For Quick Alerts
ALLOW NOTIFICATIONS  
For Daily Alerts

ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!

Posted By:
|

ಕಲ್ಲಂಗಡಿ ಹೆಚ್ಚು ಕಡಿಮೆ ಎಲ್ಲರಿಗೂ ಪ್ರಿಯವಾದ ಹಣ್ಣಾಗಿದೆ. ಕಲ್ಲಂಗಡಿ ಹಣ್ಣಿನ ಸೀಸನ್ ಇದಾಗಿದ್ದು, ಕಲ್ಲಂಗಡಿಯ ಕೆಂಪು ರಸದಿಂದ ಆರೋಗ್ಯಯುತವಾದ ದೇಹವನ್ನು ಪಡೆದುಕೊಳ್ಳಬಹುದು. ಕಲ್ಲಂಗಡಿ ಹೆಚ್ಚು ಪ್ರೊಟೀನ್ ನ್ಯೂಟ್ರೀನ್ ಅಡಕವಾಗಿರುವ ಆರೋಗ್ಯದಾಯಿ ಪೇಯವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಬ್ಬಿನ ಜ್ಯೂಸ್ ಅನ್ನು ಈ ಎರಡು ವಿಧಾನಗಳಲ್ಲಿ ಮಾಡಿ

ಒಂದು ಗ್ಲಾಸ್‌ನಷ್ಟು ಕಲ್ಲಂಗಡಿ ಜ್ಯೂಸ್ ನಿಮ್ಮನ್ನು ರೋಗಗಳಿಂದ ಮುಕ್ತಗೊಳಿಸುತ್ತದೆ. ಉದಾಹರಣೆಗೆ, ಕಲ್ಲಂಗಡಿ ಹಣ್ಣು ನಿಮ್ಮನ್ನು ಹೈಡ್ರೇಟೆಡ್ ಆಗಿ ಇರಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಕಿಡ್ನಿಯನ್ನು ಸ್ವಚ್ಛಮಾಡುತ್ತದೆ ಮತ್ತು ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ಉಂಟುಮಾಡುತ್ತದೆ. ನಿಮ್ಮ ತ್ವಚೆಗೂ ಹೊಳಪನ್ನು ತರುವ ಕೆಲಸವನ್ನು ಕಲ್ಲಂಗಡಿ ಮಾಡುತ್ತದೆ.

ಹಲವಾರು ಜನರು ಬೆಳಗ್ಗಿನ ಉಪಹಾರದಲ್ಲಿ ಹಣ್ಣಿನ ಜ್ಯೂಸ್ ಅನ್ನು ಸೇವಿಸುತ್ತಾರೆ. ನೀವು ಒಬ್ಬ ಹಣ್ಣಿನ ಜ್ಯೂಸ್ ಪ್ರೇಮಿಯಾಗಿದ್ದರೆ, ಭಾರತೀಯ ಶೈಲಿಯಲ್ಲಿ ತಯಾರು ಮಾಡಲಾದ ಪ್ರೋಟೀನ್ ನ್ಯೂಟ್ರೀನ್ ಭರಿತ ಜ್ಯೂಸ್ ರೆಸಿಪಿ ಇಲ್ಲಿದೆ. ಮಸಾಲಾ ಕಲ್ಲಂಗಡಿ ಜ್ಯೂಸ್‌ನಲ್ಲಿ ಜೀರಿಗೆ ಹುಡಿ, ಚಾಟ್ ಮಸಾಲಾ ಮುಂತಾದ ಸಾಂಬಾರು ಪದಾರ್ಥಗಳಿದ್ದು ನಿಮ್ಮ ಕಲ್ಲಂಗಡಿ ಜ್ಯೂಸ್ ಅನ್ನು ರುಚಿಕರವನ್ನಾಗಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಕೆ ಮಾಡುವ ರೆಸಿಪಿಯಿದು

ಪ್ರಮಾಣ: 1 ಗ್ಲಾಸ್
ಸಿದ್ಧತಾ ಸಮಯ: 10 ನಿಮಿಷಗಳು

ಸಾಮಾಗ್ರಿಗಳು
1.ಕಲ್ಲಂಗಡಿ - 1 ಕಪ್
2.ಜೀರಿಗೆ ಹುಡಿ - 1 ಸ್ಪೂನ್
3.ಮೆಣಸಿನ ಹುಡಿ - ಸ್ವಲ್ಪ
4.ಚಾಟ್ ಮಸಾಲಾ - ಸ್ವಲ್ಪ
5.ಉಪ್ಪು - ರುಚಿಗೆ ತಕ್ಕಷ್ಟು
6.ನೀರು - ಬೇಕದಷ್ಟು

ಮಾಡುವ ವಿಧಾನ:

1.ಗ್ರಿಡ್ಡಲ್ ಅನ್ನು ಬಿಸಿ ಮಾಡಿ. ಜೀರಿಗೆ ಬೀಜಗಳನ್ನು ಹಾಕಿ ಮತ್ತು ಅವು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.

2.ಅದನ್ನು ತಣಿಯಲು ಬಿಡಿ ಮತ್ತು ಗ್ರೈಂಡರ್‌ನಲ್ಲಿ ಅದನ್ನು ಹುಡಿ ಮಾಡಿಕೊಳ್ಳಿ.

3.ಸ್ವಲ್ಪ ನೀರಿನೊಂದಿಗೆ ಕಲ್ಲಂಗಡಿ ಹಣ್ಣನ್ನು ಗ್ರೈಂಡ್ ಮಾಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಕೆಗಾಗಿ ಲಿಂಬೆ ಚಹಾ

4.ಈಗ ಜೀರಿಗೆ ಹುಡಿ, ಮೆಣಸಿನ ಹುಡಿ, ಉಪ್ಪು ಮತ್ತು ಚಾಟ್ ಮಸಾಲಾವನ್ನು ಸೇರಿಸಿ.

5.ಸ್ವಲ್ಪ ಹೊತ್ತು ಅದನ್ನು ಗ್ರೈಂಡ್ ಮಾಡಿಕೊಳ್ಳಿ ಮತ್ತು ಗ್ಲಾಸ್‌ಗೆ ಹಾಕಿ.

ನಿಮಗೆ ಬೇಕಿದ್ದರೆ, ಐಸ್ ಕ್ಯೂಬ್ ಅನ್ನು ಹಾಕಿ ಚಿಲ್‌ ಆಗಿ ಸರ್ವ್ ಮಾಡಿ.

[ of 5 - Users]
X
Desktop Bottom Promotion