For Quick Alerts
ALLOW NOTIFICATIONS  
For Daily Alerts

ವೈರಲ್ ಜ್ವರ: ಮಾತ್ರೆಯ ಬದಲು, ಮನೆಮದ್ದಿಗೆ ಆದ್ಯತೆ ನೀಡಿ

By Super
|

ಜ್ವರ ವಾಸ್ತವವಾಗಿ ಒಂದು ರೋಗವಲ್ಲ, ನಮ್ಮ ರೋಗ ನಿರೋಧಕ ವ್ಯವಸ್ಥೆ ತೋರುವ ಒಂದು ಪ್ರತಿಕ್ರಿಯೆ. ದೇಹದ ಯಾವುದಾದರೋ ಹೊಸ ವೈರಸ್ಸು ಅಥವಾ ಬ್ಯಾಕ್ಟೀರಿಯಾಗಳ ಆಕ್ರಮಣಕ್ಕೆ ತುತ್ತಾದಾಗ ದೇಹದ ಉಷ್ಣತೆಯನ್ನು ಹೆಚ್ಚಿಸಿ ಈ ಕ್ರಿಮಿಗಳನ್ನು ಎದುರಿಸುವ ಬಗೆಯೇ ಜ್ವರ. ಕೆಲವು ಜ್ವರಗಳು ಮಾರಕವಾಗಿವೆ. ಮಲೇರಿಯಾ, ಡೆಂಗಿ ಮೊದಲಾದ ಜ್ವರಗಳು ಆರೈಕೆಯಿಲ್ಲದಿದ್ದರೆ ಸಾವಿಗೂ ಕಾರಣವಾಗುತ್ತವೆ.

ಅದರ ನಂತರ ಮಾರಕವಾದ ಜ್ವರವೆಂದರೆ ವೈರಲ್ ಜ್ವರ. ಹೆಸರೇ ತಿಳಿಸುವಂತೆ ಯಾವುದಾದರೂ ವೈರಸ್ಸು ದೇಹವನ್ನು ಆಕ್ರಮಿಸಿಕೊಂಡಾಗ ಬರುವ ಜ್ವರದ ಲಕ್ಷಣಗಳನ್ನು ಮೊದಲು ವೈದ್ಯರು ಗಮನಿಸುತ್ತಾರೆ. ಅತೀವ ಬಿಸಿ, ನಡುಕ, ಸುಸ್ತು, ಕೆಮ್ಮು, ಗಂಟಲಲ್ಲಿ ಕೆರೆತ ಮೊದಲಾದವುಗಳು ಈ ಜ್ವರದ ಲಕ್ಷಣಗಳಾಗಿವೆ. ತಕ್ಷಣ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ ವೈರಸ್ಸುಗಳು ದೇಹದ ಒಳಗಣ ಸೂಕ್ಷ್ಮ ಅಂಗಗಳಿಗೆ ಹಾನಿಯುಂಟುಮಾಡಬಹುದು. ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?

ಇದುವರೆಗೆ ವೈರಸ್ಸುಗಳಿಗೆ ಯಾವುದೇ ಸಿದ್ಧೌಷಧ ಲಭ್ಯವಿಲ್ಲ. ಆದ್ದರಿಂದ ದೇಹದ ರೋಗನಿರೋಧಕ ವ್ಯವಸ್ಥೆಯೇ ಈ ವೈರಸ್ಸುಗಳನ್ನು ಎದುರಿಸಲು ನೆರವಾಗುವಂತೆ ವೈದ್ಯರು ಔಷಧಿಗಳನ್ನು ನೀಡುತ್ತಾರೆ. ವೈರಸ್ಸುಗಳು ಗಾಳಿ, ಆಹಾರ, ನೀರು ಮೊದಲಾದ ಮಾಧ್ಯಮಗಳ ಮೂಲಕ ದೇಹ ಪ್ರವೇಶಿಸಿದ ತಕ್ಷಣ ಯಾವುದೇ ಪರಿಣಾಮ ಬೀರುವುದಿಲ್ಲ. ಮೊದಲು ನಮ್ಮ ಗಂಟಲು, ಅನ್ನನಾಳ, ಮೂಗಿನ ಹಿಂಭಾಗ ಮೊದಲಾದ ತೇವವಿರುವ ಸ್ಥಳಗಳಲ್ಲಿ ಇವು ಮನೆಮಾಡಿಕೊಂಡು ವಂಶಾಭಿವೃದ್ಧಿ ನಡೆಸುತ್ತವೆ. ಮಳೆಗಾಲದ ಮಹಾಮಾರಿ ಡೆಂಗ್ಯೂ ಜ್ವರ: ಇರಲಿ ಕಟ್ಟೆಚ್ಚರ!

ಹಾಗಾಗಿ ಈ ವೈರಸ್ಸುಗಳು ಪೂರ್ಣವಾಗಿ ಧಾಳಿಯಿಡುವ ಮುನ್ನವೇ ಈ ಆಹಾರಗಳನ್ನು ಸೇವಿಸುವ ಮೂಲಕ ದೇಹವನ್ನು ಹೆಚ್ಚಿನ ಧಾಳಿಯಿಂದ ರಕ್ಷಿಸಿಕೊಳ್ಳುವುದು ಜಾಣತನ. ಈ ಜಾಣತನವನ್ನು ಪಡೆಯಲು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳನ್ನು ಗಮನವಿಟ್ಟು ನೋಡಿ..

ನೀರು

ನೀರು

ವೈರಸ್ಸುಗಳಿಗೆ ನೀರು ಬದ್ಧ ವೈರಿಯಾಗಿದೆ. ದೇಹದ ರೋಗನಿರೋಧಕ ಶಕ್ತಿ ಮೂಗಿನ ಮೂಲಕ ಹೆಚ್ಚು ದ್ರವವನ್ನು ಸ್ರವಿಸಿ ರೋಗಾಣುಗಳನ್ನು ನಿವಾರಿಸಲು ಯತ್ನಿಸುತ್ತದೆ. ಇದಕ್ಕೆ ಸಾಧ್ಯವಾದಷ್ಟು ಹೆಚ್ಚು ಉಗುರುಬೆಚ್ಚನೆಯ ನೀರು ಕುಡಿಯುವ ಮೂಲಕ ಈ ಕ್ರಮಕ್ಕೆ ಸಹಕಾರ ನೀಡಬಹುದು. ತನ್ಮೂಲಕ ವೈರಸ್ಸುಗಳನ್ನು ನಿವಾರಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಗಂಟೆಗೊಂದು ಲೋಟ ನೀರು ಕುಡಿಯುವುದು ಶ್ರೇಯಸ್ಕರ.

ತುಳಸಿ ಎಲೆಗಳನ್ನು ಸೇವಿಸಿ

ತುಳಸಿ ಎಲೆಗಳನ್ನು ಸೇವಿಸಿ

ವೈರಲ್ ಜ್ವರಕ್ಕೆ ತುಳಸಿ ಗಿಡದ ಎಲ್ಲಾ ಭಾಗಗಳು ಉಪಯುಕ್ತವಾಗಿವೆ. ಉತ್ತಮ ಪರಿಣಾಮಕ್ಕಾಗಿ ಒಂದು ಲೋಟ ಕುದಿಯುವ ನೀರಿಗೆ ಹತ್ತರಿಂದ ಹನ್ನೆರಡು ತುಳಸಿ ಎಲೆಗಳನ್ನು ಕಿವುಚಿ ಹಾಕಿ ಕೊಂಚಕಾಲ ಬೇಯಿಸಿ. ಬಳಿಕ ಇದನ್ನು ಸೋಸಿ ಉಗುರುಬೆಚ್ಚಗಿರುವಾಗ ಬೆಳಗ್ಗಿನ ಪ್ರಥಮ ಆಹಾರವನ್ನಾಗಿ ಸೇವಿಸಿ. ಸಾಧ್ಯವಾದರೆ ಬಿಸಿನೀರಿಗೆ ತುಳಸಿ ಎಲೆಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ಸೋಸಿ ಕೊಂಚವೇ ಬಿಸಿಮಾಡಿ ಕುಡಿಯಿರಿ. ಇದರಿಂದ ಜ್ವರ ಶೀಘ್ರವೇ ಕಡಿಮೆಯಾಗುವುದು.

ಕಿತ್ತಳೆ ರಸ

ಕಿತ್ತಳೆ ರಸ

ಜ್ವರದಿಂದ ದೇಹ ಬಳಲಿದ್ದಾಗ ನಿಮ್ಮ ಆಹಾರದಲ್ಲಿ ಸಾಕಷ್ಟು ದ್ರವ ಇರುವಂತೆ ನೋಡಿಕೊಳ್ಳುವುದು ಜಾಣತನ. ಈಗತಾನೇ ಹಿಂಡಿ ತೆಗೆದ ತಾಜಾ ಕಿತ್ತಳೆ ರಸವನ್ನು ಕುಡಿಯುವ ಮೂಲಕ ದೇಹಕ್ಕೆ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಶೀಘ್ರವೇ ವೈರಸ್ಸುಗಳನ್ನು ಸದೆಬಡಿಯಲು ಸಾಧ್ಯವಾಗುತ್ತದೆ.

ಶುಂಠಿಯ ಕಷಾಯ ಕುಡಿಯಿರಿ

ಶುಂಠಿಯ ಕಷಾಯ ಕುಡಿಯಿರಿ

ಒಂದು ಕಪ್ ಕಪ್ಪು ಚಹಾ ತಯಾರಿಸಿ. ಇದಕ್ಕೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಸೇರಿಸಿ ಒಂದು ದೊಡ್ಡಚಮಚ ಜೇನುತುಪ್ಪ ಸೇರಿಸಿ. ಬಿಸಿಬಿಸಿಯಿರುವಂತೆಯೇ ಈ ಕಷಾಯವನ್ನು ಕುಡಿಯಿರಿ. ಇದರಿಂದ ಗಂಟಲ ಕೆರೆತ ಮತ್ತು ಜ್ವರ ಶೀಘ್ರವೇ ಕಡಿಮೆಯಾಗುತ್ತದೆ.

ಹಬೆಯಲ್ಲಿ ಬೇಯಿಸಿದ ತರಕಾರಿಗಳನ್ನು ಸೇವಿಸಿ

ಹಬೆಯಲ್ಲಿ ಬೇಯಿಸಿದ ತರಕಾರಿಗಳನ್ನು ಸೇವಿಸಿ

ಜ್ವರ ತೀವ್ರವಿದ್ದಾಗ ಕುಕ್ಕರಿನಲ್ಲಿ ಹಬೆಯಲ್ಲಿ ನಿಮ್ಮ ಇಷ್ಟದ ತರಕಾರಿಗಳನ್ನು ಪೂರ್ಣವಾಗಿ ಬೇಯಿಸಿ ಬಳಿಕ ಕೊಂಚ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿ. ಇದರಿಂದ ಜ್ವರ ಇಳಿಯಲು ಸಾಧ್ಯವಾಗುತ್ತದೆ.

ಅನ್ನದ ಗಂಜಿ ಸೇವಿಸಿ

ಅನ್ನದ ಗಂಜಿ ಸೇವಿಸಿ

ವೈರಲ್ ಜ್ವರವಿದ್ದಾಗ ಸೇವಿಸಲು ಅನ್ನದ ಗಂಜಿ ಉತ್ತಮ ಆಯ್ಕೆಯಾಗಿದೆ. ಇದರಿಂದ ದೇಹದ ರೋಗನಿರೋಧಕ ವ್ಯವಸ್ಥೆ ಉತ್ತಮಗೊಳ್ಳುವುದು ಹಾಗೂ ಜ್ವರವನ್ನು ಕಡಿಮೆಗೊಳಿಸಲು ಅಗತ್ಯವಿರುವ ಶಕ್ತಿಯನ್ನೂ ಪಡೆದಂತಾಗುವುದು. ಇದಕ್ಕಾಗಿ ಕುಚ್ಚಿಗೆ ಅಕ್ಕಿಯ ಗಂಜಿ ಉತ್ತಮವಾಗಿದೆ.

ಒಣದ್ರಾಕ್ಷಿ ಸೇವಿಸಿ

ಒಣದ್ರಾಕ್ಷಿ ಸೇವಿಸಿ

ಒಣದ್ರಾಕ್ಷಿಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ದೇಹದ ಸೋಂಕನ್ನು ಒಳಗಿನಿಂದ ನಿವಾರಿಸಲು ನೆರವಾಗುತ್ತವೆ. ದಿನದ ವಿವಿಧ ಸಮಯಗಳಲ್ಲಿ ಕೆಲವಾರು ಒಣದ್ರಾಕ್ಷಿಗಳನ್ನು ಸೇವಿಸುವ ಮೂಲಕ ಜ್ವರದ ವಿರುದ್ಧ ಹೋರಾಡಲು ದೇಹ ಶಕ್ತವಾಗುತ್ತದೆ.

ವಿವಿಧ ಗಿಡಿಮೂಲಿಕೆಗಳನ್ನು ಸೇವಿಸಿ

ವಿವಿಧ ಗಿಡಿಮೂಲಿಕೆಗಳನ್ನು ಸೇವಿಸಿ

ಆಯುರ್ವೇದದ ಗ್ರಂಥಿಕೆ ಅಂಗಡಿಗಳಲ್ಲಿ ಜ್ವರಕ್ಕಾಗಿ ವಿವಿಧ ಗಿಡಮೂಲಿಕೆಗಳ ಮಿಶ್ರಣ ದೊರಕುತ್ತದೆ. ಇವು ಜ್ವರ ಇಳಿಯಲು ನೆರವಾಗುತ್ತವೆ. ಪರ್ಯಾಯವಾಗಿ ಕೇವಲ ಪುದಿನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದಲೂ ಉತ್ತಮ ಪರಿಣಾಮ ಕಂಡುಬರುತ್ತದೆ.

ಸ್ನೇಹಮಯಿ ಬ್ಯಾಕ್ಟೀರಿಯಾ ಇರುವ ಆಹಾರ ಸೇವಿಸಿ (Probiotic foods)

ಸ್ನೇಹಮಯಿ ಬ್ಯಾಕ್ಟೀರಿಯಾ ಇರುವ ಆಹಾರ ಸೇವಿಸಿ (Probiotic foods)

ಕೆಲವು ಆಹಾರಗಳಲ್ಲಿ ಬ್ಯಾಕ್ಟೀರಿಯಾಗಳಿದ್ದು ಆಹಾರವನ್ನು ಜೀರ್ಣಿಸಲು ನೆರವಾಗುತ್ತವೆ. ಉದಾಹರಣೆಗೆ ಮೊಸರು. ಇಂತಹ ಆಹಾರಗಳನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದು ಹಾಗೂ ಜ್ವರ ಇಳಿಯಲು ಸಹಾ ನೆರವಾಗುತ್ತದೆ.

ತರಕಾರಿ ಸೂಪ್ ಸೇವಿಸಿ

ತರಕಾರಿ ಸೂಪ್ ಸೇವಿಸಿ

ವಿವಿಧ ತರಕಾರಿಗಳನ್ನು ಬೇಯಿಸಿ ಅದರ ಸಾರವನ್ನು ಹೀರಿಕೊಂಡ ಸೂಪ್ ಸಹಾ ಜ್ವರವಿಳಿಸಲು ನೆರವಾಗುತ್ತದೆ. ಈ ಆಹಾರವನ್ನು ಮಧ್ಯಾಹ್ನದ ಊಟದೊಂದಿಗೆ ಸೇವಿಸಿದರೆ ಉತ್ತಮ ಪರಿಣಾಮ ಕಂಡುಬರುತ್ತದೆ.

ಸಿಪ್ಪೆ ಸುಲಿದ ಹಣ್ಣುಗಳು

ಸಿಪ್ಪೆ ಸುಲಿದ ಹಣ್ಣುಗಳು

ಒಂದು ವೇಳೆ ಜ್ವರ ಅತಿಯಾಗಿದ್ದರೆ ಸಿಪ್ಪೆ ಸುಲಿಯಬಹುದಾದ ಹಣ್ಣುಗಳನ್ನು ಸಿಪ್ಪೆ ಸುಲಿದು ಸೇವಿಸಿ. ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಮೊದಲಾದ ಲಿಂಬೆಜಾತಿಯ ಹಣ್ಣುಗಳನ್ನು ಸೇವಿಸಿ. ಇದರಿಂದ ರೋಗನಿರೋಧಕ ವ್ಯವಸ್ಥೆ ಉತ್ತಮಗೊಂಡು ಜ್ವರ ಶೀಘ್ರವೇ ಇಳಿಯುತ್ತದೆ.

English summary

Best Foods For Viral Fever Patients

After dengue, the most common fever everyone has been targeted with is viral. Viral fever is caused by one of the many viral infections or the infections caused by virus itself. The first symptoms that a doctor takes into consideration for viral fever are fatigue, cough, sore throat. If you show any of these signs, it should bot be neglected as the infection or the virus can affect one of your organs.
X
Desktop Bottom Promotion