For Quick Alerts
ALLOW NOTIFICATIONS  
For Daily Alerts

ಡಿಎನ್ಎ ಪರೀಕ್ಷೆ ಮಾಡಿಸಿ, ತ್ವರಿತವಾಗಿ ತೂಕ ಇಳಿಸಿ!

By manu
|

ದೇಹ ಸೇವಿಸುವ ಆಹಾರಕ್ಕೂ ಡಿಎನ್ಎಗೂ ಎತ್ತಿಂದೆತ್ತ ಸಂಬಂಧವೆಂದು ನೀವು ಯೋಚಿಸಬಹುದು. ನಾವು ಆಹಾರ ಸೇವಿಸುವಾಗ ಡಿಎನ್ಎ ಪರೀಕ್ಷಿಸಬೇಕೇ ಎನ್ನುವ ಪ್ರಶ್ನೆ ಕೂಡ ನಿಮ್ಮಲ್ಲಿ ಮೂಡಬಹುದು. ಆದರೆ ನಿಮ್ಮ ಪ್ರಶ್ನೆಗೆ ಹೌದು ಎನ್ನುವಂತಹ ಉತ್ತರ ಬರುತ್ತದೆ. ಡಿಎನ್ಎ ಪರೀಕ್ಷಿಸಿದ ಬಳಿಕ ವ್ಯಕ್ತಿಯೊಬ್ಬನ ಆಹಾರ ಕ್ರಮವನ್ನು ನಿರ್ಧರಿಸಿದರೆ ಆಗ ಆತ ತೂಕ ಕಳಕೊಳ್ಳುವ ವಿಚಾರದಲ್ಲಿ ಮೂರು ಪಟ್ಟು ಹೆಚ್ಚು ತೂಕ ಕಳೆದುಕೊಳ್ಳುತ್ತಾನೆ.

ನಮ್ಮ ದೇಹವು ವಿಟಮಿನ್ ಮತ್ತು ಪೌಷ್ಠಿಕಾಂಶಗಳನ್ನು ಹೀರಿಕೊಂಡು ದೇಹಕ್ಕೆ ಬೇಕಾಗಿರುವ ಶಕ್ತಿಯನ್ನು ಒದಗಿಸುತ್ತದೆ. ಆದರೆ ಚಯಾಪಚಾಯ ಕ್ರಿಯೆಯಲ್ಲಿ ನಮ್ಮ ವಂಶವಾನಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ವಂಶವಾಹಿನಿಯನ್ನು ಪತ್ತೆಹಚ್ಚುವುದರಿಂದ ದೇಹಕ್ಕೆ ಬೇಕಾಗಿರುವ ಪೌಷ್ಠಿಕಾಂಶಗಳನ್ನು ಒದಗಿಸಬಹುದಾಗಿದೆ.

ವಿಶ್ವದೆಲ್ಲೆಡೆ ಲಕ್ಷಾಂತರ ಮಂದಿ ಪೌಷ್ಠಿಕಾಂಶ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ದೇಹದ ಚಯಾಪಚಾಯ ಕ್ರಿಯೆಗೆ ಹೊಂದಿಕೊಳ್ಳುತ್ತದೆಯೇ ಎಂಬದನ್ನು ತಿಳಿದುಕೊಳ್ಳುವುದಿಲ್ಲ. ಡಿಎನ್ಎ ಪರೀಕ್ಷೆ ಮಾಡಿಕೊಳ್ಳುವುದರಿಂದ ದೇಹಕ್ಕೆ ಬೇಕಾಗಿರುವ ಪೌಷ್ಠಿಕಾಂಶಗಳನ್ನು ಪತ್ತೆ ಹಚ್ಚಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ನೀಡಬಹುದು.

Listen To Your DNA To Help With Weight Loss

ವಂಶವಾಹಿನಿಯ ಸಾಮಾನ್ಯ ಪರೀಕ್ಷೆಯಿಂದ ವಂಶವಾಹಿನಿಯ ಬಗ್ಗೆ ತಿಳಿದುಕೊಳ್ಳಬಹುದು. ಡಿಎನ್ಎ ಪರೀಕ್ಷೆ ವೇಳೆ ಹಲವಾರು ಸ್ತರದ ವಂಶವಾಹಿನಿಗಳನ್ನು ವಿಶ್ಲೇಷಿಸಲಾಗುತ್ತದೆ. ಇದರಲ್ಲಿ ಚಯಾಪಚಯಾ ಕ್ರಿಯೆ, ಬೊಜ್ಜು ಮತ್ತು ಶಕ್ತಿ ವ್ಯಯಿಸುವುದಕ್ಕೆ ಸಂಬಂಧಿಸಿದ ವಂಶವಾಹಿನಿಗಳಿವೆ. ನೀವು ಬೊಜ್ಜು ದೇಹವನ್ನು ಹೊಂದಿದ್ದು, ತೂಕ ಕಳಕೊಳ್ಳಬೇಕೆಂದು ಬಯಸುತ್ತಿದ್ದರೆ ಆಗ ಮೊದಲು ಡಿಎನ್ಎ ಪರೀಕ್ಷೆ ಮಾಡಿಕೊಂಡು ಬಳಿಕ ಅದಕ್ಕೆ ಅನುಗುಣವಾಗಿ ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ. ಇದರಿಂದ ನಿಮ್ಮ ವೈಯಕ್ತಿಕ ಚಟುವಟಿಕೆಯನ್ನು ಅಂದಾಜು ಮಾಡಿ ಸರಿಯಾದ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.

ವಂಶವಾಹಿನಿಯನ್ನು ಅನುಸರಿಸಿಕೊಂಡು ಕೆಲವೊಂದು ವ್ಯಾಯಾಮ ಮತ್ತು ಚಟುವಟಿಕೆಗಳನ್ನು ವ್ಯಕ್ತಿಗೆ ಸೂಚಿಸಲಾಗುತ್ತದೆ. ಕೆಲವೊಂದು ದೇಹಗಳು ಸಹಿಷ್ಣುತೆಯ ವ್ಯಾಯಾಮಗಳಿಗೆ ಒಗ್ಗಿಕೊಂಡರೆ ಇನ್ನು ಕೆಲವು ಆಕ್ರಮಣಕಾರಿಯಾಗಿರುವಂತಹ ವ್ಯಾಯಾಮಗಳನ್ನು ಇಷ್ಟಪಡುತ್ತವೆ. ನಮ್ಮ ವೈಯಕ್ತಿಕ ಶಕ್ತಿ ಏನೆಂದು ವಂಶವಾಹಿನಿಯಿಂದ ತಿಳಿದುಕೊಳ್ಳಬಹುದು ಮತ್ತು ವೈಜ್ಞಾನಿಕವಾಗಿ ವ್ಯಾಯಾಮ ಕ್ರಮವನ್ನು ಇದಕ್ಕೆ ಅಳವಡಿಸಿಕೊಳ್ಳಬಹುದು. ನಾವು ವಂಶವಾಹಿನಿಯನ್ನು ಬದಲಾಯಿಸುವಂತಿಲ್ಲ. ಆದರೆ ನಮ್ಮ ದೇಹಕ್ಕೆ ಹೊಂದಿಕೊಳ್ಳುವಂತೆ ವ್ಯಾಯಾಮ ಕ್ರಮವನ್ನು ಅಳವಡಿಸಿಕೊಳ್ಳಬಹುದು.

ತೂಕ ಕಳೆದುಕೊಳ್ಳಲು ಡಿಎನ್ಎ ಪರೀಕ್ಷೆ
ಈಗೀಗ 30ರ ಆಸುಪಾಸಿಗೆ ಬರುತ್ತಿರುವಂತೆ ದೇಹದಲ್ಲಿ ಬೊಜ್ಜು ಆವರಿಸಿಕೊಳ್ಳುತ್ತದೆ. ಈ ಹಂತದಲ್ಲಿ ತೂಕವನ್ನು ಕಾಯ್ದುಕೊಳ್ಳುವುದೇ ದೊಡ್ಡ ಸವಾಲು ಮತ್ತು ತಾನು ಪ್ರತೀ ವರ್ಷ ಅಂಗಿಯ ಅಳತೆಯನ್ನು ಬದಲಾಯಿಸುವ ಪ್ರಮೇಯ ಬರಬಾರದೆಂದು ಅಂದುಕೊಳ್ಳುತ್ತೇನೆ. ತೂಕ ಕಳೆದುಕೊಳ್ಳಲು ವಿವಿಧ ರೀತಿಯ ಪಥ್ಯ, ಅತ್ಯಾಧುನಿಕ ವ್ಯಾಯಾಮಗಳನ್ನು ಮಾಡಿದರೂ ನನ್ನ ತೂಕ ಮಾತ್ರ ಹಾಗೆ ಉಳಿದುಕೊಂಡಿದೆ. ಇತ್ತೀಚೆಗೆ ನಾನು ಓದಿದ ಲೇಖನವೊಂದರಲ್ಲಿ ಕೆಲವರು ಏನೇ ತಿಂದರೂ ಸಪೂರ ದೇಹವನ್ನು ಹೊಂದಿರುತ್ತಾರೆ. ಇನ್ನು ಕೆಲವರು ಜಿಮ್‪ನಲ್ಲಿ ಎಷ್ಟೇ ಬೆವರು ಸುರಿಸಿದರೂ ಅವರಿಗೆ ಸ್ನಾಯು ಸೆಳೆತ, ನೋವು ಬರುವುದೇ ಹೊರತು ಬೊಜ್ಜು ಕರಗುವುದಿಲ್ಲ.

ಇದೆಲ್ಲದಕ್ಕೆ ನಮ್ಮಲ್ಲಿನ ವಂಶವಾಹಿನಿ ಕಾರಣವಾಗಿದೆ. ನಾವೆಲ್ಲರೂ ಭಿನ್ನ ಮತ್ತು ಯಾರು ಕೂಡ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಡಿಎನ್ಎ ಹೇಳುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ನಮ್ಮ ದೇಹವು ಸ್ವೀಕರಿಸುವ ಆಹಾರ ಮತ್ತು ವ್ಯಾಯಾಮಗಳಲ್ಲಿ ಡಿಎನ್ಎ ಯಾವ ರೀತಿಯ ಪಾತ್ರ ವಹಿಸುತ್ತದೆ ಎನ್ನುವುದು ನಮಗೆ ತಿಳಿದಿಲ್ಲ.

ಸಮತೋಲಿತ ಆಹಾರ ಕ್ರಮವು ನಮ್ಮ ತೂಕ ಕಳಕೊಳ್ಳುವ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಡಿಎನ್ಎ ಪರೀಕ್ಷಿಸಿದರೆ ನಮ್ಮ ದೇಹಕ್ಕೆ ಯಾವ ರೀತಿಯ ಪೌಷ್ಠಿಕಾಂಶಗಳು ಬೇಕಾಗುತ್ತದೆ ಮತ್ತು ನಮ್ಮ ದೇಹಕ್ಕೆ ಯಾವ ರೀತಿಯ ಪೌಷ್ಠಿಕಾಂಶಗಳು ಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಇದನ್ನು ತಿಳಿದುಕೊಂಡರೆ ನಮ್ಮ ಆಹಾರಕ್ರಮವನ್ನು ಯೋಜನೆ ಮಾಡಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ.

ಉದಾಹರಣೆಗೆ
ದೇಹದಂಡನೆಯ ವ್ಯಾಯಾಮ ಮತ್ತು ಸಹಿಷ್ಣುತೆಯ ವ್ಯಾಯಮಕ್ಕೆ ಹೆಚ್ಚಿನ ಮಹತ್ವ ಕೊಡುವುದು. ಇದರಿಂದ ಫಲಿತಾಂಶ ಪಡೆಯಬಹುದಾಗಿದೆ. ಇದರಿಂದ ನಾವು ಡಿಎನ್ಎ ಪರೀಕ್ಷಿಸದೆ ಮಾಡುವಂತಹ ವ್ಯಾಯಾಮಕ್ಕಿಂತ 2-3 ಪಟ್ಟು ಹೆಚ್ಚಿನ ಫಲಿತಾಂಶವನ್ನು ಪಡೆಯಬಹುದು. ತೂಕ ಕಡಿಮೆ ಮಾಡುವುದರಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ವಿಎಲ್ ಸಿಸಿಯು ವಿಎಲ್ ಸಿಸಿ ಡಿಎನ್ಎ ಸ್ಲಿಮ್ ಕಾರ್ಯಕ್ರಮವನ್ನು ಆರಂಭಿಸಿದೆ. ವಿಎಲ್ ಸಿಸಿ ಡಿಎನ್ಎ ಸ್ಲಿಮ್ ಕಾರ್ಯಕ್ರಮವು ನಿಮಗೆ ತೂಕ ಕಳೆದುಕೊಂಡು ಅದನ್ನು ಕಾಪಾಡಿಕೊಳ್ಳಲು ನೆರವಾಗಲಿದೆ. ಇನ್ನಷ್ಟು ಮಾಹಿತಿಗಾಗಿ ಭೇಟಿ ನೀಡಿ
http://www.vlccwellness.com/India/DNA-Fit/

English summary

Listen To Your DNA To Help With Weight Loss

Diets decided post a DNA test may help a person lose upto three times more weight than a diet not based on one. Our body absorbs and metabolises vitamins and nutrients to provide nourishment and keep us fit. Our genes play an important role in this activity. By identifying the genetic profile, we can supplement our diets to ensure that we get enough of the nutrients, that we might be lacking.
X
Desktop Bottom Promotion