Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಳಿಗಾಲದಲ್ಲಿ ಕಾಡುವ ಅಲರ್ಜಿ ಸಮಸ್ಯೆಗೆ ಅದ್ಭುತ ಆಹಾರಗಳು
ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಅಲರ್ಜಿಗೆ ಕೆಲವೊಂದು ಆಹಾರವನ್ನು ಸೇವನೆ ಮಾಡುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಚಳಿಗಾಲದ ಅಲರ್ಜಿ ಸಮಸ್ಯೆ ತಡೆಯಲು ನೀವು ಸೇವಿಸಬೇಕಾದ ಆಹಾರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.
ಚಳಿಗಾಲ ಬರುತ್ತಿರುವಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮಳೆಗಾಲ ಹೋಗಿ ಚಳಿಗಾಲ ಬರುತ್ತಾ ಇರುವಂತೆ ಪ್ರತಿಯೊಬ್ಬರ ಆರೋಗ್ಯದಲ್ಲಿ ಏನಾದರೂ ಏರುಪೇರಾಗುತ್ತದೆ. ಇಂತಹ ಸಮಯದಲ್ಲಿ ಕೆಲವರನ್ನು ಅಲರ್ಜಿ ಕಾಡುತ್ತದೆ. ಹವಾಮಾನ ಬದಲಾಗುತ್ತಾ ಇರುವಂತೆ ಅಲರ್ಜಿ ಕಾಣಿಸಿಕೊಳ್ಳುವುದು ಕೆಲವರನ್ನು ಇನ್ನಿಲ್ಲದಂತೆ ಕಾಡುತ್ತದೆ. ಅಲರ್ಜಿ ನಿವಾರಣೆಗೆ ಇಲ್ಲಿವೆ ಸೂಪರ್ ಮನೆಮದ್ದು
ಸೀನು ಮತ್ತು ಶೀತ, ಮೂಗಿನಲ್ಲಿ ನೀರು ಸುರಿಯುವುದು, ಚರ್ಮದ ಅಲರ್ಜಿ, ಜ್ವರ, ಗಂಟಲುನೋವು, ಉಸಿರು ಕಟ್ಟಿದಂತೆ ಆಗುವುದು ಮತ್ತು ತಲೆನೋವು ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಅಲರ್ಜಿ ಸಮಸ್ಯೆಗಳಾಗಿವೆ. ಇಂತಹ ಅಲರ್ಜಿಗಳಿಗೆ ವೈದ್ಯರಲ್ಲಿಗೆ ಹೋಗಿ ಮದ್ದು ತಂದರೆ ಕೆಲವೊಮ್ಮೆ ಶಮನವಾಗುತ್ತದೆ. ಅಲರ್ಜಿಗೆ ಕಾರಣ ಮತ್ತು ಮನೆಮದ್ದು
ಇನ್ನು ಕೆಲವು ಸಲ ಈ ಸಮಸ್ಯೆ ಹಾಗೆ ಉಳಿಯುತ್ತದೆ. ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಅಲರ್ಜಿಗೆ ಕೆಲವೊಂದು ಆಹಾರವನ್ನು ಸೇವನೆ ಮಾಡುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಚಳಿಗಾಲದ ಅಲರ್ಜಿ ಸಮಸ್ಯೆ ತಡೆಯಲು ನೀವು ಸೇವಿಸಬೇಕಾದ ಆಹಾರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಇದನ್ನು ಓದಿಕೊಂಡು ನೀವು ಪ್ರಯತ್ನಿಸಿ ನೋಡಬಹುದು. ಇಲ್ಲಿ ಕೊಟ್ಟಿರುವ ಕೆಲವು ನೈಸರ್ಗಿಕ ಆಹಾರಗಳ ಬಗ್ಗೆ ನೀವು ಓದಿ ತಿಳಿಯಿರಿ..... ಎಚ್ಚರ: ಮನೆಯಲ್ಲಿರುವ ಅಲರ್ಜಿ ಬಗ್ಗೆ ಅಲರ್ಟ್ ಆಗಿರಿ!

ಬೆಳ್ಳುಳ್ಳಿ
ಹಿಂದಿನ ಕಾಲದಿಂದಲೂ ಬೆಳ್ಳುಳ್ಳಿಯಲ್ಲಿ ಅಲರ್ಜಿ ವಿರೋಧಿ ಆಹಾರವೆಂದು ಪರಿಗಣಿಸಲಾಗಿದೆ. ಆ್ಯಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಬೆಳ್ಳುಳ್ಳಿ ಪ್ರತಿರೋಧಕ ಮಟ್ಟವನ್ನು ಹೆಚ್ಚಿಸಿ ಅಲರ್ಜಿಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿ ಅಥವಾ ದಿನಕ್ಕೆ ಎರಡು ಎಸಲು ಬೆಳ್ಳುಳ್ಳಿ ಸೇವಿಸಿ. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

ಅರಿಶಿನ
ಅರಿಶಿನದಲ್ಲಿರುವ ಕುರ್ಕುಮಿನ್ ಎನ್ನುವ ಅಂಶವು ಆ್ಯಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ಬರುವಂತಹ ಕೆಲವೊಂದು ಅಲರ್ಜಿಗಳನ್ನು ಶಮನ ಮಾಡಲು ಪ್ರತೀದಿನ ಒಂದು ಲೋಟ ಹಾಲಿಗೆ ಒಂದು ಚಮಚ ಅರಶಿನ ಸೇರಿಸಿ ಕುಡಿಯಿರಿ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಶುಂಠಿ
ಆ್ಯಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಮತ್ತೊಂದು ನೈಸರ್ಗಿಕ ಆಹಾರವೆಂದರೆ ಅದು ಶುಂಠಿ. ಇದು ಅಲರ್ಜಿ ವಿರೋಧಿಯಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಚಳಿಗಾಲದಲ್ಲಿ ಬರುವಂತಹ ಆಲರ್ಜಿ ನಿವಾರಣೆ ಮಾಡಲು ದಿನದಲ್ಲಿ ಎರಡು ಕಪ್ ಶುಂಠಿ ಚಹಾ ಕುಡಿಯಬೇಕು. ಆರೋಗ್ಯ ಟಿಪ್ಸ್: ಶುಂಠಿ ಸೋಸಿದ ನೀರು, ಆಯಸ್ಸು ನೂರು!

ಲಿಂಬೆ
ವಿಟಮಿನ್ ಸಿಯಿಂದ ಸಮೃದ್ಧವಾಗಿರುವಂತಹ ಲಿಂಬೆ ಹಣ್ಣಿನಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವಂತಹ ಶಕ್ತಿಯಿದೆ. ಒಂದು ಲಿಂಬೆಯ ರಸವನ್ನು ನೀರಿಗೆ ಹಾಕಿಕೊಂಡು ಅದನ್ನು ದಿನವಿಡಿ ಕುಡಿಯುತ್ತಾ ಇರಿ.

ಗೆಣಸು
ಪೊಟಾಶಿಯಂ, ವಿಟಮಿನ್ ಬಿ6 ಮತ್ತು ಬೆಟಾ ಕ್ಯಾರೋಟಿನ್ ಅಂಶವನ್ನು ಹೊಂದಿರುವಂತಹ ಗೆಣಸಿನಲ್ಲಿ ಪ್ರತಿರಕ್ಷಣ ಶಕ್ತಿಯನ್ನು ಬಲಗೊಳಿಸುತ್ತದೆ. ಇದು ಹಲವಾರು ರೀತಿಯ ಅಲರ್ಜಿಯನ್ನು ನಿವಾರಣೆ ಮಾಡುತ್ತದೆ.

ಗ್ರೀನ್ ಟೀ
ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಗ್ರೀನ್ ಟೀ ಪ್ರತಿರಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ನೆರವಾಗುತ್ತದೆ. ಚಳಿಗಾಲದಲ್ಲಿ ದೇಹವನ್ನು ಭಾದಿಸುವಂತಹ ಹಲವಾರು ರೀತಿಯ ಅಲರ್ಜಿ ಸಮಸ್ಯೆಯನ್ನು ಹೋಗಲಾಡಿಸಲು ದಿನದಲ್ಲಿ ಎರಡು ಕಪ್ ಗ್ರೀನ್ ಟೀ ಕುಡಿಯಿರಿ. ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!



Click it and Unblock the Notifications
