For Quick Alerts
ALLOW NOTIFICATIONS  
For Daily Alerts

ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?

By Lekhaka
|

ಸರಿಯಾದ ಸಮಯಕ್ಕೆ ಅಂದರೆ ಅನಿಯಮಿತವಾಗಿ ಕಾಣಿಸಿಕೊಳ್ಳುವ ಮುಟ್ಟು ಹೆಂಗಸರಲ್ಲಿ ಕಂಡು ಬರುವ ಒಂದು ಸಾಮಾನ್ಯವಾದ ಸಮಸ್ಯೆಯಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಒಲಿಗೊಮೆನೊರ್ರಿಯಾ ಎಂದು ಕರೆಯುತ್ತಾರೆ. ಇದರರ್ಥ 35 ದಿನಕ್ಕೆ ಮೇಲ್ಪಟ್ಟ ಸಮಯದಲ್ಲಿ ಮುಟ್ಟು ಕಾಣಿಸಿಕೊಳ್ಳುವುದು ಎಂದಾಗುತ್ತದೆ. ಸಾಮಾನ್ಯವಾಗಿ ಋತು ಚಕ್ರವು ಹೆಂಗಸರಲ್ಲಿ 28 ದಿನಕ್ಕೆ ಒಮ್ಮೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಕೆಲವರಲ್ಲಿ 21 ರಿಂದ 35 ದಿನಗಳೊಳಗಾಗಿ ಸಹ ಕಾಣಿಸಿಕೊಳ್ಳುತ್ತದೆ. ಆದರೂ ಇದಕ್ಕಾಗಿ ನೀವು ಕೊರಗಬೇಡಿ. ಕೆಲವೊಂದು ಆಹಾರ ಪದಾರ್ಥಗಳು ನಿಮ್ಮ ಈ ಸಮಸ್ಯೆಯನ್ನು ನಿವಾರಿಸುತ್ತವೆ.

ಇಂದು ಬೋಲ್ಡ್‌ಸ್ಕೈ ಅಂತಹ ಅತ್ಯುತ್ತಮ ಆಹಾರ ಪದಾರ್ಥಗಳನ್ನು ನಿಮಗಾಗಿ ತಿಳಿಸಿಕೊಡಲಿದೆ. ಸಾಮಾನ್ಯವಾಗಿ ಹೆಂಗಸರಲ್ಲಿ ವರ್ಷಕ್ಕೆ 11 ರಿಂದ 13 ಮುಟ್ಟುಗಳು ಸಂಭವಿಸುತ್ತವೆ. ಆದರೆ ಒಲಿಗೊನೊರ್ರಿಯಾ ಇರುವವರಲ್ಲಿ ಇದು 6 ರಿಂದ 7 ಕ್ಕೆ ಸೀಮಿತವಾಗುತ್ತದೆ. ಇದಕ್ಕೆ ಹಲವಾರು ಕಾರಣಗಳು ಪ್ರಭಾವ ಬೀರುತ್ತವೆ. ಇದಕ್ಕೆ ಒತ್ತಡ, ಸರಿಯಾದ ರೀತಿಯ ಆಹಾರ ಸೇವಿಸದಿರುವುದು, ಅಧಿಕ ಪ್ರಮಾಣದಲ್ಲಿ ತೂಕ ಕಳೆದುಕೊಳ್ಳುವುದು ಅಥವಾ ತೂಕ ಹೆಚ್ಚಿಸಿಕೊಳ್ಳುವುದು, ಧೂಮಪಾನ, ಆಲ್ಕೋಹಾಲ್ ಸೇವನೆ, ಕೆಫಿನ್ ಸೇವನೆ, ಔಷಧೋಪಚಾರಗಳು ಮತ್ತು ಜನನ ನಿಯಂತ್ರಣ ಮಾತ್ರೆಗಳು ಕಾರಣವಾಗಿರಬಹುದು.

ಇವುಗಳನ್ನೆಲ್ಲ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತರುವ ಮೂಲಕ ನಿವಾರಿಸಿಕೊಳ್ಳಬಹುದು. ಇದರ ಜೊತೆಗೆ ಒಲಿಗೊಮೆನೊರ್ರಿಯಾ ಬರಲು ಅನಿಮಿಯಾ, ಥೈರಾಯ್ಡ್ ಡಿಸಾರ್ಡರ್, ಹಾರ್ಮೋನ್‍ಗಳ ಅಸಮತೋಲನ ಮತ್ತು ಇತರೆ ಆರೋಗ್ಯದ ಸ್ಥಿತಿಗಳು ಸಹ ಕಾರಣವಾಗುತ್ತವೆ. ಇವುಗಳನ್ನು ನಿರ್ದಿಷ್ಟ ವೈದ್ಯಕೀಯ ಉಪಚಾರದಿಂದ ಸರಿಪಡಿಸಿಕೊಳ್ಳಬಹುದು. ಆದರೆ ವೈಧ್ಯಕೀಯ ಉಪಚಾರ ಪಡೆಯುವ ಮೊದಲು ಈ ಅನಿಯಮಿತ ಮುಟ್ಟನ್ನು ನಿವಾರಿಸಿಕೊಳ್ಳಲು ಕೆಲವೊಂದು ಆಹಾರ ಪದಾರ್ಥಗಳನ್ನು ನೀವು ಪ್ರಯತ್ನಿಸಿ ನೋಡಬಹುದು. ಬನ್ನಿ ಒಮ್ಮೆ ನೋಡೋಣ..... ಅನಿಯಮಿತ ಮುಟ್ಟು: ನಿಮ್ಮ ದೇಹ ಏನನ್ನು ಹೇಳುತ್ತದೆ?

1. ಶುಂಠಿ

1. ಶುಂಠಿ

ಇದು ಮುಟ್ಟಿನ ಅವಧಿಯಲ್ಲಿ ಕಾಣಿಸಿಕೊಳ್ಳುವ ನೋವಿನಿಂದ ಮುಕ್ತಿ ನೀಡುತ್ತದೆ. ಆದ್ದರಿಂದ ಇದನ್ನು ಅನಿಯಮಿತ ಮುಟ್ಟಿನ ಅವಧಿಯನ್ನು ಸರಿಪಡಿಸಿಕೊಳ್ಳಲು ಬಳಸಿಕೊಳ್ಳಬಹುದು. ಆದ್ದರಿಂದ ಶುಂಠಿ ಟೀಯನ್ನು ಸೇವಿಸಿ ಅಥವಾ ಇದನ್ನು ಪುಡಿ ಮಾಡಿಕೊಂಡು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇವಿಸಿ.

2. ಚಕ್ಕೆ

2. ಚಕ್ಕೆ

ಮಧುಮೇಹದಿಂದ ಹಿಡಿದು ಋತು ಚಕ್ರವನ್ನು ಸರಿಪಡಿಸುವವರೆಗೆ ಚಕ್ಕೆಯನ್ನು ಮನೆ ಮದ್ದಾಗಿ ಬಳಸಿಕೊಳ್ಳಬಹುದು. ಇದು ಇನ್ನೂ ಹಲವಾರು ರೋಗರುಜಿನಗಳನ್ನು ಗುಣಪಡಿಸುವ ಶಕ್ತಿಯನ್ನು ಪಡೆದಿದೆ. ಇದನ್ನು ಟೀ ಅಥವಾ ನಿಂಬೆ ರಸದೊಂದಿಗೆ ಸೇವಿಸಿ ಅನಿಯಮಿತ ಮುಟ್ಟನ್ನು ಸರಿಪಡಿಸಿಕೊಳ್ಳಿ.

3. ಅಲೋವಿರಾ

3. ಅಲೋವಿರಾ

ಅಲೋವಿರಾ ಅಥವಾ ಲೋಳೆಯು ಋತುಚಕ್ರಕ್ಕೆ ಸಂಬಂಧಿಸಿದ ಹಾರ್ಮೋನ್‍ಗಳನ್ನು ಸರಿಪಡಿಸುತ್ತದೆ. ಇದನ್ನು ಸೇವಿಸುವ ಅತ್ಯುತ್ತಮ ಮಾರ್ಗವೆಂದರೆ ಅದು ಅಲೋವಿರಾ ಜ್ಯೂಸ್. ಇದರ ಜೊತೆಗೆ ಇದು ತೂಕವನ್ನು ಸಹ ನಿಯಂತ್ರಣದಲ್ಲಿಡುತ್ತದೆ.

4. ಅರಿಶಿನ

4. ಅರಿಶಿನ

ಇದು ಗರ್ಭಕೋಶಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಹಾಗಾಗಿ ಇದು ಋತು ಚಕ್ರವನ್ನು ಸರಿಪಡಿಸುವುದರ ಜೊತೆಗೆ, ಅದಕ್ಕೆ ಸಂಬಂಧಿಸಿದ ನೋವು ಮತ್ತು ಸೆಳೆತವನ್ನು ಸಹ ನಿವಾರಿಸುತ್ತದೆ.

5. ಪಪ್ಪಾಯ ಹಣ್ಣು

5. ಪಪ್ಪಾಯ ಹಣ್ಣು

ಅನಿಯಮಿತ ಮುಟ್ಟನ್ನು ಹೇಗೆ ಸರಿಪಡಿಸಿಕೊಳ್ಳುವುದು? ಪಪ್ಪಾಯ ಹಣ್ಣುಗಳನ್ನು ಸೇವಿಸಿ. ಇದು ಗರ್ಭಕೋಶಕ್ಕೆ ಕುಗ್ಗುವಿಕೆಯನ್ನು ತಡೆಯುತ್ತದೆ ಮತ್ತು ಅದಕ್ಕೆ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಹೀಗೆ ಇದು ನೇರವಾಗಿ ಗರ್ಭಕೋಶದ ಮೇಲೆ ವರ್ತಿಸುತ್ತದೆ. ಈ ರೀತಿ ಇದು ಅನಿಯಮಿತವಾದ ಮುಟ್ಟನ್ನು ಸರಿಪಡಿಸುತ್ತದೆ.

6. ಎಳ್ಳಿನ ಬೀಜಗಳು

6. ಎಳ್ಳಿನ ಬೀಜಗಳು

ಎಳ್ಳಿನಲ್ಲಿ ಅಧಿಕ ಪ್ರಮಾಣದ ಎಣ್ಣೆಯ ಅಂಶಗಳು ಇರುತ್ತವೆ. ಇವುಗಳು ಹಾರ್ಮೋನುಗಳ ಉತ್ಪಾದನೆಗೆ ಮತ್ತು ಅವುಗಳ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಹೀಗೆ ಇದು ಋತುಚಕ್ರದ ಸಮಸ್ಯೆಯನ್ನು ನಿವಾರಿಸುತ್ತದೆ. ಇದನ್ನು ನೀವು ಯಾವುದಾದರು ಒಂದು ಸಿಹಿ ತಿನಿಸಿನ ಮೇಲೆ ಚಿಮುಕಿಸಿಕೊಂಡು ಸೇವಿಸಬಹುದು.

7. ಬೆಲ್ಲ

7. ಬೆಲ್ಲ

ಬೆಲ್ಲದಲ್ಲಿ ಕಬ್ಬಿಣಾಂಶ ಮತ್ತು ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಕಬ್ಬಿಣಾಂಶವೇ ನಮ್ಮ ದೇಹದಲ್ಲಿರುವ ಅನಿಮಿಯಾದ ಸಮಸ್ಯೆಯನ್ನು ನಿವಾರಿಸಿ, ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ. ಅನಿಯಮಿತ ಮುಟ್ಟು ಸಮಸ್ಯೆಯನ್ನು ನಿವಾರಿಸಲು ಇದು ಸಹ ಒಂದು ಅತ್ಯುತ್ತಮ ಆಹಾರ ಪದಾರ್ಥವಾಗಿದೆ.

8. ಕ್ಯಾರೆಟ್ ಜ್ಯೂಸ್

8. ಕ್ಯಾರೆಟ್ ಜ್ಯೂಸ್

ಕ್ಯಾರೆಟ್‍ನಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು ಇರುತವೆ. ಇವುಗಳು ನಿಮ್ಮ ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ. ಆದ್ದರಿಂದ ನಿಮ್ಮ ದೈನಂದಿನ ಆಹಾರದಲ್ಲಿ ಕ್ಯಾರೆಟ್ ಇರುವಂತೆ ನೋಡಿಕೊಳ್ಳಿ. ಇದು ಸಹ ಮುಟ್ಟಿನ ಸಮಸ್ಯೆಯನ್ನು ದೂರ ಮಾಡಲು ಇರುವ ಒಂದು ಅತ್ಯುತ್ತಮವಾದ ಮನೆ ಮದ್ದಾಗಿದೆ.

9. ದ್ರಾಕ್ಷಿಗಳು

9. ದ್ರಾಕ್ಷಿಗಳು

ದ್ರಾಕ್ಷಿಗಳಲ್ಲಿ ಕಬ್ಬಿಣಾಂಶವಿರುತ್ತದೆ. ಹಾಗಾಗಿ ಇದು ಸಹ ಅನಿಮಿಯಾವನ್ನು ನಿವಾರಿಸುತ್ತದೆ. ಆ ಮೂಲಕ ಈ ದ್ರಾಕ್ಷಿಗಳು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಸಹ ನಿವಾರಿಸುತ್ತವೆ.

10. ಜೀರಿಗೆ

10. ಜೀರಿಗೆ

ಜೀರಿಗೆಯು ಸಹ ಅನಿಮಿಯಾದ ಸಮಸ್ಯೆಗೆ ಒಳ್ಳೆಯ ಔಷಧಿಯಾಗಿರುತ್ತದೆ. ನೆಗಡಿ ಮತ್ತು ಅಜೀರ್ಣದ ಸಮಸ್ಯೆಗಾಗಿ ಇದನ್ನು ಹಿಂದಿನ ಕಾಲದಿಂದಲು ಮನೆ ಮದ್ದಾಗಿ ಬಳಸುತ್ತಿದ್ದಾರೆ. ಇವುಗಳ ಜೊತೆಗೆ ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಸಹ ನಿವಾರಿಸಲು ಜೀರಿಗೆಯನ್ನು ಬಳಸಿಕೊಳ್ಳಬಹುದು.

11. ಮಜ್ಜಿಗೆ

11. ಮಜ್ಜಿಗೆ

ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ ಕಾಂಪ್ಲೆಕ್ಸ್, ಪ್ರೋಟಿನ್‍ಗಳು ಮತ್ತು ಪೊಟಾಶಿಯಂಗಳು ಇರುತ್ತವೆ. ವಿಟಮಿನ್ ಬಿ ಹಾರ್ಮೋನುಗಳ ಸ್ರವಿಸುವಿಕೆಗೆ ಸಹಾಯ ಮಾಡುತ್ತವೆ, ಹೀಗಾಗಿ ಇದು ಸಹ ಅನಿಯಮಿತವಾದ ಮುಟ್ಟಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

12. ಸೋಂಪು

12. ಸೋಂಪು

ಊಟದಲ್ಲಿ ಮತ್ತು ಊಟದ ನಂತರ ನಾವು ಸೇವಿಸುವ ಸೋಂಪು ಸಹ ಒಂದು ದಿವ್ಯೌಷಧಿ. ಇದು ಹಾರ್ಮೋನುಗಳ ಸ್ರವಿಸುವಿಕೆಯನ್ನು ಕ್ರಮ ಬದ್ಧಗೊಳಿಸುತ್ತದೆ ಮತ್ತು ಅವುಗಳನ್ನು ಸಮತೋಲನಗೊಳಿಸುತ್ತದೆ. ಇದರಲ್ಲಿರುವ ಎಸ್ಟ್ರೊಜೆನಿಕ್ ಪರಿಣಾಮಗಳು ಮಹಿಳೆಯರಲ್ಲಿನ ಸಂತಾನೋತ್ಪತಿ ವ್ಯವಸ್ಥೆಯನ್ನು ಸಮತೋಲನ ಮಾಡಿ, ಅವರಲ್ಲಿ ಕಂಡು ಬರುವ ಅನಿಯಮಿತವಾದ ಮುಟ್ಟಿನ ಸಮಸ್ಯೆಯನ್ನು ನಿವಾರಿಸುತ್ತವೆ.

13. ಕೊತ್ತಂಬರಿ ಬೀಜದ ರಸ

13. ಕೊತ್ತಂಬರಿ ಬೀಜದ ರಸ

ಧನಿಯಾ ಎಂದು ಸಹ ಕರೆಯಲ್ಪಡುವ ಕೊತ್ತಂಬರಿ ಬೀಜದ ರಸವನ್ನು ಸೇವಿಸುವುದರಿಂದ ಹಾರ್ಮೋನುಗಳ ಸ್ರವಿಸುವಿಕೆಯು ಕ್ರಮಬದ್ಧಗೊಳ್ಳುತ್ತದೆ. ಹೀಗೆ ಇದು ಋತುಚಕ್ರವನ್ನು ಕ್ರಮಬದ್ಧಗೊಳಿಸುವುದರ ಜೊತೆಗೆ, ಆಗ ಉಂಟಾಗುವ ನೋವನ್ನು ಸಹ ನಿವಾರಿಸುತ್ತದೆ.

14. ಹಾಗಲಕಾಯಿ

14. ಹಾಗಲಕಾಯಿ

ಹಾಗಲಕಾಯಿಯನ್ನು ಸೇವಿಸುವುದರಿಂದ ಮುಟ್ಟಿನ ಏರು ಪೇರಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದರ ಸದುಪಯೋಗವನ್ನು ಪಡೆಯಬೇಕೆಂದರೆ, ಇದನ್ನು ಜ್ಯೂಸ್ ರೂಪದಲ್ಲಿ ಸೇವಿಸಬೇಕು. ದಿನಕ್ಕೆ ಎರಡು ಬಾರಿ ಸೇವಿಸಿ, ನೋಡಿ ಮುಟ್ಟು ಹೇಗೆ ಕ್ರಮಬದ್ಧಗೊಳ್ಳುತ್ತದೆ ಎಂದು.

15. ಅಂಜೂರ ಮರದ ಬೇರುಗಳು

15. ಅಂಜೂರ ಮರದ ಬೇರುಗಳು

ಅಂಜೂರ ಮರದ ಬೇರುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಬಿಸಿ ನೀರಿನಲ್ಲಿ ಕಾಯಿಸಿ. ನಂತರ ಅದನ್ನು ಶೋಧಿಸಿ, ಆಗ ಸಿಗುವ ಡಿಕಾಕ್ಷನ್ ಅನ್ನು ಒಂದು ತಿಂಗಳ ಕಾಲ ಸೇವಿಸಿ. ಇದರಿಂದ ನಿಮ್ಮ ಮುಟ್ಟಿನ ಏರು ಪೇರು ಸಮಸ್ಯೆ ದೂರವಾಗುತ್ತದೆ.

16. ಪಾರ್ಸ್ಲೆ

16. ಪಾರ್ಸ್ಲೆ

ಇದನ್ನು ಸಾಮಾನ್ಯವಾಗಿ ಅಜ್ವನಾ ಎಂದು ಸಹ ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಎ,ಕೆ ಮತ್ತು ಸಿಗಳು ಅಧಿಕವಾಗಿರುತ್ತವೆ. ಅನಿಯಮಿತವಾದ ಮುಟ್ಟನ್ನು ನಿವಾರಿಸಲು ಇದು ಹೇಳಿ ಮಾಡಿಸಿದ ಆಹಾರ ಪದಾರ್ಥವಾಗಿರುತ್ತದೆ.

17. ಖರ್ಜೂರಗಳು

17. ಖರ್ಜೂರಗಳು

ಖರ್ಜೂರಗಳನ್ನು ಹಾಲಿನೊಂದಿಗೆ ಸೇವಿಸುವುದರಿಂದ ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದರಲ್ಲಿ ಕಬ್ಬಿಣಾಂಶವು ಅಧಿಕವಾಗಿರುತ್ತದೆ ಮತ್ತು ಇನ್ನಿತರ ಪೋಷಕಾಂಶಗಳು ಸಹ ಇದರಲ್ಲಿ ಹೆಚ್ಚಾಗಿರುತ್ತವೆ. ಹೀಗಾಗಿ ಇದು ಸಹ ಮುಟ್ಟಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಇರುವ ಒಂದು ಅತ್ಯುತ್ತಮ ಆಹಾರ ಪದಾರ್ಥವಾಗಿರುತ್ತದೆ.

English summary

17 Foods To Cure Irregular Periods

Irregular period, medically known as oligomenorrhea, is a common problem among women. It means infrequent periods with intervals of more than 35 days. But instead of going for medicines, you can try out some foods to cure irregular periods. Take a look.
X
Desktop Bottom Promotion