For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ ತವಕದಲ್ಲಿ ಆರೋಗ್ಯದ ಕಡೆ ಗಮನವಿರಲಿ

|

ಇಂದು ಸ್ಥೂಲಕಾಯ ಹೆಚ್ಚಿನವರ ಚಿಂತೆಯ ಕಾರಣವಾಗಿದೆ. ತೂಕ ಇಳಿಸಬೇಕು ಆದರೆ ಅದಕ್ಕಾಗಿ ವ್ಯಾಯಾಮ ಮಾಡಲು ಅಥವಾ ಊಟದಲ್ಲಿ ಕಡಿಮೆ ಮಾಡಲು ಮಾತ್ರ ಯಾರೂ ತಯಾರಿಲ್ಲ. ಆದರೆ ಕೆಲವರು ಬೇಗನೇ ತೂಕ ಕಳೆದುಕೊಳ್ಳಲು ಕೆಲವು ವಿಭಿನ್ನ ಪ್ರಯೋಗಗಳನ್ನು ಅನುಸರಿಸಿ ತಮ್ಮ ಆರೋಗ್ಯವನ್ನು ಇನ್ನಷ್ಟು ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಸಾಮಾನ್ಯವಾಗಿ ನಾವು ತಿಳಿದುಕೊಳ್ಳುವುದು ಊಟ ಬಿಟ್ಟರೆ ತೆಳ್ಳಗಾಗುತ್ತೇವೆ ಎಂಬ ಮಿಥ್ಯೆ.

ಬಲವಂತವಾಗಿ ಆಹಾರದಿಂದ ದೂರವಿರುವುದರಿಂದ ದೇಹಕ್ಕೆ ಲಭ್ಯವಾಗಬೇಕಿದ್ದ ಪೋಷಕಾಂಶಗಳು ಅಲಭ್ಯವಾಗಿ ದೇಹ ಸೊರಗಿ ಕೊಂಚ ತೂಕ ಇಳಿದಂತೆ ಕಂಡುಬರುತ್ತದೆ ಆದರೆ ಪೋಷಕಾಂಶಗಳ ಕೊರತೆಯಿಂದ ಹತ್ತು ಹಲವು ರೋಗಗಳಿಗೆ ಗುರಿಯಾಗುತ್ತೇವೆ. ಆದುದರಿಂದ ನಿಯಮಿತ ವ್ಯಾಯಾಮ, ಸೂಕ್ತ ಆಹಾರ, ನಿದ್ದೆಯ ಮೂಲಕ ನೈಸರ್ಗಿಕವಾದ ದೇಹ ಪಡೆದುಕೊಳ್ಳುವುದು ಆರೋಗ್ಯಕರ. ವೇಗವಾಗಿ ತೂಕ ಕಳೆದುಕೊಳ್ಳಲು ಬಯಸಿ ಏನೇನೋ ಮಾಡಿಕೊಳ್ಳುವವರು ಅನುಭವಿಸುವ ತೊಂದರೆಗಳು ಈ ಕೆಳಗಿನಂತಿವೆ. ಒಂದು ತಿಂಗಳಲ್ಲೇ ತೂಕ ಕಳೆದುಕೊಳ್ಳಲು ಸುಲಭ ಉಪಾಯಗಳು

Top risks of Ouick weight loss, which should shock you

ಕೊಬ್ಬಿನ ಪ್ರಮಾಣ ಮತ್ತಷ್ಟು ಏರುವ ಸಾಧ್ಯತೆ!
ಕೊಬ್ಬು ಕಳೆದುಕೊಳ್ಳಲು ಊಟ ಮಾಡದೇ ಉಪವಾಸವಿರುವವರ ದೇಹ ಕೊಬ್ಬನ್ನು ಬಳಸಿಕೊಂಡು ಕೊಂಚ ತೂಕ ಕಡಿಮೆಯಾದಂತೆ ಕಂಡುಬಂದರೂ ನಂತರ ಮಾಡುವ ಊಟದಿಂದ ಕಳೆದುಕೊಂಡ ಕೊಬ್ಬಷ್ಟೂ ಮತ್ತೆ ಶೇಖರವಾಗುತ್ತದೆ. ಅಷ್ಟು ಮಾತ್ರವಲ್ಲ, ಕೊಬ್ಬು ಕರಗಿಸಿಕೊಂಡ ಪ್ರತೀಕಾರವೆಂಬಂತೆ ಇನ್ನಷ್ಟು ಹೆಚ್ಚು ಕೊಬ್ಬನ್ನು ಸೇರಿಸಿಕೊಳ್ಳುತ್ತದೆ. ತೂಕ ಕಳೆದುಕೊಳ್ಳುವ ಬದಲು ಇನ್ನಷ್ಟು ಹೆಚ್ಚಲು ಇದೇ ಕಾರಣ.
ಸಾಮಾನ್ಯವಾಗಿ ಕೊಬ್ಬು ಕೂಡಲೇ ಕರಗಬೇಕೆಂದು ಏನೇನೋ ಸರ್ಕಸ್ಸು ಮಾಡುವವರಿಗೆ ಕೂಡಲೇ ಕೊಂಚ ಪರಿಣಾಮ ಕಂಡುಬಂದರೂ ಬಳಿಕ ಹಸಿವು ತೀವ್ರವಾಗಿ ಹೆಚ್ಚಿ ಬಕಾಸುರನಂತೆ ಊಟ ಮಾಡುವ ಪರಿಸ್ಥಿತಿ ಒದಗುತ್ತದೆ. ಪರಿಣಾಮವಾಗಿ ಕೊಬ್ಬು ಇನ್ನಷ್ಟು ಹೆಚ್ಚುತ್ತದೆ, ತೂಕ ಕಳೆದುಕೊಳ್ಳುವ ಬದಲು ಇನ್ನಷ್ಟು ಹೆಚ್ಚುತ್ತದೆ.

ನಿದ್ದೆಯ ಕೊರತೆ ಕೊರತೆ ಕಾಡಬಹುದು!

ಶೀಘ್ರ ತೂಕ ಕಳೆದುಕೊಳ್ಳಲು ಆಹಾರವನ್ನೂ ಕಡಿಮೆ ಮಾಡಿರುವ ಪರಿಣಾಮವಾಗಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸದೇ ದೇಹ ಸೊರಗುತ್ತದೆ. ನಮ್ಮ ದೇಹದ ಎಷ್ಟೋ ಕಾರ್ಯಗಳು ನಿದ್ದೆಯಲ್ಲಿ ಜರುಗುತ್ತವೆ. ಈಗ ಆ ಕಾರ್ಯಗಳಿಗೆ ಪೋಷಕಾಂಶಗಳೇ ಇಲ್ಲದೇ ಪೋಷಕಾಂಶಗಳಿಗಾಗಿ ದೇಹ ಮೊರೆಯಿಡತೊಡಗುತ್ತದೆ. ಈ ಮೊರೆ ನಿದ್ದೆಯನ್ನು ದೂರವಾಗಿಸುತ್ತದೆ. ರಾತ್ರಿಯಿಡೀ ಹೊರಳಾಟ, ಹಸಿವಿನ ನರಳಾಟದಿಂದ ದಿನನಿತ್ಯದ ಕಾರ್ಯಗಳಿಗೆ ಧಕ್ಕೆಯುಂಟಾಗುತ್ತದೆ. ಏನಿದು ಆಶ್ಚರ್ಯ, ಕೇವಲ ಹಣ್ಣಿನ ಸಹಾಯದಿಂದ ತೂಕ ಇಳಿಸಿಕೊಳ್ಳಬಹುದೇ?

ಪಿತ್ತಕೋಶದಲ್ಲಿ ಕಲ್ಲು
ಶೀಘ್ರವಾದಿ ತೂಕ ಕಳೆದುಕೊಳ್ಳುವವ ಪಿತ್ತದಲ್ಲಿ ಪಿತ್ತಗಲ್ಲು (Gallstones) ಬೆಳೆಯುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಪಿತ್ತಕೋಶದಿಂದ ಸಣ್ಣಕರುಳಿಗೆ ಸ್ರವಿಸುವ ಪಿತ್ತರಸದ ಕಾರಣ ಜೀರ್ಣಕ್ರಿಯೆ ಸುಲಭವಾಗುತ್ತದೆ. ನೀರು ಮತ್ತು ಆಹಾರವಿರದ ಕಾರಣ ಪಿತ್ತಕೋಶದಲ್ಲಿ ಉತ್ಪತ್ತಿಯಾದ ಪಿತ್ತರಸಕ್ಕೆ ಕೆಲಸವೇ ಇಲ್ಲವಾಗಿ ಕೊಲೆಸ್ಟ್ರಾಲ್‌ನೊಂದಿಗೆ ಮಿಳಿತಗೊಂಡು ಪಿತ್ತಕೋಶದೊಳಕ್ಕೇ ಗಟ್ಟಿಯಾಗಿಬಿಡುತ್ತದೆ. ಇದು ಪಿತ್ತಗಲ್ಲಿಗೆ ಕಾರಣವಾಗುತ್ತದೆ.

ಪೋಷಕಾಂಶಗಳ ಕೊರತೆ
ದೇಹಕ್ಕೆ ಪ್ರತಿದಿನ ಹಲವು ಪೋಷಕಾಂಶಗಳ ಅಗತ್ಯವಿದೆ. ಶೀಘ್ರ ತೂಕ ಕಳೆದುಕೊಳ್ಳುವವರು ತಮ್ಮ ಆಹಾರವನ್ನೂ ಕಡಿಮೆ ಮಾಡುತ್ತಾರೆ ಅಥವಾ ಕಡಿಮೆ ಪೋಷಕಾಂಶಗಳ ಆಹಾರ ಸೇವಿಸುತ್ತಾರೆ. ಪರಿಣಾಮವಾಗಿ ದೇಹಕ್ಕೆ ಪ್ರತಿದಿನಕ್ಕೆ ಅಗತ್ಯವಾದ ಪೋಷಕಾಂಶಗಳು ದೊರಕದೇ ದೇಹ ಸೊರಗುತ್ತದೆ.

ಹೆಚ್ಚುವ ದುಗುಡ

ಮಾನಸಿಕ ನೆಮ್ಮದಿಗೆ ಹೊಟ್ಟೆ ತುಂಬುವುದೂ ಅಗತ್ಯ. ನಮ್ಮ ದೇಹದಲ್ಲಿ ಅಡ್ರಿನಲ್ ಗ್ರಂಥಗಳಿಂದ ಸ್ರವಿತವಾಗುವ ಕಾರ್ಟಿಸೋಲ್ (cortisol) ಎಂಬ ಹಾರ್ಮೋನು ನಮ್ಮ ದುಗುಡಕ್ಕೆ ಕಾರಣವಾಗಿದ್ದು ಬೆಳಿಗ್ಗೆ ಅತಿ ಹೆಚ್ಚಿದ್ದು ರಾತ್ರಿ ಅತಿ ಕಡಿಮೆ ಇರುತ್ತದೆ. ಅಂದರೆ ದಿನದ ಚಟುವಟಿಕೆಗಳ ಮೂಲಕ ಈ ಹಾರ್ಮೋನು ಕರಗುತ್ತದೆ ಎಂದಾಯಿತು. ಸರಿಯಾದ ಊಟವಿಲ್ಲದ ಕಾರಣ ರಕ್ತದಲ್ಲಿ ಸ್ರವಿಸಲಾಗುವ ಕರಗದೇ ಮಾನಸಿಕ ದುಗುಡಕ್ಕೆ ಕಾರಣವಾಗುತ್ತದೆ.
English summary

Top risks of Ouick weight loss, which should shock you

Fast weight loss is everybody's secret wish. However this tempting wish can have severe detrimental effects on your health. Aside physical harm, fast weight loss may even cause mental stress and depression. Here are top risks that fast weight loss has with it.
Story first published: Tuesday, September 8, 2015, 18:56 [IST]
X
Desktop Bottom Promotion