Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆ ಔಷಧ- ಒಂದೆರಡು ದಿನಗಳಲ್ಲಿಯೇ 'ವೈರಲ್ ಜ್ವರ' ನಿಯಂತ್ರಣಕ್ಕೆ....
ಅಡುಗೆ ಮನೆಯಲ್ಲಿಯೇ ಲಭ್ಯವಿರುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ವೈರಲ್ ಜ್ವರನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಿಸಬಹುದು. ವೈರಲ್ ಜ್ವರನ್ನು ನಿವಾರಿಸುವಂತಹ ಕೆಲವೊಂದು ಮನೆಮದ್ದನ್ನು ಇಲ್ಲಿ ನೀಡಲಾಗಿದೆ... ಮುಂದೆ ಓದಿ..
ತಾಪಮಾನ ಬದಲಾಗುತ್ತಿರುವ ಕಾರಣದಿಂದ ಸೋಂಕುಗಳು ಆಗಾಗ ದೇಹವನ್ನು ಭಾದಿಸುವ ಸಾಧ್ಯತೆಗಳು ಹೆಚ್ಚಾಗುತ್ತಾ ಇದೆ. ಇದರಿಂದ ಜ್ವರ, ಶೀತ ಹಾಗೂ ಕೆಮ್ಮು ಕಾಡುವುದು ಸಹಜ. ವೈರಲ್ ಜ್ವರದಿಂದ ಬಳಲುವುದು ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯವಾಗುತ್ತಿದೆ.
ಯಾವುದೇ ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವ ಮೊದಲು ನೀವು ಮನೆಮದ್ದನ್ನು ಬಳಸಿಕೊಂಡು ವೈರಲ್ ಜ್ವರದಿಂದ ಮುಕ್ತಿಯನ್ನು ಪಡೆದರೆ ಒಳ್ಳೆಯದು. ನಿಮಗೆ ತುಂಬಾ ಸುಲಭವಾಗಿ ಸಿಗುವಂತಹ ಅದರಲ್ಲೂ ಅಡುಗೆ ಮನೆಯಲ್ಲಿಯೇ ಲಭ್ಯವಿರುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ವೈರಲ್ ಜ್ವರನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಿಸಬಹುದು. ಜ್ವರ ಬಂದ್ರೆ ಮಾತ್ರೆ ಬೇಕಿಲ್ಲ, ಸರಿಯಾದ 'ಆಹಾರ ಪಥ್ಯವೇ' ಸಾಕು
ವೈರಲ್ ಜ್ವರನ್ನು ನಿವಾರಿಸುವಂತಹ ಕೆಲವೊಂದು ಮನೆಮದ್ದನ್ನು ಇಲ್ಲಿ ನೀಡಲಾಗಿದೆ, ಮುಂದೆ ಓದಿ....

ತುಳಸಿ ಎಲೆಗಳು
ಒಂದು ಲೀಟರ್ ನೀರಿನಲ್ಲಿ ಸುಮಾರು 20 ತಾಜಾ ಹಾಗೂ ಶುದ್ಧ ತುಳಸಿ ಎಲೆಗಳನ್ನು ಹಾಕಿಕೊಂಡು ಕುದಿಸಿ. ಇದಕ್ಕೆ ಅರ್ಧ ಚಮಚ ಲವಂಗ ಹುಡಿ ಹಾಕಿ. ನೀರು ಅರ್ಧದಷ್ಟಕ್ಕೆ ಬರುವ ತನಕ ಸರಿಯಾಗಿ ಕುದಿಸಿ. ಪ್ರತೀ ಎರಡು ಗಂಟೆಗೊಮ್ಮೆ ಇದನ್ನು ಕುಡಿಯಿರಿ. ಆರೋಗ್ಯ ರಕ್ಷಕ- 'ತುಳಸಿ ಎಲೆಯ' ಜಬರ್ದಸ್ತ್ ಪವರ್

ಮೆಂತೆ ಕಾಳುಗಳು
ರಾತ್ರಿ ಅರ್ಧ ಕಪ್ ನೀರಿನಲ್ಲಿ ಒಂದು ಚಮಚ ಮೆಂತ್ಯೆ ಕಾಳುಗಳನ್ನು ನೆನೆಯಲು ಹಾಕಿ. ಬೆಳಿಗ್ಗೆ ಈ ನೀರನ್ನು ಗಾಳಿಸಿಕೊಂಡು ಆಗಾಗ ಕುಡಿಯುತ್ತಾ ಇದ್ದರೆ ವೈರಲ್ ಜ್ವರ ದೂರ ಮಾಡಬಹುದು. ಮೆಂತೆ ಕಾಳುಗಳು, ಲಿಂಬೆರಸ ಮತ್ತು ಜೇನುತುಪ್ಪನ್ನು ಹಾಕಿಕೊಂಡು ಬೆಳಿಗ್ಗೆ ಕುಡಿದರೆ ಒಳ್ಳೆಯದು.

ಒಣ ಶುಂಠಿ ಮಿಶ್ರಣ
ಒಂದು ಕಪ್ ನೀರಿಗೆ ಎರಡು ಮಧ್ಯಮ ಗಾತ್ರದ ಶುಂಠಿ ತುಂಡುಗಳನ್ನು ಹಾಕಿಕೊಳ್ಳಿ ಮತ್ತು ಇದನ್ನು ಬಿಸಿ ಮಾಡಿ. ಇನ್ನೊಂದು ವಿಧಾನವೆಂದರೆ ಒಣಶುಂಠಿ, ಅರಿಶಿನ(ಒಂದು ಚಮಚ), ಕಾಳುಮೆಣಸಿನ ಹುಡಿ(ಒಂದು ಚಮಚ) ಸ್ವಲ್ಪ ಸಕ್ಕರೆ ಹಾಕಿ ಒಂದು ಕಪ್ ನೀರಿನಲ್ಲಿ ಕುದಿಸಿ.

ಒಣ ಶುಂಠಿ ಮಿಶ್ರಣ
ನೀರು ಅರ್ಧಕ್ಕೆ ಬರುವ ತನಕ ಇದನ್ನು ಕುದಿಸಿ. ವೈರಲ್ ಜ್ವರದಿಂದ ಮುಕ್ತಿ ಪಡೆಯಲು ದಿನದಲ್ಲಿ ನಾಲ್ಕು ಸಲ ಇದನ್ನು ಕುಡಿಯಿರಿ.ಆರೋಗ್ಯ ಟಿಪ್ಸ್: ಶುಂಠಿ ಸೋಸಿದ ನೀರು, ಆಯಸ್ಸು ನೂರು!

ಕೊತ್ತಂಬರಿ ಚಹಾ
ಒಂದು ಲೋಟ ನೀರಿಗೆ ಒಂದು ಚಮಚ ಕೊತ್ತಂಬರಿ ಕಾಳುಗಳನ್ನು ಹಾಕಬೇಕು. ಇದನ್ನು ಬಿಸಿ ಮಾಡಿದ ಬಳಿಕ ಗಾಳಿಸಿಕೊಂಡು ತಣ್ಣಗಾಗಲು ಬಿಡಿ. ಇದಕ್ಕೆ ಸ್ವಲ್ಪ ಹಾಲು ಹಾಗೂ ಸಕ್ಕರೆ ಹಾಕಿಕೊಳ್ಳಿ. ವೈರಲ್ ಜ್ವರದ ಲಕ್ಷಣದಿಂದ ಪಾರಾಗಲು ಈ ಚಹಾ ಕುಡಿಯಿರಿ.



Click it and Unblock the Notifications
