For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜಿನ ಸಮಸ್ಯೆ: ಆರೋಗ್ಯಕ್ಕೆ ಕಾದಿದೆ ಗಂಡಾಂತರ!

|

ಏ ಕಮರ್ ಅಬ್ ಕಮರ್ ನಹೀಂ ರಹಾ, ಕಮರಾ ಬನ್ ಗಯಾ ಹೈ ಎಂದು ಹಿಂದಿ ಮಾತನಾಡುವವರು ತಮ್ಮ ಹೊಟ್ಟೆಯ ಬಗ್ಗೆ ವಿಷಾದದಿಂದ ನುಡಿಯುತ್ತಾರೆ. ಹೌದು, ಹೊಟ್ಟೆಯ ಬೊಜ್ಜು ದಿನೇ ದಿನೇ ಹೆಚ್ಚುತ್ತಿರುವುದು ಪುರುಷರಿಗೂ ಮಹಿಳೆಯರಿಗೂ ಚಿಂತೆಯ ಕಾರಣವಾಗಿದೆ. ಯಾರೂ ಬೇಕೆಂದೇ ಹೊಟ್ಟೆಯ ಬೊಜ್ಜನ್ನು ಹೆಚ್ಚಿಸಿಕೊಳ್ಳಲು ಇಚ್ಛಿಸಿರುವುದಿಲ್ಲ. ಆದರೆ ನಮಗೆ ಅರಿವಿಲ್ಲದಂತೆಯೇ ನಿಧಾನವಾಗಿ ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ.

ಆದರೆ ಹೊಟ್ಟೆಯ ಬೊಜ್ಜು ಹೆಚ್ಚುವುದು ಆರೋಗ್ಯದ ಮೇಲೆ ಹಲವು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾದುದರಿಂದ ಅಧಿಕರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಈ ನಿಟ್ಟಿನಲ್ಲಿ ಹಲವು ಸಂಶೋಧನೆಗಳನ್ನು ನಡೆಸಿದ European Society of Cardiology Congress ಸಂಸ್ಥೆ ಹೊಟ್ಟೆಯ ಬೊಜ್ಜು ಹೆಚ್ಚಲು ಜೀರ್ಣಾಂಗಗಳ ಸುತ್ತ ಮುತ್ತ ಸಂಗ್ರಹಗೊಳ್ಳುವ ಕೊಬ್ಬು ಪ್ರಮುಖ ಕಾರಣವಾಗಿದ್ದು ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು ಸಂಭವಿಸುವ ಸಾಧ್ಯತೆಗಳು ಇತರರಿಗಿಂದ 2.75 ಪಟ್ಟು ಹೆಚ್ಚು! ಸ್ಥೂಲಕಾಯವನ್ನು ಬಿಎಂಐ ನಿರ್ಧರಿಸುತ್ತದೆ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

BMI ಅಥವಾ body mass index ಎನ್ನುವುದು ಕಾಯದ ಎತ್ತರ ಮತ್ತು ತೂಕದ ಪರಿಮಿತಿಯ ಒಂದು ಅಳತೆಗೋಲು ಆಗಿದೆ. (BMI=ತೂಕ ಕೇಜಿಗಳಲ್ಲಿ/(ಎತ್ತರ ಸೆ.ಮೀ ಗಳಲ್ಲಿ)ವರ್ಗ) ಇದು ಇಪ್ಪತ್ತೈದರ ಒಳಗಿದ್ದಷ್ಟೂ ಆರೋಗ್ಯಕರ. ಇದು ಇಪ್ಪತ್ತೈದು ದಾಟಿತೋ ಆರೋಗ್ಯ ಗಂಡಾಂತರದತ್ತ ಸಾಗುತ್ತಿದೆ ಎಂದು ತಿಳಿದುಕೊಳ್ಳಬೇಕು. ಬನ್ನಿ ಹೊಟ್ಟೆಯ ಬೊಜ್ಜಿನ ಕಾರಣ ಯಾವ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಹೃದಯಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ

ಹೃದಯಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ

ಇಡಿಯ ದೇಹದಲ್ಲಿ ಕೊಬ್ಬಿನ ಸಂಗ್ರಹ ಗರಿಷ್ಟ ಮಟ್ಟ ತಲುಪಿದ ಬಳಿಕವೇ ಹೊಟ್ಟೆಯ ಬೊಜ್ಜು ಹೆಚ್ಚಲು ಪ್ರಾರಂಭವಾಗುವುದರಿಂದ ರಕ್ತದಲ್ಲಿಯೂ ಈ ಕೊಬ್ಬು ಹರಿಯುವ ಪ್ರಮಾಣ ಹೆಚ್ಚುತ್ತದೆ. ಇದು ಹೃದಯಕ್ಕೆ ಹೆಚ್ಚಿನ ಒತ್ತಡ ಮತ್ತು ಹೃದಯಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ.

ಮಧುಮೇಹದ ಸಾಧ್ಯತೆಗಳನ್ನು ಶೀಘ್ರಗೊಳಿಸುತ್ತದೆ

ಮಧುಮೇಹದ ಸಾಧ್ಯತೆಗಳನ್ನು ಶೀಘ್ರಗೊಳಿಸುತ್ತದೆ

ಮಧುಮೇಹ ಬಹುತೇಕ ಆನುವಂಶಿಕವಾಗಿದೆ. ಇದು ಯಾವ ವಯಸ್ಸಿನಲ್ಲಿ ಬರಬಹುದು ಎಂದು ಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಈ ಸಂಭವತೆ ಹೊಟ್ಟೆಯ ಬೊಜ್ಜು ಹೆಚ್ಚುತ್ತಿದ್ದಂತೆ ಹತ್ತಿರಾಗುತ್ತಾ ಹೋಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

 ಮಧುಮೇಹದ ಸಾಧ್ಯತೆಗಳನ್ನು ಶೀಘ್ರಗೊಳಿಸುತ್ತದೆ

ಮಧುಮೇಹದ ಸಾಧ್ಯತೆಗಳನ್ನು ಶೀಘ್ರಗೊಳಿಸುತ್ತದೆ

ರಕ್ತದಲ್ಲಿ ಹೆಚ್ಚುವ ಗ್ಲೂಕೋಸ್ ಪ್ರಮಾಣ ಮಧುಮೇಹಕ್ಕೆ ಆಹ್ವಾನವಾಗಿದೆ. ಅಲ್ಲದೇ ಹೊಟ್ಟೆಯಲ್ಲಿ ಸಂಗ್ರಹವಾಗುವ ಕೊಬ್ಬು ದೇಹದ ಜೀವರಸಾಯನಿಕ ಕ್ರಿಯೆಯನ್ನು ಏರುಪೇರುಗೊಳಿಸುವ ಮೂಲಕ ಟೈಪ್-2 ಮಾದರಿಯ ಮಧುಮೇಹ ಪ್ರಾರಂಭವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಸ್ತನ ಕ್ಯಾನ್ಸರ್‌ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ

ಸ್ತನ ಕ್ಯಾನ್ಸರ್‌ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ

ಹೊಟ್ಟೆಯ ಕೊಬ್ಬು ಮಹಿಳೆಯರಿಗೆ ಹೆಚ್ಚಿನ ಚಿಂತೆಯ ಕಾರಣವಾಗಿದೆ. ಏಕೆಂದರೆ ಮಧುಮೇಹದ ಜೊತೆಗೇ ಸ್ತನ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆಯೂ ಹೆಚ್ಚುತ್ತದೆ.

ಸ್ತನ ಕ್ಯಾನ್ಸರ್‌ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ

ಸ್ತನ ಕ್ಯಾನ್ಸರ್‌ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ

ಆದರೆ ಸ್ತನಕ್ಯಾನ್ಸರ್ ಗೆ ಸ್ಥೂಲಕಾಯವೇ ಕಾರಣ ಎಂದು ಖಡಾಖಂಡಿತವಾಗಿ ಯಾವುದೇ ಸಂಶೋಧನೆಗಳು ಖಚಿತಪಡಿಸಿಲ್ಲವಾದರೂ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ. ಆದ್ದರಿಂದ ಸೊಂಟದ ಕೊಬ್ಬಿನಿಂದ ದೂರವಿದ್ದಷ್ಟೂ ಮಹಿಳೆಯರ ಆರೋಗ್ಯ ಉತ್ತಮವಾಗುತ್ತದೆ.

ಪಿತ್ತಕೋಶದ ತೊಂದರೆಗಳಿಗೆ ಆಹ್ವಾನ ನೀಡುತ್ತದೆ

ಪಿತ್ತಕೋಶದ ತೊಂದರೆಗಳಿಗೆ ಆಹ್ವಾನ ನೀಡುತ್ತದೆ

ಪಿತ್ತಕೋಶದ ತೊಂದರೆಯಿಂದ ಶಸ್ತ್ರಕ್ರಿಯೆಗೆ ಒಳಗಾದ ಮಹಿಳೆಯರ ಅಂಕಿಅಂಶಗಳನ್ನು ಪರಿಶೀಲಿಸಿದರೆ ಬಹುತೇಕ ಎಲ್ಲರೂ ಸ್ಥೂಲಕಾಯದವರಾಗಿದ್ದುದು ಕಂಡುಬಂದಿದೆ. ಅಂದರೆ ಹೊಟ್ಟೆಯ ಬೊಜ್ಜು ಹೆಚ್ಚಲೂ ಪಿತ್ತಕೋಶದ ತೊಂದರೆಗೂ ನೇರವಾದ ಸಂಬಂಧವಿದೆ ಎಂದಾಯ್ತು.

ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ

ಹೊಟ್ಟೆಯ ಬೊಜ್ಜು ಹೆಚ್ಚುವ ಮೊದಲು ದೇಹದ ಕೊಬ್ಬಿನ ಸಂಗ್ರಹ ಗರಿಷ್ಟ ಮಟ್ಟ ಮುಟ್ಟಿರುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್(LDL (bad) cholesterol) ಮಟ್ಟ ಹೆಚ್ಚುತ್ತಾ ಹೋಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ

ಅಲ್ಲದೇ ಈ ಹೆಚ್ಚುವರಿ ಕೊಬ್ಬನ್ನು ನಿಭಾಯಿಸಲು ಉತ್ತಮ ಕೊಲೆಸ್ಟ್ರಾಲ್ (HDL (good) cholesterol) ಬಳಕೆಯಾಗುವುದರಿಂದ ರಕ್ತದಲ್ಲಿ ಎರಡೂ ಕೊಲೆಸ್ಟ್ರಾಲ್‌ಗಳ ಮಟ್ಟವನ್ನು ಏರುಪೇರುಗೊಳಿಸುತ್ತದೆ. ಇದು ಇನ್ಸುಲಿನ್ ಬಳಸುವ ಕ್ಷಮತೆಯನ್ನು ಕಡಿಮೆಗೊಳಿಸುತ್ತದೆ. (insulin resistance)

ಅಧಿಕ ರಕ್ತದೊತ್ತಡದ ತೊಂದರೆ ಎದುರಾಗುತ್ತದೆ

ಅಧಿಕ ರಕ್ತದೊತ್ತಡದ ತೊಂದರೆ ಎದುರಾಗುತ್ತದೆ

ಸೊಂಟದ ಕೊಬ್ಬು ಹೆಚ್ಚುವ ಜೊತೆ ದೇಹದ ತೂಕವೂ ಹೆಚ್ಚುವುದರಿಂದ ದೈನಂದಿನ ಚಟುವಟಿಕೆಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಈ ಶಕ್ತಿಯನ್ನು ಪೂರೈಸಲು ರಕ್ತಕ್ಕೆ ಹೆಚ್ಚಿನ ಸಾಮಾಗ್ರಿಗಳನ್ನು ಕೊಂಡೊಯ್ಯಬೇಕಾಗುತ್ತದೆ. ಇದಕ್ಕೆ ಹೃದಯಕ್ಕೆ ಸಾಮಾನ್ಯಕ್ಕಿಂತಲೂ ಹೆಚ್ಚುವರಿ ಒತ್ತಡದಿಂದ ರಕ್ತವನ್ನು ದೂಡಬೇಕಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಇದಕ್ಕೆ ಸಂಬಂಧಿಸಿದ ಇತರ ತೊಂದರೆಗಳಿಗೆ ಆಹ್ವಾನ ನೀಡುತ್ತದೆ.

ಹೃದಯ ಸ್ತಂಭನದ ಸಾಧ್ಯತೆ ಹೆಚ್ಚುತ್ತದೆ

ಹೃದಯ ಸ್ತಂಭನದ ಸಾಧ್ಯತೆ ಹೆಚ್ಚುತ್ತದೆ

ಸೊಂಟದ ಕೊಬ್ಬು ಹೆಚ್ಚಿದಷ್ಟೂ ದೇಹದಲ್ಲಿ angiotensin ಎಂಬ ಹಾರ್ಮೋನು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನು ಹೃದಯ ಸ್ತಂಭನದ ಸಾಧ್ಯತೆಯನ್ನು ಅಪಾರವಾಗಿ ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಹೊಟ್ಟೆಯ ಬೊಜ್ಜುಯನ್ನು ಕಡಿಮೆಗೊಳಿಸಲು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.

ಬೆನ್ನುನೋವಿಗೆ ಕಾರಣವಾಗುತ್ತದೆ

ಬೆನ್ನುನೋವಿಗೆ ಕಾರಣವಾಗುತ್ತದೆ

ಹೊಟ್ಟೆಯ ಬೊಜ್ಜು ಹೆಚ್ಚುತ್ತಿದ್ದಂತೆಯೇ ಹೊಟ್ಟೆ ಮುಂದೆ ಬರುತ್ತದೆ. ಏಕೆಂದರೆ ಈ ಕೊಬ್ಬಿಗೆ ಹಿಂದೆ ಸರಿಯಲು ಬೆನ್ನು ಮೂಳೆ ಅವಕಾಶ ನೀಡದೇ ಇರುವುದರಿಂದ ಮುಂದೆಯೇ ಬರಬೇಕಾಗುತ್ತದೆ. ಮುಂದೆ ಬಂದ ಹೊಟ್ಟೆಯ ಭಾರವನ್ನು ಸರಿದೂಗಿಸಲು ಬೆನ್ನುಮೂಳೆ ಮತ್ತು ಬೆನ್ನಿನ ಸ್ನಾಯುಗಳು ಬಹುವಾಗಿಯೇ ಶ್ರಮಿಸಬೇಕಾಗುತ್ತದೆ.

ಬೆನ್ನು ನೋವಿಗೆ ಕಾರಣವಾಗುತ್ತದೆ

ಬೆನ್ನು ನೋವಿಗೆ ಕಾರಣವಾಗುತ್ತದೆ

ಹೊಟ್ಟೆ ಮುಂದೆ ಬರುತ್ತಿದ್ದಂತೆಯೇ ಹೊಟ್ಟೆಯ ಸ್ನಾಯುಗಳೂ ಹೆಚ್ಚೂ ಕಡಿಮೆ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುವುದರಿಂದ ಬೆನ್ನಿನ ಮೇಲೆ ಅತ್ಯಧಿಕ ಭಾರ ಬೀಳುತ್ತದೆ. ಇದರಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆನ್ನು ನೋವಿಗೆ ಕಾರಣವಾಗುತ್ತದೆ

ಬೆನ್ನು ನೋವಿಗೆ ಕಾರಣವಾಗುತ್ತದೆ

ಯಾವುದೋ ತಪ್ಪು ಹೆಜ್ಜೆಯೊಂದರಲ್ಲಿ ಬೆನ್ನು ಮೂಳೆಯ ಬಿಲ್ಲೆ ಅಥವಾ ತಟ್ಟೆ ಸ್ವಸ್ಥಾನದಿಂದ ಅಲ್ಲಾಡಿದರೆ ಸ್ಲಿಪ್ ಡಿಸ್ಕ್ ಎಂಬ ತೊಂದರೆ ಎದುರಾಗುವ ಸಾಧ್ಯತೆ ವಿಪರೀತವಾಗಿ ಹೆಚ್ಚುತ್ತದೆ.

English summary

Risks Associated With Belly Fat

Belly fat is not a sign of being healthy. In fact it is extremely dangerous for both men and women to have visceral fat. It has a lot of risks associated with the heart along with cancers too. A study on belly fat presented at the European Society of Cardiology Congress confirms that visceral fat is the type that gathers around your internal organs.
Story first published: Saturday, July 25, 2015, 12:30 [IST]
X
Desktop Bottom Promotion