For Quick Alerts
ALLOW NOTIFICATIONS  
For Daily Alerts

ಋತುಚಕ್ರದಲ್ಲಿ ಏರುಪೇರು-ಮರೆಯದೇ ಈ ಟಿಪ್ಸ್ ಪಾಲಿಸಿ

By Manjula balaraj
|

ಮಹಿಳೆಯರಿಗೆ ಋತುಚಕ್ರ ಸರಿಯಾದ ಸಮಯದಲ್ಲಾಗ ಬೇಕಾಗಿರುವ ಒಂದು ನೈಸರ್ಗಿಕ ಪ್ರಕ್ರಿಯೆ. ಇದರಲ್ಲಿ ಸ್ವಲ್ಪ ಲೋಪದೋಷ ಕಂಡುಬಂದರೂ ಮಹಿಳೆಯರಿಗೆ ಒಂದಲ್ಲಾ ಒಂದು ತೊಂದರೆ ನಿಶ್ಚಿತ. ಈ ಪ್ರಕ್ರಿಯೆ ಸರಿಯಾದ ಸಮಯದಲ್ಲಿ ಆಗಲು ಎಷ್ಟು ಮುತುವರ್ಜಿ ವಹಿಸಬೇಕೋ, ಅಷ್ಟೇ ಸರಿಯಾದ ಸಮಯದಲ್ಲಾಗದಿದ್ದ ಪಕ್ಷದಲ್ಲಿ ಕೆಲವೊಂದು ಪಥ್ಯ/ ಮೆನೆಮದ್ದು ಮಾಡಲೇಬೇಕಾಗುತ್ತದೆ.

ಈ ಲೇಖನದಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವವರು ಮಾಡಬೇಕಾಗಿರುವ ಸುಲಭ ಮನೆವಿಧಾನಗಳನ್ನು ತಿಳಿಸುತ್ತಿದ್ದೇವೆ. ಋತುಚಕ್ರವು ಸಂತಾನೋತ್ಪತ್ತಿಯ ಒಂದು ಹಂತ, ಎಲ್ಲಾ ಮಹಿಳೆಯರೂ ಈ ಸಮಯದಲ್ಲಿ ಒಂದಲ್ಲಾ ಒಂದು ತೊಂದರೆಗಳನ್ನು ಅನುಭವಿಸುವುದು ಮಾಮೂಲಿ. ಬಹಳಷ್ಟು ಮಹಿಳೆಯರಿಗೆ ಋತುಚಕ್ರ ಸರಿಯಾಗಿ ಆಗದೆ ಅದರಲ್ಲಿ ಏರುಪೇರು ಕಂಡುಬರುವುದರಿಂದ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಾರೆ.

ಪ್ರತೀ ತಿಂಗಳು ಋತುಚಕ್ರದಲ್ಲಿ ಅಸಹಜ ರೀತಿಯಲ್ಲಿ ಏರು ಪೇರಾಗುವುದು ಕಂಡುಬರುತ್ತದೆ, ಇದಕ್ಕೆ ಕಾರಣಗಳು ಅನೇಕ. ಇದು ನೋಡಲು ಸಾಮಾನ್ಯ ತೊಂದರೆಯೆಂದು ಕಂಡು ಬಂದರೂ ಅದರಿಂದ ಜೀವಕ್ಕೆ ಅಪಾಯವಾಗುವಂತಹ ಅನೇಕ ತೊಂದರೆಗಳುಂಟಾಗುವ ಸಾಧ್ಯತೆ ಇಲ್ಲದಿಲ್ಲ. ಋತುಚಕ್ರದ ಈ ಅಸಹಜತೆಯನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಅವು ಯಾವುದೆಂದರೆ ಒಲಿಗೊಮೆನೊಹೊಯಿ ಅಥವಾ 35 ದಿನಗಳ ಅವಧಿಯಲ್ಲಿ ಋತುಚಕ್ರವಾಗುವುದು ಮತ್ತು ಪೊಲಿಮೆನ್ಹೊರಿಯ ಅಥವಾ ಪತೀ ತಿಂಗಳು 21 ದಿನಗಳಿಗೆ (ಮುಂಚಿತವಾಗಿ) ಮುಟ್ಟಾಗುವುದು.

ಋತುಚಕ್ರವು ಸರಿಯಾದ ಸಮಯದಲ್ಲಿ ಆಗದೇ, ಮುಂದಕ್ಕೆ ಹೋಗುತ್ತಾ ಒಂದು ತಿಂಗಳಿಗಿಂತ ಜಾಸ್ತಿ ಸಮಯದಲ್ಲಿ ಆಗುವವರಿಗೆ ವರ್ಷಕ್ಕೆ 4 ರಿಂದ 9 ಸಲ ಆಗಬಹುದು. ಅನಿಮಿಯತವಾಗಿ ಆಗುವ ಮುಟ್ಟಿನ ತೊಂದರೆ ಹೆಚ್ಚಾಗಿ ವೈದ್ಯಕೀಯ ಪರಿಸ್ಥಿತಿ ಅಥವಾ ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತದೆ. ಹಾರ್ಮೋನುಗಳ ಅಸಮತೋಲನದಿಂದ ಮೊದಲು ಮುಟ್ಟಿನ ಸಮಯದಲ್ಲಿ ಅನಿಯಮಿತವಾಗಿ ಬ್ಲೀಡಿಂಗ್ ಆಗುವುದಲ್ಲದೆ ಋತುಬಂಧದ ಸಮಯದಲ್ಲಿ ತುಂಬಾ ಏರುಪೇರು ಉಂಟಾಗಬಹುದು. ಹಾರ್ಮೋನ್ ಗಳಲ್ಲಾಗುವು ಈ ವ್ಯತ್ಯಾಸವನ್ನು ಹೊಂದಿಕೊಳ್ಳಲು ದೇಹಕ್ಕೆ ಸ್ವಲ್ಪ ಕಷ್ಟವಾಗಬಹುದು. ಅನಿಮಿಯತವಾಗಿ ಆಗುವ ಋತುಚಕ್ರವನ್ನು ಸರಿಯಾಗಿ ಆಗುವಂತೆ ಮಾಡಲು ಕೆಲವು ಮನೆಯಲ್ಲೇ ಮಾಡಬಹುದಾದ ಪರಿಹಾರೋಪಾಯಗಳು ಇಲ್ಲಿವೆ...

ಎಳ್ಳು

ಎಳ್ಳು

ಎಳ್ಳಿನಲ್ಲಿ ಅನೇಕ ಪೌಷ್ಟಿಕಾಂಶಗಳಿವೆ, ಅದರಲ್ಲಿರುವ ಖನಿಜಾಂಶಗಳು, ವಿಟಮಿನ್ ಗಳು ಋತುಚಕ್ರ ವನ್ನು ಸರಿಯಾಗಿ ಆಗುವಂತೆ ಮಾಡುವುದಲ್ಲದೇ ಈ ಸಮಯದಲ್ಲಾಗುವ ನೋವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ರಾತ್ರಿ ನೀರಿನಲ್ಲಿ ಎಳ್ಳನ್ನು ನೆನೆಸಿ ಮರುದಿನ ಆ ನೀರನ್ನು ಸೋಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಮುಟ್ಟು ಸಮಯಕ್ಕೆ ಸರಿಯಾಗಿ ಆಗುವಂತೆ ಮಾಡುತ್ತದೆ.

ಜೀರಿಗೆ ಕಾಳು

ಜೀರಿಗೆ ಕಾಳು

ಋತುಚಕ್ರದ ಅವಧಿಯಲ್ಲಿ ಉಂಟಾಗುವ ನೋವನ್ನು ತಡೆಗಟ್ಟಲು ಜೀರಿಗೆ ನೀರು ತುಂಬಾ ಪರಿಣಾಮಕಾರಿ. ಇದರಲ್ಲಿ ಕಬ್ಬಿಣದ ಸತ್ವವು ಹೇರಳವಾಗಿರುತ್ತದೆ. ಋತುಚಕ್ರದ ಅವಧಿಯಲ್ಲಿ ಕಬ್ಬಿಣಾಂಶವು ದೇಹದಿಂದ ತುಂಬಾ ಹೋಗುವುದರಿಂದ ಜೀರಿಗೆ ನೀರು ಕುಡಿಯುವುದು ತುಂಬಾ ಉಪಯುಕ್ತ. ಒಂದು ಟೀ ಚಮಚ ಜೀರಿಗೆ ಪುಡಿಗೆ ಒಂದು ಟೀ ಚಮಚ ಜೇನಿನೊಂದಿಗೆ ಬೆರೆಸಿ ಸೇವಿಸುವುದರಿಂದ ಋತುಚಕ್ರ ಕ್ರಮವಾಗಿ ಆಗುವುದಲ್ಲದೆ ಸ್ನಾಯುಗಳ ಸೆಳೆತದಿಂದ ಪಾರುಮಾಡುತ್ತದೆ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಪಪ್ಪಾಯದಲ್ಲಿ ಹೇರಳವಾದ ಪೌಷ್ಟಿಕಾಂಶದ ಅಂಶವಿದೆ, ಇದರಲ್ಲಿ ನೋವು ನಿವಾರಕ ಅಂಶಗಳೂ ಸಾಕಷ್ಟಿವೆ. ಪಪ್ಪಾಯಿ ಹಣ್ಣು ಗರ್ಭಪಾತ ತಡೆಗಟ್ಟುವುದಕ್ಕೆ ಅತ್ಯುತ್ತಮವಾದ ಹಣ್ಣುಹಂಪಲು ಎನ್ನುವ ಹೆಸರಿದೆ. ಜೊತೆಗೆ, ಇದು ಮುಟ್ಟಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಆಗುವಂತೆ ಮಾಡಲು ಸಹಾಯ ಮಾಡುತ್ತದೆ. ಹಣ್ಣಾಗದ ಪಪ್ಪಾಯಿಯನ್ನು ಕೂಡ ದಿನ ನಿತ್ಯ ಸೇವಿಸುವುದರಿಂದ ಅನಿಮಿಯಿತವಾಗಿ ನಡೆಯುವ ಮುಟ್ಟಿನ ಸಮಸ್ಯೆಯಿಂದ ಪಾರಾಗಬಹುದು. ಪಪಾಯಿ ಹಣ್ಣು ಋತುಬಂಧದ ಸಮಯದಲ್ಲಿ ಆಗುವ ಅನಿಮಿಯತ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ದಾಸವಾಳ ಹೂವು

ದಾಸವಾಳ ಹೂವು

ದಾಸವಾಳದ ಹೂವು ಋತುಚಕ್ರದ ಸಮಯದಲ್ಲಿ ಅಂಡಾಣು ಸರಿಯಾಗಿ ಕಾರ್ಯನಿರ್ವಹಿಸುವಲ್ಲಿ ಸಹಾಯ ಮಾಡುವುದರಿಂದ ತಿಂಗಳಿಗೊಮ್ಮೆ ಬರುವ ಮುಟ್ಟು ಸರಿಯಾದ ಸಮಯದಲ್ಲಿ ಆಗುವಂತೆ ಮಾಡಲು ದಾಸವಾಳದ ಹೂವು ಸಹಕಾರಿಯಾಗುತ್ತದೆ.

ಪವಿತ್ರ ತುಳಸಿ

ಪವಿತ್ರ ತುಳಸಿ

ಹಲವು ಕಾಯಿಲೆ ನಿವಾರಿಸಲು ನೈಸರ್ಗಿಕವಾಗಿ ಪರಿಹಾರ ನೀಡುವ ಭಂಡಾರ ಎಂದೇ ಹೆಸರಾಗಿರುವ ತುಳಸಿ, ಋತುಚಕ್ರ ಸರಿಯಾದ ಸಮಯದಲ್ಲಾಗಲು ಸೂಕ್ತವಾದ ನೈಸರ್ಗಿಕ ಬಳಕೆಯ ವಸ್ತು. ಮುಟ್ಟು ಸರಿಯಾದ ಸಮಯದಲ್ಲಾಗಲು ಮತ್ತು ಈ ಸಮಯದಲ್ಲಿನ ನೋವು ನಿವಾರಣೆಗೆ, ಒಂದು ಟೀಚಮಚ ಜೇನುತುಪ್ಪದ ಜೊತೆಗೆ ತುಳಸಿಯ ದಳದ ರಸವನ್ನು ಮಿಶ್ರಣ ಮಾಡಿ ಕುಡಿಯಬೇಕು. ಇದು ಋತುಚಕ್ರ ಸರಿಯಾಗಿ ಆಗಲು ಮತ್ತು ಮುಟ್ಟಿನ ಸಮಸ್ಯೆಯನ್ನು ಸರಿದಾರಿಗೆ ತರಲು ತುಳಸಿ ಸೂಕ್ತ ನೈಸರ್ಗಿಕ ವಿಧಾನ.

English summary

5 Unbeatable Remedies To Manage Irregular Periods

Menstruation is an obligatory phase that all women have to come to terms with during their reproductive years. All isn't well throughout the reproductive years, as many women suffer from irregular periods at the onset and, sometimes, over the course of their reproductive years.
Story first published: Monday, April 4, 2016, 20:39 [IST]
X
Desktop Bottom Promotion