For Quick Alerts
ALLOW NOTIFICATIONS  
For Daily Alerts

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಏಳು ಪವರ್‌ಫುಲ್ ಜ್ಯೂಸ್

By Staff
|

ಆಧುನಿಕ ಹಾಗೂ ತಂತ್ರಜ್ಞಾನದ ಯುಗವೆಂದರೆ ಅದು ಒತ್ತಡದ ಜೀವನವೆನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲಿಗೆ ಹೋದರೂ ಪ್ರತಿಯೊಬ್ಬರು ಒತ್ತಡದಲ್ಲಿ ಜೀವನ ನಡೆಸುತ್ತಾ ಇರುವುದನ್ನು ನೋಡುತ್ತೇವೆ. ಇಂತಹ ಒತ್ತಡದಿಂದಾಗಿ ಇಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯು ಸಾಮಾನ್ಯವಾಗಿದೆ. ವಯಸ್ಸಿನ ಭೇದವಿಲ್ಲದೆ ಪುರುಷರು ಹಾಗೂ ಮಹಿಳೆಯರಿಗೆ ಅಧಿಕ ರಕ್ತದೊತ್ತಡ ಸಮಸ್ಯೆಯು ಬರುತ್ತಲಿದೆ. ಇಂತಹ ಸಮಸ್ಯೆ ಒಮ್ಮೆ ಬಂದರೆ ಅದು ವಂಶಪಾರಂಪರ್ಯವಾಗಿ ಮುಂದುವರಿಯುತ್ತಾ ಇರುತ್ತದೆ. ಅತಿಯಾದ ರಕ್ತದೊತ್ತಡದಿಂದ ಬಳಲುತ್ತಾ ಇರುವವರು ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಇದು ಪ್ರಾಣಕ್ಕೆ ಅಪಾಯ ತಂದೊಡ್ಡಬಲ್ಲದು.

ಅಧಿಕ ರಕ್ತದೊತ್ತಡದ ಸಮಸ್ಯೆಯಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿ ಬರಬಹುದು. ಇದರಿಂದ ವ್ಯಕ್ತಿಯು ಸರಿಯಾದ ಔಷಧಿಯೊಂದಿಗೆ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಅದರಿಂದ ಖಂಡಿತವಾಗಿಯೂ ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆ ಮಾಡಬಹುದು. ತಿನ್ನುವಂತಹ ಹಲವಾರು ಆಹಾರಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿ ಅದರಿಂದ ಆರೋಗ್ಯ ಕೆಡಬಹುದು ಎಂದು ಅಧ್ಯಯನಗಳು ಹೇಳಿವೆ. ಈ ಲೇಖನದಲ್ಲಿ ಬೋಲ್ಡ್ ಸ್ಕೈ ಅಧಿಕ ರಕ್ತದೊತ್ತಡವನ್ನು ತಹಬಂದಿಗೆ ತರಲು ಕೆಲವು ಆಹಾರಗಳೂ ನೆರವು ನೀಡುತ್ತವೆ. ಇವುಗಳಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲವು ಜ್ಯೂಸ್‌ಗಳನ್ನು ನೀಡಿದ್ದೇವೆ ಮುಂದೆ ಓದಿ...

ಜ್ಯೂಸ್ ರೆಸಿಪಿ #1

ಜ್ಯೂಸ್ ರೆಸಿಪಿ #1

ಮೂರು ಕ್ಯಾರೆಟ್, ಒಂದು ಬೀಟ್ರೂಟ್, ಕೊಂಚ ಸೆಲೆರಿ ಎಲೆಗಳು, ಐದು ಎಸಳು ಸೌತೆಕಾಯಿ, ಒಂದು ಮರಸೇಬು ಮತ್ತು ಒಂದು ಚಿಕ್ಕತುಂಡು ಹಸುಶುಂಠಿ, ಈ ಎಲ್ಲವನ್ನೂ ಜ್ಯೂಸರಿನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ ಸೋಸಿ ರಸ ಸಂಗ್ರಹಿಸಿ. ಈ ರಸವನ್ನು ನಿತ್ಯವೂ ಬೆಳಿಗ್ಗಿನ ಹೊತ್ತಿನಲ್ಲಿ ಸತತವಾಗಿ ಒಂದು ವಾರ ಕುಡಿಯಿರಿ, ಬಳಿಕ ಬೀಪಿ ತಪಾಸಿಸಿದರೆ ಅಚ್ಚರಿ ಕಂಡುಬರಲಿದೆ.

ಜ್ಯೂಸ್ ರೆಸಿಪಿ #2

ಜ್ಯೂಸ್ ರೆಸಿಪಿ #2

ಬಿಪಿ ಕಡಿಮೆಯಾಗಲು ನಿಮ್ಮ ದಿನದ ಪ್ರಥಮ ಆಹಾರವಾಗಿ ಒಂದು ಲೀಟರ್ ಬೀಟ್ರೂಟ್ ಜ್ಯೂಸ್ ಅನ್ನು ನಿಧಾನವಾಗಿ, ಕೊಂಚ ಕೊಂಚವಾಗಿ ಕುಡಿಯುತ್ತಾ ಬನ್ನಿ. ಒಂದೇ ವಾರದಲ್ಲಿ ಬಿಪಿ ಕಡಿಮೆಯಾಗಿರುವುದನ್ನು ಕಂಡು ಅಚ್ಚರಿ ಪಡುತ್ತೀರಿ.

ಜ್ಯೂಸ್ ರೆಸಿಪಿ #3

ಜ್ಯೂಸ್ ರೆಸಿಪಿ #3

ಕಿತ್ತಳೆ ಮತ್ತು ಸೆಲೆರಿ ಎಲೆಗಳನ್ನು ಸಮಪ್ರಮಾಣದಲ್ಲಿ ಜ್ಯೂಸರಿನಲ್ಲಿ ಗೊಟಾಯಿಸಿ ರಸ ಸಂಗ್ರಹಿಸಿ. ಈ ಜ್ಯೂಸ್ ಅನ್ನು ಒಂದು ವಾರದ ಕಾಲ ಕುಡಿಯಿರಿ. ಬೀಪಿ ತುಂಬಾ ಹೆಚ್ಚಿಲ್ಲದೇ ಇದ್ದರೆ ಕಿತ್ತಳೆ ಇಲ್ಲದೇ ಬರೇ ಸೆಲೆರಿ ಎಲೆಗಳನ್ನು ಕುಡಿದರೂ ಸಾಕು.

ಜ್ಯೂಸ್ ರೆಸಿಪಿ #4

ಜ್ಯೂಸ್ ರೆಸಿಪಿ #4

ಒಂದು ಸೌತೆ, ಮೂರು ಟೊಮಾಟೊ, ಒಂದು ನೀರುಳ್ಳಿ, ಕೆಲವು ಪಾರ್ಸ್ಲೆ ಎಲೆಗಳು, ಅರ್ಧ ಲಿಂಬೆಯ ರಸ ಎಲ್ಲವನ್ನೂ ಮಿಕ್ಸಿಯಲ್ಲಿ ಗೊಟಾಯಿಸಿ ರಸ ಸಂಗ್ರಹಿಸಿ ನಿತ್ಯವೂ ಕುಡಿಯಿರಿ.

ಜ್ಯೂಸ್ ರೆಸಿಪಿ #5

ಜ್ಯೂಸ್ ರೆಸಿಪಿ #5

ಎರಡು ಸೇಬು, ಒಂದು ಕಪ್ ಕೇಲ್ ಎಲೆಗಳು, ಒಂದು ಚಿಕ್ಕ ತುಂಡು ಹಸಿಶುಂಠಿ, ಒಂದು ಸೌತೆ, ಕೆಲವು ಸೆಲೆರಿ ಎಲೆಗಳನ್ನು ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ಗೊಟಾಯಿಸಿ. ರುಚಿಗೆ ಕೊಂಚ ಲಿಂಬೆರಸವನ್ನೂ ಸೇರಿಸಬಹುದು.

ಜ್ಯೂಸ್ ರೆಸಿಪಿ #6

ಜ್ಯೂಸ್ ರೆಸಿಪಿ #6

ಎರಡು ಕಟ್ಟು ಕೊತ್ತಂಬರಿ ಸೊಪ್ಪು, ಎರಡು ಸೌತೆ, ಒಂದು ಸೇಬು ಮತ್ತು ಒಂದು ಹಸಿಮೆಣಸು (ಬೀಜ ನಿವಾರಿಸಿದ್ದು) ಹಾಗೂ ಕೊಂಚ ಲಿಂಬೆ ರಸ ಸೇರಿಸಿ ಚೆನ್ನಾಗಿ ಗೊಟಾಯಿಸಿ ಸೇವಿಸಿ.

ಜ್ಯೂಸ್ ರೆಸಿಪಿ #7

ಜ್ಯೂಸ್ ರೆಸಿಪಿ #7

ಒಂದು ದೊಡ್ಡ ಟೊಮಾಟೋ, ಒಂದು ಸೌತೆ, ಒಂದು ಕಟ್ಟು ಕೊತ್ತಂಬರಿ ಸೊಪ್ಪು ಮತ್ತು ಕೊಂಚ ಸೆಲೆರಿ ಎಲೆಗಳನ್ನು ಸೇರಿಸಿ ಗೊಟಾಯಿಸಿ ಕುಡಿಯಿರಿ. ಈ ಮೇಲಿನ ಯಾವುದೇ ಜ್ಯೂಸ್ ಅನ್ನು ಅನುಸರಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದೇ ಅವರು ಮಾಡುವ ಆಯ್ಕೆಯನ್ನೇ ನಿಮ್ಮ ಆಯ್ಕೆಯಾಗಿಸಿಕೊಳ್ಳಿ.

English summary

7 Miraculous Juice Remedies For High BP

People suffering from high blood pressure have to take regular medication in order to control their BP. Sometimes, even after trying many medicines, controlling it tends to become difficult. keeping your blood pressure in control is the key. Yes, some foods can lower blood pressure. Here are some juice recipes which may help you control your BP.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more