For Quick Alerts
ALLOW NOTIFICATIONS  
For Daily Alerts

ಎಚ್ಚರ; ಈ 5 ಕಾರಣಗಳಿಂದಲೂ ಕ್ಯಾನ್ಸರ್ ಬರಬಹುದು!

By Super
|

ಕ್ಯಾನ್ಸರ್ ರೋಗದ ಹೆಸರು ಕೇಳಿದರೇ ಎದೆ ಬಡಿತಕ್ಕೆ ಆರಂಭವಾಗುತ್ತದೆ. ಆ ರೋಗದ ಪ್ರಭಾವವೇ ಹಾಗೆ. ಮಾನವ ಶರೀರವನ್ನು ಕ್ರಮೇಣ ಆವರಿಸಿ ಅತ್ಯಂತ ಅಮಾನವೀಯತೆ ಮತ್ತು ನೋವಿನಿಂದ ದೇಹವನ್ನು ಬಳಲುವ ಹಾಗೆ ಮಾಡಿ ಕೊನೆಗೆ ಸಾವಿಗೆ ಗುರಿಮಾಡುತ್ತದೆ. ಇಂತಹ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ಬಳಸುವ ಸಾಧನಗಳೂ ಕೂಡ ಅಷ್ಟೇ ಭಯಾನಕ ಮತ್ತು ಆರೋಗ್ಯದ ವಿನಾಶಕಾರಿಯಾಗಿವೆ. ಕ್ಯಾನ್ಸರ್ ಅಂದರೇನು? ದೇಹವು ತನ್ನದೇ ಆದ ಕಾರ್ಯವಿಧಾನಗಳನ್ನು ಬಳಸಿಕೊಳ್ಳುವುದಕ್ಕೆ ಕ್ಯಾನ್ಸರ್ ಅನ್ನಬಹುದು.

ಒಂದು ಮಾತಿನಲ್ಲಿ ಹೇಳಬೇಕೆಂದರೆ ನಮ್ಮ ದೇಹದಲ್ಲಿರುವ ಕೋಶಗಳು ನಮ್ಮ ಶರೀರಬೆಳವಣಿಗೆ ಮತ್ತು ಹಾಗೆಯೇ ದುರಸ್ತಿಪಡಿಸುವುದನ್ನು ಖಚಿತಪಡಿಸುತ್ತವೆ. ಆದರೂ ಕ್ಯಾನ್ಸರ್ ರೋಗ ಸಂದರ್ಭದಲ್ಲಿ ನಮ್ಮ ಶರೀರದಲ್ಲಿರುವ ಕೋಶಗಳು ಮೊದಲು ಒಂದು ಅಪಾಯಕಾರಿ ರೀತಿಯಲ್ಲಿ ಪರಿವರ್ತನೆಗೊಂಡು, ತದನಂತರ ಅದು ಸತ್ತುಹೋಗುವ ಬದಲು, ಶರೀರದ ಭಾಗಗಳಿಗೆ ಪ್ರಚಂಡ ವೇಗದಲ್ಲಿ ಹರಡುತ್ತದೆ. ಕ್ಯಾನ್ಸರನ್ನು ನಿಯಂತ್ರಿಸುವ 10 ಅದ್ಭುತವಾದ ತರಕಾರಿಗಳು

5 Most Common Causes Of Cancer

ಅಂಕಿಅಂಶಗಳ ಪ್ರಕಾರ ಕ್ಯಾನ್ಸರ್ ರೋಗವು ತಗಲುತ್ತಿರುವವರು ಹೆಚ್ಚಾಗುತ್ತಲೇ ಇದ್ದಾರೆಂಬುದು ಬಹಳ ದುಖಃಕರ ಮಾಹಿತಿ. ಇಂದು ಒಬ್ಬರಲ್ಲದೆ ಇನ್ನೊಬ್ಬರು ಕ್ಯಾನ್ಸರ್ ರೋಗದಿಂದ ನರಳುತ್ತಿದ್ದರೆಂದು ನಮ್ಮಲ್ಲಿ ವೈಯುಕ್ತಿಕವಾಗಿ ಬಹಳ ಜನರಿಗೆ ಇಂದು ಗೊತ್ತಾಗಿದೆ. ಒಂದು ಕಡೆ ಈ ರೋಗದ ಪ್ರವೃತ್ತಿ ಮತ್ತು ಮೂಲಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿರುವಂತೆಯೇ, ಕ್ಯಾನ್ಸರ್ ರೋಗಕ್ಕೆ ಕೆಲವು ಸಾಮಾನ್ಯ ಕಾರಣಗಳು ಏನಂದರೆ:

ವಯಸ್ಸು
ವಯಸ್ಸಾದಂತೆ ಕ್ಯಾನ್ಸರ್ ರೋಗಕ್ಕೆ ಒಂದು ಸಾಮಾನ್ಯ ಕಾರಣವಾಗಿದೆ. ವಯಸ್ಸಾದ ಜನರು ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತಾರೆ ಮತ್ತು ವಾಸ್ತವವಾಗಿ 60 ವಯಸ್ಸು ದಾಟಿದ ಜನರಲ್ಲಿ ಶೇಖಡ 75 ಜನರಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಒಂದು ಸಿದ್ಧಾಂತದ ಪ್ರಕಾರ ನಮ್ಮ ವಯಸ್ಸು ಬೆಳೆದಂತೆ ಕೋಶಗಳ ಮಟ್ಟದಲ್ಲಿ ಕ್ಯಾನ್ಸರ್ ರೋಗವನ್ನು ಎದುರಿಸಲು ಅಶಕ್ತರಾಗುತ್ತೇವೆ.

ಅನುವಂಶಿಕತೆ
ಕೆಲವು ರೀತಿಯ ಸ್ತನ ಕ್ಯಾನ್ಸರ್ ರೋಗವು ಅನುವಂಶಿಕ. ಸಿನೆಮಾ ತಾರೆ ಅಂಜಲಿನಾ ಜೋಲೀ ತನ್ನಸ್ತನಗಳಲ್ಲಿ ಬಿ.ಆರ್.ಸಿ.ಎ 1 (BRCA1) ಅನುವಂಶಿಕೆ ಕ್ಯಾನ್ಸರ್ ಕಾಣಿಸಿಕೊಂಡದ್ದರಿಂದ ತನ್ನ ಎರಡೂ ಸ್ತನಗಳನ್ನು ಶಸ್ತ್ರಕ್ರಿಯೆಯಮೂಲಕ ಛೇದನಮಾಡಿಸಿಕೊಂಡಳು. ನಿಮ್ಮ ಹತ್ತಿರ ಸ್ತ್ರೀ ಸಂಬಂಧಿಗಳಾದ ತಾಯಿ, ಚಿಕ್ಕಮ್ಮ, ಅಕ್ಕ/ತಂಗಿಯರು ಅಥವ ಅಜ್ಜಿ ಇವರುಗಳು ಕ್ಯಾನ್ಸರ್ ರೋಗವನ್ನು ಅನುಭವಿಸಿದ್ದರೆ ನೀವೂ ಕೂಡ ನಿಮ್ಮ ಸ್ತನಗಳನ್ನು ಪರಿಕ್ಷಿಸಿಕೊಳ್ಳುವುದು ಒಂದು ಒಳ್ಳೆಯ ಸಲಹೆ. ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ತಂಬಾಕು
ದೀರ್ಘಕಾಲದಿಂದ ಚಟವಿರುವ ಧೂಮಪಾನಿಗಳು ತಮ್ಮ ಅಭ್ಯಾಸವನ್ನು ವಹಿಸಿಕೊಂಡು ವಾದಿಸುವುದೇನೆಂದರೆ ಹಲವಾರು ಧೂಮಪಾನ ಮಾಡದಿದ್ದವರಿಗೂ ಕೂಡ ಶ್ವಾಸಕೋಶ ಕ್ಯಾನ್ಸರ್ ರೋಗವು ತಗಲಿದೆ. ಆದಾಗ್ಯೂ, ಮಾಹಿತಿಗಳು ನಿಚ್ಚಳವಾಗಿವೆ. ನಾಲ್ಕು ಕ್ಯಾನ್ಸರ್ ರೋಗದಿಂದ ಸತ್ತವರಲ್ಲಿ ಒಬ್ಬ ರೋಗಿಯು ಧೂಮಪಾನಿ. ಧೂಮಪಾನದಿಂದ ಶ್ವಾಸಕೋಶ, ಗಂಟಲು, ಬಾಯಿ ಮತ್ತು ಅನ್ನನಾಳಗಳಿಗೆ ಕ್ಯಾನ್ಸರ್ ರೋಗಬರುತ್ತದೆ. ಮತ್ತು ಬಹಳ ಜನರು ನಿಷ್ಕ್ರಿಯ ಧೂಮಪಾನ, ಅಂದರೆ ಧೂಮಪಾನ ಮಾಡುವವರು ಬಿಡುವ ಹೊಗೆಯು ಉಸಿರಾಟದಲ್ಲಿ ಸೇರುವುದರಿಂದ ಕ್ಯಾನ್ಸರ್ ರೋಗದಿಂದ ಸತ್ತಿದ್ದಾರೆ.

ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳು (ಕಾರ್ಸಿನೋಜೆನ್ಸ್)
ಕ್ಯಾನ್ಸರ್ ಬರಸುವ ಪದಾರ್ಥಗಳಲ್ಲಿ ತಂಬಾಕು ಪ್ರಮುಖವಾಗಿದೆಯಾದರೂ ಇತರ ಪದಾರ್ಥಗಳೂ ಇವೆ. ಈ ಪದಾರ್ಥಗಳು ಕೋಶ ಅಥವ ಜಿನೋಮ್ ರಚನೆಯನ್ನು ಪರಿವರ್ತಿಸಿದಾಗ ಕ್ಯಾನ್ಸರ್ ರೋಗ ಬರುತ್ತದೆ. ಡೈಯೋಕ್ಸಿನ್, ಬೆಂಜೀನ್, ಫಾರ್ಮಾಲ್ಡೀ‌ಹೈಡ್, ಆಸ್‌ಬೆಸ್ಟಾಸ್ ಇವುಗಳೆಲ್ಲವೂ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ ಜೀವಾಣುಗಳು. ಈ ಪದಾರ್ಥಗಳನ್ನು ನಾವು ದೈನಂದಿನ ಜೀವನದಲ್ಲಿ ಯಾವುದಾದ ರೀತಿಯಲ್ಲಿ ಉಪಯೋಗಿಸುತ್ತೇವೆ. ಕೆಲವು ವೈರಸ್‌ಗಳು, ಅಂದರೆ ಹ್ಯೂಮನ್ ಪ್ಯಾಪಿಲೋಮವೈರಸ್ (ಮಾನವ ವೈರಸ್) ಗರ್ಭಕಂಠದ (ಸರ್ವಿಕಲ್) ಕ್ಯಾನ್ಸರ್ ಉಂಟುಮಾಡುತ್ತದೆ ಮತ್ತು ಇವು ನೈಸರ್ಗಿಕವಾಗಿ ಬರುತ್ತದೆ.

ಸೂರ್ಯನ ಮಾನ್ಯತೆ (ಸೂರ್ಯನ ಕಿರಣಗಳಿಗೆ ಮೈಒಡ್ಡುವುದು)
ಸೂರ್ಯನ ಕಿರಣದಲ್ಲಿರುವ ಅಲ್ಟ್ರಾ ವೈಯೊಲೆಟ್ (ಯು.ವಿ.) ವಿಕಿರಣದಿಂದ ಸಾಮಾನ್ಯವಾಗಿ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಮೈಯನ್ನು ಸಮರ್ಪಕವಾಗಿ ಮುಚ್ಚದೇ ಅಥವ ತೆರೆದ ಭಾಗಗಳಿಗೆ ರಕ್ಷಣೆ ಕ್ರೀಮ್ ಲೇಪಿಸದೇ ಇರುವ ಬಹಳ ಜನರಿಗೆ ಚರ್ಮದ ಕ್ಯಾನ್ಸರ್ ಕಾಣಿಸಿಕೊಂಡಿದೆ. ಸಲೋನ್.ಕಾಮ್ ವೆಬ್ ಸೈಟಿನ ಪ್ರಸಿದ್ಧ ಲೇಖಕಿ ಮೇರಿ ಎಲಿಜಬೆತ್ ವಿಲ್ಲಿಯಮ್ಸ್ ಸೂರ್ಯನ ರಕ್ಷಣೆ ಕ್ರೀಮ್ ಬಳಸಿಯೂ ಚರ್ಮದ ಕ್ಯಾನ್ಸರ್ ರೋಗವು ಕಾಣಿಸಿಕೊಂಡಿತು. ಅವಳು ತನ್ನ ತಲೆಯನ್ನು ಮುಚ್ಚದೇ ಇದ್ದರಿಂದ ಪರಿಣಾಮವಾಗಿ ಮಾರಕ ಮೆಲಾನೋಮಾ ಚರ್ಮದ ಕ್ಯಾನ್ಸರ್ ರೋಗವು ನೆತ್ತಿಯಮೇಲೆ ಕಾಣಿಸಿಕೊಂಡಿತು.

ಕ್ಯಾನ್ಸರ್ ರೋಗವು ಆಹಾರ ಮತ್ತು ಜೀವನ ನಡೆಸುವ ಶೈಲಿಗಳಿಂದ ಕೂಡ ಕಾಣಿಸಿಕೊಳ್ಳುತ್ತದೆ. ನಾವು ಒಂದು ಪರಿಹಾರ ನಿಟ್ಟಿನಲ್ಲಿ ಕಾದು ಕುಳಿತಿದ್ದರೂ, ಪ್ರಸಿದ್ಧ ಗಾದೆ ಹೇಳುವಂತೆ "ರೋಗವು ಕಾಣಿಸಿಕೊಳ್ಳುವ ಮೊದಲೇ ತಡೆಗಟ್ಟಲು ಪ್ರಯತ್ನ ಮಾಡುವುದು ಉತ್ತಮ" (Prevention is better than cure) ಮತ್ತು ತಿಳುವಳಿಕೆಯಿರುವ ಕಾರಣಗಳಿಂದ ದೂರವಿರುವುದೇ ಒಳ್ಳೆಯದು.

English summary

5 Most Common Causes Of Cancer

The word cancer is enough to strike fear in our hearts, such is its ability to ravage the human body and destroy life in the most inhumane and painful way possible. The weapons to fight cancer are equally destructive and frightening.
Story first published: Saturday, October 4, 2014, 17:25 [IST]
X
Desktop Bottom Promotion