For Quick Alerts
ALLOW NOTIFICATIONS  
For Daily Alerts

ಋತುಚಕ್ರವಲ್ಲದ ಸಂದರ್ಭದಲ್ಲಿ ರಕ್ತಸ್ರಾವ! ಏನಿದಕ್ಕೆ ಕಾರಣ?

By Hemanth
|

ಮಹಿಳೆಯರು ಅನುಭವಿಸುವಂತಹ ನೋವು, ಸಂಕಟವನ್ನು ಪುರುಷರು ಯಾವ ಸಂದರ್ಭದಲ್ಲಿಯೂ ಅನುಭವಿಸಲು ಸಾಧ್ಯವಿಲ್ಲ. ಯಾಕೆಂದರೆ ಋತುಚಕ್ರವಾಗಿರಲಿ, ಗರ್ಭಧಾರಣೆ ಅಥವಾ ಹೆರಿಗೆ ಸಂದರ್ಭವಾಗಿರಲಿ ಮಹಿಳೆಯರು ಪಡುವ ಪಾಡು ಅಷ್ಟಿಷ್ಟಲ್ಲ. ಋತುಚಕ್ರದ ವೇಳೆ ಮಹಿಳೆಯರಿಗೆ ರಕ್ತಸ್ರಾವವಾಗುತ್ತದೆ ಎಂದು ಪ್ರತಿಯೊಬ್ಬ ಮಹಿಳೆಗೂ ತಿಳಿದಿರುವ ವಿಚಾರವಾಗಿದೆ. ಇದು 3-4 ದಿನಗಳ ಕಾಲ ಇರುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?

ಕೆಲವರಿಗೆ ಈ ಸಂದರ್ಭ ಹೊಟ್ಟೆ ನೋವು, ತಲೆನೋವು ಮುಂತಾದ ಸಮಸ್ಯೆಗಳು ಇರುತ್ತದೆ. ಆದರೆ ಋತುಚಕ್ರದ ಸಮಯವಲ್ಲದೆ ಬೇರೆ ಸಂದರ್ಭಗಳಲ್ಲಿ ರಕ್ತಸ್ರಾವವಾದರೆ ಆಗ ಎಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಋತುಚಕ್ರಕ್ಕೆ ಅದರದ್ದೇ ಆದ ದಿನವಿರುತ್ತದೆ. ಇದಕ್ಕೆ ಮಹಿಳೆಯರು ತಯಾರಾಗಿಯೂ ಇರುತ್ತಾರೆ. ಆ ದಿನಗಳ ಅತಿಯಾದ ರಕ್ತಸ್ರಾವಕ್ಕೆ ನೈಸರ್ಗಿಕ ಪರಿಹಾರಗಳು..

ಆದರೆ ಅನಿರೀಕ್ಷಿತವಾಗಿ ಆಗುವಂತಹ ರಕ್ತಸ್ರಾವವು ಆತಂಕವನ್ನು ಉಂಟು ಮಾಡುತ್ತದೆ. ಇದನ್ನು ಎದುರಿಸಲು ಮಹಿಳೆಯರು ತಯಾರಾಗಿಯೂ ಇರುವುದಿಲ್ಲ. ಋತುಚಕ್ರದ ಸಂದರ್ಭವಲ್ಲದೆ ಬೇರೆ ಸಮಯದಲ್ಲಿ ನಿಮಗೆ ರಕ್ತಸ್ರಾವವಾಗುತ್ತಿದ್ದರೆ ಅದನ್ನು ಕಡೆಗಣಿಸದೆ ವೈದ್ಯರಿಂದ ಚಿಕಿತ್ಸೆ ಪಡೆಯಿರಿ. ಇಂತಹ ಸಮಸ್ಯೆಗೆ ಕಾರಣಗಳು ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.....

ಗರ್ಭಧಾರಣೆ

ಗರ್ಭಧಾರಣೆ

ರಕ್ತಸ್ರಾವಕ್ಕೆ ಗರ್ಭಧಾರಣೆಯು ಕಾರಣವಾಗಿರಬಹುದು. ಕೆಲವೊಂದು ಮಹಿಳೆಯರಲ್ಲಿ ಗರ್ಭಧಾರಣೆಯ ಆರಂಭದ ವಾರಗಳಲ್ಲಿ ರಕ್ತಸ್ರಾವದ ಅನುಭವವಾಗಬಹುದು.

ಔಷಧಿಗಳು

ಔಷಧಿಗಳು

ಗರ್ಭ ನಿರೋಧಕ ಮಾತ್ರೆಗಳು ಅಥವಾ ರಕ್ತ ತೆಳುವಾಗಲು ತೆಗೆದುಕೊಳ್ಳುವಂತಹ ಕೆಲವೊಂದು ಮಾತ್ರೆಗಳು ಹಾರ್ಮೋನು ಸಮತೋಲನವನ್ನು ಕದಡಿ ರಕ್ತಸ್ರಾವವನ್ನು ಉಂಟು ಮಾಡಬಹುದು.

ಲೈಂಗಿಕ ರೋಗಗಳು

ಲೈಂಗಿಕ ರೋಗಗಳು

ಗೊನೊರಿಯಾ, ಕ್ಲಮೈಡಿಯಾ, ಎಚ್ ಪಿವಿ ಇತ್ಯಾದಿಯಂತಹ ಕೆಲವೊಂದು ಲೈಂಗಿಕ ರೋಗಗಳಿಂದ ಬಳಲುತ್ತಿದ್ದರೆ ಆಗ ರಕ್ತಸ್ರಾವ ಕಂಡುಬರುವುದು ಸಹಜ.

ಗರ್ಭನಾಳದ ಸಮಸ್ಯೆ

ಗರ್ಭನಾಳದ ಸಮಸ್ಯೆ

ಗರ್ಭನಿರೋಧಕವಾಗಿ ಗರ್ಭಕೋಶದೊಳಗೆ ಇಯುಡಿಯಂತಹ ಯಾವುದೇ ಸಲಕರಣೆಯನ್ನು ಅಳವಡಿಸಿಕೊಂಡಿದ್ದರೆ ರಕ್ತಸ್ರಾವ ಕಾಣಿಸಿಕೊಳ್ಳುವುದು. ಇಂತಹ ಸಮಯದಲ್ಲಿ ನೀವು ವೈದ್ಯರನ್ನು ಭೇಟಿಯಾಗಲೇಬೇಕು.

ಥೈರಾಯ್ಡ್

ಥೈರಾಯ್ಡ್

ಥೈರಾಯ್ಡ್ ಗ್ರಂಥಿಗಳು ಹಾರ್ಮೋನು ಬದಲಾವಣೆಯನ್ನು ಉಂಟು ಮಾಡಿ ರಕ್ತಸ್ರಾವಕ್ಕೆ ಕಾರಣವಾಗಬಹುದು.

ಯುಟಿಐ

ಯುಟಿಐ

ಮೂತ್ರನಾಳದಲ್ಲಿ ಸೋಂಕಿನಿಂದಾಗಿ ರಕ್ತಸ್ರಾವವು ಕಾಣಿಸಿಕೊಳ್ಳಬಹುದು. ಸೋಂಕಿನಿಂದಾಗಿ ಮೂತ್ರಕೋಶಕ್ಕೆ ತುಂಬಾ ಹಾನಿಯಾಗಿದ್ದರೆ ಮೂತ್ರವಿಸರ್ಜನೆಯ ವೇಳೆಯೂ ರಕ್ತಸ್ರಾವ ಕಾಣಿಸಬಹುದು.

ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್

ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್

ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ನಿಂದ ಬಳಲುತ್ತಿರುತ್ತಾರೆ. ಈ ಕಾರಣದಿಂದಾಗಿ ಋತುಸ್ರಾವದ ಸಮಯವಲ್ಲದಿದ್ದರೂ ಹಾರ್ಮೋನು ಬದಲಾವಣೆಯಿಂದಾಗಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು.

English summary

7 Surprising Reasons You Bleed From Your Vagina, Apart From Periods!

As women, we are not new to the concept of bleeding down there, a few days each month, because we are very well aware about menstruation. Did you know that there could be other reasons for vaginal bleeding as well? So, if you are curious to know what some of the surprising reasons for vaginal bleeding can be, apart from periods, have a look below.
Story first published: Tuesday, October 4, 2016, 20:06 [IST]
X
Desktop Bottom Promotion