For Quick Alerts
ALLOW NOTIFICATIONS  
For Daily Alerts

ನೆನಪಿಡಿ: ಕೃತಕ ಸಿಹಿ ನಿಮ್ಮ ದೇಹದ ಕೊಬ್ಬಿಗೆ ಬದ್ಧ ವೈರಿ!

By Jaya Subramanaya
|

ದೇಹದ ಕೊಬ್ಬು ಕರಗಿಸುವುದಕ್ಕಾಗಿ ನಾವು ಹಲವಾರು ಕಸರತ್ತುಗಳನ್ನು ಮಾಡುತ್ತಿರುತ್ತೇವೆ. ಎಣ್ಣೆ ಪದಾರ್ಥಗಳನ್ನು ತ್ಯಜಿಸುವುದು, ಡಯಟ್ ಚಾರ್ಟ್ ಪ್ರಕಾರ ಆಹಾರ ಸೇವನೆ, ಸಾಕಷ್ಟು ನೀರು, ವ್ಯಾಯಾಮ ಇವುಗಳನ್ನು ಪಾಲಿಸಿ ಸ್ವಲ್ಪವಾದರೂ ದೇಹದ ಕೊಬ್ಬು ಕರಗುವಂತೆ ಮಾಡಿಕೊಳ್ಳುತ್ತೇವೆ ಈಗ ಈ ಎಲ್ಲಾ ಅಂಶಗಳೊಂದಿಗೆ ಕೃತಕ ಸಿಹಿಕಾರಕ ಆಹಾರ ಪದಾರ್ಥಗಳಿಗೂ ನೀವು ಗುಡ್ ಬೈ ಹೇಳಬೇಕಾಗಿದೆ.

ಕೃತಕ ಸಿಹಿ ಪದಾರ್ಥವು ದೇಹದ ಕೊಬ್ಬು ಹೆಚ್ಚುವಂತೆ ಮಾಡಿ ಸ್ಥೂಲಕಾಯಕ್ಕೆ ಕಾರಣವಾಗಿದೆ ಎಂಬ ಹೊಸ ಅಂಶವೊಂದನ್ನು ಅಧ್ಯಯನವು ಸಾಬೀತುಪಡಿಸಿದೆ. ಇದು ಕಡಿಮೆ ಆಹಾರ ಶಕ್ತಿಯನ್ನು ಪಡೆದುಕೊಂಡಿರುತ್ತದೆ ಇದು ದೇಹಕ್ಕೆ ಕೆಟ್ಟದ್ದು ಎಂಬುದು ಸಂಶೋಧನಕಾರರ ಅಭಿಪ್ರಾಯವಾಗಿದೆ.

Artificial Sweeteners Can Make You Actually Eat More: Study Reveals

ಸಂಶೋಧಕರು ಹೇಳುವ ಪ್ರಕಾರ, ಕೃತಕ ಸಿಹಿ ಇರುವ ಪದಾರ್ಥಗಳಿಗೆ ಮೆದುಳು ಪ್ರತಿಕ್ರಿಯಿಸುತ್ತದೆ ಮತ್ತು ಸಾಕಷ್ಟು ಶಕ್ತಿಗಾಗಿ ಇದನ್ನು ಸೇವಿಸಬಹುದು ಎಂಬ ಸೂಚನೆಯನ್ನು ನೀಡುತ್ತದೆ ಇದರಿಂದಾಗಿ ಹಸಿವು ಹೆಚ್ಚಿ ಅವುಗಳನ್ನು ಹೆಚ್ಚು ತಿನ್ನುವಂತೆ ಮಾಡುತ್ತದೆ. ಅತಿಯಾದ ಸಕ್ಕರೆ ಸೇವನೆ ರೋಗಕ್ಕೆ ಮುಕ್ತ ಆಹ್ವಾನ

ಅಲ್ಲದೆ, ಪರಿಮಳ ಮತ್ತು ಸಿಹಿ ಸ್ವಾದಕ್ಕೆ ಇಂತಹ ಆಹಾರವನ್ನು ಹೆಚ್ಚು ತಿನ್ನುವಂತೆ ಪ್ರೇರೇಪಿಸುತ್ತದೆ ಎಂಬುದು ಅಧ್ಯಯನಕಾರರು ತಿಳಿಸಿರುವ ಮಾಹಿತಿಯಾಗಿದೆ. ಈ ಸಿಹಿ ಪದಾರ್ಥಗಳಲ್ಲಿ ಕೃತಕ ಸಿಹಿಕಾರಕ ಸುಕ್ರಲೋಸ್ ಇರುವುದರಿಂದ ಇದನ್ನು ನಾವುಗಳು ಹೆಚ್ಚು ಸೇವಿಸುತ್ತೇವೆ ಅಂತೆಯೇ ಕ್ಯಾಲೋರಿ ಸೇವನೆಯಲ್ಲಿನ ಮಟ್ಟವನ್ನು ಹಿರಿದಾಗಿಸುವಲ್ಲಿ ಶಕ್ತಿಯ ಮಟ್ಟವು ಉತ್ತೇಜವನ್ನು ಬೀರುತ್ತದೆ.

ಅಧ್ಯಯನಗಳು ಹೇಳುವಂತೆ ಮೆದುಳಿನ ಪ್ರೇರಣಾ ಕೇಂದ್ರದ ಒಳಗೆ, ಸಿಹಿ ಸಂವೇದನೆಯು ಶಕ್ತಿಯ ಅಂಶದೊಂದಿಗೆ ಅಂತರ್ಗತವಾಗಿರುತ್ತದೆ. ನಿರ್ದಿಷ್ಟ ಸಮಯದಲ್ಲಿ, ಸಿಹಿಯು ಶಕ್ತಿಯ ಮಟ್ಟವನ್ನು ಮೀರಿದಾಗ ಮೆದುಳು ರಿಕ್ಯಾಲಿಬರೇಟ್ ಮಾಡುತ್ತದೆ ಮತ್ತು ಸೇವಿಸಿದ ಒಟ್ಟು ಕ್ಯಾಲೋರಿಗಳನ್ನು ಹೆಚ್ಚಿಸುತ್ತದೆ.

ಅಧ್ಯಯನಕ್ಕಾಗಿ, ಹೆಣ್ಣು ನೊಣಗಳನ್ನು ಕೆಲ ದಿನಗಳವರೆಗೆ ಕೃತಕ ಸಿಹಿ ಪದಾರ್ಥಗಳ ಮೇಲೆ ಬಿಟ್ಟಿದ್ದರು. ನೈಸರ್ಗಿಕ ಸಿಹಿ ಪದಾರ್ಥಕ್ಕಿಂತಲೂ 30 ಶೇಕಡಾ ಹೆಚ್ಚು ಕ್ಯಾಲೋರಿ ಆಹಾರವನ್ನು ಅವು ಸೇವಿಸಿರುವುದಾಗಿ ಕಂಡುಬಂದಿದೆ.

ಇದೇ ಅಧ್ಯಯನವನ್ನು ತಂಡವು ಇಲಿಗಳ ಮೇಲೆ ನಡೆಸಿದೆ. ಸುಕ್ರಲೋಸ್ - ಸಿಹಿಕಾರಕ ಆಹಾರವನ್ನು ಏಳು ದಿನಗಳ ಕಾಲ ನಿರಂತರವಾಗಿ ಇವುಗಳಿಗೆ ನೀಡಲಾಯಿತು, ನರಕೋಶ ಪ್ರತಿಕ್ರಿಯೆಯು ಹೆಣ್ಣು ನೊಣಗಳಲ್ಲಿ ಇದ್ದಂತೆಯೇ ಇಲಿಗಳಲ್ಲೂ ಕಂಡುಬಂದಿದೆ. ಸಿಹಿಯಾದ ಸಕ್ಕರೆ, ಮಕ್ಕಳ ಆರೋಗ್ಯಕ್ಕೆ ಕಹಿಯಾಗಬಹುದು!

ಸಿಹಿಕಾರಕದ ತೀವ್ರ ಬಳಕೆಯು ಸಿಹಿಯ ಪ್ರಮಾಣವನ್ನು ಹೆಚ್ಚಿಸುತ್ತದೆ ಇದು ನೈಸರ್ಗಿಕ ಸಿಹಿಯ ಪ್ರಮಾಣಕ್ಕಿಂತಲೂ ಹೆಚ್ಚಾಗಿರುತ್ತದೆ ನಂತರ ಈ ಅಭ್ಯಾಸವೇ ಅಧಿಕ ಪ್ರಮಾಣದಲ್ಲಿ ಸೇವಿಸುವ ಕ್ರಮಕ್ಕೆ ಕಾರಣವಾಗುತ್ತದೆ. ಎಂಬುದಾಗಿ ಸೆಲ್ ಮೆಟಬಾಲಿಸಮ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಇನ್ನೂ ಹೆಚ್ಚು ಹೇಳಬೇಕು ಎಂದರೆ, ಕೃತಕ ಸಿಹಿಯು ಹೈಪರ್ ಆಕ್ಟಿವಿಟಿಗೆ ಕಾರಣವಾಗಿ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ. ನಿದ್ರೆಯ ಗುಣಮಟ್ಟದಲ್ಲಿ ಇಳಿಕೆ ಮಾಡುತ್ತದೆ. ಸೌಮ್ಯ ಹಸಿವು, ಹಸಿವಾಗದಿರುವುದು ಮೊದಲಾದ ತೊಂದರೆಗಳನ್ನು ಇದು ಉಂಟುಮಾಡಲಿದೆ. ಹಸಿವಾಗುತ್ತಿರುವಾಗ ಆದಷ್ಟು ನ್ಯೂಟ್ರಿಶಿಯಸ್ ಆಹಾರವನ್ನು ಸೇವಿನೆ ಮಾಡುವುದರಿಂದ ಇಂತಹ ಆಹಾರಗಳ ಮೇಲಿನ ಒಲವು ಕಡಿಮೆಯಾಗುತ್ತದೆ ಅಂತೆಯೇ ಹಸಿವು ನಿಯಂತ್ರಣಗೊಳ್ಳುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿರುವ ಅಂಶವಾಗಿದೆ.

(IANS ಪ್ರಕಟಿತ)

English summary

Artificial Sweeteners Can Make You Actually Eat More: Study Reveals

Researchers have identified a complex network in the brain that has revealed why artificial sweeteners may not be the best way to slim down.Artificial sweeteners are substitutes for sugar that provides a sweet taste like that of sugar while containing significantly less food energy.
X
Desktop Bottom Promotion