For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಒಂಬತ್ತರ ನಂತರ, ಕಾಫಿ ಸೇವಿಸಿ! ಕೇಳಿ ಆಶ್ಚರ್ಯವಾಯಿತೇ?

By Super
|

ಕಾಫಿ ಎಂಬ ಪೇಯ ಹೆಚ್ಚಿನ ಭಾರತೀಯರಿಗೆ ಬೆಳಗ್ಗಿನ ಪ್ರಥಮ ಆಹಾರವಾಗಿದೆ. ಕಾಫಿ ಪ್ರಿಯರಿಗೆ ದಿನಕ್ಕೆ ಹತ್ತಾರು ಕಪ್ ಕಾಫಿ ಕುಡಿಯದಿದ್ದರೆ ಏನನ್ನೋ ಕಳೆದುಕೊಂಡಂತೆ. ವಾಸ್ತವವಾಗಿ ಕೆಫೀನ್ ಎಂಬ ಪೋಷಕಾಂಶವನ್ನು ಹೊಂದಿರುವ ಕಾಫಿ ಪೇಯಕ್ಕಿಂತಲೂ ಔಷಧಿಯ ರೂಪದಲ್ಲಿಯೇ ಹೆಚ್ಚು ಬಳಕೆಯಾಗುತ್ತದೆ.

ಈ ಪೋಷಕಾಂಶ ಮೆದುಳಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದರಿಂದ ಬೆಳಿಗ್ಗೆ ಎದ್ದ ಕೂಡಲೇ ಸೇವಿಸುವುದು ಉತ್ತಮವಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅದರಲ್ಲೂ ತಡವಾಗಿ ಎದ್ದು ತಡವಾಗಿ ಕಛೇರಿಗೆ ಹೋಗುವವರು ಕಛೇರಿ ತಲುಪಿದ ಬಳಿಕವೇ ಕಾಫಿಯನ್ನು ತರಿಸುವುದು ಉತ್ತಮ ಎಂದು ಅಭಿಪ್ರಾಯ ಪಡುತ್ತಾರೆ.

AsapSCIENCE ಎಂಬ ಸಂಸ್ಥೆ ಕಾಫಿ ಕುಡಿದ ಮೇಲೆ ಕೆಫೀನ್ ದೇಹದ ಮೇಲೆ ಮಾಡುವ ಪರಿಣಾಮಗಳ ಸುದೀರ್ಘ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದೆ, ಎಂದರೆ ಬೆಳಿಗ್ಗೆ ಒಂಬತ್ತು ಗಂಟೆಗೂ ಮೊದಲು ಸೇವಿಸಿದ ಕಾಫಿ ವಿಷಕಾರಿ. ಈ ಆಘಾತಕಾರಿ ಮಾಹಿತಿಯನ್ನು ಸಂಸ್ಥೆ ವೀಡಿಯೋ ರೂಪದಲ್ಲಿ ಜಗತ್ತಿಗೆ ಪರಿಚಯಿಸಿ ಈ ಬಗ್ಗೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಈಗ ನೋಡೋಣ:

ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ

ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ

ರಾತ್ರಿ ಎಷ್ಟು ತಡವಾಗಿ ಮಲಗಿದರೂ ಬೆಳಿಗ್ಗೆ ಮಾತ್ರ ನಿತ್ಯವೂ ಎಚ್ಚರಾಗುವ ಸಮಯಕ್ಕೇ ಎಚ್ಚರಾಗುವುದನ್ನು ಗಮನಿಸಿದ್ದೀರಾ? ಪ್ರವಾಸಕ್ಕೆ ಹೋಗಲು ಬೆಳಿಗೆ ನಾಲ್ಕು ಗಂಟೆಗೆ ಏಳಲೇಬೇಕೆಂದು ನಾಲ್ಕು ಗಂಟೆಗೆ ಅಲಾರಾಂ ಇಟ್ಟು ಮಲಗಿದವರಿಗೆ ನಾಲ್ಕು ಗಂಟೆಗೆ ಒಂದೆರಡು ನಿಮಿಷ ಮುನ್ನವೇ ಎಚ್ಚರಾಗುವುದನ್ನು ಗಮನಿಸಿದ್ದೀರಾ? ಹೌದು, ಇವೆಲ್ಲಾ ನಮ್ಮ ದೇಹದಲ್ಲಿರುವ ಜೈವಿಕ ಗಡಿಯಾರದ ಕರಾಮತ್ತು. ದೇಹ ಎಚ್ಚರಾಗಲು ಮತ್ತು ಎಚ್ಚರವಾಗಿಯೇ ಇರಲು ನಮ್ಮ ದೇಹದಲ್ಲಿ ಕಾರ್ಟಿಸೋಲ್ (cortisol) ಎಂಬ ರಸದೂತ ಸ್ರವಿತವಾಗುತ್ತದೆ. ಇದೇ ಜೈವಿಕ ಗಡಿಯಾರವನ್ನು ನಿಯಂತ್ರಿಸುವ ಪರಿಕರ.ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ

ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ

ಸ್ವಾಭಾವಿಕವಾಗಿ ನಮ್ಮ ದೇಹದಲ್ಲಿ ಬೆಳಿಗ್ಗೆ ಎಂಟರಿಂದ ಒಂಭತ್ತರ ನಡುವೆ, ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ, ಮತ್ತು ಸಂಜೆ ಐದೂವರೆಯಿಂದ ಆರೂವರೆಯ ನಡುವೆ ನಿಯಮಿತವಾಗಿ ಈ ರಸದೂತ ಬಿಡುಗಡೆಯಾಗುತ್ತದೆ. ಕಾಫಿಯಲ್ಲಿರುವ ಕೆಫೀನ್ ಈ ರಸದೂತವನ್ನು ಬಲವಂತವಾಗಿ ಬಿಡುಗಡೆ ಮಾಡುವ ಕ್ಷಮತೆ ಹೊಂದಿರುವುದರಿಂದ (ಇದೇ ಇದರ ಔಷಧೀಯ ಗುಣ) ಈಗಾಗಲೇ ಎಚ್ಚರಗೊಂಡಿರುವ ದೇಹವನ್ನು ಮತ್ತೊಮ್ಮೆ ಎಚ್ಚರಗೊಳ್ಳುವಂತೆ ತಪ್ಪು ಸಂದೇಶ ನೀಡುತ್ತದೆ. ಇದು ಇತರ ಅಗತ್ಯ ಸಂದೇಶಗಳ ಮೇಲೆ ಪರಿಣಾಮ ಬೀರಿ ದೇಹದ ಜೈವಿಕ ಗಡಿಯಾರದ ಸಮತೋಲನವನ್ನೇ ಏರುಪೇರುಗೊಳಿಸಬಹುದು. ಅಂದರೆ ನಿದ್ದೆಯ ಸಮಯದಲ್ಲಿ ಎಚ್ಚರಾಗಿರುವುದು, ಎಚ್ಚರಾಗಿರುವ ಸಮಯದಲ್ಲಿ ಭಾರೀ ನಿದ್ದೆ ಬರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಕೆಲಸದ ಹೊತ್ತಿನಲ್ಲಿ ಕುಡಿದ ಕಾಫಿ ಮತ್ತಷ್ಟು ಕುಡಿಯಲು ಪ್ರೇರೇಪಿಸುತ್ತದೆ

ಕೆಲಸದ ಹೊತ್ತಿನಲ್ಲಿ ಕುಡಿದ ಕಾಫಿ ಮತ್ತಷ್ಟು ಕುಡಿಯಲು ಪ್ರೇರೇಪಿಸುತ್ತದೆ

ಕಾರ್ಟಿಸೋಲ್ ದೇಹದಲ್ಲಿ ಸ್ರವಿತವಾಗುವ ಸಮಯದಲ್ಲಿ ಕಾಫಿ ಕುಡಿದಾಗ ಕಾರ್ಟಿಸೋಲ್ ನೈಸರ್ಗಿಕವಾಗಿ ದೇಹದ ಮೇಲೆ ಬೀರಬಹುದಾದ ಪರಿಣಾಮಗಳ ಮೇಲೆ ಕಾಫಿಯಲ್ಲಿರುವ ಕೆಫೀನ್ ಪರಿಣಾಮ ಬೀರುತ್ತದೆ. ಇದು ರಸದೂತದ ಕ್ಷಮತೆಯನ್ನು ಕುಗ್ಗಿಸುತ್ತದೆ. ಈಗ ದೇಹ ರಸದೂತದ ಪರಿಣಾಮವಿಲ್ಲದೇ ಮೆದುಳಿನ ಕ್ಷಮತೆಯಲ್ಲಿ ಏರುಪೇರಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೆಲಸದ ಹೊತ್ತಿನಲ್ಲಿ ಕುಡಿದ ಕಾಫಿ ಮತ್ತಷ್ಟು ಕುಡಿಯಲು ಪ್ರೇರೇಪಿಸುತ್ತದೆ

ಕೆಲಸದ ಹೊತ್ತಿನಲ್ಲಿ ಕುಡಿದ ಕಾಫಿ ಮತ್ತಷ್ಟು ಕುಡಿಯಲು ಪ್ರೇರೇಪಿಸುತ್ತದೆ

ಇದನ್ನು ಸರಿಪಡಿಸಲು ಮೆದುಳು ಕಾರ್ಟಿಸೋಲ್ ಬೇಕು ಎಂಬ ಬೇಡಿಕೆ ಇಡುತ್ತದೆ. ಇದು ಇನ್ನಷ್ಟು ಕಾಫಿ ಸೇವನೆಗೆ ಪ್ರೇರಣೆ ನೀಡುತ್ತಿದೆ ಎಂದೇ ನಮಗನ್ನಿಸುತ್ತದೆ. ಇದಕ್ಕೆ ಮಣಿದ ನಾವು ಎರಡನೇ ಅಥವಾ ಮೂರನೆಯ ಕಫ್ ಕಾಫಿ ಕುಡಿದು ಈ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತೇವೆ. ಈ ಸ್ಥಿತಿ ಆರೋಗ್ಯಕ್ಕೆ ಹಾನಿಕರವಾಗಿದೆ.

ಹಾಗಾದರೆ ಕಾಫಿ ಕುಡಿಯುವುದು ಯಾವಾಗ?

ಹಾಗಾದರೆ ಕಾಫಿ ಕುಡಿಯುವುದು ಯಾವಾಗ?

ತಜ್ಞರ ಪ್ರಕಾರ ಕಾಫಿ ಕುಡಿಯಲು ಸೂಕ್ತ ಸಮಯ ಎಂದರೆ ಬೆಳಿಗ್ಗೆ ಒಂಬತ್ತರ ನಂತರ ಆದರೆ ಮಧ್ಯಾಹ್ನ ಒಂದು ಗಂಟೆಗೂ ಮೊದಲು ಮತ್ತು ಸಂಜೆ ಮೂರೂವರೆ ಮತ್ತು ನಾಲ್ಕುವರೆಯ ನಡುವೆ ಆಗಿದೆ. ಸಂಜೆ ಆರುವರೆಯ ಬಳಿಕ ಸರ್ವಥಾ ಕೂಡದು. ಏಕೆಂದರೆ ಇದು ನಮ್ಮ ರಾತ್ರಿಯ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ.

ಹಾಗಾದರೆ ಬೆಳಿಗ್ಗೆ ಬೆಡ್ ಕಾಫಿ ಕುಡಿಯುವವರ ಗತಿ?

ಹಾಗಾದರೆ ಬೆಳಿಗ್ಗೆ ಬೆಡ್ ಕಾಫಿ ಕುಡಿಯುವವರ ಗತಿ?

ಅಧ್ಯಯನಗಳ ಪ್ರಕಾರ ದೇಹ ಕಾರ್ಟಿಸೋಲ್ ರಸದೂತದ ಪರಿಣಾಮಕ್ಕೆ ಸ್ಪಂದಿಸಲು ಸೂರ್ಯನ ಬೆಳಕು ಸಹಾ ಪೂರಕವಾಗಿದೆ. ಬೆಳಿಗ್ಗೆ ಎದ್ದಾಕ್ಷಣ ನಮ್ಮ ದೇಹದಲ್ಲಿ ಈ ಕಾರ್ಟಿಸೋಲ್ ನ ಪ್ರಭಾವ ಶೇಖಡಾ ಐವತ್ತರಷ್ಟಿರುತ್ತದೆ. ಹಾಗಾಗಿ ಬೆಳಿಗ್ಗೆದ್ದ ತಕ್ಷಣ ಕಾಫಿ ಕುಡಿಯುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕಾಫಿ ಕುಡಿಯದೇ ಆಗದು ಎಂಬ ಸ್ಥಿತಿಯಲ್ಲಿರುವವರು ಎಚ್ಚರಾದ ಒಂದು ಗಂಟೆಯ ಬಳಿಕ ಒಂದು ಕಾಫಿ ಕುಡಿಯುವುದು ಉತ್ತಮ.

ಕಾಫಿ ಸೇವನೆಯ ಮಾದರಿ ಸಮಯವೇನು

ಕಾಫಿ ಸೇವನೆಯ ಮಾದರಿ ಸಮಯವೇನು

ಕಾರ್ಟಿಸೋಲ್ ನ ಕ್ಷಮತೆ ಬೆಳಿಗ್ಗೆ ಎದ್ದಾಕ್ಷಣ ಐವತ್ತು ಶೇಖಡಾ ಇದ್ದು ನಂತರ ನಿಧಾನವಾಗಿ ಏರುತ್ತಾ ಎಂಟು ಮತ್ತು ಒಂಬತ್ತು ಗಂಟೆಯ ನಡುವೆ ಗರಿಷ್ಟವಿರುತ್ತದೆ. ಒಂದು ವೇಳೆ ನೀವು ಬೆಳಿಗ್ಗೆ ಏಳು ಗಂಟೆಗೆ ಎಚ್ಚರಾಗಿ ಎಂಟು ಘಂಟೆಗೆ ಕೆಲಸಕ್ಕೆ ಹೊರಡುತ್ತೀರಿ ಎಂದುಕೊಂಡರೆ ಒಂಭತ್ತು ಗಂಟೆಯ ಬಳಿಕ, ಅಂದರೆ ಸುಮಾರು ಹತ್ತು ಗಂಟೆಗೆ ಮೊದಲ ಕಪ್ ಕಾಫಿ ಕುಡಿಯಬಹುದು. ಆರು ಗಂಟೆಗೆ ಎದ್ದರೂ ಮೊದಲ ಕಪ್ ಕಾಫಿಯನ್ನು ಸೇವಿಸಲು ಒಂಭತ್ತು ಗಂಟೆಯಾಗಲು ಕಾಯಬೇಕು.

ಕಾಫಿ ಸೇವನೆಯ ಮಾದರಿ ಸಮಯವೇನು

ಕಾಫಿ ಸೇವನೆಯ ಮಾದರಿ ಸಮಯವೇನು

ಮಧ್ಯಾಹ್ನ ಒಂದು ಗಂಟೆಗೆ ಇದರ ಪರಿಣಾಮ ಹೆಚ್ಚಿರುವುದರಿಂದ ಮತ್ತು ಮಧ್ಯಾಹ್ನದ ಊಟದ ಸಮಯವಾದುದರಿಂದ ಈ ಸಮಯದಲ್ಲಿ ಕಾಫಿ ಸೇವನೆ ಒಳ್ಳೆಯದಲ್ಲ. ಊಟದ ಬಳಿಕ ಸುಮಾರು ಎರಡರಿಂದ ಮೂರು ಗಂಟೆಯ ನಂತರ ಅಂದರೆ ನಾಲ್ಕು ಗಂಟೆಯ ಆಸುಪಾಸು ಒಂದು ಕಪ್ ಕುಡಿಯುವುದು ಲೇಸು. ಈ ಪ್ರಕಾರ ದಿನಕ್ಕೆರಡು ಕಫ್ ಕಾಫಿಯ ಸೇವನೆ ಆರೋಗ್ಯಕರವಾಗಿದೆ.

English summary

Why You Should Never Drink Your Coffee Before 9 A.M

For years now we thought we understood coffee – when do drink it and how often to drink it. It’s drug after all, and we should be fully aware of how and when to use it properly. If you are a late-riser or prefer to take your coffee when you get into work.
X
Desktop Bottom Promotion