For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯಕ್ಕೆ ಸಿಂಪಲ್‌ ಮನೆಮದ್ದು, ಎಂದಿಗೂ ನೆನಪಿರಲಿ

By Manu
|

ಸವಲತ್ತುಗಳು ಹೆಚ್ಚಾದಂತೆಲ್ಲಾ ಸೋಮಾರಿತನವೂ ಆವರಿಸುತ್ತಿರುವುದು ನಾಗರಿಕತೆಯ ವ್ಯಂಗ್ಯವಾಗಿದೆ. ಅದರಲ್ಲೂ ಆರೋಗ್ಯದ ಬಗ್ಗೆ ನಮಗೆ ನಿಸರ್ಗಕ್ಕಿಂತಲೂ ಔಷಧಿಯ ಮೇಲೇ ಹೆಚ್ಚು ನಂಬಿಕೆ. ನೋವು ಬಂದ ಬಳಿಕ ಮಾತ್ರೆ ನುಂಗಿ ನೋವನ್ನು ಕಡಿಮೆ ಮಾಡುವ ಬದಲು ಆ ನೋವಿನ ಸಂವೇದನೆ ಮೆದುಳಿಗೆ ತಲುಪದಂತೆ ಮಾಡಿ ನೋವಿನಿಂದ ಮುಕ್ತರಾಗುವ ಭ್ರಮೆಯನ್ನೇ ನಾವು ನಿಜವೆಂದು ನಂಬಿಕೊಂಡು ಬಂದಿದ್ದೇವೆ.

ನಂಬಿಕೆ ಬರುತ್ತಿಲ್ಲವೇ? ಪ್ಯಾರಾಸಿಟಮಾಲ್ ಮಾಡುವುದೇ ಇದು. ಇದು ನೋವನ್ನು ನಿವಾರಿಸುವುದಿಲ್ಲ, ಬದಲಿಗೆ ನೋವನ್ನು ಮೆದುಳಿಗೆ ತಲುಪಲು ಬಿಡುವುದಿಲ್ಲ ಅಷ್ಟೇ. ಉಳಿದದ್ದೆಲ್ಲಾ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ನೋಡಿಕೊಳ್ಳುತ್ತದೆ.

ಆದರೆ ವರ್ಷಾಂತರಗಳಿಂದ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಮನೆಮದ್ದುಗಳು ಕೊಂಚ ನಿಧಾನವಾಗಿಯಾದರೂ ಸರಿ, ಸಮರ್ಪಕವಾದ ನೋವು ನಿವಾರಕ ಗುಣಗಳನ್ನೇ ಹೊಂದಿದೆ. ಇವೆಲ್ಲವೂ ನಮ್ಮ ಅಡುಗೆ ಮನೆಯಲ್ಲಿಯೇ ಲಭ್ಯವಿದ್ದು ಸುಲಭವಾಗಿ ತಯಾರಿಸುವಂತಿವೆ. ಇವುಗಳಲ್ಲಿ ಕೆಲವು ಪ್ರಮುಖವಾಗಿದ್ದು ಪ್ರತಿ ಮನೆಯಲ್ಲಿ ಕನಿಷ್ಟ ಒಬ್ಬರಾದರೂ ಈ ಬಗ್ಗೆ ಖಚಿತ ಮಾಹಿತಿ ಹೊಂದಿರುವುದು ಅಗತ್ಯ. ನಿಮಗೆ ಈ ಅವಕಾಶವನ್ನು ಕೆಳಗಿನ ಸ್ಲೈಡ್ ಶೋ ನೀಡುತ್ತಿದೆ...

ಮಾಸಿಕ ದಿನಗಳ ನೋವು ನಿವಾರಣೆಗೆ

ಮಾಸಿಕ ದಿನಗಳ ನೋವು ನಿವಾರಣೆಗೆ

ಎರಡು ಅಥವಾ ಮೂರು ಲಿಂಬೆಹಣ್ಣುಗಳ ರಸವನ್ನು ತಣ್ಣೀರಿನಲ್ಲಿ ಬೆರೆಸಿ ತಕ್ಷಣ ಬೆಳಿಗ್ಗೆ ಪ್ರತಿದಿನ ಕುಡಿಯುವುದರಿಂದ ಉತ್ತಮ ಶಮನ ದೊರಕುತ್ತದೆ. ಆ ದಿನಗಳ ಅತಿಯಾದ ರಕ್ತಸ್ರಾವಕ್ಕೆ ನೈಸರ್ಗಿಕ ಪರಿಹಾರಗಳು...

ಅತಿಯಾದ ತಲೆನೋವಿದ್ದರೆ

ಅತಿಯಾದ ತಲೆನೋವಿದ್ದರೆ

ಒಂದು ಸೇಬುಹಣ್ಣಿನ ಸಿಪ್ಪಯನ್ನು ಸುಲಿದು ಬೀಜ ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಇದಕ್ಕೆ ಕೊಂಚ ಉಪ್ಪು ಚಿಮುಕಿಸಿ ದಿನದ ಪ್ರಥಮ ಆಹಾರವಾಗಿ ಸೇವಿಸಿ. ಮುಂದಿನ ಒಂದು ಘಂಟೆ ಕಾಲ ಬೇರೇನನ್ನೂ ಸೇವಿಸಬೇಡಿ. ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು

ಅಪಾಯವಾಯು ಕಡಿಮೆಯಾಗಲು

ಅಪಾಯವಾಯು ಕಡಿಮೆಯಾಗಲು

ಕಾಲು ಚಿಕ್ಕ ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ

ಗಂಟಲ ಕೆರೆತಕ್ಕೆ

ಗಂಟಲ ಕೆರೆತಕ್ಕೆ

ಎರಡರಿಂದ ಮೂರು ಬಸಲೆ ಸೊಪ್ಪಿನ ಎಲೆಗಳನ್ನು ಕೊಂಚ ನೀರಿನಲ್ಲಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ಕನಿಷ್ಠಕ್ಕಿಳಿಸಿ ಕುದಿಯುವುದನ್ನು ಮುಂದುವರೆಸಿ. ಕೊಂಚ ಹೊತ್ತಿನ ಬಳಿಕ ಎಲೆ ಪುಡಿಪುಡಿಯಾಗುತ್ತದೆ. ಈ ನೀರನ್ನು ಕೊಂಚವೇ ತಣಿಸಿ ಉಗುರುಬೆಚ್ಚಗಾಗಿಸಿ. ಈ ನೀರಿನಿಂದ ಗಂಟಲನ್ನು ಗಳಗಳ ಮಾಡಿ ಮುಕ್ಕಳಿಸಿ. ಕೊಂಚ ಹೊತ್ತು ಬೇರೇನನ್ನೂ ಸೇವಿಸಬೇಡಿ.

ಬಾಯಿಹುಣ್ಣಿಗೆ

ಬಾಯಿಹುಣ್ಣಿಗೆ

ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಕೊಂಚ ಜೇನು ಸೇರಿಸಿ ಕಿವುಚಿ ಲೇಪನ ತಯಾರಿಸಿ. ಈ ಲೇಪವನ್ನು ಚಮಚದಿಂದ ದಪ್ಪನಾಗಿ ಹುಣ್ಣು ಇರುವಲ್ಲೆಲ್ಲಾ ಹಚ್ಚಿ ಕೊಂಚ ಕಾಲ ಅಲ್ಲಾಡದಂತಿರಿ. ಜೊಲ್ಲು ತುಂಬಿಕೊಂಡ ಬಳಿಕ ಉಗಿಯಿರಿ. ಸಾಧ್ಯವಾದಷ್ಟು ಕಾಲ ಈ ಲೇಪನ ಹುಣ್ಣಿನ ಮೇಲೆ ಹಾಗೇ ಇರಲಿ. ಈ ಸಮಯದಲ್ಲಿ ಮಾತನಾಡಲೂ, ಏನನ್ನೂ ತಿನ್ನಲೂ ಕೂಡದು. ಬಾಯಿ ಹುಣ್ಣಿಗೆ ಕಾರಣ ಮತ್ತು ಮನೆಮದ್ದು

ಮೂಗಿನಲ್ಲಿ ಸೋಂಕು ಇದ್ದರೆ (ಸೈನಸ್ ಸೋಂಕು)

ಮೂಗಿನಲ್ಲಿ ಸೋಂಕು ಇದ್ದರೆ (ಸೈನಸ್ ಸೋಂಕು)

ಕೊಂಚ ಸೇಬಿನ ಶಿರ್ಕಾ ಮತ್ತು ಕೊಂಚ ಘಾಟು ಕರಿಮೆಣಸು (cayenne pepper) ಪುಡಿಯನ್ನು ಅರ್ಧ ಕಪ್ ನೀರಿನಲ್ಲಿ ಸೇರಿಸಿ ಕುದಿಸಿ. ಬಳಿಕ ಸಾಧ್ಯವಾದಷ್ಟು ಬಿಸಿಯಿರುವಂತೆಯೇ ದಿನಕ್ಕೆ ಎರಡು ಬಾರಿ ಕುಡಿಯಿರಿ. ಮೂಗಿನಲ್ಲಿ ಕಂಡುಬರುವ ರಕ್ತಸ್ರಾವಕ್ಕೆ ಫಲಪ್ರದ ಮನೆಮದ್ದು

ಅಧಿಕ ರಕ್ತದೊತ್ತಡ ಇದ್ದರೆ

ಅಧಿಕ ರಕ್ತದೊತ್ತಡ ಇದ್ದರೆ

ಪ್ರತಿದಿನ ಹಾಲಿನೊಂದಿಗೆ ಕೊಂಚ ನೆಲ್ಲಿಕಾಯಿಯ ಪುಡಿಯನ್ನು ಸೇರಿಸಿ ಕುಡಿದರೆ ಅಧಿಕ ರಕ್ತದೊತ್ತಡ ನಿವಾರಣೆಯಾಗುತ್ತದೆ. ಅತ್ಯುತ್ತಮ ಪರಿಣಾಮ ಪಡೆಯಲು ದಿನದ ಪ್ರಥಮ ಆಹಾರವಾಗಿ ಸೇವಿಸಿ. ರಕ್ತದೊತ್ತಡವನ್ನು ಹದ್ದು ಬಸ್ತಿನಲ್ಲಿಡುವ ಟಾಪ್ ಫುಡ್

ಅಸ್ತಮಾ

ಅಸ್ತಮಾ

ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ದೊಡ್ಡಚಮಚ ದಾಲ್ಚಿನ್ನಿಪುಡಿ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿ. ಅಸ್ತಮಾ ತಡೆಗೆ ನಿರ್ಲಕ್ಷಿಸಲೇಬೇಕಾದ ಅಂಶಗಳು

ತಲೆಹೊಟ್ಟು

ತಲೆಹೊಟ್ಟು

ಕೊಂಚ ಕೊಬ್ಬರಿ ಎಣ್ಣೆಯಲ್ಲಿ ಕೆಲವು ಬಿಲ್ಲೆ ಕರ್ಪೂರಗಳನ್ನು ಪುಡಿಮಾಡಿ ಚೆನ್ನಾಗಿ ಬೆರೆಸಿ. ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ತಲೆಗೆ ಹಚ್ಚಿ ಮಲಗಿ, ಬೆಳಿಗ್ಗೆದ್ದ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ. ಸುಲಭವಾಗಿ ತಲೆಹೊಟ್ಟು ನಿವಾರಿಸಲು ಒಮ್ಮೆ ಲೋಳೆಸರ ಪ್ರಯತ್ನಿಸಿ!

ಅಕಾಲ ನೆರೆಯುವ ಕೂದಲಿಗೆ

ಅಕಾಲ ನೆರೆಯುವ ಕೂದಲಿಗೆ

ಕೆಲವು ಒಣ ನೆಲ್ಲಿಕಾಯಿಯ ತಿರುಳನ್ನು ಕೊಂಚ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ. ನೆಲ್ಲಿಕಾಯಿಯ ತಿರುಳು ಸುಟ್ಟು ಹೋಗುವವರೆಗೆ ನಿಧಾನ ಉರಿಯಲ್ಲಿ ಕುದಿಸಿ. ಈ ಎಣ್ಣೆ ತಣಿದ ಬಳಿಕ ಬಾಟಲಿಯಲ್ಲಿ ಸಂಗ್ರಹಿಸಿ. ನಿತ್ಯವೂ ಈ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳುವ ಮೂಲಕ ಅಕಾಲ ಕೂದಲು ನೆರೆಯುವುದನ್ನು ತಡೆಯುತ್ತದೆ. ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳಿಗೆ

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳಿಗೆ

ಒಂದು ಕಿತ್ತಳೆ ಹಣ್ಣಿನ ರಸಕ್ಕೆ ಕೊಂಚ ಗ್ಲಿಸರಿನ್ ಸೇರಿಸಿ ಕಪ್ಪಗಾಗಿರುವಲ್ಲಿ ಹಚ್ಚಿಕೊಳ್ಳಿ.ಬಳಲಿದ ಕಣ್ಣುಗಳ ಆರೈಕೆಗೆ ಒಂದಿಷ್ಟು ಸರಳ ಟ್ರಿಕ್ಸ್

English summary

Genius home remedies you must know!

Are you among those who pop a pill every time you experience some pain? Well, it's time you turn to your kitchen. time you turn to your kitchen. There are so many natural remedies available that can be utilized for your overall well being. Have a look
X
Desktop Bottom Promotion