For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ಈರುಳ್ಳಿಯ ಅಸಾಮಾನ್ಯ ಗುಣಗಳು

By Arshad
|

ಬಹುತೇಕ ಅಡುಗೆಗಳಲ್ಲಿ ಬಳಸಲಾಗುವ ಈರುಳ್ಳಿ ಒಂದು ಆರೋಗ್ಯಕರ ಗಡ್ಡೆಯಾಗಿದೆ. ನಿತ್ಯ ಈರುಳ್ಳಿಯನ್ನು ಹಸಿಯಾಗಿ ಅಥವಾ ಅಡುಗೆಯ ಮೂಲಕ ಸೇವಿಸುವ ಮೂಲಕ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಹಲವು ಕಾಯಿಲೆಗಳಿಂದ ರಕ್ಷಿಸುತ್ತದೆ. ಆದರೆ ಸಾಮಾನ್ಯವಾದ ಈ ಈರುಳ್ಳಿ ಹಲವು ವಿಧಗಳಲ್ಲಿ ಅಸಾಮಾನ್ಯವಾಗಿದೆ. ಆಯುರ್ವೇದದಲ್ಲಿಯೂ ಈರುಳ್ಳಿಯನ್ನು ಹಲವು ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿ ನೀಡಲಾಗುತ್ತದೆ. ಈರುಳ್ಳಿ ರಸದ ಅದ್ಭುತವಾದ ಆರೋಗ್ಯಕಾರಿ ಪ್ರಯೋಜನಗಳು

ನಮ್ಮ ದೇಹದಲ್ಲಿ ಎಲ್ಲಾದರೂ ಗಡ್ಡೆಗಳು ಮೂಡುವ ಸಂಭವವಿದ್ದರೆ ಅವುಗಳ ವಿರುದ್ಧ ಹೋರಾಡಲು ಈರುಳ್ಳಿ ಸಹಕರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಇದರಲ್ಲಿರುವ ಹಲವು ಪೋಷಕಾಂಶಗಳು ಮತ್ತು ದೇಹದ ಗ್ರಂಥಿಗಳನ್ನು ಪ್ರಚೋದಿಸಿ ಹಾರ್ಮೋನುಗಳನ್ನು ಬಿಡುಗಡೆಗೊಳಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿತ್ಯದ ಸೇವನೆಯಿಂದ ನರವ್ಯವಸ್ಥೆಯಲ್ಲಿ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಸಮೃದ್ಧ ಪೋಷಕಾಂಶಗಳ ಆಗರ - ಬಿಳಿ ಈರುಳ್ಳಿ

ಈರುಳ್ಳಿಯನ್ನು ಎಂದೂ ಸೇವಿಸದಿರುವವರು ನರಸಂಬಂಧಿ ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುವುದು ಇದಕ್ಕೆ ಇಂಬು ನೀಡುತ್ತದೆ. ಈರುಳ್ಳಿ ಆರೋಗ್ಯಕ್ಕೆ ಹೇಗೆ ಫಲಕಾರಿಯಾಗಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಸಾದರಪಡಿಸಲಾಗಿದೆ...

ಕಿವಿನೋವಿನಿಂದ ರಕ್ಷಿಸುತ್ತದೆ

ಕಿವಿನೋವಿನಿಂದ ರಕ್ಷಿಸುತ್ತದೆ

ಈರುಳ್ಳಿಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಕಿವಿಯ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಕಿವಿಯಲ್ಲಿ ಸೋಂಕಾಗಿದ್ದು ನೋವಿದ್ದರೆ, ಅಥವಾ ಕಿವಿಯ ಒಳಗೆ ಹೆಚ್ಚಿನ ಪ್ರಮಾಣದಲ್ಲಿ ಮೇಣ ತುಂಬಿಕೊಂಡಿದ್ದರೆ ಒಂದು ಚಿಕ್ಕ ತುಂಡು ಈರುಳ್ಳಿಯನ್ನು ಕಿವಿಯೊಳಕ್ಕೆ ಕೆಲವು ನಿಮಿಷಗಳವರೆಗೆ ತುರುಕಿಸಿ. ಇದರಿಂದ ಮೇಣ ಮೃದುವಾಗಿ ಸುಲಭವಾಗಿ ಹೊರಬರಲು ಸಾಧ್ಯವಾಗುತ್ತದೆ.

 ಜ್ವರವನ್ನು ಕಡಿಮೆಗೊಳಿಸುತ್ತದೆ

ಜ್ವರವನ್ನು ಕಡಿಮೆಗೊಳಿಸುತ್ತದೆ

ಜ್ವರವನ್ನು ಕಡಿಮೆಗೊಳಿಸಲು ಈ ಮನೆಮದ್ದಿನಲ್ಲಿ ನೀರುಳ್ಳಿಯನ್ನು ಬಳಸಲಾಗಿದೆ. ಸಮಪ್ರಮಾಣದಲ್ಲಿ ಈರುಳ್ಳಿ ಮತ್ತು ಆಲುಗಡ್ಡೆಯನ್ನು ಚಿಕ್ಕದಾಗಿ ಹೆಚ್ಚಿ ಕೆಲವು ಎಸಳು ಬೆಳ್ಳುಳ್ಳಿ ಜಜ್ಜಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ಈ ಮಿಶ್ರಣವನ್ನು ನಿಮ್ಮ ಕಾಲುಚೀಲದೊಳಕ್ಕೆ (ಸಾಕ್ಸ್) ಹಾಕಿ ಪಾದಗಳ ಕೆಳಗೆ ಬರುವಂತೆ ತೊಟ್ಟುಕೊಳ್ಳಿ. ಇಡಿಯ ಪಾದದಡಿ ಇದು ಹರಡುವಂತಿರಲಿ. ಬಳಿಕ ಬೆಚ್ಚಗೆ ಮಲಗಿ. ಕೊಂಚ ಹೊತ್ತಿನಲ್ಲಿ ಜ್ವರ ಇಳಿಯಲಾರಂಭಿಸುತ್ತದೆ. ಜ್ವರ ತೀವ್ರವಿದ್ದರೆ ಸೇಬಿನ ಶಿರ್ಕಾದಲ್ಲಿ (apple vinegar) ಅದ್ದಿದ ಬಟ್ಟೆಯನ್ನು ರೋಗಿಯ ಹಣೆಯ ಮೇಲಿರಿಸಿ ಕೊಂಚ ಸಮಯದ ಬಳಿಕ ತೆಗೆಯುತ್ತಾ ಬನ್ನಿ. ಕೆಲವು ನಿಮಿಷಗಳಲ್ಲಿಯೇ ಜ್ವರ ಇಳಿಯುತ್ತದೆ.

ಕಣ್ಣುಗಳ ಉರಿಯನ್ನು ನಿವಾರಿಸುತ್ತದೆ

ಕಣ್ಣುಗಳ ಉರಿಯನ್ನು ನಿವಾರಿಸುತ್ತದೆ

ಒಂದು ವೇಳೆ ಕಣ್ಣಿನಲ್ಲಿ ಉರಿ ಅತಿ ಹೆಚ್ಚಾಗಿದ್ದರೆ ಕೆಲವು ಈರುಳ್ಳಿಗಳನ್ನು ಹೆಚ್ಚಲು ತೊಡಗಿ. ಇದರ ಘಾಟಿನಿಂದ ಕಣ್ಣೀರು ಹರಿಯಲು ಬಿಡಿ. ಕಣ್ಣೀರು ಹರಿದಷ್ಟೂ ಕಣ್ಣಿನ ಉರಿಗೆ ಕಾರಣವಾದ ಕಣಗಳು ಕಣ್ಣೀರಿನಿಂದ ತೊಳೆದುಹೋಗುವ ಮೂಲಕ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಆದರೆ ಈರುಳ್ಳಿಯ ಉರಿಯನ್ನು ಕೊಂಚ ತಡೆಯಬೇಕಾಗುತ್ತದೆ. ಅಪ್ಪಿತಪ್ಪಿಯೂ ಕಣ್ಣುಗಳನ್ನು ಉಜ್ಜಿಕೊಳ್ಳಲು ಹೋಗಬೇಡಿ.

ಕೆಮ್ಮು ನಿವರಿಸುತ್ತದೆ

ಕೆಮ್ಮು ನಿವರಿಸುತ್ತದೆ

ಕೆಮ್ಮು ಬಹಳವಾಗಿದ್ದರೆ ಸಮಪ್ರಮಾಣದಲ್ಲಿ ಜೇನು ಮತ್ತು ಈರುಳ್ಳಿ ರಸವನ್ನು ಸೇರಿಸಿ ಒಂದು ಚಮಚದಷ್ಟು ಸೇವಿಸಿ. ಇದು ಕೆಮ್ಮನ್ನು ತಕ್ಷಣ ಕಡಿಮೆಮಾಡುತ್ತದೆ. ಈರುಳ್ಳಿಯ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣದಿಂದ ಗಂಟಲ ಸೋಂಕು ಕಡಿಮೆಯಾಗುತ್ತದೆ.

ಸುಟ್ಟ ಗಾಯಕ್ಕೆ ಶಮನ ನೀಡುತ್ತದೆ

ಸುಟ್ಟ ಗಾಯಕ್ಕೆ ಶಮನ ನೀಡುತ್ತದೆ

ಸುಟ್ಟ ಗಾಯವಾದರೆ ತಕ್ಷಣ ಒಂದು ಈರುಳ್ಳಿಯನ್ನು ಕೊಚ್ಚಿ ಗಾಯವಾದ ಸ್ಥಳಕ್ಕೆ ಹಚ್ಚಿ. ಇದು ಕೊಂಚ ಉರಿಯನ್ನು ಹೆಚ್ಚಿಸಿದರೂ ನಂತರ ಶಮನಗೊಳಿಸುತ್ತದೆ. ಅಲ್ಲದೇ ಹೊಸ ಚರ್ಮ ಬೆಳೆಯಲು ಮತ್ತು ಕಲೆ ಉಳಿಯದಿರಲು ನೆರವಾಗುತ್ತದೆ.

ಅಜೀರ್ಣಕ್ಕೆ ಉತ್ತಮ ಪರಿಹಾರ ನೀಡುತ್ತದೆ

ಅಜೀರ್ಣಕ್ಕೆ ಉತ್ತಮ ಪರಿಹಾರ ನೀಡುತ್ತದೆ

ಒಂದು ವೇಳೆ ಅಜೀರ್ಣದ ತೊಂದರೆ ಇದ್ದರೆ ಹಸಿ ಈರುಳ್ಳಿಯನ್ನು ತಿನ್ನುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಹಸಿ ಈರುಳ್ಳಿಯನ್ನು ಅನ್ನದೊಂದಿಗೆ ಕಲಸಿ ತಿನ್ನುವ ಮೂಲಕ, ಜೊತೆಗೆ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಸೇರಿಸಿ ತಿಂದರೆ ಅಜೀರ್ಣದ ತೊಂದರೆ ಶೀಘ್ರವೇ ಕಡಿಮೆಯಾಗುತ್ತದೆ.

English summary

Unusual Benefits Of Onions

We all know that onions are very important for our health. Daily intake of onion helps to get rid of many infections and diseases. Today, we are going to share some interesting and unusual benefits of onions in this article. If you are unwell and looking for the best healing medicine, then onions are your best option.
X
Desktop Bottom Promotion