For Quick Alerts
ALLOW NOTIFICATIONS  
For Daily Alerts

ಕೊಬ್ಬನ್ನು ಹೆಚ್ಚಿಸುವ ಆಹಾರಗಳಿವು, ಕೊಂಚ ಜಾಗ್ರತೆವಹಿಸಿ

By Manu
|

ಯಾರೇ ಆಗಲಿ ಇಂದಿನ ದಿನಗಳಲ್ಲಿ ವೈದ್ಯರಲ್ಲಿಗೆ ಹೋಗಿ ಪರೀಕ್ಷೆ ಮಾಡಿದರೆ ಅವರಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿದೆ ಎನ್ನುವ ಸಾಮಾನ್ಯ ಉತ್ತರ ಬರುತ್ತದೆ. ಇಂದಿನ ಜೀವನಶೈಲಿ ಹಾಗೂ ಆಹಾರಕ್ರಮವೇ ಇದಕ್ಕೆ ಕಾರಣವಾಗಿದೆ. ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರು ಇಂದಿನ ದಿನಗಳಲ್ಲಿ ಎದುರಿಸುವಂತಹ ಸಮಸ್ಯೆಯೆಂದರೆ ಅದು ಕೊಬ್ಬಿನ ಸಮಸ್ಯೆ. ಸೊಂಟದ ಕೊಬ್ಬು ಬೆಳೆಯಲು ಹಲವಾರು ರೀತಿಯ ಕಾರಣಗಳಿವೆ.

ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು, ರಾತ್ರಿ ತಡವಾಗಿ ಊಟ ಮಾಡುವುದು, ವ್ಯಾಯಾಮ ಮಾಡದಿರುವುದು, ಕಾರ್ಬೋಹೈಡ್ರೆಡ್ ಗಳಿರುವ ತಂಪುಪಾನೀಯಗಳ ಸೇವನೆ, ಅಧಿಕ ಕ್ಯಾಲರಿಗಳಿರುವ ಆಹಾರ ಸೇವನೆ ಮತ್ತು ಸರಿಯಾಗಿ ನಿದ್ರೆ ಮಾಡದೆ ಇರುವುದು. ಸೊಂಟ ತುಂಬಾ ಸಪೂರವಾಗಿರಬೇಕೆಂದು ಪ್ರತಿಯೊಬ್ಬರು ಬಯಸಿದರೂ ಎಲ್ಲರಿಗೂ ಇಂತಹ ಅದೃಷ್ಟವಿರುವುದಿಲ್ಲ. ಸಪೂರಗಿನ ಸೊಂಟವನ್ನು ಪಡೆಯಲು ಬೇಕಾದಷ್ಟು ಕಠಿಣ ಪರಿಶ್ರಮ ಪಡೆಬೇಕಾಗುತ್ತದೆ.

ಇದಕ್ಕಾಗಿ ಸಾಕಷ್ಟು ನೀರು ಕುಡಿದರೆ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಬಿದ್ದು ಬೊಜ್ಜು ಬೆಳೆಯುವ ಸಾಧ್ಯತೆ ಕಡಿಮೆ. ಕೆಲವೊಂದು ಆಹಾರಗಳನ್ನು ಬಳಸಿಕೊಂಡು ಸೊಂಟದ ಕೊಬ್ಬನ್ನು ಕಡಿಮೆ ಮಾಡಬಹುದಾಗಿದೆ. ಬಾದಾಮಿ, ತರಕಾರಿ, ಮೊಟ್ಟೆ, ಕಡುಬಣ್ಣದ ಚಾಕಲೇಟ್ ಮತ್ತು ಹಣ್ಣುಗಳನ್ನು ನಿಯಮಿತವಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಬಯಸಿದ ಸೊಂಟವನ್ನು ಪಡೆಯಬಹುದು. ತೆಳ್ಳಗಿನ ಸೊಂಟವನ್ನು ಪಡೆಯಲು ವರ್ಜಿಸಬೇಕಾದ ಕೆಲವೊಂದು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನು ಅನುಸರಿಸಿ ನಿಮಗೆ ಬೇಕಾದ ಹಾಗೆ ಸೊಂಟದ ಗಾತ್ರ ಪಡೆಯಬಹುದು.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆ ಹಾಗೂ ಗಟ್ಟಿಗೊಳ್ಳಲು ನೆರವಾಗುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಇದರಲ್ಲಿನ ಕೆಟ್ಟ ಕೊಬ್ಬು ಕೊಲೆಸ್ಟ್ರಾಲ್ ನ್ನು ಉತ್ಪತ್ತಿ ಮಾಡಿ ಅದು ಬೊಜ್ಜು ಉಂಟು ಮಾಡುತ್ತದೆ. ಇದರಿಂದ ಹಾಲಿನ ಉತ್ಪನ್ನಗಳನ್ನು ಆದಷ್ಟು ಕಡಿಮೆ ಬಳಸಿ.

ಸೋಡಾ ಮತ್ತು ಕ್ಯಾಂಡಿ

ಸೋಡಾ ಮತ್ತು ಕ್ಯಾಂಡಿ

ಸೋಡಾ ಮತ್ತು ಕ್ಯಾಂಡಿಯಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಇಲ್ಲ. ಇದರ ಬದಲಿಗೆ ನೀರು ಹಾಗೂ ಹಣ್ಣುಗಳನ್ನು ಬಳಸಿ. ಸೋಡಾವು ದೇಹದ ತೂಕವನ್ನು ಹೆಚ್ಚಿಸುವಂತೆ ಮಾಡುವುದಲ್ಲದೆ, ಸಿಹಿ ತಿನ್ನಬೇಕೆಂಬ ಬಯಕೆಯನ್ನು ಹೆಚ್ಚಿಸುತ್ತದೆ.

ಆಲ್ಕೋಹಾಲ್ ಹೊಂದಿರುವ ಪಾನೀಯಗಳು

ಆಲ್ಕೋಹಾಲ್ ಹೊಂದಿರುವ ಪಾನೀಯಗಳು

ಸೊಂಟದಲ್ಲಿ ಬೊಜ್ಜು ಇಳಿಯದಂತೆ ಮಾಡಬೇಕೆಂದರೆ ನೀವು ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಸೇವನೆಯನ್ನು ತ್ಯಜಿಸಬೇಕು. ಇದು ಬೊಜ್ಜು ಉಂಟುಮಾಡಲು ಪ್ರಮುಖ ಕಾರಣವಾಗಿರುವುದರಿಂದ ಈಗಲೇ ಆಲ್ಕೋಹಾಲ್ ತ್ಯಜಿಸಿ.

ಕಾರ್ಬೋಹೈಡ್ರೆಡ್

ಕಾರ್ಬೋಹೈಡ್ರೆಡ್

ನೀವು ಅತಿಯಾಗಿ ಕಾರ್ಬೋಹೈಡ್ರೆಡ್ ಸೇವನೆ ಮಾಡಿದರೆ ಆಗ ಅದು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗಿ ಮುಂದಿನ ಸಲ ಉಪಯೋಗಕ್ಕೆ ಬರುತ್ತದೆ. ನೀವು ಕಾರ್ಬೋಹೈಡ್ರೆಡ್ ಬಳಸುವುದನ್ನು ಕಡಿಮೆ ಮಾಡಿದರೆ ಆಗ ದೇಹವು ಸೊಂಟದ ಸುತ್ತಲಿರುವ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಇದರಿಂದ ನಿಮ್ಮ ಸೊಂಟದ ಕೊಬ್ಬು ಕಡಿಮೆಯಾಗಿ ಸುಂದರವಾಗಿ ಕಾಣಿಸುತ್ತೀರಿ.

English summary

Foods That Cause Belly Fat

Belly fat is one of the common health issues that is faced by everyone, irrespective of the age group and gender these days. There are many reasons that can cause belly fat. Some of them include accumulation of gas in the abdomen, eating late at night, not exercising, drinking carbonated drinks, eating foods that are rich in calories and sleep deprivation.
Story first published: Wednesday, April 20, 2016, 10:06 [IST]
X
Desktop Bottom Promotion