ್ನೊಂದು ಪರ್ಯಾಯ ಪೇಯವಿಲ್ಲ. ಅಂತೆಯೇ ಮಾರುಕಟ್ಟೆಯಲ್ಲಿ ಅನಾನಾಸು, ಕಲ್ಲಂಗಡಿ, ಕಿತ್ತಳೆ ಮೊದಲಾದ ಹಣ್ಣುಗಳಿಗೆ ಬಹಳ ಬೇಡಿಕೆ ಕುದುರುತ್ತದೆ. ಬೇಸಿಗೆಯಲ್ಲಿ ಇವೆಲ್ಲವೂ ಬೇಸಿಗೆಯ ಬಳಲಿಕೆಯನ್ನು ನಿವಾರಿಸುವಲ್ಲಿ ಸಮರ್ಥವಾಗಿವೆ.

ಅದರಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಮತ್ತು ಇತರ ಪೋಷಕಾಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಬೇಸಿಗೆಗೆ ಅತ್ಯುತ್ತಮ ಆಹಾರವಾಗಿದೆ. ಆಹಾರ ತಜ್ಞರು ಇತ್ತೀಚೆಗೆ ನೀಡಿರುವ ಮಾಹಿತಿಯ ಪ್ರಕಾರ ದಿನಕ್ಕೆ ಎರಡು ಲೋಟಗಳಾದರೂ ಕಲ್ಲಂಗಡಿ ಜ್ಯೂಸ್‌ ಕುಡಿಯುವುದರಿಂದ ಬೇಸಿಗೆಯ ಬಳಲಿಕೆ ಪೂರ್ಣವಾಗಿ ಮಾಯವಾಗುತ್ತದೆ. ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!

ಕಲ್ಲಂಗಡಿಯಲ್ಲಿರುವ ಪೋಷಕಾಂಶಗಳು ದೇಹದ ನೀರಿನ ಅಗತ್ಯತೆಯನ್ನು ಪೂರ್ಣಗೊಳಿಸುವ ಜೊತೆಗೇ ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಿ ಆರೋಗ್ಯಕರವಾಗಿರಿಸಲು ನೆರವಾಗುತ್ತವೆ. ಅದರಲ್ಲೂ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಸ ಮತ್ತು ಕೊಂಚ ಕಾಳುಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವ ಮೂಲಕ ಬೇಸಿಗೆಯಲ್ಲಿ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತವೆ ಹಾಗೂ ಮೂತ್ರದ ಮೂಲಕ ದೇಹದ ಅನವಶ್ಯಕ ವಸ್ತುಗಳು ಸಹಾ ಹೊರಹೋಗುತ್ತವೆ. ಇದರಿಂದ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ, ತಾಮ್ರ ಮತ್ತು ಕಬ್ಬಿಣದಂತಹ ಖನಿಜಗಳೂ ವಿಟಮಿನ್ ಸಿ, B5, B1, B2, B3 ಮತ್ತು B6 ನಂತಹ ಪೋಷಕಾಂಶಗಳೂ ಇವೆ. ಬನ್ನಿ, ಬೇಸಿಗೆಯ ಈ ಅದ್ಭುತ ಪೇಯದ ಗುಣಗಳನ್ನು ಅರಿಯೋಣ...

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಈ ಪೇಯದ ಅತ್ಯುತ್ತಮ ಪ್ರಯೋಜನವೆಂದರೆ ತೂಕ ಇಳಿಸಲು ನೆರವಾಗುವುದು. ಇದರಲ್ಲಿ ಕೊಂಚ ಕಾಳುಮೆಣಸಿನ ಪುಡಿಯನ್ನು ಸೇರಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳು ಬಳಸಲ್ಪಡುವ ಮೂಲಕ ಶೀಘ್ರವಾಗಿ ತೂಕ ಇಳಿಸಲು ನೆರವಾಗುತ್ತದೆ.

 ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಒಂದು ವೇಳೆ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದ್ದರೆ ಕಾಳುಮೆಣಸಿನ ಪುಡಿ ಸೇರಿಸಿದ ಕಲ್ಲಂಗಡಿ ಹಣ್ಣಿನ ರಸದ ಸೇವನೆ ಇದನ್ನುಸರಿಪಡಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಾಗಿದ್ದಾಗ ಉತ್ತಮ ಕೊಲೆಸ್ಟ್ರಾಲ್(HDL) ಕಡಿಮೆ ಇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕಲ್ಲಂಗಡಿ ಹಣ್ಣಿನ ರಸದ ಸೇವನೆಯಿಂದ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವ ಜೊತೆಗೇ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಆರೋಗ್ಯ ವೃದ್ಧಿಸುತ್ತದೆ. ಜೊತೆಗೇ ಒತ್ತಡ ಕಡಿಮೆಯಾಗುವ ಮೂಲಕ ಹೃದಯದ ಕ್ಷಮತೆಯೂ ಹೆಚ್ಚುತ್ತದೆ.

ಬೇಸಿಗೆಯ ತೊಂದರೆಗಳಿಂದ ರಕ್ಷಿಸುತ್ತದೆ

ಬೇಸಿಗೆಯ ತೊಂದರೆಗಳಿಂದ ರಕ್ಷಿಸುತ್ತದೆ

ಬೇಸಿಗೆಯಲ್ಲಿ ಹಲವು ಸೋಂಕುಗಳು ದೇಹವನ್ನು ಕಾಡುತ್ತವೆ. ಬೆವರುಸಾಲೆ, ಉರಿ, ಚರ್ಮದ ತುರಿಕೆ, ಕೆಂಪಗಾಗುವುದು, ಚಿಕ್ಕ ಚಿಕ್ಕ ಗುಳ್ಳೆಗಳಾಗುವುದು ಮೊದಲಾದವುಗಳಿಂದ ರಕ್ಷಣೆ ಪಡೆಯಲು ಪ್ರತಿದಿನ ಕಲ್ಲಂಗಡಿ ಹಣ್ಣಿನ ರಸದ ಸೇವನೆ ಅಗತ್ಯವಾಗಿದೆ. ಇದರ ಮೂಲಕ ಚರ್ಮಕ್ಕೆ ಒಳಗಿನಿಂದ ಆರ್ದ್ರತೆ ಲಭಿಸುವ ಮೂಲಕ ಉತ್ತಮ ರಕ್ಷಣೆ ಪಡೆಯುತ್ತದೆ ಹಾಗೂ ಸೋಂಕುಗಳಿಂದ ತಡೆದಂತಾಗುತ್ತದೆ.

 ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಇದರಲ್ಲಿರುವ ಲೈಕೋಪೀನ್ ಎಂಬ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್‌ಗೆ ಕಾರಣವಾಗುವ ಜೀವಕೋಶಗಳನ್ನು ತಡೆದು ಕ್ಯಾನ್ಸರ್ ಆವರಿಸದಂತೆ ತಡೆಯುತ್ತದೆ. ವಿಶೇಷವಾಗಿ ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

ಹೃದಯಾಘಾತದಿಂದ ರಕ್ಷಿಸುತ್ತದೆ

ಹೃದಯಾಘಾತದಿಂದ ರಕ್ಷಿಸುತ್ತದೆ

ಇದರಲ್ಲಿ ಉತ್ತಮ ಪ್ರಮಾಣದ ಫೋಲೇಟ್ ಎಂಬ ಅಂಶವಿದ್ದು ಇದು ರಕ್ತದ ಸಂಚಾರವನ್ನು ಸುಗಮಗೊಳಿಸುವುದು, ಜಿಡ್ಡನ್ನು ನಿವಾರಿಸುವುದು ಮೊದಲಾದ ಕ್ರಮಗಳ ಮೂಲಕ ಹೃದಯಕ್ಕೆ ಆಗುವ ಹೊರೆಯನ್ನು ನಿವಾರಿಸುತ್ತದೆ ತನ್ಮೂಲಕ ಹೃದಯಾಘಾತದ ಸಂಭವವನ್ನು ಕಡಿಮೆಗೊಳಿಸುತ್ತದೆ.

ಮೂತ್ರದ ಸೋಂಕಿನಿಂದ ರಕ್ಷಿಸುತ್ತದೆ

ಮೂತ್ರದ ಸೋಂಕಿನಿಂದ ರಕ್ಷಿಸುತ್ತದೆ

ಕಲ್ಲಂಗಡಿ ಒಂದು ಅತ್ಯುತ್ತಮವಾದ ಮೂತ್ರವರ್ಧಕವಾಗಿದೆ. ಇದರಿಂದ ದೇಹದಲ್ಲಿರುವ ವಿಷಕಾರಿ ವಸ್ತುಗಳು ನಿವಾರಣೆಯಾಗಲು ನೆರವಾಗುತ್ತದೆ. ಕಲ್ಲಂಗಡಿ ಹಣ್ಣಿನ ರಸದ ಸೇವನೆಯಿಂದ ಮೂತ್ರಕ್ಕೆ ಬೇಗನೇ ಅವಸರವಾಗುವ ಮೂಲಕ ವಿಷಕಾರಿ ವಸ್ತುಗಳ ಸಂಗ್ರಹದಿಂದ ಎದುರಾಗಬಹುದಾಗಿದ್ದ ತೊಂದರೆಗಳಿಂದ ರಕ್ಷಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂತ್ರದ ಸೋಂಕಿನಿಂದ ರಕ್ಷಿಸುತ್ತದೆ

ಮೂತ್ರದ ಸೋಂಕಿನಿಂದ ರಕ್ಷಿಸುತ್ತದೆ

ಬೇಸಿಗೆಯಲ್ಲಿ ಬೆವರಿನ ಮೂಲಕ ಹೆಚ್ಚಿನ ದ್ರವ ಹೊರಹೋಗುವ ಕಾರಣ ಮೂತ್ರದ ಸಾಂದ್ರತೆ ಹೆಚ್ಚುತ್ತದೆ ಹಾಗೂ ಇದರಿಂದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಬೇಸಿಗೆಯ ಮಾಸಿಕ ದಿನಗಳಲ್ಲಿ ಹೆಚ್ಚಿನ ದ್ರವದ ಅಗತ್ಯವಿದ್ದು ಕಲ್ಲಂಗಡಿ ಹಣ್ಣಿನ ರಸವನ್ನು ಹೆಚ್ಚು ಸೇವಿಸುವುದು ಅಗತ್ಯವಾಗಿದೆ.

ಮಲಬದ್ಧತೆಯಿಂದ ರಕ್ಷಿಸುತ್ತದೆ

ಮಲಬದ್ಧತೆಯಿಂದ ರಕ್ಷಿಸುತ್ತದೆ

ಬೇಸಿಗೆಯಲ್ಲಿ ಬೆವರು ಹೆಚ್ಚುವ ಪರಿಣಾಮದಿಂದ ಮಲಬದ್ದತೆಯಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಎಷ್ಟು ಎಂದರೆ ಮೂವರಲ್ಲಿ ಇಬ್ಬರು ಮಲಬದ್ದತೆಯಿಂದ ಬಳಲುತ್ತಾರೆ. ಇದರಿಂದ ತಡೆಯಲು ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ರಸದ ಹೊರತಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು.

English summary

Health Benefits Of Watermelon Juice With Pepper

Drinking watermelon juice in the morning on an empty stomach will help to flush out the toxins in the bladder as well. When you add a pinch of black pepper and salt to a cup of this fresh fruit juice, do note that you are consuming a rich source of calcium, Take a look at some of the health benefits of having watermelon juice with pepper:
X
Desktop Bottom Promotion