ಸದ್ದು ಮಾಡದೇ ಸೈಲೆಂಟ್ ಆಗಿ ಕಾಡುವ ಕ್ಯಾನ್ಸರ್‌ನ ಲಕ್ಷಣಗಳಿವು!

By: Arshad
Subscribe to Boldsky

ಕ್ಯಾನ್ಸರ್ ಎಂದರೆ ಮೃತ್ಯುವೇ ಇದಕ್ಕೆ ಬಿಡುಗಡೆ ಎಂಬ ಭಾವನೆ ಹೆಚ್ಚಿನವರಲ್ಲಿದೆ. ವಾಸ್ತವವಾಗಿ ಕ್ಯಾನ್ಸರ್ ಹಂತಹಂತವಾಗಿ ಆವರಿಸುತ್ತಾ ಉಲ್ಬಣಿಸುತ್ತದೆ. ಇದರ ಇರುವಿಕೆಯನ್ನು ಎಷ್ಟು ಬೇಗ ಕಂಡುಕೊಂಡು ಚಿಕಿತ್ಸೆ ಪ್ರಾರಂಭಿಸುತ್ತೇವೆಯೋ ಅಷ್ಟೂ ಬೇಗನೇ ಇದು ಗುಣಹೊಂದುವ ಸಾಧ್ಯತೆ ಹೆಚ್ಚು. ಆದರೆ ನಿಯಂತ್ರಣಕ್ಕೂ ಮೀರಿ ಉಲ್ಬಣಾವಸ್ಥೆಗೆ ತಲುಪಿದ ಕ್ಯಾನ್ಸರ್ ಮಾತ್ರ ಹತೋಟಿಗೆ ತರುವುದು ಕಷ್ಟ. ಕ್ಯಾನ್ಸರನ್ನು ನಿಯಂತ್ರಿಸುವ 10 ಅದ್ಭುತವಾದ ತರಕಾರಿಗಳು

ಆದ್ದರಿಂದ ಕ್ಯಾನ್ಸರ್ ಚಿಗುರುತ್ತಿರುವಾಗಲೇ ಚಿವುಟುವುದೇ ಜಾಣತನದ ಕ್ರಮ. ಆದರೆ ಇದು ಚಿಗುರುತ್ತಿರುವುದನ್ನು ಕಂಡುಕೊಳ್ಳುವುದು ಹೇಗೆ? ಇದಕ್ಕೆ ನಮ್ಮ ದೇಹವೇ ಕೆಲವು ಸೂಚನೆಗಳನ್ನು ನೀಡುತ್ತದೆ. ಆದರೆ ಇವುಗಳನ್ನು ಗಮನಿಸುವ ಜಾಣ್ಮೆ ಬೇಕು. ಹೊಟ್ಟೆಯ ಕ್ಯಾನ್ಸರ್: ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ

ಇಂದಿನ ಲೇಖನದಲ್ಲಿ ಇಂತಹ ಕೆಲವು ಮಹತ್ವದ ಸೂಚನೆಗಳನ್ನು ನೀಡಲಾಗಿದ್ದು ಇವುಗಳನ್ನು ವೈದ್ಯರಲ್ಲಿ ಸಮಾಲೋಚಿಸುವ ಮೂಲಕ ಮುಂದೆ ಎರಗಬಹುದಾದ ದೊಡ್ಡ ಗಂಡಾತರವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬಹುದು. ಸಾಮಾನ್ಯವಾಗಿ ಕೆಲವು ಕ್ಯಾನ್ಸರ್‌ಗಳಿಗೆ ಪ್ರತ್ಯೇಕ ಉಪಕರಣ ಮತ್ತು ವಿಧಾನಗಳಿವೆ. ಉದಾಹರಣೆಗೆ ಮ್ಯಾಮೋಗ್ರಫಿಯ ಮೂಲಕ ಸ್ತನ ಕ್ಯಾನ್ಸರ್ ಇದೆಯೇ ಇಂದು ಕಂಡುಕೊಳ್ಳಬಹುದು. ಆದರೆ ಇದಕ್ಕೂ ಮುನ್ನ ದೇಹವೇ ಸೂಚಿಸುವ ಸೂಚನೆಗಳನ್ನು ಗಮನಿಸಿದರೆ ಇನ್ನೂ ಉತ್ತಮ. ಕ್ಯಾನ್ಸರ್, ಮಧುಮೇಹ ನಿಯಂತ್ರಿಸುವ ಪವರ್ ನುಗ್ಗೆಸೊಪ್ಪಿನಲ್ಲಿದೆ

ವಿಶೇಷವಾಗಿ ಮಹಿಳೆಯರು ಹೆಚ್ಚಿನ ವಿಧದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯನ್ನು ಹೊಂದಿದ್ದಾರೆ. ವಿಶೇಷವಾಗಿ ಅಧಿಕ ರಕ್ತಸ್ರಾವ, ಬಿಳಿಸೆರಗು, ಮೂತ್ರವಿಸರ್ಜನೆಯ ವೇಳೆ ಕೆಳಹೊಟ್ಟೆಯಲ್ಲಿ ನೋವು ಮೊದಲಾದವು ಸಹಾ ಕ್ಯಾನ್ಸರ್ ನಿಧಾನವಾಗಿ ಆವರಿಸುತ್ತಿರುವ ಸಂಕೇತವಾಗಿರಬಹುದು. ಆದರೆ ಇದು ನೈಸರ್ಗಿಕ ಎಂದು ನಿರ್ಲಕ್ಷ ವಹಿಸಿದರೆ ಮುಂದಿನ ದಿನಗಳಲ್ಲಿ ಇದು ಭಾರಿಯಾಗಿ ಪರಿಗಣಿಸಬಹುದು. ಬನ್ನಿ, ಈ ಸೂಚನೆಗಳನ್ನು ಗಮನಿಸಿದರೆ ಆರೋಗ್ಯವನ್ನು ಕಾಪಾಡಲು ಸಾಧ್ಯ....

ಬೆನ್ನು ಮತ್ತು ಕೆಳಬೆನ್ನಿನಲ್ಲಿ ನೋವು

ಬೆನ್ನು ಮತ್ತು ಕೆಳಬೆನ್ನಿನಲ್ಲಿ ನೋವು

ಯಕೃತ್ ಕ್ಯಾನ್ಸರ್ ಇದೆ ಎಂದು ದೃಢಪಡಿಸಿಕೊಂಡ ರೋಗಿಗಳಲ್ಲಿ ಸಾಮಾನ್ಯವಾಗಿ ಬೆನ್ನು ನೋವು ಇರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. ಅಲ್ಲದೇ ಬೆನ್ನು ನೋವು ಇರುವ ವ್ಯಕ್ತಿಗಳು ಸ್ತನ ಕ್ಯಾನ್ಸರ್ ಸಹಾ ಹೊಂದಿರುವ ಸಾಧ್ಯತೆ ಇದೆ. ಏಕೆಂದರೆ ಈ ಕ್ಯಾನ್ಸರ್‌ನ ಗಡ್ಡೆ ಎದೆ ಮತ್ತು ಎದೆಗೂಡನ್ನು ಒತ್ತುವುದರಿಂದ ಒಳಗಿನಿಂದ ನೋವು ಕಾಣಿಸಿಕೊಳ್ಳಬಹುದು.

ಉಗುರುಗಳ ಬಣ್ಣ ಬದಲಾಗುವುದು

ಉಗುರುಗಳ ಬಣ್ಣ ಬದಲಾಗುವುದು

ಉಗುರುಗಳು ಸಾಮಾನ್ಯವಾಗಿ ಅರೆಪಾರದರ್ಶಕವಾಗಿದ್ದು ಉಗುರಿನ ಕೆಳಭಾಗದ ಬೆರಳನ್ನು ಅಮುಕಿದರೆ ರಕ್ತ ಸಂಕುಚಿತಗೊಳ್ಳುವ ಮೂಲಕ ಉಗುರು ಗುಲಾಬಿ ಬಣ್ಣದಲ್ಲಿ ಕಾಣಬೇಕು. ಒಂದು ವೇಳೆ ಹೀಗಾಗದೇ ಇದು ಬಿಳಿಯಾಗಿದ್ದರೆ ಮತ್ತು ನಿಸ್ತೇಜವಾಗಿದ್ದರೆ ಇದು ಯಕೃತ್ ಕ್ಯಾನ್ಸರ್ ನ ಸೂಚನೆಯಾಗಿದೆ. ಒಂದು ವೇಳೆ ಉಗುರು ಸಾಮಾನ್ಯ ಆಕಾರಕ್ಕೂ ವ್ಯತಿರಿಕ್ತವಾಗಿ ಸುರುಳಿ ಸುತ್ತಿದಷ್ಟು ಕಮಾನಿನಾಕಾರ ಪಡೆದಿದ್ದರೆ ಇದು ಶ್ವಾಸಕೋಶದ ಕ್ಯಾನ್ಸರ್ ನ ಸೂಚನೆಯಾಗಿದೆ.

ಮುಖ ಊದಿಕೊಳ್ಳುವುದು

ಮುಖ ಊದಿಕೊಳ್ಳುವುದು

ಒಂದು ವೇಳೆ ಮುಖ ಸಾಮಾನ್ಯಕ್ಕಿಂತಲೂ ಹೆಚ್ಚಿನ ಗಾತ್ರದಲ್ಲಿ ಊದಿಕೊಂಡಿದ್ದರೆ ಹಾಗೂ ಕೊಂಚ ಕೆಂಪಗಾಗಿದ್ದರೆ ಇದು ಸಹಾ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಏಕೆಂದರೆ ಶ್ವಾಸಕೋಶದ ಕ್ಯಾನ್ಸರ್ ಗಡ್ಡೆಗಳು ಎದೆಗೂಡಿನಲ್ಲಿ ಕೆಲವು ನರಗಳನ್ನು ಹೆಚ್ಚು ಒತ್ತುವ ಮೂಲಕ ಮುಖಕ್ಕೆ ಧಾವಿಸುವ ರಕ್ತದ ಪ್ರಮಾಣವನ್ನು ಕಡಿಮೆ ಮಾಡುವ ಪರಿಣಾಮವಾಗಿ ಮುಖ ಊದಿಕೊಳ್ಳುತ್ತದೆ.

ಚರ್ಮದ ಅಡಿಯ ಗಂಟುಗಳು

ಚರ್ಮದ ಅಡಿಯ ಗಂಟುಗಳು

ಕೆಲವೊಮ್ಮೆ ಚರ್ಮದ ಅಡಿಯಲ್ಲಿ ಚಿಕ್ಕ ಚಿಕ್ಕ ಗಂಟುಗಳಾಗಿದ್ದು ಕೆಲವೊಮ್ಮೆ ಇದರಿಂದ ರಕ್ತ ಒಸರಲೂ ಬಹುದು. ಈ ಗಂಟುಗಳನ್ನು ಒತ್ತಿದಾಗ ನೋವಿಲ್ಲದೇ ಇದ್ದರೆ ಇವುಗಳನ್ನು ಗ್ಯಾಂಗ್ಲಿಯಾನ್ ಗಂಟುಗಳೆಂದು ಕರೆಯಬಹುದಾಗಿದ್ದು ಇವು ನಿರಪಾಯಕಾರಿಯಾಗಿವೆ. ಆದರೆ ಒಂದು ವೇಳೆ ಈ ಗಂಟುಗಳನ್ನು ಒತ್ತಿದಾಗ ನೋವಾದರೆ ಹಾಗೂ ಇವು ನಿಧಾನವಾಗಿ ಬೆಳೆಯುತ್ತಿರುವುದನ್ನು ಗಮನಿಸಿದರೆ ಇದು ಚರ್ಮದ ಕ್ಯಾನ್ಸರ್ (basal skin melanoma) ನ ಲಕ್ಷಣವೆಂದು ತಿಳಿದುಕೊಳ್ಳಬೇಕು.

ಕೆಂಪಗಾದ, ಊದಿಕೊಂಡ, ನೋವಿನಿಂದ ಕೂಡಿದ ಸ್ತನಗಳು

ಕೆಂಪಗಾದ, ಊದಿಕೊಂಡ, ನೋವಿನಿಂದ ಕೂಡಿದ ಸ್ತನಗಳು

ಇವುಗಳಲ್ಲಿ ಯಾವುದೇ ಒಂದು ಲಕ್ಷಣ ಕಂಡುಬಂದರೂ ಇದು ಸ್ತನ ಕ್ಯಾನ್ಸರ್ ನ ಲಕ್ಷಣವೆಂದು ತಿಳಿದುಕೊಳ್ಳಬೇಕು.

ಸ್ತನತೊಟ್ಟಿನ ಆಕಾರ ಬದಲಾಗುವುದು

ಸ್ತನತೊಟ್ಟಿನ ಆಕಾರ ಬದಲಾಗುವುದು

ಒಂದು ವೇಳೆ ತೊಟ್ಟು ಒಳಗಿನಿಂದ ಎಳೆದುಕೊಂಡಂತೆ ಒಳಸರಿದಿದ್ದಲ್ಲಿ, ಅತಿಯಾಗಿ ಚಪ್ಪಟೆಯಾಗಿದ್ದಲ್ಲಿ ಅಥವಾ ಒಂದು ಪಕ್ಕಕ್ಕೆ ಬಾಗಿದಂತೆ ಕಂಡುಬಂದರೆ ಇದು ಸಹಾ ಸ್ತನ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

ನೋವಿನಿಂದ ಕೂಡಿದ ಮತ್ತು ಅನಿಯಮಿತವಾದ ಮಾಸಿಕ ದಿನಗಳು

ನೋವಿನಿಂದ ಕೂಡಿದ ಮತ್ತು ಅನಿಯಮಿತವಾದ ಮಾಸಿಕ ದಿನಗಳು

ಈ ಲಕ್ಷಣಗಳು ಗರ್ಭಕೋಶದ ಕ್ಯಾನ್ಸರ್ ನ ಲಕ್ಷಣವಾಗಿದ್ದು ತಕ್ಷಣವೇ ತಜ್ಞ ವೈದ್ಯರಿಂದ trans-vaginal ultrasound ಪರೀಕ್ಷೆಯನ್ನು ಮಾಡಿಸಿಕೊಂಡು ಯಾವ ತೊಂದರೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು.

ಉಸಿರಾಡಲು ಕಷ್ಟವಾಗುವುದು, ಉಸಿರು ಕಟ್ಟಿದಂತಾಗುವುದು

ಉಸಿರಾಡಲು ಕಷ್ಟವಾಗುವುದು, ಉಸಿರು ಕಟ್ಟಿದಂತಾಗುವುದು

ಈ ಲಕ್ಷಣಗಳು ದಿನವಿಡೀ ಇದ್ದರೆ ಇದು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿದೆ.

 
English summary

Signs Of Different Cancer Types That Women Often Neglect

This article will present to you a list of warning signs of cancer. These symptoms are often neglected and it's high time that women start taking notice of these changes before it's too late. Instead of waiting for a regular check-up, it is always better to look out for these warning signs of cancer. The key to finding out these symptoms is to notice something different in the body.
Subscribe Newsletter