For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಜೀವನಶೈಲಿಗೆ ಬೇಕು ನಿತ್ಯ ಯೋಗ

|

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮತ್ತು ಯೋಗಾಸನಗಳು ಅತ್ಯುತ್ತಮವಾಗಿವೆ. ಸಾವಿರಾರು ವರ್ಷದ ಇತಿಹಾಸವಿರುವ ಯೋಗಾಭ್ಯಾಸ ಇಂದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಇಂದಿನ ಯುವ ಜನತೆ ಯೋಗದ ಪ್ರಯೋಜನ ಪಡೆಯದಿರುವುದು ಒಂದು ವಿಪರ್ಯಾಸವೇ ಸರಿ.

ನಮ್ಮ ನಡುವಿನ ಹೆಚ್ಚಿನ ಜನರು ಆರಂಭಶೂರರಾಗಿದ್ದಾರೆ. ಯಾವುದೇ ಹೊಸ ವಿದ್ಯೆಯನ್ನು ಕಲಿಯುವಾಗ ಪ್ರಾರಂಭದಲ್ಲಿ ತೋರುವ ಉತ್ಸಾಹವನ್ನು ಮುಂದಿನ ದಿನಗಳಲ್ಲಿ ತೋರುವುದಿಲ್ಲ. ಯೋಗಾಭ್ಯಾಸದಲ್ಲಿಯೂ ಹಾಗೇ. ಏಕೆಂದರೆ ಕೆಲವೊಂದು ಆಸನಗಳಿಗೆ (ಪದ್ಮಾಸನ, ಹಾಲಾಸನ) ಸ್ವಲ್ಪ ಕಷ್ಟಪಡಬೇಕಾಗಿರುವುದರಿಂದ ಜನರು ನಿಧಾನವಾಗಿ ಈ ತಂಟೆಯೇ ಬೇಡವೆಂದು ಯೋಗಾಸನದಿಂದ ವಿಮುಖರಾಗುತ್ತಾರೆ. ಆದರೆ ಯಾವುದೇ ಒಳ್ಳೆಯ ಕಾರ್ಯವಾಗಬೇಕಾದರೆ ಕೊಂಚ ಕಷ್ಟಪಡಬೇಕಾದುದು ಸಹಜ ಅಲ್ಲವೇ? ಬನ್ನಿ ಯೋಗಾಭ್ಯಾಸದ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ...

ಮಾನಸಿಕ ನೆಮ್ಮದಿಗಾಗಿ ಸೂರ್ಯ ನಮಸ್ಕಾರ

Surprising Health Benefits of Yoga

ಸೂರ್ಯ ನಮಸ್ಕಾರ ಸೂರ್ಯ ನಮಸ್ಕಾರ ಎನ್ನುವುದು ಸುಮಾರು 12 ಯೋಗಾಸನಗಳನ್ನು ಒಳಗೊಂಡಿರುವ ಒಂದು ಭಂಗಿ. ಪ್ರತಿಯೊಂದು ಭಂಗಿಯೂ ನಿಮ್ಮ ದೇಹದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಹಿಂದೆ ಮತ್ತು ಮುಂದೆ ಬಾಗುವಿಕೆ ಹಿಗ್ಗುವಿಕೆಗೆ ನೆರವಾಗುತ್ತದೆ. ಈ ವೇಳೆ ದೀರ್ಘ ಉಸಿರಾಟ ತೆಗೆದುಕೊಳ್ಳುವುದರಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಅಲ್ಲದೆ ಸೂರ್ಯನ ಪ್ರಭಾತ ಕಿರಣಗಳಿಗೆ ಮೈಯೊಡ್ಡಿ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ನಿಮಗೆ ಮಾನಸಿಕ ನೆಮ್ಮದಿ ದೊರೆತು ಮನ ಪ್ರಫುಲ್ಲಗೊಳ್ಳುತ್ತದೆ. ಸೂರ್ಯ ನಮಸ್ಕಾರದ 12 ಆಸನಗಳು ಮತ್ತು ಮಂತ್ರ

ಆರೋಗ್ಯಕಾರಿ ಜೀವನಶೈಲಿಗೆ
ಯೋಗವು ದೇಹದ ಆರೋಗ್ಯವನ್ನು ಕಾಪಿಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಿಮ್ಮ ಮೂಳೆ ಸ್ನಾಯುಗಳನ್ನು ಚುರುಕು ಮತ್ತು ಚಟುವಟಿಕೆಗೊಳಿಸಲು ಯೋಗ ಸಹಕಾರಿ. ಯೋಗಭ್ಯಾಸದ ನಿರಂತರತೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬಳಲಿಕೆ, ಸುಸ್ತು, ನಿಮ್ಮಿಂದ ದೂರವಾಗಿ ಚಟುವಟಿಕೆ ನಿಮ್ಮ ಜತೆಗೂಡುತ್ತದೆ. ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

ಕರುಳಿನಿಂದ ವಿಷಕಾರಿ ತ್ಯಾಜ್ಯ ಹೊರಹಾಕುವಲ್ಲಿ
ಯೋಗವು ಕರುಳಿನಿಂದ ತ್ಯಾಜ್ಯ ವಿಷಕಾರಿ ಅಂಶಗಳನ್ನು ಹೊರಹಾಕಿ ಅದರ ಸ್ವಚ್ಛತೆಯನ್ನು ಮಾಡುತ್ತದೆ. ಕರುಳಿನ ಸ್ವಚ್ಛತೆಯಿಂದ ನಮಗೆ ಹಲವಾರು ರೋಗಗಳ ವಿರುದ್ಧ ಹೋರಾಡುವ ದೃಢತೆ ಉಂಟಾಗುತ್ತದೆ.

ಉತ್ತಮ ನಿದ್ದೆಗಾಗಿ


ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿಂದತೆ ಹೆಚ್ಚಿನ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರವೆಂದರೆ ಅದು ಯೋಗ. ಯೋಗದಿಂದ ನಿಮ್ಮ ಒತ್ತಡದ ಮಟ್ಟ ಕಡಿಮೆಯಾಗಿ ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ದೇಹದಿಂದ ಒತ್ತಡವನ್ನು ಹೊಡೆದೋಡಿಸುತ್ತದೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ನೀವು ರಾತ್ರಿಯಿಡಿ ಶಾಂತಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಸಂಜೆ ವೇಳೆ ಅಥವಾ ರಾತ್ರಿ ಮಲಗುವ ಮೊದಲು ಕೆಲವೊಂದು ಯೋಗಾಸನಗಳನ್ನು ಮಾಡಿದರೆ ನಿಮಗೆ ಶಾಂತಿಯುತ ನಿದ್ರೆ ಮತ್ತು ಮರುದಿನ ಉಲ್ಲಾಸಿತರಾಗಿ ಎದ್ದೇಳಲು ನೆರವಾಗುತ್ತದೆ. ನಿದ್ರಾದೇವಿಯ ಕಬಂಧ ಬಾಹುವಿಗೆ ಸೆಳೆದೊಯ್ಯುವ ಯೋಗಾಸನಗಳು

ಮಹಿಳೆಯರ ಮುಟ್ಟಿನ ದಿನಗಳಲ್ಲಿ
ಮಹಿಳೆಯರು ತಮ್ಮ ಮಾಸಿಕ ದಿನಗಳಲ್ಲಿ ಪದ್ಮಾಸನವನ್ನು ಆಚರಿಸುವುದರಿಂದ ನೋವನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದು. ಪದ್ಮಾಸನದ ಮೂಲಕ ಸೊಂಟದ ಸ್ನಾಯುಗಳು ಹೊರಭಾಗಕ್ಕೆ ಸೆಳೆಯುವುದರಿಂದ ನೋವು ನೀಡುವ ಸ್ನಾಯುಗಳು ನಿರಾಳಗೊಳ್ಳುತ್ತವೆ ಹಾಗೂ ರಕ್ತಸಂಚಾರ ಹೆಚ್ಚುತ್ತದೆ. ಪರಿಣಾಮವಾಗಿ ನೋವು ಶೀಘ್ರವೇ ಕಡಿಮೆಯಾಗುತ್ತದೆ.

English summary

Surprising Health Benefits of Yoga

Yoga is a great way to work on your flexibility and strength. Just about everyone can do it, too -- it's not just for people who can touch their toes or want to meditate.Some types of yoga are about relaxation. Most types focus on learning poses, called asanas. They also usually include attention to breathing.
Story first published: Monday, June 8, 2015, 19:05 [IST]
X
Desktop Bottom Promotion