For Quick Alerts
ALLOW NOTIFICATIONS  
For Daily Alerts

ಬೆಳಗಿನ ಜಾವ ಸೇವಿಸಿ- ಬಿಸಿ ಬಿಸಿಯಾದ ಬೆಣ್ಣೆ ಕಾಫಿ!

By manu
|

ನಮ್ಮೆಲ್ಲರ ನೆಚ್ಚಿನ ಕಾಫಿ ಈಗ ವಿವಿಧ ರೂಪಗಳಲ್ಲಿ ಲಭಿಸುತ್ತಿದೆ. ಅದರಲ್ಲೂ ಬಹುರಾಷ್ಟ್ರೀಯ ಸಂಸ್ಥೆಗಳ ಒಡೆತನದ ಕಾಫಿ ಕೆಫೆಗಳು ದುಬಾರಿಯಾದರೂ ರುಚಿಕರವಾದ ಮತ್ತು ವಿವಿಧ ಸ್ವಾದಗಳಲ್ಲಿ ಕಾಫಿಯ ರುಚಿಯನ್ನು ಹೆಚ್ಚಿಸಲು ನೆರವಾಗುತ್ತಿವೆ. ಹಿಂದೆಂದೂ ಕೇಳರಿಯದಿದ್ದ ಐಸ್ ಕ್ರೀಂ ಕಾಫಿ ಸಹಾ ಜನಪ್ರಿಯಗೊಳ್ಳುತ್ತಿದೆ.

ಕೆಫೆಯಲ್ಲಿಯೂ ಅಲ್ಲದೇ ಮನೆಯಲ್ಲಿಯೂ ಜನಪ್ರಿಯತೆ ಪಡೆಯುತ್ತಿರುವ ಕಾಫಿಯ ಇನ್ನೊಂದು ಅವತಾರವೆಂದರೆ ಬೆಣ್ಣೆ ಸೇರಿಸಿದ ಕಾಫಿ. ಇದೊಂದು ಆರೋಗ್ಯಕರ ಪೇಯವಾಗಿದ್ದು ನಿಮ್ಮ ಬೆಳಗಿನ ಉಪಾಹಾರಕ್ಕೆ ಅತ್ಯುತ್ತಮವಾಗಿದೆ ಎಂದು ಆಹಾರ ತಜ್ಞರೂ ಅಭಿಪ್ರಾಯಪಡುತ್ತಾರೆ. ಕಾಫಿ ಬೇಡವೆಂದರೆ ನಿಮ್ಮ ಬೆಳಗಿನ ಚಹಾದಲ್ಲಿ ಸಹಾ ಬೆಣ್ಣೆಯನ್ನು ಸೇರಿಸಿ ಇನ್ನಷ್ಟು ಸ್ವಾದಿಷ್ಟಕರವಾಗಿಸಬಹುದು. ಘಮ ಘಮ ಕಾಫಿಯ ಸ್ವಾದಕ್ಕೆ ಬೆರಗಾಗದವರು ಯಾರಿದ್ದಾರೆ ಹೇಳಿ?

ಒಂದು ವೇಳೆ ಬೆಳಗ್ಗಿನ ಉಪಾಹಾರಕ್ಕೆ ಸಮಯವುಳಿದೇ ಇಲ್ಲದಿದ್ದಾಗ ಉಪಾಹಾರವನ್ನು ತ್ಯಜಿಸುವುದಕ್ಕಿಂತ ಒಂದು ಕಪ್ ಬೆಣ್ಣೆ ಸೇರಿಸಿದ ಕಾಫಿ ಕುಡಿದರೆ ಉಪಾಹಾರದ ಬಹುತೇಕ ಕೊರತೆಯನ್ನು ಪೂರ್ಣಗೊಳಿಸಿದಂತಾಗುತ್ತದೆ. ಬೆಣ್ಣೆ ನಿಧಾನವಾಗಿ ಕರಗುತ್ತಿದ್ದಾಗ ಹೀರುವ ಚಹಾ ಅಥವಾ ಕಾಫಿ ಸಿಹಿಯೊಂದಿಗೆ ಕೊಂಚವೇ ಉಪ್ಪಾದ ಬೆಣ್ಣೆಯ ಪದರ ಕೇವಲ ಮೇಲಿಂದ ಮೇಲಕ್ಕೆ ನಾಲಿಗೆಯ ಮೇಲ್ಭಾಗವನ್ನು ಆವರಿಸುತ್ತಿದ್ದಂತೆ ವಿಶಿಷ್ಟ ಅನುಭವವುಂಟಾಗುತ್ತದೆ. ಇದರ ಉಪಯೋಗಗಳೇನು ಎಂಬ ಬಗ್ಗೆ ಕೆಳಗಿನ ಸ್ಲೈಡ್ ಶೋ ಉಪಯುಕ್ತ ಮಾಹಿತಿಯನ್ನು ನೀಡುತ್ತಿದೆ.. ಆರೋಗ್ಯವನ್ನು ವೃದ್ಧಿಸಲು ದಿನಕ್ಕೊಂದು ಕಪ್ ಕಾಫಿ ಸಾಕು!

ತಕ್ಷಣ ಶಕ್ತಿ ದೊರಕುತ್ತದೆ

ತಕ್ಷಣ ಶಕ್ತಿ ದೊರಕುತ್ತದೆ

ಬೆಣ್ಣೆ ಸೇರಿಸಿದ ಪೇಯ ಕುಡಿದ ತಕ್ಷಣವೇ ದೇಹದಲ್ಲಿ ಚೈತನ್ಯ ತುಂಬುತ್ತದೆ. ಏಕೆಂದರೆ ಈ ಪೇಯವನ್ನು ಕುಡಿದಾಕ್ಷಣ ರಕ್ತದಲ್ಲಿ ಸೇರುವ ಕೀಟೋನ್‌ಗಳೆಂಬ ಶಕ್ತಿತುಂಬಿದ ಕಣಗಳು ಲಭ್ಯವಾಗುತ್ತದೆ. ಮುಂದೆ ಓದಿ

ತಕ್ಷಣ ಶಕ್ತಿ ದೊರಕುತ್ತದೆ

ತಕ್ಷಣ ಶಕ್ತಿ ದೊರಕುತ್ತದೆ

ಈ ಕೀಟೋನ್ ಗಳು ವಾಸ್ತವವಾಗಿ ಕೊಬ್ಬಿನ ಮೂಲಕ ಲಭ್ಯವಾಗುವ ಕಣಗಳಾಗಿದ್ದು ಕೊಬ್ಬು ಕರಗಿ ಇದು ಸಿಗಲು ಸಮಯಾವಕಾಶ ಬೇಕಾಗುವುದರಿಂದ ತಕ್ಷಣದ ಶಕ್ತಿಗಾಗಿ ಬೆಣ್ಣೆಯಿಂದ ಲಭಿಸಿದ ಈ ಕೀಟೋನ್ ಉಪಯುಕ್ತವಾಗಿದೆ. ಇದು ಆರೋಗ್ಯಕರ ಶಕ್ತಿಯಾಗಿದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಬೆಳಗಿನ ಪೇಯದಲ್ಲಿ ಬೆಣ್ಣೆ ಸೇರಿಸುವುದರಿಂದ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಹೇಗೆಂದರೆ ಈ ಶಕ್ತಿ ದೇಹಕ್ಕೆ ಲಭಿಸಲು ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಬೇಕಾಗುತ್ತದೆ. ಅದರಲ್ಲೂ ಹಸುವಿನ ತುಪ್ಪ (Grass fed butter) ಬಳಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಹೃದಯಕ್ಕೂ ಒಳ್ಳೆಯದು

ಹೃದಯಕ್ಕೂ ಒಳ್ಳೆಯದು

ಬೆಣ್ಣೆ ಸೇರಿಸಿದ ಪೇಯವನ್ನು ಮುಂಜಾನೆ ಕುಡಿಯುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ವಿಟಮಿನ್ ಕೆ ದೊರಕುತ್ತದೆ. ಇದು ಹೃದಯಕ್ಕೆ ಉಪಯುಕ್ತವಾದ ಪೋಷಕಾಂಶವಾಗಿದ್ದು ಹೃದಯದ ಆರೋಗ್ಯ ವೃದ್ಧಿಸುತ್ತದೆ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಒಂದು ವೇಳೆ ಮಲಬದ್ಧತೆಯ ತೊಂದರೆಯಿದ್ದರೆ ಪ್ರತಿದಿನ ಮುಂಜಾನೆ ಒಂದು ಕಪ್ ಬೆಣ್ಣೆ ಸೇರಿಸಿದ ಕಾಫಿ ಕುಡಿಯುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಇದು ನಂತರದ ಊಟಗಳಲ್ಲಿರುವ ನಾರುಗಳನ್ನು ಗಟ್ಟಿಯಾಗದಂತೆ ತಡೆದು ಮಲಬದ್ಧತೆಯಿಂದ ರಕ್ಷಿಸುತ್ತದೆ.

ಮೆದುಳಿಗೂ ಒಳ್ಳೆಯದು

ಮೆದುಳಿಗೂ ಒಳ್ಳೆಯದು

ಮೆದುಳಿನ ಕಾರ್ಯಕ್ಷಮತೆಗೆ ಉತ್ತಮ ಪ್ರಮಾಣದ ರಕ್ತಸಂಚಾರದ ಅಗತ್ಯವಿದೆ. ಬೆಣ್ಣೆಯಲ್ಲಿರುವ ಕೊಬ್ಬುಗಳು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕಾರಣ ಮುಂಜಾನೆಯ ಒಂದು ಕಪ್ ಇಡಿಯ ದಿನ ಚೈತನ್ಯದಿಂದಿರಲು ನೆರವಾಗಬಲ್ಲದು.

ಮೆದುಳಿಗೂ ಒಳ್ಳೆಯದು

ಮೆದುಳಿಗೂ ಒಳ್ಳೆಯದು

ಅಲ್ಲದೇ ಈ ಕೊಬ್ಬು ಜೀವಕೋಶಗಳ ಕವಚವನ್ನು ದೃಢಗೊಳಿಸಲು ನೆರವಾಗುವುದರಿಂದ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಹೆಚ್ಚಿನ ಆಹಾರ ತಿನ್ನುವ ಬಯಕೆಯನ್ನು ಕಡಿಮೆಗೊಳಿಸುತ್ತದೆ

ಹೆಚ್ಚಿನ ಆಹಾರ ತಿನ್ನುವ ಬಯಕೆಯನ್ನು ಕಡಿಮೆಗೊಳಿಸುತ್ತದೆ

ನಮ್ಮೆಲ್ಲರಲ್ಲಿಯೂ ಒಬ್ಬ ತಿಂಡಿಪೋತನಿದ್ದಾನೆ. ಯಾವುದಾದರೂ ಆಹಾರವಸ್ತುವನ್ನು ಕಂಡಾಕ್ಷಣ ಇದು ತನಗೆ ಬೇಕು ಎಂದು ಹಠಹಿಡಿಯುತ್ತಾನೆ. ಈತನ ಉಪಟಳವನ್ನು ತಡೆಯಲಾಗದೇ ಹೆಚ್ಚಿನವರು ಸೋತುಬಿಡುತ್ತಾರೆ.

ಹೆಚ್ಚಿನ ಆಹಾರ ತಿನ್ನುವ ಬಯಕೆಯನ್ನು ಕಡಿಮೆಗೊಳಿಸುತ್ತದೆ

ಹೆಚ್ಚಿನ ಆಹಾರ ತಿನ್ನುವ ಬಯಕೆಯನ್ನು ಕಡಿಮೆಗೊಳಿಸುತ್ತದೆ

ಆದರೆ ಬೆಳಗಿನ ಬೆಣ್ಣೆ ಸೇರಿಸಿದ ಕಾಫಿಯನ್ನು ಕುಡಿದ ಬಳಿಕ ಈ ತಿಂಡಿಪೋತ ಬೆಣ್ಣೆಯನ್ನು ಸವಿಯುವಲ್ಲಿ ಮಗ್ನನಾಗಿರುವುದರಿಂದ ಎದುರಿಗೆ ಆಹಾರವಿದ್ದರೂ ಆತನ ಗಮನ ಹರಿಯದೇ ತಿನ್ನಲು ಮನಸ್ಸಾಗದೇ ಹೋಗುತ್ತದೆ.

ಬಟರ್ ಕಾಫಿ ರೆಸಿಪಿ ಮಾಡುವ ವಿಧಾನ

ಬಟರ್ ಕಾಫಿ ರೆಸಿಪಿ ಮಾಡುವ ವಿಧಾನ

ಒಂದು ಕಪ್ ನೀರು ಬಿಸಿಮಾಡಿ ಒಂದು ದೊಡ್ಡ ಚಮಚ ಕಾಫಿಪುಡಿ ಸೇರಿಸಿ. ಬಳಿಕವೇ ಕುದಿಸಿ. ಕುದಿ ಬಂದತಕ್ಷಣ ಇಳಿಸಿ ಒಂದು ದೊಡ್ಡ ಚಮಚ ಬೆಣ್ಣೆ ಸೇರಿಸಿ. ಈ ದ್ರವವನ್ನು ಮಿಕ್ಸಿಯ ದೊಡ್ಡ ಜಾರ್ ಗೆ (ಸ್ಟೀಲ್ ನ ಜಾರ್ ಮಾತ್ರ, ಪ್ಲಾಸ್ಟಿಕ್ ಜಾರ್ ಸರ್ವಥಾ ಕೂಡದು) ಹಾಕಿ ಒಂದು ನಿಮಿಷದ ವರೆಗೆ ಗೊಟಾಯಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಟರ್ ಕಾಫಿ ರೆಸಿಪಿ ಮಾಡುವ ವಿಧಾನ

ಬಟರ್ ಕಾಫಿ ರೆಸಿಪಿ ಮಾಡುವ ವಿಧಾನ

ಕೂಡಲೇ ಲೋಟಕ್ಕೆ ನೊರೆಬರಿಸಿ ಸುರಿಯಿರಿ, ಬಿಸಿಬಿಸಿಯಿರುವಂತೆಯೇ ಸವಿಯಿರಿ. (ಒಂದು ವೇಳೆ ಗೊಟಾಯಿಸಿದ ಬಳಿಕ ತಣ್ಣಗಾಗಿದೆ ಎಂದರೆ ಮತ್ತೊಮ್ಮೆ ಬಿಸಿ ಮಾಡಿ, ಆದರೆ ಕುದಿ ಬರಿಸಬೇಡಿ)

English summary

Why You Should Add Butter To Coffee?

These days a visit to a cafe' day in the city will surprise you! Along with the simple cup of cappuccino, the menu will provide you with more things that will shock you out of wits. Stirring grass fed butter into your morning coffee is something every health expert is advising you to try. Here is why you should add butter to your cup of coffee, take a look:
X
Desktop Bottom Promotion