ಈ ಏಳು ಹಣ್ಣುಗಳ ಜ್ಯೂಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು

By Arshad
Subscribe to Boldsky

ಆರೋಗ್ಯಕ್ಕಾಗಿ ಹಣ್ಣುಗಳ ರಸ ಕುಡಿಯುವುದು ಎಷ್ಟು ಉತ್ತಮ ಎಂದು ಎಲ್ಲರೂ ಅರಿತಿದ್ದಾರೆ. ಅಂತೆಯೇ ಲಾಭಕೋರರೂ ಈ ಮನಃಸ್ಥಿತಿಯನ್ನು ಅರಿತು ಮಾರುಕಟ್ಟೆಯಲ್ಲಿ ಹಣ್ಣಿನ ಸ್ವಾದವಿರುವ ಕೃತಕ ರಸಗಳ ಪಾನೀಯಗಳನ್ನು ಭಾರೀ ಪ್ರಮಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಅಬ್ಬರದ ಪ್ರಚಾರ ಮತ್ತು ಸುಲಭವಾಗಿ ಲಭ್ಯವಾಗುವ ಕಾರಣ ಗ್ರಾಹಕರು ನಿಜವಾದ ಹಣ್ಣಿನ ರಸ ಎಂದೇ ಈ ಪಾನೀಯಗಳನ್ನು ಕುಡಿಯುತ್ತಾರೆ.      ಸಮೃದ್ಧ ಪೋಷಕಾಂಶಭರಿತ ಹಣ್ಣುಗಳ ಆರೋಗ್ಯಕಾರಿ ಲಾಭಗಳೇನು?

ಆದರೆ ವಾಸ್ತವವಾಗಿ ಇವುಗಳಲ್ಲಿ ಹಣ್ಣಿನ ರಸದ ಪ್ರಮಾಣ ಅತ್ಯಲ್ಪವಾಗಿದ್ದು ಉಳಿದಂತೆ ಸಂರಕ್ಷಕ, ಕೃತಕ ಸ್ವಾದ ಮತ್ತು ರುಚಿಗಾಗಿ ಸೇರಿಸಿದ ಸಕ್ಕರೆಯ ಪ್ರಮಾಣವೇ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಆದರೆ ಮನೆಯಲ್ಲಿಯೇ ತಯಾರಿಸುವುದಾದರೆ ಯಾವ ಜ್ಯೂಸ್ ಉತ್ತಮ? ಇದಕ್ಕೆ ಬರೆಯ ಬಾಳೆ, ಕಿತ್ತಳೆ ಎಂಬ ಉತ್ತರ ನೀಡಿದರೆ ಆಕಳಿಕೆ ಬರಬಹುದು.

ಬದಲಿಗೆ ಕೊಂಚ ಶುಂಠಿ ಸೇರಿಸಿ ಎರಡು ಮೂರು ಹಣ್ಣುಗಳನ್ನು ಬೆರೆಸಿ ಮಾಡುವ ಪೇಯ ಅತ್ಯಂತ ಆರೋಗ್ಯಕರವೂ, ಭಿನ್ನ ರುಚಿಯಿಂದ ಕೂಡಿದ್ದು ಆಸಕ್ತಿ ಕೆರಳಿಸುವಂತಹದ್ದೂ, ಸೋಮಾರಿತನವನ್ನು ಓಡಿಸುವ ಹುರುಪನ್ನೂ ನೀಡುತ್ತದೆ. ಬನ್ನಿ ಇಂತಹ ಏಳು ಬಗೆಯ ಜ್ಯೂಸ್‌ಗಳ ಬಗ್ಗೆ ಮುಂದೆ ಓದಿ...

ಕ್ಯಾರೆಟ್+ಶುಂಠಿ+ ಸೇಬು

ಕ್ಯಾರೆಟ್+ಶುಂಠಿ+ ಸೇಬು

ಇದು ಕೊಂಚ ಖಾರ ಸಿಹಿ ಮಿಶ್ರಣದ ರಸವಾಗಿದ್ದು ಇದರ ಸೇವನೆಯಿಂದ ಹೊಟ್ಟೆ ಮತ್ತು ಜಠರಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ವಾರಕ್ಕೊಂದು ಬಾರಿಯಾದರೂ ಈ ಸಂಯೋಜನೆಯ ರಸವನ್ನು ಕುಡಿದು ಲಾಭವನ್ನು ಪಡೆಯಿರಿ.

ಟೊಮೇಟೊ+ಕ್ಯಾರೆಟ್+ಸೇಬು

ಟೊಮೇಟೊ+ಕ್ಯಾರೆಟ್+ಸೇಬು

ಉಸಿರಾಟದ ದುರ್ವಾಸನೆಯನ್ನು ತಡೆಯಲು ಈ ಸಂಯೋಜನೆ ಅತ್ಯುತ್ತಮವಾಗಿದೆ. ಅಲ್ಲದೇ ನಿಯಮಿತವಾಗಿ ಕುಡಿದಾಗ ಚರ್ಮಕ್ಕೂ ಉತ್ತಮವಾಗಿದ್ದು ಕಾಂತಿ ಹೆಚ್ಚುತ್ತದೆ.

ಸೇಬು + ಸೌತೆ + ಸೆಲೆರಿ ಎಲೆಗಳು

ಸೇಬು + ಸೌತೆ + ಸೆಲೆರಿ ಎಲೆಗಳು

ಒಂದು ವೇಳೆ ಅತೀವ ತಲೆನೋವು ಅಥವಾ ಹೊಟ್ಟೆನೋವು ಬಾಧಿಸುತ್ತಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಅಲ್ಲದೇ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲು ಮತ್ತು ಕೆಲವು ಬಗೆಯ ಕ್ಯಾನ್ಸರ್ ಬರುವುದನ್ನು ತಡೆಗಟ್ಟಲೂ ಈ ಪೇಯ ಅತ್ಯುತ್ತಮವಾಗಿದೆ.

ಅನಾನಸು + ಸೇಬು + ಕಲ್ಲಂಗಡಿ

ಅನಾನಸು + ಸೇಬು + ಕಲ್ಲಂಗಡಿ

ಈ ಸಂಯೋಜನೆ ಉತ್ತಮವಾದ ಮೂತ್ರವರ್ಧಕ ಗುಣಗಳನ್ನು ಹೊಂದಿದ್ದು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಅಲ್ಲದೇ ಸಂಗ್ರಹಗೊಂಡಿದ್ದ ವಿಷಕಾರಿ ವಸ್ತುಗಳನ್ನು ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ.

ಹಾಗಲಕಾಯಿ + ಸೇಬು + ಹಾಲು

ಹಾಗಲಕಾಯಿ + ಸೇಬು + ಹಾಲು

ಒಂದು ವೇಳೆ ಬಿಸಿಲಿನ ತಾಪದಿಂದ ಮೈ ಬಿಸಿ ಏರಿದ್ದು ಸುಸ್ತು ಆವರಿಸಿದ್ದರೆ ಈ ಸಂಯೋಜನೆ ಅತ್ಯುತ್ತಮವಾದ ಪರಿಹಾರ ನೀಡಬಲ್ಲದು.

ಬಾಳೆ + ಅನಾನಸು + ಹಾಲು

ಬಾಳೆ + ಅನಾನಸು + ಹಾಲು

ಮಲಬದ್ಧತೆಯ ತೊಂದರೆಗೆ ಒಳಗಾಗಿದ್ದರೆ ಈ ಸಂಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಚೈತನ್ಯ ನೀಡುವ ಜೊತೆಗೇ ಜೀರ್ಣಶಕ್ತಿಯನ್ನೂ ಉತ್ತಮಗೊಳಿಸುತ್ತದೆ.

ಕ್ಯಾರೆಟ್ + ಸೇಬು + ಮರಸೇಬು + ಮಾವು

ಕ್ಯಾರೆಟ್ + ಸೇಬು + ಮರಸೇಬು + ಮಾವು

ಒಂದು ವೇಳೆ ಅಧಿಕ ರಕ್ತದೊತ್ತಡ ಬಾಧಿಸುತ್ತಿದ್ದರೆ ಮತ್ತು ಬಿಸಿಲಿನ ಝಳದಿಂದ ಸುಸ್ತು ಆವರಿಸಿದ್ದರೆ ಈ ಸಂಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ದೇಹದ ವಿಷಕಾರಿ ವಸ್ತುಗಳನ್ನು ವಿಸರ್ಜಿಸಲೂ ನೆರವಾಗುತ್ತದೆ.

 
For Quick Alerts
ALLOW NOTIFICATIONS
For Daily Alerts

    English summary

    7 Healthy Juices To Drink Regularly

    We all know that juices are good for health. But if you wish to make the best of the juices you consume, ensure that you don't mix sugar in them and also don't filter all the pulp out of them as you will miss the fibre. Also, it is better to prepare your juices at home instead of buying them outside.Now, here is a list of some juices that are good for health. Try to consume them regularly to maintain good health.
    Story first published: Friday, August 26, 2016, 7:02 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more