For Quick Alerts
ALLOW NOTIFICATIONS  
For Daily Alerts

ರಂಜಾನ್ ಮಾಸದಲ್ಲಿ ಖರ್ಜೂರಕ್ಕೆ ಏಕೆ ಅಷ್ಟೊಂದು ಮಹತ್ವ?

By Super
|

ಮುಸ್ಲಿಮರಿಗೆ ಪವಿತ್ರವಾದ ರಂಜಾನ್ ಮಾಸ ಪ್ರಾರಂಭವಾಗಿದೆ. ದಿನಕ್ಕೆ ಸುಮಾರು ಹದಿನಾಲ್ಕು ಗಂಟೆಗಳ ಕಾಲ ಆಹಾರ, ನೀರನ್ನು ಬಿಟ್ಟು ಪ್ರಾರ್ಥನೆ ಪ್ರವಚನಗಳಲ್ಲಿ ತೊಡಗುವ ಮುಸ್ಲಿಮರು ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತಮ್ಮ ಅಂದಿನ ಉಪವಾಸವನ್ನು ಸಂಪನ್ನಗೊಳಿಸುತ್ತಾರೆ. ಮಸೀದಿಯಿಂದ ಬಾಂಗ್ ಕರೆಯ ಪ್ರಥಮ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಏಕಕಾಲದಲ್ಲಿ ಎಲ್ಲರೂ ಮೊತ್ತ ಮೊದಲು ಬಾಯಿಗೆ ಹಾಕಿಕೊಳ್ಳುವ ಆಹಾರ ಏನೆಂದು ಗೊತ್ತೇ? ಅದೇ ಖರ್ಜೂರ. ಮರುಭೂಮಿಯ ಬೆಳೆಯಾದ ಖರ್ಜೂರವನ್ನು ಪ್ರಥಮ ಆಹಾರವನ್ನಾಗಿ ಸ್ವೀಕರಿಸಬೇಕೆಂದು ಪ್ರವಾದಿಗಳೇ ತಿಳಿಸಿದ್ದಾರೆ.

ಆದರೆ ವಾಸ್ತವವಾಗಿ ಉಪವಾಸದ ಬಳಿಕ ಪ್ರಥಮ ಆಹಾರವಾಗಲು ಧಾರ್ಮಿಕ ಕಾರಣದ ಜೊತೆಗೇ ಇದರ ಪೋಷಕಾಂಶಗಳೂ ಕಾರಣವಾಗಿವೆ. ಇದರ ಪೋಷಕಾಂಶಗಳು ಮತ್ತು ಉಪವಾಸದ ಬಳಿಕ ನಮ್ಮ ದೇಹ ಲಭ್ಯವಾಗುವ ಆಹಾರವನ್ನು ಸೇವಿಸುವ ಕ್ರಮ, ಆ ಹೊತ್ತಿನಲ್ಲಿ ಜೀರ್ಣಾಂಗ, ನರಮಂಡಲ, ರಕ್ತಪರಿಚಲನೆ ಮೊದಲಾದ ಎಲ್ಲಾ ವ್ಯವಸ್ಥೆಗಳು ಕಾರ್ಯ ನಿರ್ವಹಿಸುವ ವಿಧಾನಗಳನ್ನು ಕೂಲಂಕುಷವಾಗಿ ಅಭ್ಯಸಿಸಿದ ಆಹಾರತಜ್ಞರು ಈ ಹೊತ್ತಿನಲ್ಲಿ ಸೇವಿಸಲು ಖರ್ಜೂರಕ್ಕಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಮಹತ್ವ

ದಿನವಿಡೀ ಉಪವಾಸವಿರುವಾಗ ದೇಹ ನಿತ್ಯದ ಇತರ ಚಟುವಟಿಕೆಗಳಿಗೆ ದೇಹದಲ್ಲಿ ಶೇಖರವಾಗಿದ್ದ ಕೊಬ್ಬನ್ನು ಬಳಸುತ್ತಿರುತ್ತದೆ. ಒಂದು ವೇಳೆ ಈ ಹೊತ್ತಿನಲ್ಲಿ ಅತಿ ಸಿಹಿ ಇರುವ ಅಥವಾ ಅತಿಕ್ಷಾರದ ಅಥವಾ ಅತಿಹೆಚ್ಚು ಪ್ರೋಟೀನ್ ಇರುವ ಆಹಾರ ಸೇವಿಸಿದರೆ ಒಮ್ಮೆಲೇ ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲೋರಿಗಳು ಲಭ್ಯವಾಗಿ ದೇಹದ ಸಮತೋಲನವೇ ತಪ್ಪುತ್ತದೆ. ಮೆದುಳಿಗೆ ರಕ್ತಪರಿಚಲನೆ ಕಡಿಮೆಯಾಗಿ ತಲೆಸುತ್ತುವ ಅಪಾಯವೂ ಇದೆ. ಆದರೆ ಖರ್ಜೂರದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಸಿಲೆನಿಯಂ, ಕರಗದ ಮತ್ತು ಕರಗುವ ನಾರು, ಸಕ್ಕರೆಗಳಾದ ಸುಕ್ರೋಸ್, ಗ್ಲೂಕೋಸ್, ಫ್ರುಕ್ಟೋಸ್ ಮೊದಲಾದವು ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿದ್ದು ಜೀರ್ಣಾಂಗಗಳು ಹೀರಿಕೊಳ್ಳುವ ಸಾಮರ್ಥ್ಯಕ್ಕೆ ಸರಿಯಾಗಿ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತಾ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.

ದಿನವಿಡೀ ಇರುವ ಉಪವಾಸವನ್ನು ಸೂಕ್ತ ರೀತಿಯಿಂದ ಆಚರಿಸದೇ ಇದ್ದರೆ ಹಲವು ತೊಂದರೆಗಳು ಎದುರಾಗುತ್ತವೆ. ಮಲಬದ್ಧತೆ ಇದರಲ್ಲಿ ಮುಖ್ಯವಾದುದು. ನಿತ್ಯ ಖರ್ಜೂರದ ಸೇವನೆಯಿಂದ ಈ ತೊಂದರೆ ದೂರವಾಗಿ ಇಡಿಯ ತಿಂಗಳು ಮಲಬದ್ಧತೆಯಾಗದಿರಲು ಸಹಕರಿಸುತ್ತದೆ. ಈ ಅದ್ಭುತ ಫಲದ ಉತ್ತಮ ಗುಣಗಳು ಈ ಪವಿತ್ರ ಮಾಸದಲ್ಲಿ ಹೇಗೆ ನೆರವಾಗುತ್ತದೆ ಎಂಬ ಬಗ್ಗೆ ಇನ್ನೂ ಕೆಲವು ವಿವರಗಳನ್ನು ಈಗ ನೋಡೋಣ.

ದೇಹಕ್ಕೆ ಅಗತ್ಯವಿರುವಷ್ಟು ಶಕ್ತಿಯನ್ನು ಖರ್ಜೂರ ನೀಡುತ್ತದೆ

ದೇಹಕ್ಕೆ ಅಗತ್ಯವಿರುವಷ್ಟು ಶಕ್ತಿಯನ್ನು ಖರ್ಜೂರ ನೀಡುತ್ತದೆ

ಇಡಿಯ ದಿನ ಆಹಾರವಿಲ್ಲದೇ ಬಳಲಿದ್ದ ದೇಹಕ್ಕೆ ಅಗತ್ಯವಿದ್ದಷ್ಟು ಪ್ರಮಾಣದ ಶಕ್ತಿಯನ್ನು ಖರ್ಜೂರ ಶೀಘ್ರವೇ ನೀಡುತ್ತದೆ. ಪೆಪ್ಸಿ, ಸೆವನ್ ಅಪ್ ಗಳಂತಹ ಗುಳ್ಳೆಬರುವ ಪೇಯಗಳನ್ನು ಕುಡಿದಾಗಲೂ ಇದಕ್ಕಿಂತ ಹೆಚ್ಚು ಶಕ್ತಿ ಒಮ್ಮೆಲೇ ಲಭ್ಯವಾದರೂ ಇದನ್ನು ಬಳಸಿಕೊಳ್ಳಲು ದೇಹ ಸಿದ್ಧವಿಲ್ಲದ ಕಾರಣ ಈ ಅಪಾರ ಶಕ್ತಿ ದೇಹಕ್ಕೆ ಮಾರಕವಾಗಿ ಪರಿಗಣಿಸಬಹುದು. ಆದ್ದರಿಂದ ಅನಾರೋಗ್ಯಕರ ಸಿದ್ಧ ಪೇಯಗಳಿಗೆ ಬದಲಾಗಿ ಗ್ಲುಕೋಸ್, ಫ್ರುಕ್ಟೋಸ್ ನಂತಹ ಸಕ್ಕರೆಗಳು ಸೂಕ್ತಪ್ರಮಾಣದಲ್ಲಿರುವ ಖರ್ಜೂರವನ್ನೇ ಸೇವಿಸುವುದು ಅತ್ಯುತ್ತಮ ಆಯ್ಕೆಯಾಗಿದೆ.

ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ಸೂರ್ಯೋದಯಕ್ಕೂ ಎಷ್ಟೋ ಮುಂಚೆ ಊಟ ಮಾಡಿ ಉಪವಾಸವನ್ನು ಪ್ರಾರಂಭಿಸಿರುವ ಕಾರಣ ಕೆಲವು ಗಂಟೆಗಳಲ್ಲಿಯೇ ಹೊಟ್ಟೆ ಬರಿದಾಗುತ್ತದೆ. ನಂತರದ ದೀರ್ಘ ಅವಧಿಯನ್ನು ಖಾಲಿಹೊಟ್ಟೆಯಲ್ಲಿಯೇ ಕಳೆಯಬೇಕಾಗುತ್ತದೆ. ಈ ಅವಧಿಯಲ್ಲಿ, ವಿಶೇಷವಾಗಿ ದೇಹದಲ್ಲಿ ನೀರಿಲ್ಲದ ಕಾರಣ ವಿಷಕಾರಕ ವಸ್ತುಗಳನ್ನು ಹೊರಗಟ್ಟುವುದು ಕಷ್ಟವಾಗುತ್ತದೆ. ಆದರೆ ಖರ್ಜೂರದಲ್ಲಿರುವ ಹಲವು ಪೋಷಕಾಂಶಗಳು ನಿಧಾನವಾಗಿ ದೇಹಕ್ಕೆ ಲಭ್ಯವಾಗಿ ನೀರಿಲ್ಲದ ಸಮಯದಲ್ಲಿಯೂ ದೇಹದ ವಿಷಕಾರಕ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ. ಜೊತೆಗೇ ರಕ್ತನಾಳಗಳೊಳಗೆ ಅಂಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್(LDL-Low density Lipoproteins) ಗಳನ್ನೂ ಹೊರಹಾಕಲು ನೆರವಾಗುತ್ತದೆ, ತನ್ಮೂಲಕ ದೇಹಕ್ಕೆ ಒದಗಬಹುದಾಗಿದ್ದ ಸೋಂಕು ಮತ್ತು ಇತರ ಅಪಾಯಗಳಿಂದ ರಕ್ಷಿಸುತ್ತದೆ.

ಸೋಂಕುಗಳಿಂದ ರಕ್ಷಿಸುತ್ತದೆ

ಸೋಂಕುಗಳಿಂದ ರಕ್ಷಿಸುತ್ತದೆ

ಖರ್ಜೂರದಲ್ಲಿರುವ ಹಲವು ಪೋಷಕಾಂಶಗಳ ಪ್ರತಿಜೀವಕ ಗುಣ (antibiotic) ದೇಹದಲ್ಲಿ ಪ್ರವೇಶ ಪಡೆದಿರುವ ವಿವಿಧ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡಿ ದೇಹವನ್ನು ರಕ್ಷಿಸುತ್ತವೆ. ಖರ್ಜೂರದ ಗುಣಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ ಬಳಿಕ ಜನಪ್ರಿಯ ಪ್ರತಿಜೀವಕ ಆಗಿರುವ ಪೆನ್ಸಿಲಿನ್ ನ ಶೇಖಡಾ ಐವತ್ತರಷ್ಟು ಕ್ಷಮತೆಯನ್ನು ಖರ್ಜೂರ ಹೊಂದಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಮಲಬದ್ಧತೆಯಿಂದ ಕಾಪಾಡುತ್ತದೆ

ಮಲಬದ್ಧತೆಯಿಂದ ಕಾಪಾಡುತ್ತದೆ

ಮಲಬದ್ಧತೆಗೆ ಮುಖ್ಯ ಕಾರಣ ಆಹಾರದಲ್ಲಿ ಸಾಕಷ್ಟು ನಾರು ಇಲ್ಲದೇ ಇರುವುದು. ಮೈದಾ ಆಧಾರಿತ ಆಹಾರಗಳನ್ನು ಸೇವಿಸುವ ಮೂಲಕ ನಾವೇ ಮಲಬದ್ಧತೆಗೆ ಆಹ್ವಾನ ನೀಡುತ್ತಿದ್ದೇವೆ. ಖರ್ಜೂರದಲ್ಲಿ ಕರಗುವ ಮತ್ತು ಕರಗದ ನಾರು ಎರಡೂ ಉತ್ತಮ ಪ್ರಮಾಣದಲ್ಲಿವೆ. ಇದರ ಉತ್ತಮ ಗುಣವೆಂದರೆ ಎಲ್ಲವೂ ಒಮ್ಮೆಲೇ ಕರಗಿ ಕರುಳುಗಳಿಗೆ ತಲುಪದೇ ಇರುವುದು. ಖರ್ಜೂರದ ನಾರು ನಿಧಾನವಾಗಿ ಕರಗುತ್ತಾ ಕರುಳುಗಳು ಆಹಾರವನ್ನು ತಳ್ಳುವ ಶಕ್ತಿಯನ್ನು (peristaltic movements) ಉತ್ತಮಗೊಳಿಸುತ್ತಾ ಹೋಗುತ್ತದೆ. ಪರಿಣಾಮವಾಗಿ ತ್ಯಾಜ್ಯ ವಿಸರ್ಜನೆ ಅತಿ ಸುಲಭವಾಗಿ ಮತ್ತು ಸೂಕ್ತ ಸಮಯದಲ್ಲಿ ಆಗುತ್ತದೆ. ಹಾಗಾಗಿ ನಿತ್ಯ ನಿಮ್ಮ ಆಹಾರದಲ್ಲಿ ಸಾಕಷ್ಟು ಖರ್ಜೂರಗಳು ಇರುವಂತೆ ನೋಡಿಕೊಳ್ಳುವುದರಿಂದ ಮಲಬದ್ದತೆಯನ್ನು ತಡೆಗಟ್ಟಬಹುದು.

ಮೂಳೆಗಳು ಸುದೃಢವಾಗುತ್ತವೆ

ಮೂಳೆಗಳು ಸುದೃಢವಾಗುತ್ತವೆ

ಖರ್ಜೂರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಾಮ್ರ, ಸೆಲೆನಿಯಂ, ಮೆಗ್ನೀಶಿಯಂ, ಕ್ಯಾಲ್ಸಿಯಂ ಮೊದಲಾದ ಖನಿಜಗಳಿವೆ. ಇವೆಲ್ಲವೂ ಮೂಳೆಗಳ ಬೆಳವಣಿಗೆ ಮತ್ತು ದೃಢತೆಗೆ ಅಗತ್ಯವಾಗಿವೆ. ಹಾಲಿನಲ್ಲಿಯೂ ಕ್ಯಾಲ್ಸಿಯಂ ಇದೆ. ಆದರೆ ಈ ಕ್ಯಾಲ್ಸಿಯಂ ಅನ್ನು ದೇಹ ನೇರವಾಗಿ ಹೀರಲು ಸಾಧ್ಯವಿಲ್ಲ. ಹಾಗಾಗಿ ಹಾಲಿನಲ್ಲಿ ಜೇನನ್ನು ಬೆರೆಸಿ ಕ್ಯಾಲ್ಸಿಯಂ ಹೀರಿಕೊಳ್ಳುವ ಪ್ರಮಾಣ ಹೆಚ್ಚಿಸಬಹುದು. ಖರ್ಜೂರದಲ್ಲಿ ಕ್ಯಾಲ್ಸಿಯಂ ಕರಗಿರುವ ಸ್ಥಿತಿಯಲ್ಲಿಯೇ ಸಿದ್ಧವಾಗಿ ಲಭ್ಯವಾಗುವುದರಿಂದ ಹಾಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ದೇಹಕ್ಕೆ ಲಭ್ಯವಾಗುತ್ತದೆ. ಡೇಟ್ ಸಿರಪ್ ಎಂದು ಸಿಗುವ ಖರ್ಜೂರದ ಸ್ನಿಗ್ಧ ದ್ರವ ಮೂಳೆಗಳಿಗೆ ಅತ್ಯುತ್ತಮವಾಗಿದೆ

ಕ್ಯಾನ್ಸರ್ ಬರುವುದನ್ನು ತಪ್ಪಿಸುತ್ತದೆ ಮತ್ತು ವೃದ್ದಾಪ್ಯವನ್ನು ದೂರವಿಡುತ್ತದೆ

ಕ್ಯಾನ್ಸರ್ ಬರುವುದನ್ನು ತಪ್ಪಿಸುತ್ತದೆ ಮತ್ತು ವೃದ್ದಾಪ್ಯವನ್ನು ದೂರವಿಡುತ್ತದೆ

ಖರ್ಜೂರದಲ್ಲಿ ವಿವಿಧ ಆಂಟ್ ಆಕ್ಸಿಡೆಂಟುಗಳಿದ್ದು ದೇಹದಲ್ಲಿ ಮುಕ್ತವಾಗಿ ತಿರುಗುವ ಫ್ರೀ ರ್‍ಯಾಡಿಕಲ್ (free radical) ಎಂಬ ವಿಷವಸ್ತು ಮತ್ತು ಇತರ ವಿಷಕಾರಿ ಕಣಗಳನ್ನು ದೇಹದಿಂದ ಹೊರಗಟ್ಟಲು ನೆರವಾಗಿ ಕ್ಯಾನ್ಸರ್ ಬರುವುದನ್ನು ತಪ್ಪಿಸುತ್ತದೆ. ವಿಶೇಷವಾಗಿ ಯಕೃತ್ ನಲ್ಲಿ ಶೇಖರವಾಗಿ ವಿಷವಸ್ತುಗಳನ್ನು ಹೊರಹಾಕಲೂ ನೆರವಾಗುತ್ತದೆ. ಖರ್ಜೂರದ ನಿಯಮಿತ ಸೇವನೆಯಿಂದ ವೃದ್ಯಾಪ್ಯ ದೂರವಾಗಿರುವುದು ಹಿರಿಯರ ಅನುಭವದಿಂದ ತಿಳಿದುಬಂದಿದೆ.

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ದೇಹದಲ್ಲಿ ಕಬ್ಬಿಣದ ಕೊರತೆ ರಕ್ತಹೀನತೆಗೆ ಮುಖ್ಯ ಕಾರಣವಾಗಿದೆ. ಕಬ್ಬಿಣ ಅತಿ ಹೆಚ್ಚು ಇರುವ ಆಹಾರವೆಂದರೆ ಹಸಿರು ಸೊಪ್ಪು. ಆದರೆ ರಕ್ತಹೀನತೆಯಿಂದ ಬಳಲಿ ನಿಶಃಕ್ತರಾದವರಿಗೆ ಸೊಪ್ಪಿನ ಮೂಲಕ ಕಬ್ಬಿಣ ಶೀಘ್ರಗತಿಯಲ್ಲಿ ಲಭ್ಯವಾಗುವುದಿಲ್ಲ. ಆದರೆ ಖರ್ಜೂರದಲ್ಲಿರುವ ಕಬ್ಬಿಣ ಉತ್ತಮ ಪ್ರಮಾಣದಲ್ಲಿದ್ದು ನಿಃಶಕ್ತರಿಗೆ ಶೀಘ್ರವೇ ಚೈತನ್ಯ ತುಂಬುತ್ತದೆ. ರಕ್ತಕ್ಕೆ ಕೆಂಪುಬಣ್ಣ ಬರಲು ಕಾರಣವಾದ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ನೆರವಾಗಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಇದೇ ಕಾರಣಕ್ಕೆ ನಿಃಶಕ್ತರಾದವರಿಗೆ ಖರ್ಜೂರ ಅಥವಾ ಖರ್ಜೂರದ ಪೇಯವನ್ನು ಸೇವಿಸಲು ವೈದ್ಯರು ಸಲಹೆ ಮಾಡುತ್ತಾರೆ.

ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ರಕ್ಷಿಸುತ್ತದೆ

ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ರಕ್ಷಿಸುತ್ತದೆ

ಹೃದಯಾಘಾತಕ್ಕೆ ಮತ್ತು ಪಾರ್ಶ್ವವಾಯುವಿಗೆ ಪ್ರಮುಖ ಕಾರಣ ರಕ್ತನಾಳಗಳು ಶಿಥಿಲವಾಗುವುದು ಮತ್ತು ಸುಲಲಿತ ರಕ್ತಸಂಚಾರಕ್ಕೆ ಅಡ್ಡಿಯಾಗುವುದು. ರಕ್ತನಾಳಗಳ ದೃಢತೆಗೆ ಮುಖ್ಯವಾಗಿ ಬೇಕಾಗಿರುವ ಧಾತು ಎಂದರೆ ಮೆಗ್ನೀಶಿಯಂ. ಮೆಗ್ನೀಶಿಯಂ ಉತ್ತಮ ಪ್ರಮಾಣದಲ್ಲಿರುವ ರಕ್ತನಾಳಗಳು ಉತ್ತಮ ದೃಢತೆ ಹೊಂದಿದ್ದು ಗಂಟುಗಳಾಗುವುದು, ಒಳಭಾಗದಲ್ಲಿ ಜಿಡ್ಡುಕಟ್ಟುವುದು ಮೊದಲಾದ ತೊಂದರೆಗಳಿಂದ ಮುಕ್ತವಾಗಿರುತ್ತವೆ. ಈ ರಕ್ತನಾಳಗಳ ಮೂಲಕ ರಕ್ತ ಸುಲಲಿತವಾಗಿ ಹರಿಯುತ್ತ ಹೃದಯಕ್ಕೆ ಹೆಚ್ಚಿನ ಭಾರವನ್ನು ನೀಡದೇ ಹೃದಯಾಘಾತದ ಸಂಭವವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಮೆದುಳಿನಿಂದ ಹೊರಡುವ ಸೂಚನೆಗಳು ನರವ್ಯವಸ್ಥೆಯ ಮೂಲಕ ಸರಾಗವಾಗಿ ಸಾಗಿ ಪಾರ್ಶ್ವವಾಯು ತಗಲುವ ಸಂಭವವನ್ನೂ ಕಡಿಮೆ ಮಾಡುತ್ತದೆ.

ಗರ್ಭಿಣಿಯರಿಗೆ ಅತ್ಯುತ್ತಮವಾದ ಆಹಾರವಾಗಿದೆ

ಗರ್ಭಿಣಿಯರಿಗೆ ಅತ್ಯುತ್ತಮವಾದ ಆಹಾರವಾಗಿದೆ

ಗರ್ಭಿಣಿಯರಿಗೆ ಅತಿ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುವುದರಿಂದ ಖರ್ಜೂರ ಹೇಳಿ ಮಾಡಿಸಿದ ಆಹಾರವಾಗಿದೆ. ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ ಮತ್ತು ರಕ್ತಹೀನತೆಯಿಂದ ತಪ್ಪಿಸುವುದು ಮಾತ್ರವಲ್ಲ,ಮೂಳೆಗಳನ್ನು ಸದೃಢವಾಗಿಡಲೂ ನೆರವಾಗುತ್ತದೆ. ಜೊತೆಗೇ ಹೆರಿಗೆ ಸಹಜವಾಗಿ ನೆರವೇರಲು ನೆರವಾಗುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳಿಗೆ ಖರ್ಜೂರ ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ರಕ್ತದ ಪರಿಚಲನೆಯನ್ನು ಸುಲಭಗೊಳಿಸುವುದರಿಂದ ಮತ್ತು ಗಟ್ಟಿಯಾಗಿದ್ದ ರಕ್ತನಾಳಗಳನ್ನು ಅಗತ್ಯವಿದ್ದಷ್ಟು ಸಡಿಲಗೊಳಿಸುವುದರ ಮೂಲಕ ಹೃದಯಕ್ಕೆ ಹೆಚ್ಚಿನ ಒತ್ತಡದ ಅಗತ್ಯವಿಲ್ಲದಂತಾಗಿ ಅಧಿಕ ರಕ್ತದೊತ್ತಡ ಸಹಜ ಸ್ಥಿತಿಗೆ ಬರುತ್ತದೆ.

ಸಲಹೆ

ಸಲಹೆ

೧) ಉಪವಾಸ ಸಂಪನ್ನಗೊಳಿಸಿದ ತಕ್ಷಣ ಯಾವುದೇ ಅತಿಹೆಚ್ಚು ಸಕ್ಕರೆ ಇರುವ ಪೇಯವನ್ನು ಕುಡಿಯಬೇಡಿ. ಕಾರ್ಬೋನೇಟೆಡ್ ಪೇಯಗಳಂತೂ ಬೇಡವೇ ಬೇಡ

೨) ಜನಪ್ರಿಯ ಪೇಯ ರೂಹ್ ಅಫ್ಝಾ ಸಹಾ ಹೆಚ್ಚಿನ ಸಕ್ಕರೆ ಹೊಂದಿದ್ದು ಇದರ ಸೇವನೆಯನ್ನು ಅರ್ಧಲೋಟಕ್ಕೆ ಮಿತಿಗೊಳಿಸಿ

೩) ಯಾವುದೇ ಕಾರಣಕ್ಕೂ ಧೂಮಪಾನ ಮಾಡಬೇಡಿ

೪) ಉಪವಾಸ ಸಂಪನ್ನಗೊಳಿಸಿ ಆಹಾರ ಸೇವನೆಯ ಬಳಿಕ ತಕ್ಷಣ ಮಲಗಬೇಡಿ

೫) ಸಿಹಿ ತಿಂಡಿಗಳನ್ನು ಒಂದು ಅಥವಾ ಎರಡು ತುಂಡುಗಳಿಗೇ ಮಿತಿಗೊಳಿಸಿ

೬) ಅತಿ ಹೆಚ್ಚು ಪ್ರೋಟೀನ್ ಲಭ್ಯವಾಗುವ ಮಾಂಸದ ಅಡುಗೆಗಳನ್ನು ಈ ಹೊತ್ತಿನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಉತ್ತಮ ವಿಧಾನ ಎಂದರೆ ಮಾಂಸದ ಅಡುಗೆಗಳನ್ನು ಈ ಹೊತ್ತಿನಲ್ಲಿ ಸೇವಿಸದೇ ಸುಮಾರು ಎರಡು ಗಂಟೆಗಳ ಬಳಿಕ ಊಟದ ಜೊತೆ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ

ಸಲಹೆ

ಸಲಹೆ

೭) ಉಪವಾಸ ಸಂಪನ್ನಗೊಳಿಸಿದ ಬಳಿಕ ಜಿಮ್, ವ್ಯಾಯಾಮವೂ ಬೇಡ

೮) ಈ ಹೊತ್ತಿನಲ್ಲಿ ತಂಬಾಕು, ಜರ್ದಾ ಮೊದಲಾದ ಮಾರಕ ವಸ್ತುಗಳನ್ನು ತಿನ್ನಬೇಡಿ. ಇದರ ವ್ಯಸನಿಗಳಿಗೆ ಈ ಹೊತ್ತಿನಲ್ಲಿ ತಕ್ಷಣ ತಿನ್ನುವ ಅದಮ್ಯ ಬಯಕೆಯಾಗುತ್ತದೆ. ಆದರೆ ಈ ಚಟಗಳನ್ನು ಬಿಡಲು ರಂಜಾನ್ ತಿಂಗಳು ಅತ್ಯುತ್ತಮವಾದ ಮಾಸವಾಗಿದೆ. ದೇವರ ಮೇಲೆ ಭಾರ ಹಾಕಿ ಇಡಿಯ ತಿಂಗಳು ಎಷ್ಟೇ ಬಯಕೆಯಾದರೂ ತಿನ್ನದೇ ಇದ್ದರೆ (ರಂಜಾನಿನ ಉಪವಾಸದ ಉದ್ದೇಶವೂ ಇದೇ!) ತಿಂಗಳು ಕಳೆಯುವಷ್ಟರಲ್ಲಿ ಈ ವ್ಯಸನದಿಂದ ಸಂಪೂರ್ಣವಾಗಿ ಹೊರಬಂದಿರುವುದು ನಿಮಗೇ ಅಚ್ಚರಿ ತರುತ್ತದೆ.

English summary

Why Dates Should Be Eaten During Ramadan

Dates are the staple fruit of the Middle East. People relish dates here all around the year but, in the month of Ramadan it is especially important. During the holy Ramadan, fasting lasts from sunrise to sunset. Have a look at some health benefits of dates during Ramadan
X
Desktop Bottom Promotion