For Quick Alerts
ALLOW NOTIFICATIONS  
For Daily Alerts

ಕ್ಯಾಲೋರಿ ಕರಗಿಸುವ ರಹಸ್ಯ, ವಿಚಿತ್ರವಾದರೂ ಇದು ಸತ್ಯ!

By Arshad
|

ಇಂದು ಸ್ಥೂಲಕಾಯದ ಕುರಿತು ಹೆಚ್ಚಿನ ಅರಿವು ಮೂಡಿದೆ. ಸ್ವಾಭಾವಿಕವಾಗಿ ಈ ಅರಿವು ಮೂಡಿರುವವರು ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಈಗಿರುವ ಮೈಕಟ್ಟನ್ನು ಉಳಿಸಿಕೊಳ್ಳಲು ಕೊಂಚವಾದರೂ ಪ್ರಯತ್ನ ಮಾಡಿಯೇ ಇರುತ್ತಾರೆ. ವಿಶೇಷವಾಗಿ ಸೊಂಟದ ಸುತ್ತಳತೆಯನ್ನು ಹೆಚ್ಚಿಸಿರುವ ಕೊಬ್ಬು ಚಿಂತನೆಗೆ ಕಾರಣವಾಗಿದ್ದು ಇದನ್ನು ಕರಗಿಸುವತ್ತ ಚಿಂತನೆ ನಡೆದೇ ಇರುತ್ತದೆ.

ಆದರೆ ನಮ್ಮ ಪ್ರಯತ್ನಗಳಿಗೆ ವಿರುದ್ಧವಾಗಿ ಹೊಟ್ಟೆಯ ಸುತ್ತಳತೆ ಕಡಿಮೆಯಾಗುವುದಿದಲಿ, ಯಾವುದೋ ಒಂದು ಸಮಾರಂಭದಲ್ಲಿ ಕೊಂಚ ಹೆಚ್ಚು ತಿಂದ ಸಿಹಿಯನ್ನೇ ಕಾರಣವಾಗಿಸಿಕೊಂಡು ನಮ್ಮ ಹೊಟ್ಟೆ ಇನ್ನಷ್ಟು ಅಗಲವಾಗಿ ಚಿಂತನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕ್ರೋಧಗೊಂಡ ಕೆಲವರು ಇದಕ್ಕೆ ಬುದ್ಧಿ ಕಲಿಸಲೆಂದು ಒಮ್ಮೆಲೇ ಅತ್ಯಂತ ಕಠಿಣವಾದ ವ್ಯಾಯಾಮಗಳನ್ನು ಮಾಡತೊಡಗುತ್ತಾರೆ. ಆದರೆ ಆರೋಗ್ಯಕ್ಕೆ ಇದು ಅತ್ಯಂತ ಮಾರಕವಾಗಿದೆ.

ತಜ್ಞರ ಪ್ರಕಾರ ಆರೋಗ್ಯಕರವಾಗಿ ಸ್ಥೂಲಕಾಯ ಕಳೆದುಕೊಳ್ಳಲು ನಿಯಮಿತವಾದ ವ್ಯಾಯಾಮ, ನಿತ್ಯವೂ ಒಂದು ನಿಗದಿತ ಸಮಯದಲ್ಲಿ ಅನುಸರಿಸುವುದು, ನಾರು ಹೆಚ್ಚಿರುವ ಆಹಾರಗಳನ್ನು ಸೇವಿಸುವುದು, ಎಣ್ಣೆ ಪದಾರ್ಥಗಳಿಂದ ದೂರವಿರುವುದು ಮೊದಲಾದ ಸಲಹೆಗಳು ದೊರಕುತ್ತವೆ. ಮಲಗುವ ಮುನ್ನ ತಿನ್ನಬಾರದ ಹೈ ಕ್ಯಾಲೋರಿ ಫುಡ್ಸ್

ಆದರೆ ಎಲ್ಲವೂ ಧಿಡೀರ್ ಎಂದು ಬಟನ್ ಒತ್ತಿದರೆ ಸಿಕ್ಕುತ್ತಿರುವ ಇಂದಿನ ದಿನಗಳಲ್ಲಿ ಇಷ್ಟೆಲ್ಲಾ ಮಾಡಲಿಕ್ಕೆ ಜನರ ಬಳಿ ಸಮಯವೆಲ್ಲಿದೆ? ಎಲ್ಲರಿಗೂ ಥಟ್ಟನೇ ತೂಕ ಕಡಿಮೆಯಾಗುವ ಯಾವುದಾದರೂ ವಿಧಾನವೇ ಇಷ್ಟ. ಈ ಬೇಡಿಕೆಯನ್ನು ಗಮನಿಸಿಯೇ ಇಂದು ಮಾರುಕಟ್ಟೆಯಲ್ಲಿ ಟ್ರೆಡ್ ಮಿಲ್ ಮೊದಲಾದ ಹಲವು ದುಬಾರಿ (ಆದರೆ ನಿಜವಾಗಿಯೂ ಅನಾವಶ್ಯಕ) ಉಪಕರಣಗಳು ಲಭ್ಯವಿವೆ. ಇವು ನಿಮ್ಮ ಕ್ಯಾಲೋರಿಗಳನ್ನು ಕಡಿಮೆ ಮಾಡುವುದಕ್ಕಿಂತಲೂ ಹೆಚ್ಚಾಗಿ ನಿಮ್ಮ ಮನೆಯ ಪ್ರತಿಷ್ಠೆಯನ್ನು ಹೆಚ್ಚಿಸುವ ಕೆಲಸವನ್ನೇ ಮಾಡುತ್ತಿವೆ. ಅತ್ಯಧಿಕ ಕ್ಯಾಲೋರಿಯ ಭಾರತೀಯ ಆಹಾರಗಳು

ಹಾಗಾದರೆ ವ್ಯಾಯಾಮಕ್ಕೆ ಸಮಯವಿಲ್ಲದವರಿಗಾಗಿ ಬೇರೆ ಉಪಾಯವಿಲ್ಲವೇ? ಇವೆ, ಕೊಂಚ ವಿಚಿತ್ರ ಅನ್ನಿಸಿದರೂ ಫಲಪ್ರದವಾದ ಈ ಹತ್ತು ಕ್ರಮಗಳನ್ನು ಅನುಸರಿಸುವ ಮೂಲಕ ಸೊಂಟದ ಸುತ್ತಳತೆ ನಿಜವಾಗಿಯೂ ಕಡಿಮೆಯಾಗುವ ಸಂಭವವಿದೆ. ನಂಬಿಕೆ ಬರಲಿಲ್ಲವೇ? ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಕ್ರಮಗಳನ್ನು ಅನುಸರಿಸಿ, ಇದರ ಫಲ ಹೇಗೆ ಕಂಡುಬಂದಿತು ಎಂದು ನಮ್ಮೊಂದಿಗೆ ಹಂಚಿಕೊಳ್ಳಿ...

ಹತ್ತು ನಿಮಿಷ ನಗಿರಿ

ಹತ್ತು ನಿಮಿಷ ನಗಿರಿ

ಒಂದು ಜೋಕು ಹೇಳಿ ಸುಮಾರು ಐದರಿಂದ ಹತ್ತು ನಿಮಿಷ ಎಷ್ಟು ಜೋರಾಗಿ ಸಾಧ್ಯವೋ ಅಷ್ಟು ಜೋರಾಗಿ ನಗಿ, ಪ್ರತಿ ಬಾರಿ ನಕ್ಕಾಗಲೂ ನಿಮ್ಮ ದೇಹದಿಂದ ನಲವತ್ತು ಕ್ಯಾಲೋರಿಗಳು ಉರಿದು ಹೋಗುತ್ತವೆ.

ಪ್ರೇಮದಾಟವಾಡಿ

ಪ್ರೇಮದಾಟವಾಡಿ

ಸುಮಾರು ಮೂವತ್ತು ನಿಮಿಷಗಳ ಪ್ರೇಮದಾಟ ನಿಮ್ಮ ದೇಹದಿಂದ ಸುಮಾರು ಇನ್ನೂರು ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ.

ಒಂದು ಚುಂಬನದಲ್ಲಿ ಐದು ಕ್ಯಾಲೋರಿ ಕಳೆದುಕೊಳ್ಳುತ್ತೀರಿ

ಒಂದು ಚುಂಬನದಲ್ಲಿ ಐದು ಕ್ಯಾಲೋರಿ ಕಳೆದುಕೊಳ್ಳುತ್ತೀರಿ

ಒಂದು ಬಾರಿ ಚುಂಬಿಸಲು ಸುಮಾರು ಐದು ಕ್ಯಾಲೋರಿಗಳಷ್ಟು ಶಕ್ತಿ ವ್ಯಯವಾಗುತ್ತದೆ. ಐದರ ಮಗ್ಗಿ ಗೊತ್ತಿದ್ದರೆ ಒಟ್ಟು ಎಷ್ಟು ಕ್ಯಾಲೋರಿ ಕಡಿಮೆಯಾಯಿತೆಂದು ಲೆಕ್ಕ ಮಾಡಲು ಸುಲಭ.

ಚ್ಯೂಯಿಂಗ್ ಗಮ್ ಅಗಿಯುತ್ತಿದ್ದರೆ ಸಾಕು

ಚ್ಯೂಯಿಂಗ್ ಗಮ್ ಅಗಿಯುತ್ತಿದ್ದರೆ ಸಾಕು

ಏನೂ ಮಾಡದೇ ಇದ್ದಾಗ ಸುಮ್ಮನೇ ಒಂದು ಚ್ಯೂಯಿಂಗ್ ಗಮ್ ಅಗಿಯುತ್ತಿದ್ದರೆ ಒಂದು ಘಂಟೆಗೆ ಹನ್ನೊಂದು ಕ್ಯಾಲೋರಿಗಳು ಖರ್ಚಾಗುತ್ತವೆ.

ಒಂದು ಸಂದೇಶ ಕಳಿಸಲು ನಲವತ್ತು ಕ್ಯಾಲೋರಿ

ಒಂದು ಸಂದೇಶ ಕಳಿಸಲು ನಲವತ್ತು ಕ್ಯಾಲೋರಿ

ನಿಮ್ಮ ಮೊಬೈಲಿನಿಂದ ನಿಮ್ಮ ಪ್ರಿಯಪಾತ್ರರಿಗೆ ಒಂದು ಸಂದೇಶವನ್ನು ಟೈಪ್ ಮಾಡಿ ಕಳಿಸಲು ಎಷ್ಟು ಹಣ ಖರ್ಚಾಗುತ್ತದೋ ಗೊತ್ತಿಲ್ಲ, ಆದರೆ ನಿಮ್ಮ ಶರೀರದಿಂದ ನಲವತ್ತು ಕ್ಯಾಲೋರಿಗಳಂತೂ ಖರ್ಚಾಗಿರುತ್ತವೆ.

ನಾಯಿಯನ್ನು ಓಡಾಡಿಸಿ, ನಿಮ್ಮ ಮೈಯಿಂದ ಇನ್ನೂರು ಕ್ಯಾಲೋರಿ ಕಳೆದುಕೊಳ್ಳಿ

ನಾಯಿಯನ್ನು ಓಡಾಡಿಸಿ, ನಿಮ್ಮ ಮೈಯಿಂದ ಇನ್ನೂರು ಕ್ಯಾಲೋರಿ ಕಳೆದುಕೊಳ್ಳಿ

ನಿಮ್ಮ ನೆಚ್ಚಿನ ಸಾಕುಪ್ರಾಣಿ, ಉದಾಹರಣೆಗೆ ನಾಯಿಯನ್ನು ಹೊರಗೆ ತಿರುಗಾಡಿಸಲು ಕರೆದುಕೊಂಡು ಹೋಗಿ. ಇದರಿಂದ ನಾಯಿಯ ಮೈಯಿಂದ ಎಷ್ಟು ಕ್ಯಾಲೋರಿ ಕಡಿಮೆಯಾಗುತ್ತದೆ ಎಂದು ಗೊತ್ತಾಗದಿದ್ದರೂ ನಿಮ್ಮ ಶರೀರದಿಂದ ಘಂಟೆಗೆ ಇನ್ನೂರು ಕ್ಯಾಲೋರಿಗಳಾದರೂ ಖರ್ಚಾಗಿರುತ್ತವೆ.

ಅಪ್ಪುಗೆಗೆ ಅರವತ್ತು ಕ್ಯಾಲೋರಿ ಅಗತ್ಯ

ಅಪ್ಪುಗೆಗೆ ಅರವತ್ತು ಕ್ಯಾಲೋರಿ ಅಗತ್ಯ

ಸುಮ್ಮನ್ನೇ ನಿಮ್ಮ ಸಂಗಾತಿಯನ್ನು ಅಪ್ಪಿಕೊಳ್ಳುವುದರಿಂದಲೂ ಘಂಟೆಗೆ ಅರವತ್ತು ಕ್ಯಾಲೋರಿಗಳು ಖರ್ಚಾಗುತ್ತವೆ.

ಸುಮ್ಮನೇ ನಡೆದಾಡುತ್ತಿದ್ದರೆ ಸಾಕು

ಸುಮ್ಮನೇ ನಡೆದಾಡುತ್ತಿದ್ದರೆ ಸಾಕು

ಸುಮ್ಮನೇ ಕುಳಿತಿರುವ ಬದಲು ಅತ್ತಿಂದಿತ್ತ ಶತಪಥ ತಿರುಗಾಡುತ್ತಿದ್ದರೂ ಕುಳಿತಿರುವಾಗಿದ್ದಕ್ಕಿಂತಲೂ 25% ಹೆಚ್ಚು ಕ್ಯಾಲೋರಿಗಳು ಬಳಕೆಯಾಗುತ್ತವೆ.

ನರ್ತಿಸಿ, ಕ್ಯಾಲೋರಿ ನಿವಾರಿಸಿ

ನರ್ತಿಸಿ, ಕ್ಯಾಲೋರಿ ನಿವಾರಿಸಿ

ನಿಮಗೆ ಇಷ್ಟವಾದ ಯಾವುದೇ ನರ್ತನ ನಿಮ್ಮ ಶರೀರದಿಂದ ಹದಿನೈದು ನಿಮಿಷದಲ್ಲಿ ಎಪ್ಪತ್ತೈದು ಕ್ಯಾಲೋರಿಗಳನ್ನು ಕಬಳಿಸಬಲ್ಲುದು.

ಶಾಪಿಂಗ್ ಟ್ರಾಲಿ ದೂಡಿ

ಶಾಪಿಂಗ್ ಟ್ರಾಲಿ ದೂಡಿ

ಮನೆಗೆ ಸಾಮಾನು ತೆಗೆದುಕೊಳ್ಳಲು ಹೋಗುವುದಾದರೆ ಕಾರನ್ನು ಸಾಧ್ಯವಾದಷ್ಟು ದೂರ ನಿಲ್ಲಿಸಿ ಸಾಮಾನು ದೂಡುವ ಟ್ರಾಲಿಯನ್ನು ದೂಡಿಕೊಂಡು ಬನ್ನಿ. ಈ ಕೆಲಸಕ್ಕೆ ಘಂಟೆಗೆ ಸುಮಾರು ಇನ್ನೂರು ಕ್ಯಾಲೋರಿಗಳ ಶಕ್ತಿಯ ಅಗತ್ಯವಿದೆ. ದೂರ ಹೆಚ್ಚಿದ್ದಷ್ಟೂ ಕ್ಯಾಲೋರಿಗಳು ಖರ್ಚಾಗುವ ಪರಿ ಹೆಚ್ಚು.

English summary

Top 10 Fastest Ways to Burn Calories

Today, most of us are obsessed with counting calories. We tend to go crazy with the calculations of how many calories to consume, how many to spend and how many to burn. And then we 
 also wonder how to burn calories fast. Well, every activity that you take up requires some amount of energy and you need to burn some calories to get the same. So, how to burn calories? Well, here are some crazy ways to burn calories. have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more