For Quick Alerts
ALLOW NOTIFICATIONS  
For Daily Alerts

ಪುರುಷರ ಆಕರ್ಷಕ ಮೈಕಟ್ಟಿಗೆ ಸತ್ವಯುತ ಆಹಾರ

By Super
|

ಪುರುಷರ ಆರೋಗ್ಯದ ಬಗ್ಗೆ ನಾವು ಚರ್ಚೆಮಾಡಿದಾಗ ಅವರ ಪೌಷ್ಟಿಕಾಂಶ ಅವಶ್ಯಕತೆಗಳು ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಾಗಿರುತ್ತವೆ. ಪುರುಷರು ದೈಹಿಕವಾಗಿ ಬಲವಾಗಿರುತ್ತಾರೆ ಆದರೆ ಅವರ ದೇಹ ಇನ್ನೂ ಹೆಚ್ಚು ಪೌಷ್ಟಿಕಾಂಶವಿರುವ ಆಹಾರ ಮತ್ತು ಪೂರಕ ವಸ್ತುಗಳ ಬೇಡಿಕೆಯಿರುತ್ತವೆ.

ಪುರುಷರ ಕೆಲಸದಲ್ಲಿ ಒತ್ತಡ ಮತ್ತು ಕೆಲಸದಲ್ಲಿನ ಒತ್ತಡಗಳು ದಿನೇ ದಿನೇ ಹೆಚ್ಚುತ್ತಿರುವ ಸವಾಲುಗಳಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಸರಿಯಾದ ಆರೈಕೆ ಮಾಡಿಕೊಳ್ಳುವುದು ಅಗತ್ಯ. ಮಹಿಳೆಯರಿಗೂ ಕೂಡ ಗಮನ ಕೊಡಬೇಕಾದ ಅನೇಕ ಅರೋಗ್ಯ ಸಮಸ್ಯೆಗಳಿರುತ್ತವೆ. ದುರಭ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯಂತೆ!

ಆದಾಗ್ಯೂ ಪುರುಷರ ಆರೋಗ್ಯದ ಬಗ್ಗೆ ಮಹಿಳೆಯರಿಗೆ ಹೋಲಿಸಿದರೆ ವಿರಳವಾಗಿ ಚರ್ಚೆಯಿರುವುದಿಲ್ಲ. ಪುರುಷರ ದೇಹವು ಒತ್ತಡಗಳನ್ನು ಬಹಳಷ್ಟು ಸಹಿಸಿಕೊಳ್ಳಬಲ್ಲವು ಆದರೆ ಅಷ್ಟೇ ಸುಲಭವಾಗಿ ರೋಗಗಳ ಆಕ್ರಮಣಕ್ಕೆ ಒಳಗಾಗಬಹುದು. ಸಾಧಾರಣವಾಗಿ ಒತ್ತಡದಿಂದ ರೋಗದ ಸೋಂಕಿನ ರಕ್ಷಣೆಯ ಧಾರಣಶಕ್ತಿ ದುರ್ಬಲವಾಗುತ್ತದೆ. ಪುರುಷರು ಹೆಚ್ಚು ದೈಹಿಕ ಪರಿಶ್ರಮದಿಂದ ಬಳಲುತ್ತಾರೆ ಮತ್ತು ಅವರು ನೋವು ಸಹಿಷ್ಣುತೆಯನ್ನು ಹೊಂದಿರುತ್ತಾರೆ. ಆದ್ದರಿಂದ ಅತ್ಯಂತ ದಣಿಯುವವರೆಗೂ ಪುರುಷರು ತಮ್ಮ ದೇಹಕ್ಕಾಗುತ್ತಿರುವ ನೋವನ್ನು ಗುರುತಿಸುವುದಿಲ್ಲ.

ಅವರು ಇದ್ದಕ್ಕಿದ್ದಂತೆ ಕಾಯಿಲೆ ಬೀಳುತ್ತಾರೆ ಮತ್ತು ಇತರ ಆರೋಗ್ಯದ ಸಮಸ್ಯೆಗಳನ್ನು ಗಮನಿಸದೇ ಇರಬಲ್ಲವರಾಗಿದ್ದಾರೆ. ಆದ್ದರಿಂದ ಪುರುಷರು ಕೆಲವು ಆರೋಗ್ಯ ವರ್ಧಿಸುವ ಆಹಾರಗಳನ್ನು ಮುನ್ನೆಚ್ಚರಿಕೆಯಿಂದ ತೆಗೆದುಕೊಳ್ಳುವುದು ಒಳ್ಳೆಯದು. ಪುರುಷರು ತಮ್ಮ ಆರೋಗ್ಯವನ್ನು ವರ್ಧಿಸಲು ಬೇಕಾಗಿರುವ ಆಹಾರಗಳ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದೇವೆ. ಪುರುಷರಿಗೆ ಬೇಕಾಗಿರುವ ಪೌಷ್ಟಿಕಾಂಶದ ಆಹಾರಗಳ ಕಡೆ ಮುಂದೆ ಗಮನ ಕೊಡಿ:

ರಾಗಿ

ರಾಗಿ

ರಾಗಿಯಲ್ಲಿ ಕ್ಯಾಲ್ಸಿಯುಂ ಅತ್ಯಂತ ಅಧಿಕವಾಗಿರುವುದರಿಂದ ಪುರುಷರಲ್ಲಿ ಅಸ್ಥಿರಂಧ್ರತೆ ಅಥವಾ ಅಸ್ಥಿಭಿದುರತೆ (Osteoporosis) ರೋಗವನ್ನು ತಡೆಗಟ್ಟಲು ಸಹಾಯಕಾರಿಯಾಗಿದೆ. ಅದರಲ್ಲಿ ತವರ (Zinc) ಅಧಿಕವಾಗಿದ್ದು ಪುರುಷ-ಫಲವತ್ತತೆಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಅದು ಮಧುಮೇಹರೋಗವನ್ನು ನಿಯಂತ್ರಿಸಿ ಬೊಜ್ಜು ದೇಹ ಬೆಳೆಯುವುದನ್ನು ತಡೆಗಟ್ಟುತ್ತದೆ. ಪುರುಷರಿಗೆ ತೆಗೆದುಕೊಳ್ಳಬೇಕಾದ ಆಹಾರಗಳಲ್ಲಿ ರಾಗಿಯು ಒಂದು ಅತ್ಯುತ್ತಮ ಆಹಾರವಾಗಿದೆ.

ಚಿಯಾ ಬೀಜಗಳು

ಚಿಯಾ ಬೀಜಗಳು

(ಚಿಯ- ಹೂಬಿಡುವ ಸಸ್ಯ ಜಾತಿಯ ಮಿಂಟ್ ಕುಟುಂಬದ ಮೆಕ್ಸಿಕೋ ಮತ್ತು ಗ್ವಾಟೆಮಾಲಾ ಮೂಲದ್ದು) ಈ ಬೀಜ ಪುರುಷರಿಗೆ ಅಗತ್ಯವಿರುವ ಆಹಾರಗಳಲ್ಲಿ ಅತ್ಯಂತ ಆರೋಗ್ಯಕರ ಆಹಾರ. ಇದು ಪುರುಷರ ಶರೀರದ ಉಷ್ಣತೆಯನ್ನು ಕಾಪಾಡುತ್ತದೆ ಮತ್ತು ಬೇಸಿಗೆ ಕಾಲದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಒಮೇಗ 3 ಕೊಬ್ಬಿನ ಆಮ್ಲಗಳು, ನಾರಿನಾಂಶಗಳು ಮತ್ತು ಉತ್ಕರ್ಷಣ (ಆಂಟಿ-ಆಕ್ಸಿಡೆಂಟ್ಸ್) ಸಮೃದ್ಧಿಯಾಗಿದೆ. ಇದು ಹೃದಯ ರೋಗಗಳನ್ನು ತಡೆಯುತ್ತದೆ ಮತ್ತು ಮೆದುಳಿಗೆ ಒಳ್ಳೆಯದು.

ಸೋಯಾ

ಸೋಯಾ

ಸೋಯನಲ್ಲಿ ಐಸೊಫ್ಲವೊನ್ಗಳು (Isoflavones) ಇರುವುದರಿಂದ ಪ್ರೊಸ್ಟೇಟ್ ಕ್ಯಾನ್ಸರ್ ಕಾಯಿಲೆಯನ್ನು ತಡೆಯುತ್ತದೆ ಮತ್ತು ಗುಣಪಡಿಸಲು ಸಹಾಯಮಾಡುತ್ತದೆ. ಇದರಲ್ಲಿ ಪ್ರೋಟೀನ್ಸ್ ಅಧಿಕವಾಗಿರುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸ್ನಾಯುಗಳನ್ನು ಬೆಳೆಸಲು ಸಹಾಯಮಾಡುತ್ತದೆ. ಇದನ್ನು ಸೋಯ ಹಾಲು, ಸೋಯ ಬೀಜಗಳು ಮತ್ತು ಸೋಯ ಚೀಸ್ ರೂಪದಲ್ಲಿ ಸೇವಿಸಬಹುದು.

ಮಾವು ಮತ್ತು ಪಪ್ಪಾಯಿ ಹಣ್ಣುಗಳು

ಮಾವು ಮತ್ತು ಪಪ್ಪಾಯಿ ಹಣ್ಣುಗಳು

ಈ ಹಣ್ಣುಗಳ ಸಿಪ್ಪೆಯಲ್ಲಿ ಅಧಿಕವಾಗಿ ಬಯೋಫ್ಲವೊನೋಯಿಡ್ಸ್ ಮತ್ತು ಇತರ ಪೋಷಕಾಂಶಗಳಿವೆ. ಪುರುಷರು ತಮ್ಮ ಪೌಷ್ಟಿಕ ಅಗತ್ಯಗಳಿಗೆ ಈ ಹಣ್ಣುಗಳನ್ನು ಸೇವಿಸಬೇಕು. ಈ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ.

ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಮ್)

ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಮ್)

ಇದರಲ್ಲಿ ಅತ್ಯಧಿಕ ವಿಟಮಿನ್ ಸಿ ಇದೆ. ಕಿತ್ತಲೆಹಣ್ಣಿನಲ್ಲಿರುವುದಕ್ಕಿಂತಾ ಮೂರು ಪಟ್ಟು ಹೆಚ್ಚು ವಿಟಮಿನ್ ಸಿ ಇರುತ್ತದೆ. ವಿಟಮಿನ್ ಸಿ ಉಪಶಮನ ಮತ್ತು ವಾಸಿಮಾಡುವ ಮಾಡುವ ಗುಣಗಳನ್ನು ಹೊಂದಿದೆ.ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಗಾಯಗಳನ್ನು ವಾಸಿಮಾಡಲು ಸಹಾಯಮಾಡುತ್ತದೆ. ಅದು ದೇಹಕ್ಕೆ ಶಕ್ತಿಯನ್ನೂ ಸಹ ಕೊಡುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಕಚ್ಚಾರೂಪದಲ್ಲಿಯಾದರೂ ಅಥವಾ ಕ್ಯಾಪ್ಸೂಲ್ ರೂಪದಲ್ಲಿಯಾದರೂ ಪುರುಷರು ಮರೆಯಬಾರದು. ಅದು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಲಾಭದಾಯಕವಾಗಿರುತ್ತದೆ ಆದರೆ ಪುರುಷರಿಗೆ ಹೆಚ್ಚು ಲಾಭದಾಯಕವಾಗಿರುತ್ತದೆ. ಬೆಳ್ಳುಳ್ಳಿಯಲ್ಲಿ ಉತ್ಕರ್ಷಣ (ಆಂಟಿ-ಆಕ್ಸಿಡೆಂಟ್ಸ್) ಸಮೃದ್ಧಿಯಾಗಿರುವುದರಿಂದ ಶರೀರದಿಂದ ಎಲ್ಲಾ ಜೀವಾಣುಗಳನ್ನು ತೆಗೆದುಹಾಕುತ್ತದೆ.ಅದರಲ್ಲಿ ಬಯೋಫ್ಲೇವನೋಯ್ಡ್ ಸಮೃದ್ಧಿಯಾಗಿರುವುದರಿಂದ ವೀರ್ಯಾಣು ಹೆಚ್ಚಿಸುತ್ತದೆ.

ಹಸಿರು ಹೂ ಕೋಸು (ಬ್ರೊಕೋಲಿ)

ಹಸಿರು ಹೂ ಕೋಸು (ಬ್ರೊಕೋಲಿ)

ಇದು ಪಿತ್ತಜನಕಾಂಗದಲ್ಲಿ ಕೆಲವು ಕಿಣ್ವಗಳನ್ನು ಉತ್ಪಾದಿಸಿ ಕ್ಯಾನ್ಸರ್ ಕೋಶಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಅದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಶರೀರಕ್ಕೆಶಕ್ತಿಕೊಟ್ಟು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದು ಪುರುಷರಿಗೆ ಅತ್ಯುತ್ತಮ ಪೌಶ್ಟಿಕಾಂಶ ನೀಡುವ ಆಹಾರಗಳಲ್ಲಿ ಒಂದಾಗಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು

ಹಾಲು ಮತ್ತು ಹಾಲಿನ ಉತ್ಪನ್ನಗಳು

ಇವುಗಳಲ್ಲಿ ಕಾರ್ನಿಟೈನ್ (Carnitine) ಎಂಬ ಅಮೀನೋ ಆಮ್ಲ ಹೇರಳವಾಗಿದೆ.ಈ ಆಮ್ಲವು ಕೊಬ್ಬನ್ನು ಉಪಯೋಗಿಸಿ ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆ. ಅದು ರಕ್ತ ಸಂಚಾಲನೆಯನ್ನು ವರ್ಧಿಸಿ ನಿಮ್ಮನ್ನು ಸದಾ ಸಕ್ರಿಯವಾಗಿ ಕಾರ್ಯನಿರತರನ್ನಾಗಿ ಮಾಡಲು ಸಹಾಯಮಾಡುತ್ತದೆ. ಹಾಲಿನ ಉತ್ಪನ್ನಗಳ ಸೇವನೆಯಿಂದ ಸ್ನಾಯು ಸೆಳೆತ ಮತ್ತು ದೌರ್ಬಲ್ಯಗಳನ್ನು ತಡೆಯುತ್ತದೆ. ಅದರಲ್ಲಿ ಕ್ಯಾಲ್ಸಿಯುಮ್ ಹೇರಳವಾಗಿರುವುದರಿಂದ ಮೂಳೆ ಆರೋಗ್ಯಕ್ಕೆ ಒಳ್ಳೆಯದು.

ಅವೊಕಾಡೊ

ಅವೊಕಾಡೊ

ಅವೊಕಾಡೊ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಕಾರ್ನಿಟೈನ್ ಅಧಿಕವಾಗಿರುವುದರಿಂದ ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆ ಮತ್ತು ಕೊಬ್ಬಿನ ಅಂಶವನ್ನು ಇಳಿಸುತ್ತದೆ. ಅವೊಕಾಡೊನಲ್ಲಿ ಉತ್ತಮ ಕೊಬ್ಬು ಸಮೃದ್ಧವಾಗಿದ್ದು ಶರೀರದಲ್ಲಿರುವ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ನೆರವಾಗುತ್ತದೆ.

English summary

Top Energy Foods For Men

When we talk about men's health their nutritional requirements are more as compare to women. They are physically strong but their body demands more nutrition and supplements. Here is a list of foods that men must take to boost health. Have a look at some of the energy food for men.
X
Desktop Bottom Promotion