For Quick Alerts
ALLOW NOTIFICATIONS  
For Daily Alerts

ಅರಿಶಿನ v/s ಶುಂಠಿ: ಇವೆರಡೂ ಒಂದೇ ನಾಣ್ಯದ ಎರಡು ಮುಖ!

By Arshad
|

ಆಯುರ್ವೇದದಲ್ಲಿ ಕೆಲವು ಅಡುಗೆ ಸಾಮಾಗ್ರಿಗಳನ್ನು ಹತ್ತು ಹಲವು ಔಷಧಿಗಳಿಗೆ ಸಾಮಾನ್ಯವಾಗಿ ಬಳಸಲಾಗುತ್ತದೆ. ಉದಾಹರಣೆಗೆ ಅರಿಶಿನ, ಲಿಂಬೆ, ತುಳಸಿ, ಶುಂಠಿ ಇತ್ಯಾದಿ. ಇಂದು ಇವುಗಳಲ್ಲಿ ಪ್ರಮುಖವಾದ ಹಸಿಶುಂಠಿ ಮತ್ತು ಅರಿಶಿನಗಳ ಗುಣಗಳಲ್ಲಿ ವಿಶ್ಲೇಷಿಸಿ ಇವೆರಡರಲ್ಲಿ ಯಾವುದು ಹೆಚ್ಚು ಉತ್ತಮ ಎಂಬುದನ್ನು ನೋಡೋಣ:

ಶುಂಠಿ: ಪಾಕಶಾಲಿಕಾ ಮೂಲಿಕೆ
ಶುಂಠಿಯು ಮಸಾಲಾ ಪದಾರ್ಥ ಮಾತ್ರವಾಗಿಲ್ಲದೆ ಅದ್ಭುತ ಔಷಧೀಯ ಗಿಡಮೂಲಿಕೆಯೂ ಹೌದು. ನಿರ್ವಿಷಗೊಳಿಸುವ ಅಂಶಗಳನ್ನು ಒಳಗೊಂಡಿರುವ ಶುಂಠಿಯು, ಶುದ್ಧೀಕರಿಸುವ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಭಾರತ ಮತ್ತು ಚೀನಾದಲ್ಲಿ ಶುಂಠಿಯ ಮಹತ್ವತೆಗಳನ್ನು ಪರಿಶೋಧಿಸಲಾಗಿದ್ದು, ಹಲವಾರು ರೋಗಗಳನ್ನು ನಿವಾರಿಸುವಲ್ಲಿ ಶುಂಠಿ ಕಮಾಲನ್ನೇ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

Ayurveda remedies: Ginger versus turmeric

ಬೇರೆ ಬೇರೆ ಖಾದ್ಯಗಳಲ್ಲಿ ಅಂತೆಯೇ ಪಾನೀಯಗಳಲ್ಲಿ ಕೂಡ ಶುಂಠಿಯನ್ನು ಬಳಸಲಾಗಿದ್ದು ಅಡುಗೆ ಮನೆಯ ತರಕಾರಿ ಬಾಸ್ಕೆಟ್‎ನಲ್ಲಿ ಈ ಸಾಮಾಗ್ರಿ ಇಲ್ಲದೇ ಇರುವುದಿಲ್ಲ. 300 ವರ್ಷಗಳಿಗಿಂತ ಹೆಚ್ಚು ಸಮಯ ಬಳಸಲಾದ ಶುಂಠಿಯು, ವೈದ್ಯಕೀಯ ಗಿಡಮೂಲಿಕೆ ಎಂದೆನಿಸಿದ್ದು ಪಾಕಶಾಲಿಕಾ ಮೂಲಿಕೆ ಎಂಬುದಾಗಿ ಕೂಡ ಹೆಸರುವಾಸಿಯಾಗಿದೆ.

ಶುಂಠಿಯಲ್ಲಿರುವ ವಿವಿಧ ವಿಟಮಿನ್ನುಗಳು ಮತ್ತು ಪೋಷಕಾಂಶಗಳು:
ಶುಂಠಿಯಲ್ಲಿ ಉತ್ತಮ ಪ್ರಮಾಣದ ಮೆಗ್ನೇಶಿಯಂ, ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಇದೆ. ಇದರೊಂದಿಗೆ ಕ್ಯಾಲ್ಸಿಯಂ, ಗಂಧಕ, ತಾಮ್ರ, ಸತು ಮತ್ತು ಕಬ್ಬಿಣದ ಅಂಶವೂ ತಕ್ಕ ಮಟ್ಟಿಗೆ ಇದೆ.

ಶುಂಠಿಯ ಪ್ರಯೋಜನಗಳು:
* ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
* ಆಹಾರದ ಪೋಷಕಾಂಶಗಳನ್ನು ಪೂರ್ಣವಾಗಿ ಹೀರಿಕೊಳ್ಳಲು ನೆರವಾಗುತ್ತದೆ.
* ಶೀತ, ನೆಗಡಿ, ಕೆಮ್ಮು ಮೊದಲಾದ ಸೋಂಕು ರೋಗಗಳನ್ನು ನಿವಾರಿಸುತ್ತದೆ
* ವಾಕರಿಕೆ ಕಡಿಮೆ ಮಾಡುತ್ತದೆ
* ಕೆಳಹೊಟ್ಟೆಯ ನೋವು ಮತ್ತು ಸೆಳೆತಗಳನ್ನು ನಿವಾರಿಸುತ್ತದೆ. ಶುಂಠಿ-ಅರಿಶಿನದ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ

ಶುಂಠಿಯಿಂದ ಪಡೆಯಬಹುದಾದ ಉಪಶಮನಗಳು
*ತೆಳುವಾಗಿ ಕತ್ತರಿಸಿದ ಹಸಿಶುಂಠಿಯ ಬಿಲ್ಲೆಗಳ ಮೇಲೆ ಕೊಂಚ ಉಪ್ಪು ಮತ್ತು ಲಿಂಬೆರಸವನ್ನು ಸೇರಿಸಿ ಊಟಕ್ಕೂ ಮುನ್ನ ಮತ್ತು ಊಟಕ್ಕೂ ಬಳಿಕ ಸೇವಿಸುವ ಮೂಲಕ ಹಸಿವು ಹೆಚ್ಚಿಸಬಹುದು ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಬಹುದು.
*ವಿವಿಧ ಅಡುಗೆಗಳ ರುಚಿಯನ್ನು ಹೆಚ್ಚಿಸಲು ಸಾಂಬಾರ ಪದಾರ್ಥವಾಗಿ ಉಪಯೋಗಿಸಬಹುದು.
*ಔಷಧಿಕಾರಕವಾಗಿ ಶುಂಠಿಯ ರಸವನ್ನು ಕೊಂಚ ತುಳಸಿ ಎಲೆಗಳ ರಸದೊಂದಿಗೆ ಬೆರೆಸಿ ಕೆಮ್ಮು ಮತ್ತು ಶೀತವನ್ನು ಶೀಘ್ರವಾಗಿ ಗುಣಪಡಿಸಬಹುದು.

ಅರಿಶಿನ: ಆಯುರ್ವೇದದಲ್ಲಿ ಚಿನ್ನದ ದೇವತೆ
ಅರಿಶಿನವನ್ನು ಮಸಾಲೆಗಳಲ್ಲೇ ರಾಜನೆಂದೂ ಹಾಗೂ ಅರಿಶಿನಕ್ಕೆ ಮನೆಯ ಆಹಾರ ಪದಾರ್ಥಗಳಲ್ಲೇ ಹೆಚ್ಚು ಪ್ರಾತಿನಿಧ್ಯವನ್ನು ನೀಡಲಾಗಿದೆ. ಚರ್ಮ ಸಂಬಂಧಿತ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಮನೆಯಲ್ಲಿಯೇ ಸುಲಭವಾಗಿ ಸಿಗುವ ಔಷಧೀಯ ಪದಾರ್ಥವೆಂದರೆ ಅದು ಖಂಡಿತ ಅರಿಶಿನವೇ ಆಗಿರುತ್ತದೆ. ಸರ್ವಗುಣ ಸಂಪನ್ನ ಅರಿಶಿನ

ಇದನ್ನು ಅಡುಗೆಯ ಹೊರತಾಗಿ ಕೂಡ ಸೌಂದರ್ಯವರ್ಧಕವಾಗಿ ಭಾರತದಲ್ಲಿ ಹಾಗೂ ಚೀನಾದಲ್ಲಿ ಹೆಚ್ಚು ಬಳಸಲಾಗುತ್ತಿದೆ. ಇದರಲ್ಲಿರುವ ನೈಸರ್ಗಿಕ ಸತ್ವಗಳು ಹೇರಳವಾಗಿದ್ದು, ಚರ್ಮ ಸಂಬಂಧಿತ ಸಮಸ್ಯೆಗಳನ್ನು ಶೀಘ್ರವಾಗಿ ತೊಲಗಿಸುತ್ತದೆ.

ಆಯುರ್ವೇದದಲ್ಲಿ ಚಿನ್ನದ ದೇವತೆ ಎಂದೇ ಕರೆಯಲ್ಪಡುವ ಅರಿಶಿನದಲ್ಲಿ ರೋಗನಿರೋಧಕ ಶಕ್ತಿಯು ಅಧಿಕವಿದ್ದು ಚರ್ಮದ ಎಂತಹ ಸೋಂಕನ್ನಾದರೂ ನಿವಾರಣೆ ಮಾಡುವ ಗುಣವನ್ನು ಹೊಂದಿರುವುದರಿಂದ ಇದು ನಿಜಕ್ಕೂ ಆರೋಗ್ಯದ ದೇವತೆಯೇ ಸರಿ. ಅಲ್ಲದೆ ಅರಿಶಿನದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಪೊಟ್ಯಾಶಿಯಂ, ವಿಟಮಿನ್ ಬಿ6 ಇವೆ. ಇದರೊಂದಿಗೆ ಮೆಗ್ನೇಶಿಯಂ, ವಿಟಮಿನ್ ಸಿ, ಕ್ಯಾಲ್ಸಿಯಂ ಸಹಾ ತಕ್ಕ ಮಟ್ಟಿಗೆ ಇವೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಅರಿಶಿನದ ಪ್ರಯೋಜನಗಳು:
* ಸೋಂಕನ್ನು ಕಡಿಮೆಗೊಳಿಸುತ್ತದೆ
* ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.
* ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
* ಗಾಯಗಳನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ
* ಚರ್ಮದ ಆರೈಕೆಯಲ್ಲಿ ಸಹಕರಿಸಿ ಕಾಂತಿ ಹೆಚ್ಚಿಸಲು ನೆರವಾಗುತ್ತದೆ.
* ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ.

English summary

Ayurveda remedies: Ginger versus turmeric

In Ayurveda, ginger and turmeric or haldi are key ingredients for treating several ailments. We take a deeper look at which root is better for health - ginger or turmeric?
X
Desktop Bottom Promotion