For Quick Alerts
ALLOW NOTIFICATIONS  
For Daily Alerts

ಔಷಧೀಯ ಗುಣಗಳ ಆಗರ - ಬಿಳಿ ಬೆಳ್ಳುಳ್ಳಿ

By Manu
|

ಒಂದು ವೇಳೆ ಬೆಳ್ಳುಳ್ಳಿಯಲ್ಲಿ ವಾಸನೆ ಇಲ್ಲದೇ ಇದ್ದರೆ ಇದು ಚಿನ್ನದಂತೆ ಮಾರಾಟವಾಗುತ್ತಿತ್ತು ಎಂದು ಈಗಲೂ ಹಳ್ಳಿಗಳಲ್ಲಿ ಹೇಳುತ್ತಿರುತ್ತಾರೆ. ಏಕೆಂದರೆ ಬೆಳ್ಳುಳ್ಳಿಯ ಉತ್ತಮ ಗುಣಗಳು ಆರೋಗ್ಯದ ಮಟ್ಟಿಗೆ ಚಿನ್ನದಂತೆಯೇ ಕೆಲಸ ಮಾಡುತ್ತದೆ. Allium sativum ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಸಾಂಬಾರ ಪದಾರ್ಥ ಅತ್ಯುತ್ತಮವಾದ ಆಹಾರವಾಗಿದೆ. ಇದನ್ನು ಆಹಾರಕ್ಕಿಂತಲೂ ಹೆಚ್ಚಾಗಿ ಔಷಧದ ರೂಪದಲ್ಲಿ ಆಯುರ್ವೇದ ಬಳಸುತ್ತಾ ಬಂದಿದೆ. ಬೆಳ್ಳುಳ್ಳಿಯನ್ನು ಆಹಾರದ ಮೂಲಕ ಸೇವಿಸುವ ಮೂಲಕ ಆಹಾರದಲ್ಲಿ ರುಚಿಯ ಜೊತೆಗೇ ಆರೋಗ್ಯವೂ ವೃದ್ಧಿಯಾಗುತ್ತದೆ. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

ಬೆಳ್ಳುಳ್ಳಿಯನ್ನು ಹಸಿಯಾಗಿಯೂ ಸೇವಿಸಬಹುದು ಅಥವಾ ಹುರಿದು, ಅರೆದು, ಒಗ್ಗರಣೆಯೊಂದಿಗೆ ಸಾರು ಪಲ್ಯಗಳಲ್ಲೂ ಉಪಯೋಗಿಸಬಹುದು. ಇಂದು ಬೆಳ್ಳುಳ್ಳಿಯಿಂದ ಹೊರತೆಗೆದ ಎಣ್ಣೆ ಮತ್ತು ಮಾತ್ರೆಗಳ ರೂಪದಲ್ಲಿ ಲಭ್ಯವಿವೆ. ಬೆಳ್ಳುಳ್ಳಿಯಲ್ಲಿರುವ ಹಲವು ಆರೋಗ್ಯಕರ ಗುಣಗಳು ಹಲವು ವಿಧದ ಕಾಯಿಲೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಬೆಳ್ಳುಳ್ಳಿ ಜ್ಯೂಸ್ ಯಾವತ್ತಾದರೂ ಕುಡಿದಿದ್ದೀರಾ?

ವಿಶೇಷವಾಗಿ ಜೀರ್ಣಕ್ರಿಯೆ ಮತ್ತು ಬಾಯಿಯ ತೊಂದರೆಗಳಿಗೆ ಬೆಳ್ಳುಳ್ಳಿ ಉತ್ತಮ ಪರಿಹಾರವಾಗಿದೆ. ಇದರ ರುಚಿಯನ್ನು ಹೆಚ್ಚಿನವರು ಸಹಿಸದೇ ಇದ್ದರೂ ಹೃದಯಕ್ಕೆ ಇದು ಮಾಡುವ ಉಪಕಾರವನ್ನು ಮಾತ್ರ ಮೆಚ್ಚಲೇ ಬೇಕು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ..

ಬೆಳ್ಳುಳ್ಳಿಯ ಆರೋಗ್ಯಕಾರಿ ಪ್ರಯೋಜನಗಳು

ಹಲವು ಖನಿಜಗಳ ಗಣಿಯಾಗಿದೆ

ಹಲವು ಖನಿಜಗಳ ಗಣಿಯಾಗಿದೆ

ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ಸೆಲೆನಿಯಂ, ವಿಟಮಿನ್ ಸಿ, ವಿಟಮಿನ್ B6 ಹಾಗೂ ಕರಗುವ ನಾರು ಇದೆ. ಇದರ ಹೊರತಾಗಿ ಚಿಕ್ಕ ಪ್ರಮಾಣದಲ್ಲಿ ಪೊಟ್ಯಾಶಿಯಂ, ಗಂಧಕ, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ ಮತ್ತು ವಿಟಮಿನ್ B1 ಇವೆ. ಇವೆಲ್ಲವೂ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಕೆಲವು ವೈಜ್ಞಾನಿಕ ಸಮೀಕ್ಷೆಗಳ ಮೂಲಕ ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸಿದ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ವಿಶೇಷವಾಗಿ ಶೀತ ಮತ್ತು ಇದರ ಇತರ ಪರಿಣಾಮಗಳನ್ನು 63%ರಷ್ಟು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಚೈತನ್ಯ ಹೆಚ್ಚಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಸತತವಾಗಿ ಶೀತ ಕೆಮ್ಮು ಜ್ವರ ಎಂದು ನಿತ್ಯವೂ ಕಾಯಿಲೆ ಬೀಳುವ ವ್ಯಕ್ತಿಗಳಿಗೆ ಊಟದಲ್ಲಿ ಬೆಳ್ಳುಳ್ಳಿ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಬೆಳ್ಳುಳ್ಳಿಯಲ್ಲಿ ಪಾಲಿ ಸಲ್ಫೈಡ್ ಎಂಬ ಪೋಷಕಾಂಶವಿದೆ. ನಮ್ಮ ರಕ್ತದ ಕೆಂಪು ರಕ್ತಕಣಗಳು ಈ ಪೋಷಕಾಂಶಗಳನ್ನು ಹೈಡ್ರೋಜನ್ ಸಲ್ಫೈಡ್ ಆಗಿ ಪರಿವರ್ತಿಸುತ್ತವೆ. ಇದು ನರಗಳು ಪೆಡಸಾಗಿದ್ದರೆ ಸಡಿಲಗೊಳಿಸಲು ನೆರವಾಗುತ್ತವೆ. ಪರಿಣಾಮವಾಗಿ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಿಕೊಟ್ಟರೆ ಸಾಕಾಗುತ್ತದೆ. ಇದು ಅಧಿಕ ರಕ್ತದ ಒತ್ತಡದ ಸಮಸ್ಯೆ ಇರುವ ವ್ಯಕ್ತಿಗಳಿಗೆ ಒಂದು ವರದಾನವಾಗಿದೆ.

ತೂಕ ನಿಯಂತ್ರಿಸಲು ನೆರವಾಗುತ್ತದೆ

ತೂಕ ನಿಯಂತ್ರಿಸಲು ನೆರವಾಗುತ್ತದೆ

ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸುವ ಮೂಲಕ ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಬೆಳ್ಳುಳ್ಳಿ ಅಗತ್ಯಕ್ಕಿಂತ ಹೆಚ್ಚು ಸೇವನೆ ಮತ್ತು ಹೆಚ್ಚು ಹಸಿವಾಗುವುದನ್ನು ತಡೆಯುವ ಮೂಲಕ ಮೆದುಳಿಗೆ ಹೆಚ್ಚು ತಿನ್ನಲು ಪ್ರೇರಣೆ ಸಿಗದೇ ತನ್ಮೂಲಕ ಕಡಿಮೆ ಆಹಾರ ಸೇವನೆಗೆ ಕಾರಣವಾಗುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ಅಜೋವೀನ್ (ajoene) ಎಂಬ ಪೋಷಕಾಂಶವಿದೆ. ಈ ಪೋಷಕಾಂಶ ದೇಹದೊಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಕ್ಷಮತೆ ಹೊಂದಿದೆ. ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸುತ್ತ ಬಂದರೆ ದೇಹದಲ್ಲಿ ಉತ್ತಮ ಪ್ರಮಾಣದ ರಕ್ಷಣೆ ದೊರೆಕುತ್ತದೆ. ವಿಶೇಷವಾಗಿ ಶಸ್ತ್ರಚಿಕಿತ್ಸೆಯ ಬಳಿಕ ದೇಹದೊಳಗೆ ರಕ್ತ ಹೆಪ್ಪುಗಟ್ಟುವ, ಆ ಮೂಲಕ ಹೃದಯಾಘಾತ ಮತ್ತು ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

ಹೃದಯವನ್ನು ರಕ್ಷಿಸುತ್ತದೆ

ಹೃದಯವನ್ನು ರಕ್ಷಿಸುತ್ತದೆ

ಪ್ರತಿ ಊಟದಲ್ಲಿ ಕೆಲವು ಎಸಳು ಬೆಳ್ಳುಳ್ಳೀ ಸೇವಿಸುವ ಮೂಲಕ ರಕ್ತನಾಳಗಳು ಸಡಿಲಗೊಳ್ಳುತ್ತವೆ. ಅಲ್ಲದೇ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ. ಇವೆರಡೂ ಹೃದಯದ ಆರೋಗ್ಯ ಹೆಚ್ಚಿಸಲು ನೆರವಾಗುತ್ತವೆ. ರಕ್ತಹೆಪ್ಪುಗಟ್ಟುವುದರಿಂದ ತಡೆಯುವ ಅಜೋವೀನ್, ರಕ್ತನಾಳದ ಪೆಡಸನ್ನು ಕಡಿಮೆಗೊಳಿಸುವ ಪಾಲಿಸಲ್ಫೈಡ್ ಗಳ ಮೂಲ ಒಟ್ಟಾರೆಯಾಗಿ ಹೃದಯ ಹೆಚ್ಚು ಆರೋಗ್ಯ ಮತ್ತು ರಕ್ಷಣೆಯನ್ನು ಪಡೆಯುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ

ಬೆಳ್ಳುಳ್ಳಿಯಲ್ಲಿ ಆಲೈಸಿನ್ (Allicin) ಎಂಬ ಇನ್ನೊಂದು ಪೋಷಕಾಂಶವಿದ್ದು ಇದು ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ನಿಯಂತ್ರಿಸುವ ಗುಣ ಹೊಂದಿದೆ. ಇದು ಒಟ್ಟು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಪ್ರಭಾವ ಬೀರುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ನ ಪ್ರಭಾವವನ್ನು ಕಡಿಮೆಗೊಳಿಸುತ್ತದೆ.

English summary

Facts Remedies and Health Benefits of Garlic

Read on to know more about some of the excellent health benefits of garlic. Though you dislike the taste, make sure to include it in your meals often and say goodbye to heart disease.
X
Desktop Bottom Promotion