For Quick Alerts
ALLOW NOTIFICATIONS  
For Daily Alerts

ಗೊರಕೆ ಕಿರಿಕಿರಿಯೇ? ಇಲ್ಲಿದೆ ಪವರ್ ಫುಲ್ ಮನೆಮದ್ದು

By Manu
|

ಗೊರಕೆಯ ತೊಂದರೆ ಇಂದು ನಿನ್ನೆಯದಲ್ಲ, ಅನಾದಿಕಾಲದಿಂದಲೂ ಇದೆ. ಕುಂಭಕರ್ಣನ ಗೊರಕೆ ಮೈಲುಗಟ್ಟಲೆ ದೂರ ಕೇಳಿಸುತ್ತಿತ್ತು ಎಂದು ರಾಮಾಯಣದಲ್ಲಿಯೇ ಹೇಳಲಾಗಿದೆ. ಒಬ್ಬರ ಸುಖನಿದ್ದೆಗೆ ಕಾರಣವಾಗುವ ಗೊರಕೆ ಇನ್ನೊಬ್ಬರ ನಿದ್ದೆಯನ್ನು ಕೆಡಿಸಬಲ್ಲುದು. ಅಷ್ಟೇ ಏಕೆ, ಗೊರಕೆಯನ್ನೇ ನೆಪವಾಗಿಸಿ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೇಳಿಕೊಂಡು ಬರುವ ಮಹಿಳೆಯರ ಸಂಖ್ಯೆಯೂ ದೊಡ್ಡದೇ..!

ವೈದ್ಯಕೀಯ ಸಮೀಕ್ಷೆಯ ಪ್ರಕಾರ ಶೇಖಡಾ ಐವತ್ತರಷ್ಟು ವಯಸ್ಕರು ಗೊರಕೆ ಹೊಡೆಯುತ್ತಾರೆ. ಆದರೆ ಇದರ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ. ಆದರೆ ಕೆಲವರ ಗೊರಕೆಯಂತೂ ಬಸ್ಸಿನ ಇಂಜಿನ್ನಿನ ಶಬ್ಧಕ್ಕಿಂತಲೂ ಭೀಕರವಾಗಿದ್ದು, ಪಕ್ಕದಲ್ಲಿ ಮಲಗಿದ್ದವರಿಗೂ ಇದರಿಂದ ಕಿರಿಕಿರಿ ಬಂದು ಬಿಡುತ್ತದೆ. ಸಾಮಾನ್ಯವಾಗಿ ನಮ್ಮ ಮೂಗಿನ ಹಿಂದೆ ಮತ್ತು ಗಂಟಲ ಮೇಲ್ಭಾಗದ ರಚನೆಗಳು ತೆಳುವಾದ ಪಟ್ಟಿಯಂತಿರುತ್ತವೆ. ಎಚ್ಚರಿದ್ದಷ್ಟೂ ಹೊತ್ತು ಇವು ಸೆಳೆತದಲ್ಲಿದ್ದು ವಾಯುಮಾರ್ಗವನ್ನು ಸರಾಗವಾಗಿರಿಸಲು ನೆರವಾಗುತ್ತವೆ. ಗೊರಕೆ ಹೊಡೆಯೋದನ್ನ ನಿಲ್ಲಿಸೋದು ಹೇಗೆ?

ಆದರೆ ನಿದ್ದೆ ಬಂದ ಬಳಿಕ ಈ ರಚನೆಗಳು ನಿಯಂತ್ರಣಗಳನ್ನು ಕಳೆದುಕೊಂಡು ಸಡಿಲವಾಗುತ್ತದೆ. ಉಸಿರಾಟದ ಗಾಳಿ ಈ ಪಟ್ಟಿಗಳನ್ನು ಹಾದು ಹೋಗುವಾಗ ಸಡಿಲವಾಗಿದ್ದ ಇವು ಕಂಪಿಸುತ್ತವೆ. ಇದೇ ಗೊರಕೆ! ಹಾಗಾದರೆ ಈ ಕರ್ಕಶ ಧ್ವನಿಯ ಗೊರಕೆಯನ್ನು ನಿಯಂತ್ರಿಸವುದು ಹೇಗಪ್ಪಾ ಎಂದು ಆಲೋಚಿಸುತ್ತಿರುವಿರಾ? ಚಿಂತಿಸದಿರಿ, ಅದಕ್ಕೆಂದೇ ನಾವು ನೀಡಿರುವ ಕೆಲವೊಂದು ಸೂಕ್ತ ಮನೆಮದ್ದುಗಳನ್ನು ಪ್ರಯತ್ನಿಸಿ, ಸೂಕ್ತ ಫಲಿತಾಂಶ ಪಡೆಯಿರಿ...

ಅರಿಶಿನ ಹಾಲು

ಅರಿಶಿನ ಹಾಲು

ಅರಿಶಿನದಲ್ಲಿ ಪ್ರತಿಜೀವಕ ಗುಣಗಳಿದ್ದು ದೇಹಕ್ಕೆ ಇತರ ರೀತಿಯಲ್ಲಿ ಉಪಕಾರಿಯಾಗಿರುವಂತೆಯೇ ಗೊರಕೆಗೂ ಉತ್ತಮವಾಗಿದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ, ಪ್ರತಿ ದಿನ ನೀವು ಮಲಗುವ ಮುನ್ನ ಇದಕ್ಕಾಗಿ ಒಂದು ಲೋಟ ಬಿಸಿಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನ ಕದಡಿ ಕುಡಿದು ಮಲಗಿ. ನಿಧಾನವಾಗಿ ಮೂಗು ಕಟ್ಟಿಕೊಂಡಿದ್ದುದು ತೆರೆದಂತೆ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಒಂದು ವೇಳೆ ಬೆಳ್ಳುಳ್ಳಿಯಲ್ಲಿ ವಾಸನೆ ಇಲ್ಲದೇ ಇದ್ದರೆ ಇದು ಚಿನ್ನದಂತೆ ಮಾರಾಟವಾಗುತ್ತಿತ್ತು ಎಂದು ಈಗಲೂ ಹಳ್ಳಿಗಳಲ್ಲಿ ಹೇಳುತ್ತಿರುತ್ತಾರೆ.ಏಕೆಂದರೆ ಬೆಳ್ಳುಳ್ಳಿಯ ಉತ್ತಮ ಗುಣಗಳು ಆರೋಗ್ಯದ ಮಟ್ಟಿಗೆ ಚಿನ್ನದಂತೆಯೇ ಕೆಲಸ ಮಾಡುತ್ತದೆ. Allium sativum ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಸಾಂಬಾರ ಪದಾರ್ಥ ಅತ್ಯುತ್ತಮವಾದ ಆಹಾರವಾಗಿದೆ. ಹಾಗಾಗಿ ದಿನನಿತ್ಯ ಹಸಿಬೆಳ್ಳುಳ್ಳಿಗಳನ್ನು ರಾತ್ರಿಯ ಊಟದ ಅನ್ನದೊಡನೆ ಕಲಸಿ ಸೇವಿಸಿದರೆ, ಕಾಲಕ್ರಮೇಣ ಗೊರಕೆಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ದಿನನಿತ್ಯದ ಅಡುಗೆಗೆ ಮತ್ತು ಚಪಾತಿಗಳಿಗೆ ಆಲಿವ್ ಎಣ್ಣೆಗಳನ್ನೇ ಬಳಸಿ. ಅಲ್ಲದೆ ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಸಮಪ್ರಮಾಣದಲ್ಲಿ ಆಲಿವ್ ಎಣ್ಣೆ ಮತ್ತು ಜೇನುತುಪ್ಪವನ್ನು ಸೇರಿಸಿ ದಿನದ ಅಂತಿಮ ಆಹಾರವಾಗಿ ಸೇವಿಸಿ ಮಲಗಿ. ಎರಡು ಅಥವಾ ಮೂರು ತೊಟ್ಟು ಆಲಿವ್ ಎಣ್ಣೆಯನ್ನು ನೇರವಾಗಿ ನಾಲಿಗೆಯ ಹಿಂಭಾಗಕ್ಕೆ ಹಾಕಿ ಮಲಗುವುದರಿಂದಲೂ ಉತ್ತಮ ಪರಿಹಾರ ಕಂಡುಬರುತ್ತದೆ.

ಏಲಕ್ಕಿ

ಏಲಕ್ಕಿ

ಏಲಕ್ಕಿಯ ಪರಿಮಳವನ್ನು ಹೀರುವುದರಿಂದ ಮೂಗಿನ ಹೊಳ್ಳೆ ಕಟ್ಟಿಕೊಂಡಿರುವುದು, ಉಸಿರಾಟವನ್ನು ಸರಾಗಗೊಳಿಸುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ.

ಜೇನು

ಜೇನು

ಜೇನು ಗಂಟಲ ಒಳಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದು ಗೊರಕೆಯನ್ನು ಕಡಿಮೆಯಾಗಿಸಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಜೇನನ್ನು ಸೇರಿಸಿ ಮಲಗುವ ಮುನ್ನ ಕುಡಿಯಿರಿ.

ಮದ್ಯಪಾನದಿಂದ ದೂರವಿರಿ

ಮದ್ಯಪಾನದಿಂದ ದೂರವಿರಿ

ಈ ಎಲ್ಲಾ ಆಹಾರ ಕ್ರಮದ ಬದಲಾವಣೆಗಳು ನೀವು ಮದ್ಯಪಾನಿಯಾಗಿದ್ದಲ್ಲಿ ಯಾವುದೇ ಪರಿಣಾಮ ತೋರದೇ ಇರಬಹುದು.ಮದ್ಯಪಾನದಿಂದಾಗಿ ಕೇಂದ್ರೀಯ ನರ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತವೆ ಇದರ ಕಾರಣದಿಂದ ಗೊರಕೆ ಬರುತ್ತದೆ. ಆಹಾರ ಕ್ರಮದ ಬದಲಾವಣೆಯ ಜೊತೆಗೆ ಇಂತಹ ನಿಮ್ಮ ಅಭ್ಯಾಸಗಳನ್ನು ಬಿಡುವತ್ತಲೂ ಗಮನ ಹರಿಸಿ.

English summary

Easy Snoring Remedies: How to Stop Snoring

Just about everyone snores occasionally, but if snoring happens frequently it can affect the quantity and quality of your sleep and that of your family members and roommates. Have a look of such kind of home remedies for snoring
X
Desktop Bottom Promotion