For Quick Alerts
ALLOW NOTIFICATIONS  
For Daily Alerts

ಬೆರಳಿನ ಉಗುರಿಗೂ-ಆರೋಗ್ಯಕ್ಕೂ, ಎತ್ತಿಂದೆತ್ತ ಸಂಬಂಧ?

By manu
|

ವೈದ್ಯರು ನಡೆಸುವ ಮೇಲ್ನೋಟದ ಪರೀಕ್ಷೆಯಲ್ಲಿ ಶರೀರದ ಬಿಸಿ, ಕಣ್ಣುಗಳ ಒಳಭಾಗ, ನಾಲಿಗೆ ಮತ್ತು ಉಗುರುಗಳು ಪ್ರಮುಖವಾಗಿವೆ. ಇವುಗಳಲ್ಲಿ ಬಹಳಷ್ಟು ಮಾಹಿತಿ ವೈದ್ಯರಿಗೆ ಸ್ಥೂಲವಾಗಿ ದೊರಕಿಬಿಡುತ್ತದೆ. ಅದರಲ್ಲೂ ಉಗುರುಗಳಲ್ಲಿ ಕೆಲವು ವ್ಯತ್ಯಾಸಗಳು ಗೋಚರಿಸಿದರೆ ಆ ವ್ಯತ್ಯಾಸ ಯಾವುದೋ ದೈಹಿಕ ತೊಂದರೆಯಿಂದ ಉಂಟಾಗಿರಬಹುದು. ಆರೋಗ್ಯವಂತರ ಉಗುರುಗಳು ಹೊಳಪುಳ್ಳದ್ದಾಗಿ ಅಡಿಭಾಗದಲ್ಲಿ ಯಾವುದೇ ಮೋಡ ಕವಿದಿರದಂತಿರುತ್ತದೆ.

ಆದರೆ ಒಂದು ವೇಳೆ ನಿಮಗೆ ಗೊತ್ತಿಲ್ಲದೇ ಯಾವುದಾದರೂ ರೋಗ ಈಗಾಗಲೇ ಆವರಿಸಿಕೊಂಡಿದ್ದರೆ ಆ ಸೂಚನೆಯನ್ನು ಉಗುರುಗಳನ್ನು ಕೊಂಚ ಸೂಕ್ಷ್ಮವಾಗಿ ನೋಡುವ ಮೂಲಕ ಪಡೆಯಬಹುದು. ಇದು ದೈಹಿಕ ಅಥವಾ ಮಾನಸಿಕ ವ್ಯಾಧಿಯೂ ಆಗಿರಬಹುದು. ಆರೋಗ್ಯದ ತಪಾಸಣೆಯಲ್ಲಿ ಉಗುರನ್ನು ಗಮನಿಸುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದಂತಹ ಪದ್ಧತಿಯಾಗಿದೆ. ಇಂದು ದೇಹದ ಪ್ರತಿ ಭಾಗವನ್ನು ಕೂಲಕಂಶವಾಗಿ ಮತ್ತು ಕರಾರುವಾಕ್ಕಾಗಿ ಪರೀಕ್ಷಿಸುವ ಯಂತ್ರಗಳು ಬಂದಿದ್ದರೂ ವೈದ್ಯರು ಮೊದಲು ಉಗುರುಗಳನ್ನು ಮಾತ್ರ ಖಂಡಿತಾ ಗಮನಿಸುತ್ತಾರೆ. ಉಗುರು ಮೃದುವಾದರೆ ಅದು ಅನಾರೋಗ್ಯಕರ

ಉಗುರುಗಳ ಬಣ್ಣ ಬದಲಾವಣೆಯಾಗಿದ್ದರೆ ಇದು ಪ್ರಮುಖವಾಗಿ ಶಿಲೀಂಧ್ರದ ಧಾಳಿ ಮತ್ತು ಅದರ ಮೂಲಕ ಬಂದ ಜ್ವರದಿಂದ ಎಂದು ತಿಳಿಯಬಹುದು. ಅಂತೆಯೇ ಹೃದಯದ ತೊಂದರೆ, ಯಕೃತ್‌ನ ಕಾಯಿಲೆ, ರಕ್ತಹೀನತೆ, ಮೊದಲಾದ ಕಾಯಿಲೆಗಳು ತಮ್ಮ ಇರುವಿಕೆಯನ್ನು ಉಗುರಿನ ಬಣ್ಣ ಬದಲಿಸುವ ಮೂಲಕ ಪ್ರಕಟಿಸುತ್ತವೆ. ಇಂದು ಕೆಳಗಿನ ಸ್ಲೈಡ್ ಶೋ ಮೂಲಕ ಈ ಬದಲಾವಣೆಗಳ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಲಾಗಿದೆ. ಈ ಮೂಲಕ ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸ್ಥೂಲವಾಗಿ ಅರಿತುಕೊಳ್ಳಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮತ್ತು ತಪಾಸಣೆಗಳ ಮೂಲಕ ವೈದ್ಯರಿಗೂ ಪ್ರಾರಂಭ ಹಂತದಲ್ಲಿಯೇ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಉಗುರು ಕತ್ತರಿಸುವುದು ಕೂಡ ಒಂದು ಕಲೆ!

ಉಗುರುಗಳಲ್ಲಿ ಅಡ್ಡ ಕಾಲುವೆಗಳು ಮೂಡುವುದು

ಉಗುರುಗಳಲ್ಲಿ ಅಡ್ಡ ಕಾಲುವೆಗಳು ಮೂಡುವುದು

ಉಗುರುಗಳಲ್ಲಿ ಒಂದು ವೇಳೆ ಅಡ್ಡಲಾಗಿ ಒಂದು ರೇಖೆ ಗುಳಿಯಂತೆ ಬಿದ್ದರೆ ಇದು ಶರೀರದಲ್ಲಿ ಸತುವಿನ ಕೊರತೆಯನ್ನು ಎದ್ದು ತೋರಿಸುತ್ತದೆ. ಸತುವಿನ ಕೊರತೆಯಿಂದ ಉಗುರುಗಳ ಕೆಳಗೆ ರಕ್ತ ಪರಿಚಲನೆ ಕಡಿಮೆಯಾಗುತ್ತದೆ ಹಾಗೂ ಸೋಂಕು ತಗಲಿಸಬಹುದಾದ ಬ್ಯಾಕ್ಟೀರಿಯಾಗಳ ಇರುವಿಕೆಯನ್ನು ಪ್ರಕಟಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಗುರುಗಳಲ್ಲಿ ಅಡ್ಡ ಕಾಲುವೆಗಳು ಮೂಡುವುದು

ಉಗುರುಗಳಲ್ಲಿ ಅಡ್ಡ ಕಾಲುವೆಗಳು ಮೂಡುವುದು

ವೈದ್ಯಕೀಯ ಭಾಷೆಯಲ್ಲಿ Beau's lines ಎಂದು ಕರೆಯುವ ಈ ಅಡ್ಡಕಾಲುವೆಗಳು ಅತಿ ಶೀತಲ ಪ್ರದೇಶಗಳಲ್ಲಿ ಮತ್ತು ಕ್ಯಾನ್ಸರ್‌ಗೆ ನೀಡುವ ಚಿಕಿತ್ಸೆಯಾದ ಖೀಮೋಥೆರಪಿಯ ಕಾರಣದಿಂದಲೂ ಉಂಟಾಗಬಹುದು.

ಮುಟ್ಟಿದರೆ ತುಂಡಾಗುವ ಉಗುರು

ಮುಟ್ಟಿದರೆ ತುಂಡಾಗುವ ಉಗುರು

ನಮ್ಮ ಉಗುರುಗಳು ಸಾಕಷ್ಟು ದೃಢವಾಗಿರುತ್ತವೆ.ಅಂತೆಯೇ ನಮಗೆ ನಿತ್ಯದ ಹತ್ತು ಹಲವು ಕೆಲಸಗಳಲ್ಲಿ ಉಪಯೋಗಕ್ಕೆ ಬರುತ್ತವೆ. ಆದರೆ ನೀರಿನಲ್ಲಿ ಕೊಂಚ ಹೊತ್ತು ಇಟ್ಟರೆ ಉಗುರುಗಳು ಮೃದುವಾಗುತ್ತವೆ. ಆದ ಇವನ್ನು ಸುಲಭವಾಗಿ ಕತ್ತರಿಸಬಹುದು. ಆದರೆ ಒಣಗಿದ ಬಳಿಕವೂ ಉಗುರುಗಳು ಸುಲಭವಾಗಿ ತುಂಡಾಗುವಂತಿದ್ದರೆ ಇದು ಶಿಲೀಂಧ್ರದ ಸೋಂಕಿನಿಂದ ಉಂಟಾಗಿರಬಹುದು. ವೈದ್ಯಕೀಯ ಭಾಷೆಯಲ್ಲಿ Lichen planus ಎಂದು ಕರೆಯಲ್ಪಡುವ ಈ ತೊಂದರೆ ಸಾಮಾನ್ಯವಾಗಿ ಅಲರ್ಜಿಕಾರಕ ಬಟ್ಟೆ ಸೋಪು ಉಪಯೋಗಿಸುವ ಮೂಲಕ ಮತ್ತು ವೃದ್ಧಾಪ್ಯದ ಕಾರಣದಿಂದ ಬರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮುಟ್ಟಿದರೆ ತುಂಡಾಗುವ ಉಗುರು

ಮುಟ್ಟಿದರೆ ತುಂಡಾಗುವ ಉಗುರು

ಸಾಮಾನ್ಯವಾಗಿ ಈ ತೊಂದರೆ ಉಗುರುಗಳಲ್ಲಿ ಕಂಡ ಸಮಯದಲ್ಲಿ ಚರ್ಮದಲ್ಲಿಯೂ ಕೆಂಪು ಚುಕ್ಕೆಗಳು ಮೂಡುವುದು, ತುರಿಕೆ, ಬಾಯಿಯಲ್ಲಿಯೂ ಹುಣ್ಣುಗಳಾಗುವುದು ಮೊದಲಾದ ಲಕ್ಷಣಗಣನ್ನು ಕಾಣಬಹುದು. ಅಲ್ಲದೇ ಥೈರಾಯ್ಡ್ ಗ್ರಂಥಿಯ ತೊಂದರೆ (hypothyroidism) ಮತ್ತು ಸಂಧಿವಾತದ ಪರಿಣಾಮವಾಗಿಯೂ ಉಗುರುಗಳು ಸುಲಭವಾಗಿ ತುಂಡಾಗುತ್ತವೆ.

ಬೆರಳ ತುದಿಗೆ ಅಂಟಿಕೊಂಡಿರುವ ಉಗುರು

ಬೆರಳ ತುದಿಗೆ ಅಂಟಿಕೊಂಡಿರುವ ಉಗುರು

ಆರೋಗ್ಯಕರವಾದ ಉಗುರು ಬೆರಳ ತುದಿಗೆ ತಲುಪುತ್ತಿದ್ದಂತೆಯೇ ಬೆರಳನ್ನು ಬಿಟ್ಟು ನೇರವಾಗೆ ಬೆಳೆಯಬೇಕು. ಒಂದು ವೇಳೆ ಇದು ಬೆರಳಿನ ತುದಿಯನ್ನು ಆವರಿಸಿಕೊಳ್ಳುವಂತೆ ಮುಂಬಾಗಿ ಬೆಳೆಯುತ್ತಾ ಹೋದರೆ ಇದು ರಕ್ತದಲ್ಲಿ ಆಮ್ಲಜನಕದ ಕೊರತೆಯನ್ನು ತೋರಿಸುತ್ತದೆ. ಅಲ್ಲದೇ ಹೃದಯ ಮತ್ತು ಯಕೃತ್‌ನ ಕಾಯಿಲೆಗಳ ಪರಿಣಾಮದಿಂದಲೂ ಈ ಪರಿಣಾಮ ಪಡೆಯಬಹುದು. ಅಷ್ಟೇ ಅಲ್ಲ ಏಡ್ಸ್ ರೋಗಿಗಳಲ್ಲೂ ಈ ಪರಿ ಕಂಡುಬರುತ್ತದೆ.

ಬೆರಳ ತುದಿಗೆ ಅಂಟಿಕೊಂಡಿರುವ ಉಗುರು

ಬೆರಳ ತುದಿಗೆ ಅಂಟಿಕೊಂಡಿರುವ ಉಗುರು

ಆದರೆ ಕೆಲವರಲ್ಲಿ ವಂಶವಾಹಿನಿಯಾಗಿ ಈ ಪರಿ ಕಂಡುಬಂದಿದ್ದರೆ ಅದು ಸ್ವಾಭಾವಿಕ ಎಂದು ತಿಳಿಯಬೇಕು. ರೋಗದ ಕಾರಣ ಬರುವ ಈ ಉಗುರು ಈ ರೂಪ ಪಡೆಯುವುದಕ್ಕಿಂತ ಮುನ್ನ ಆರೋಗ್ಯಕರವಾಗಿದ್ದು ಈಗ ಈ ರೂಪ ಪಡೆದಿದ್ದರೆ ಇದು ರೋಗದ ಲಕ್ಷಣ ಎಂದು ತಿಳಿಯಬೇಕು.

ಉಗುರಿನಲ್ಲಿ ಬಿಳಿ ರೇಖೆಗಳು

ಉಗುರಿನಲ್ಲಿ ಬಿಳಿ ರೇಖೆಗಳು

ಕೆಲವೊಮ್ಮೆ ಉರುಗಿನಲ್ಲಿ ನೇರವಾಗಿ ಅಥವಾ ಅಡ್ಡಲಾಗಿ ದಪ್ಪನೆಯ ಅಥವಾ ತೆಳ್ಳಗಿನ ಬಿಳಿ ರೇಖೆಗಳು ಮೂಡುತ್ತವೆ. ಕೆಲವೊಮ್ಮೆ ಚುಕ್ಕಿಗಳೂ ಮೂಡುತ್ತವೆ. ಒಂದು ವೇಳೆ ಇವು ಸಪೂರವಾಗಿದ್ದು ಉಗುರಿನ ಇತರ ಭಾಗ ಆರೋಗ್ಯವಾಗಿದ್ದರೆ ಇದು ಸಾಮಾನ್ಯ ಎಂದು ತಿಳಿಯಬಹುದು. ಆದರೆ ಈ ರೇಖೆಗಳು ಗಾಢವಾಗಿ ಮತ್ತು ಅಗಲವಾಗಿದ್ದರೆ ಆಹಾರದಲ್ಲಿ ಪ್ರೋಟೀನ್ ಕೊರತೆ, ಪೋಷಕಾಂಶಗಳ ಕೊರತೆ ಅಥವಾ ಯಕೃತ್‍ನ ಕಾಯಿಲೆಯ ಲಕ್ಷಣ ಎಂದು ತಿಳಿಯಬೇಕು.

ಹಳದಿ ಅಥವಾ ದಂತದ ಬಣ್ಣದ ಉಗುರುಗಳು

ಹಳದಿ ಅಥವಾ ದಂತದ ಬಣ್ಣದ ಉಗುರುಗಳು

ಸಾಮಾನ್ಯವಾಗಿ ಉಗುರಿಗೆ ಬಣ್ಣ ಹಚ್ಚಿ ಬಹುಕಾಲ ತೆಗೆಯದೇ ಇರುವ ಅಥವಾ ಪ್ರತಿದಿನವೂ ಬೇರೆ ಬೇರೆ ಬಣ್ಣದ ಉಗುರುಬಣ್ಣ ಹಚ್ಚಿಕೊಳ್ಳುವ ಅಭ್ಯಾಸವಿದ್ದವರ ಉಗುರುಗಳು ಸಾಮಾನ್ಯವಾಗಿರದೇ ಹಳದಿ ಅಥವಾ ದಂತದ ಬಣ್ಣ ಪಡೆಯುತ್ತವೆ. ಬಣ್ಣ ಹಚ್ಚಿಕೊಳ್ಳುವುದನ್ನು ನಿಲ್ಲಿಸಿದರೆ ಉಗುರು ಪುನಃ ಬಿಳಿಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಳದಿ ಅಥವಾ ದಂತದ ಬಣ್ಣದ ಉಗುರುಗಳು

ಹಳದಿ ಅಥವಾ ದಂತದ ಬಣ್ಣದ ಉಗುರುಗಳು

ಒಂದು ವೇಳೆ ಇದರ ಹೊರತಾಗಿ ಉರುಗಿನ ಬಣ್ಣ ಹಳದಿಯಾದರೆ ಇದು ಯಕೃತ್ ನ ಕಾಯಿಲೆ ಅಥವಾ ಕಾಮಾಲೆ (ಜಾಂಡೀಸ್) ರೋಗದ ಲಕ್ಷಣವಾಗಿರಬಹುದು. ಶ್ವಾಸನಾಳಗಳಲ್ಲಿ ಸೋಂಕು ಸಹಾ ಉಗುರುಗಳನ್ನು ಹಳದಿಯಾಗಿಸುತ್ತದೆ.

ಕಪ್ಪು ರೇಖೆಗಳು

ಕಪ್ಪು ರೇಖೆಗಳು

ಒಂದು ವೇಳೆ ಎಲ್ಲಾ ಉಗುರುಗಳಲ್ಲಿ ಕಪ್ಪು ರೇಖೆಗಳು ಅಥವಾ ಚುಕ್ಕೆಗಳು ಕಂಡುಬಂದರೆ ಇದು ನಿರಪಾಯಕಾರಿ ಎಂದು ತಿಳಿಯಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಯಾವುದೋ ಒಂದು ಬೆರಳಿನ ಉಗುರಿನಲ್ಲಿ ಮಾತ್ರ ದಪ್ಪನೆಯ ಕಪ್ಪು ರೇಖೆ ಅಥವಾ ಚುಕ್ಕೆ ಕಂಡುಬಂದರೆ ಇದು ಒಂದು ರೀತಿಯ ಚರ್ಮದ ಕ್ಯಾನ್ಸರ್ ನ ಪ್ರಕಟಣೆಯಾಗಿದೆ. ಇದು ಉಗುರಿನ ಬುಡಕ್ಕೆ ಪ್ರಭಾವ ಬೀರುವ ಕಾರಣ ಕಪ್ಪು ಚುಕ್ಕೆ ಮೂಡುತ್ತದೆ. ತಡಮಾಡದೇ ವೈದ್ಯರಲ್ಲಿ ತಪಾಸಿಸಿಕೊಳ್ಳುವುದು ಅಗತ್ಯ.

ಕೆಂಪು ಅಥವಾ ಕೆಂದು ರೇಖೆಗಳು

ಕೆಂಪು ಅಥವಾ ಕೆಂದು ರೇಖೆಗಳು

ಸಾಮಾನ್ಯವಾಗಿ ಉಗುರುಗಳ ಮೇಲೆ ಪೆಟ್ಟು ಬಿದ್ದಾಗ ಉರುಗಿನ ಬುಡವೂ ಘಾಸಿಗೊಂಡು ರಕ್ತನಾಳಗಳು ಸೀಳಿ ಸ್ವಲ್ಪ ಪ್ರಮಾಣದ ರಕ್ತ ಉಗುರಿನ ಅಡಿಗೂ ಸ್ರಾವವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ splinter haemorrhages ಎಂದು ಕರೆಯುವ ಈ ಸ್ಥಿತಿ ಅತ್ಯಂತ ನೋವು ನೀಡುವ ಸ್ಥಿತಿಯಾಗಿದ್ದು ರಕ್ತ ಉಗುರಿನ ಅಡಿ ಸಂಗ್ರಹವಾಗುವ ಕಾರಣ ಅಲ್ಲಿ ಕೆಂಪು ಚುಕ್ಕೆ ಮೂಡುತ್ತದೆ. ಇದು ಕ್ರಮೇಣ ಕಂದುಬಣ್ಣಕ್ಕೆ ತಿರುಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೆಂಪು ಅಥವಾ ಕೆಂದು ರೇಖೆಗಳು

ಕೆಂಪು ಅಥವಾ ಕೆಂದು ರೇಖೆಗಳು

ಇದು ಉಗುರಿನೊಂದಿಗೇ ಬೆಳೆದು ನಿವಾರಣೆಯಾಗುವವರೆಗೂ ಹಾಗೇ ಇರುತ್ತದೆ. ಒಂದು ವೇಳೆ ಇಂಥ ಯಾವುದೇ ಆಘಾತವಿಲ್ಲದೇ ಚುಕ್ಕೆ ಮೂಡಿದರೆ ಅದಕ್ಕೆ ಬೇರಾವುದೋ ಕಾರಣವಿರಬಹುದು. ಆದರೆ ಯಾವ ಕಾರಣ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ವೈದ್ಯರ ತಪಾಸಣೆಯಿಂದ ಮಾತ್ರ ಇದನ್ನು ಕಂಡುಹಿಡಿಯಬಹುದು.

ಸಡಿಲಗೊಂಡ ಉಗುರುಗಳು

ಸಡಿಲಗೊಂಡ ಉಗುರುಗಳು

ಆರೋಗ್ಯವಂತ ಉಗುರು ಬುಡದಿಂದ ತುದಿಯವರೆಗೂ ಉಗುರಿನ ಬುಡಕ್ಕೆ ಗಟ್ಟಿಯಾಗಿ ಅಂಟಿಕೊಂಡಿರಬೇಕು. ಒಂದು ವೇಳೆ ಉಗುರು ಬುಡದಿಂದ ಬೇರ್ಪಟ್ಟು ಮೇಲೆದ್ದು ನಿಂತಿದ್ದರೆ ಥೈರಾಯ್ಡ್ ಗ್ರಂಥಿಯ ಕಾಯಿಲೆ, ರಕ್ತಪರಿಚಲನೆಯಲ್ಲಿ ಬಾಧತೆ, ಮಧುಮೇಹದ ಉಗ್ರರೂಪ, ಕೆಲವು ಔಷಧಿಗಳಿಂದಾದ ಅಲರ್ಜಿಕಾರಕ ಪರಿಣಾಮಗಳು ಇದಕ್ಕೆ ಕಾರಣವಾಗಬಹುದು. ಈ ಸ್ಥಿತಿ ಬಂದಾಗ ಇದು ಪೂರ್ಣವಾಗಿ ಬೆಳೆಯುವವರೆಗೂ ಒಂದು ಹನಿ ನೀರೂ ಉಗುರಿನ ಬುಡಕ್ಕೆ ಹೋಗದಂತೆ ಎಚ್ಚರವಹಿಸಬೇಕು.

ಚಮಚದಾಕಾರದ ಉಗುರುಗಳು

ಚಮಚದಾಕಾರದ ಉಗುರುಗಳು

ವೈದ್ಯಕೀಯ ಭಾಷೆಯಲ್ಲಿ koilonychia ಎಂದು ಕರೆಯಲ್ಪಡುವ ಈ ಸ್ಥಿತಿಯಲ್ಲಿ ನಡುವಿನಲ್ಲಿ ಉಗುರು ಕುಸಿದು ಅಂಚುಗಳಲ್ಲಿ ಮೇಲೆದ್ದ ಸ್ಥಿತಿಯಲ್ಲಿರುತ್ತದೆ. ಒಂದು ಚಿಕ್ಕ ಚಮಚದಾಕೃತಿಯನ್ನು ಹೋಲುವ ಉಗುರುಗಳ ಈ ಸ್ಥಿತಿಗೆ ರಕ್ತದಲ್ಲಿ ಕಬ್ಬಿಣದ ಕೊರತೆ ಪ್ರಮುಖ ಕಾರಣವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚಮಚದಾಕಾರದ ಉಗುರುಗಳು

ಚಮಚದಾಕಾರದ ಉಗುರುಗಳು

ಅಲ್ಲದೇ ಉಗುರುಗಳಿಗೆ ಕಡಿಮೆ ರಕ್ತಪರಿಚಲನೆ, ಯಕೃತ್‌ ಮತ್ತು ಹೃದಯದ ತೊಂದರೆಗಳೂ ಈ ಸ್ಥಿತಿಯನ್ನು ಪ್ರಕಟಿಸುತ್ತವೆ. ಥೈರಾಯ್ಡ್ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಹಾರ್ಮೋನುಗಳನ್ನು ಉತ್ಪಾದಿಸದ ಸ್ಥಿತಿಯಾದ hypothyroidism ನಿಂದಲೂ ಉಗುರುಗಳು ಚಮಚೆಯಂತಾಗುತ್ತವೆ.


English summary

What Your Nails Say About Your Health

Have you ever noticed any change in your fingernails? Changes that can be observed in the nails can indicate much about a person's health condition. Your fingernails can tell you a lot about your health. Nail changes can occur because of a number of diseases that people may be unaware of. Changes in the fingernails can also reveal your recent health issues including the physiological problems you may have faced.
X
Desktop Bottom Promotion