Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಕಣ್ತುಂಬ ನಿದ್ದೆಗಾಗಿ ಇಲ್ಲಿದೆ ನೋಡಿ ಪರ್ಫೆಕ್ಟ್ ಟೀ...
ರಾತ್ರಿ ನಿದ್ದೆಯ ಸಮಯಕ್ಕೂ ಮುನ್ನ ಟೀ ಕುಡಿಯಬೇಡಿ, ಇದರಿಂದ ನಿದ್ದೆ ಬರುವುದಿಲ್ಲ ಎಂದು ವೈದ್ಯರು ತಿಳಿಸುತ್ತಾರೆ. ಟೀ ಯಲ್ಲಿರುವ ಕೆಫೀನ್ ನಿದ್ದೆ ಬಾರದಿರಲು ಕಾರಣವಾಗಿದೆ. ಆದರೆ ಟೀ ಕುಡಿಯದೆಯೂ ನಿದ್ದೆ ಬರದೇ ಇರುವ, ಬಂದರೂ ನಡುರಾತ್ರಿಯಲ್ಲಿ ಎಚ್ಚರಾಗುವ ತೊಂದರೆ ಇರುವ ಲಕ್ಷಾಂತರ ಜನರಿದ್ದಾರೆ. ಸುಖನಿದ್ದೆ ಪಡೆಯಲು ಕಷ್ಟಪಡುವವ ಸಂಖ್ಯೆ ದೊಡ್ಡದು. ಕೆಲವರು ನಿದ್ದೆ ಮಾತ್ರೆಗಳಿಗೆ ಶರಣಾಗುತ್ತಾರೆ. ನಿದ್ದೆ ಬರದೇ ಇರಲಿಕ್ಕೆ ಮಾನಸಿಕ ಹಾಗೂ ದೈಹಿಕವಾದ ಕಾರಣಗಳಿವೆ.
ದೈಹಿಕ ಕಾರಣಗಳಿದ್ದರೆ ವೈದ್ಯರು ನೀಡುವ ಔಷಧಿಗಳಿಂದ ಶೀಘ್ರವೇ ತೊಂದರೆ ನಿವಾರಣೆಯಾಗುತ್ತದೆ. ಆದರೆ ಮಾನಸಿಕ ಕಾರಣಗಳಿದ್ದರೆ ನಿದ್ದೆ ಬರಲು ಬಹಳವೇ ಕಷ್ಟಪಡಬೇಕಾಗುತ್ತದೆ. ಇವೆರಡೂ ಕಾರಣಗಳಿಲ್ಲದಿದ್ದರೆ ದೇಹದ ಯಾವುದೋ ಒಂದು ಆರೋಗ್ಯಸಂಬಂಧಿ ತೊಂದರೆ ಅಥವಾ ಅಂಗದ ವೈಫಲ್ಯ ನಿದ್ದೆ ಬಾರದಿರಲು ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ನಿದ್ದೆ ಇಲ್ಲದೇ ಇದ್ದರೆ ಅದು ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಆದರೆ ಈ ಸಮಸ್ಯೆ ಪರಿಹಾರವಾಗದ ಸಮಸ್ಯೆಯೇ ಅಲ್ಲ.

ನಿದ್ದೆ ಶೀಘ್ರವೇ ಬರಲು ಒಂದು ಸುಲಭ ಉಪಾಯವಿದೆ. ಅದೇ ಕೆಳಗಿನ ಮಾಹಿತಿಯ ಮೂಲಕ ವಿವರಿಸಲಾಗಿರುವ ಟೀ ಕುಡಿಯುವುದು. ಇದೊಂದು ಸಾಂಪ್ರಾದಾಯಿಕ ವಿಧಾನವಾಗಿದ್ದು ನೂರಾರು ವರ್ಷಗಳಿಂದ ನಿದ್ದೆಗಾಗಿ ಬಳಸಲ್ಪಡುತ್ತಾ ಬಂದಿದೆ. ಕ್ಯಾಮೋಮೈಲ್ ಮತ್ತು ಲ್ಯಾವೆಂಡರ್ ಹೂವಿನ ಎಣ್ಣೆ ಇದರ ಮುಖ್ಯ ಪರಿಕರಗಳು.
ವಿಶ್ವದಾದ್ಯಂತ ಕೋಟ್ಯಂತರ ಜನ ರಾತ್ರಿ ಮಲಗುವ ಮುನ್ನ ಈ ಟೀ ಕುಡಿದು ಸುಖನಿದ್ದೆ ಪಡೆಯುತ್ತಾರೆ. ಈ ಟೀ ಮಾನಸಿಕ ಒತ್ತಡ ಕಡಿಮೆಗೊಳಿಸಲು ಒಂದು ಅತ್ಯುತ್ತಮ ಪೇಯವಾಗಿದೆ. ನಿದ್ದೆ ಬರದೇ ಇರುವವರಿಗೆ ಔಷಧಿಯ ರೂಪದಲ್ಲಿ ದಶಕಗಳಿಂದ ನೀಡುತ್ತಾ ಬರಲಾಗಿದೆ. ನಿದ್ದೆಗೆ ಇತರ ಟೀ ಗಳು ಲಭ್ಯವಿದ್ದರೂ ಕ್ಯಾಮೋಮೈಲ್ ಮತ್ತು ಲ್ಯಾವೆಂಡರ್ ನಷ್ಟು ಪರಿಣಾಮಕಾರಿಯಾದ ನಿದ್ರಾಜನಕಗಳು ಬೇರೊಂದಿಲ್ಲ. ಇಂದು ಬೋಲ್ಡ್ ಸ್ಕೈ ತಂಡ ಈ ಅದ್ಭುತ ಟೀ ತಯಾರಿಸುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡಲು ಹರ್ಷಿಸುತ್ತದೆ:
ಅಗತ್ಯವಿರುವ ಸಾಮಾಗ್ರಿಗಳು:
1 ಚಿಕ್ಕಚಮಚ ಕ್ಯಾಮೋಮೈಲ್ ಹೂವಿನ ಮೊಗ್ಗುಗಳು
1 ಚಿಕ್ಕಚಮಚ ಲ್ಯಾವೆಂಡರ್ ಹೂವಿನ ಮೊಗ್ಗುಗಳು
ಒಂದು ಕಪ್ ಬಿಸಿನೀರು
1 ಚಿಕ್ಕಚಮಚ ಜೇನು (ಅಗತ್ಯವೆನಿಸಿದರೆ ಮಾತ್ರ)
ತಯಾರಿಕಾ ವಿಧಾನ:
*ಒಂದು ಕಪ್‌ನಲ್ಲಿ ಎರಡೂ ಹೂವಿನ ಮೊಗ್ಗುಗಳನ್ನು ಇರಿಸಿ ಇದಕ್ಕೆ ಬಿಸಿನೀರನ್ನು ಹಾಕಿ.
*ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಹಾಗೇ ಇರಲಿ. ಬಳಿಕ ಟೀ ಸೋಸುವ ಸೋಸುಕದಿಂದ ನೀರನ್ನು ಸೋಸಿ ಇನ್ನೊಂದು ಲೋಟದಲ್ಲಿ ನೀರನ್ನು ಸಂಗ್ರಹಿಸಿ.
*ಈ ನೀರಿಗೆ ಜೇನು ಸೇರಿಸಿ ಕಲಕಿ.
*ಉತ್ತಮ ಪರಿಣಾಮಕ್ಕಾಗಿ ಮಲಗುವ ಮುನ್ನ ಕುಡಿಯಿರಿ. ಅಗತ್ಯವೆನಿಸಿದರೆ ಕೊಂಚವೇ ಬಿಸಿ ಮಾಡಬಹುದು ಆದರೆ ಕುದಿಸಬಾರದು.
ಈ ಟೀ ಕುಡಿದು ಮಲಗುವ ಮೂಲಕ ನರವ್ಯವಸ್ಥೆಯನ್ನು ನಿರಾಳಗೊಳಿಸಿ ದೇಹ ಮತ್ತು ಮನಸ್ಸು ಯಾವುದೇ ಒತ್ತಡವಿಲ್ಲದೇ ನಿದ್ದೆಗೆ ಜಾರುವಂತೆ ನೋಡಿಕೊಳ್ಳುತ್ತದೆ. ಮಗುವಿನಂತೆ ಮುಂದಿನ ಏಳೆಂಟು ಗಂಟೆ ಸುಖನಿದ್ದೆ ಪಡೆಯಲು ಇದರಿಂದ ಸಾಧ್ಯವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

