For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?

By Arshad
|

ಇಂದು ಪ್ರಯಾಣದಲ್ಲಿರುವವರು ಬೇರೆ ಊರಿನಲ್ಲಿದ್ದಾಗ ಆ ಊರಿನ ನೀರನ್ನು ನೇರವಾಗಿ ಕುಡಿಯುವ ಬದಲು ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರನ್ನೇ ಕುಡಿಯುತ್ತಾರೆ. ಇದು ಸುರಕ್ಷಿತಾ ಕ್ರಮವೇ ಹೌದು. ಏಕೆಂದರೆ ಪ್ರತಿ ಊರಿನಲ್ಲಿರುವ ನೀರಿನಲ್ಲಿ ಕರಗಿರುವ ಖನಿಜ ಮತ್ತು ಲವಣಗಳು ಬೇರೆಬೇರೆಯಾಗಿರುತ್ತವೆ. ಈ ನೀರು ಅಭ್ಯಾಸವಿಲ್ಲದವರು ಕುಡಿದಾಗ ಅವರ ದೇಹ ಈ ಲವಣಗಳನ್ನು ಕ್ರಿಮಿಗಳೆಂದು ಪರಿಗಣಿಸಿ ಶೀತ, ಕೆಮ್ಮು ಮೊದಲಾದ ರಕ್ಷಣಾ ವ್ಯವಸ್ಥೆಗಳನ್ನು ಜಾಗೃತಿಗೊಳಿಸುತ್ತದೆ.

ಬಾಟಲಿ ನೀರಿನಲ್ಲಿ ಸಾಮಾನ್ಯವಾಗಿ ಕುಡಿಯುವ ನೀರಿನಷ್ಟೇ ಲವಣ ಮತ್ತು ಖನಿಜಗಳಿರುವಂತೆ ನೋಡಿಕೊಳ್ಳುವುದರಿಂದ ಬಾಟಲಿ ನೀರು ಹೆಚ್ಚು ಸುರಕ್ಷಿತವಾಗಿದೆ. ಆದರೆ ಈ ಪ್ಲಾಸ್ಟಿಕ್ ಸುರಕ್ಷಿತವೇ? ಕೆನಡಾದಲ್ಲಿರುವ Toxic-Free Canada ಸಂಸ್ಥೆ ಈ ಪ್ಲಾಸ್ಟಿಕ್ಕಿನಲ್ಲಿರುವ ನೀರು ಸಹಾ ಆರೋಗ್ಯಕ್ಕೆ ಉತ್ತಮವಲ್ಲ ಎಂದು ಹೇಳುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಬಿಸ್ಲೇರಿ ನೀರಿಗಿಂತ ನಲ್ಲಿ ನೀರು ಸುರಕ್ಷಿತವೇ?

bisphenol A ಅಥವಾ BPA ಎಂಬ ವಿಷ

bisphenol A ಅಥವಾ BPA ಎಂಬ ವಿಷ

ಈ ಆಪಾದನೆಗೆ ಮುಖ್ಯ ಕಾರಣ ಪ್ಲಾಸ್ಟಿಕ್ಕಿನಲ್ಲಿರುವ bisphenol A ಅಥವಾ BPA ಎಂದು ಕರೆಯಲಾಗುವ ರಾಸಾಯನಿಕವಾಗಿದೆ. ಆರೋಗ್ಯಕ್ಕೆ ಮಾರಕವಾದ ಈ ರಾಸಾಯನಿಕ ಅಲ್ಪ ಪ್ರಮಾಣದಲ್ಲಿ ನಮ್ಮ ಆಹಾರ ಮತ್ತು ಚರ್ಮದ ಮೂಲಕ ದೇಹವನ್ನು ಸೇರುತ್ತದೆ, The U.S. Food and Drug Administration (FDA)ಪ್ರಕಾರ ಈ ರಾಸಾಯನಿಕದ ಪ್ರಮಾಣ ದೇಹದಲ್ಲಿ ಹೆಚ್ಚಾದರೆ ಮೆದುಳಿನ ಕ್ಷಮತೆಯನ್ನು ಕ್ಷೀಣಿಸುವುದು, ವರ್ತನೆಯಲ್ಲಿ ಬದಲಾವಣೆ, ಗರ್ಭದಲ್ಲಿರುವ ಶಿಶುವಿನ, ಚಿಕ್ಕ ಮತ್ತು ದೊಡ್ಡ ಮಕ್ಕಳ ಪ್ರೋಸ್ಟ್ರೇಟ್ ಗ್ರಂಥಿಯ ಮೇಲೆ ಅಪಾಯಕರ ಪರಿಣಾಮ ಆಗಬಹುದು ಎಂದು ಎಚ್ಚರಿಸಿದೆ.

ಬಾಟಲಿಗಳಲ್ಲಿರುವ ರಾಸಾಯನಿಕ ವಸ್ತು

ಬಾಟಲಿಗಳಲ್ಲಿರುವ ರಾಸಾಯನಿಕ ವಸ್ತು

ಇದು ನಮ್ಮ ಜೀವನದಲ್ಲಿ ಸಾಮಾನ್ಯವಾಗಿರುವ ಕನ್ನಡಕ, ಫ್ಯಾಕ್ಸ್ ಕಳಿಸುವ ಕಾಗದ, ಆಹಾರವಸ್ತುಗಳನ್ನು ಸಂಗ್ರಹಿಸಿಡಲು ಉಪಯೋಗಿಸುವ ಪ್ಲಾಸ್ಟಿಕ್ ಡಬ್ಬಿಗಳು, ಹಲ್ಲುಗಳ ಕುಳಿಗಳನ್ನು ತುಂಬಿಸಲು ಉಪಯೋಗಿಸಲಾಗುವ ಸಿಮೆಂಟ್, ಲಘುಪಾನೀಯವನ್ನು ತುಂಬಿಸಲಾಗಿರುವ ಬಾಟಲಿಗಳು, ಮೊದಲಾದವು. ಇವನ್ನು ಮುಟ್ಟಿದ ಬಳಿಕ ಸೇವಿಸುವ ಆಹಾರದ ಮೂಲಕ, ಬಾಟಲಿಗಳಲ್ಲಿರುವ ದ್ರವಗಳನ್ನು ಕುಡಿಯುವ ಮೂಲಕ ರಾಸಾಯನಿಕ ನಮ್ಮ ದೇಹಗಳನ್ನು ಸೇರುತ್ತದೆ. ಆದರೆ ಹೊರಹೋಗದೇ ಸಂಗ್ರಹವಾಗುತ್ತಾ ಹೋಗುತ್ತದೆ.

ಈ ಪ್ಲಾಸ್ಟಿಕ್ ಬಾಟಲಿಗಳು ನಿಜಕ್ಕೂ ಅಪಾಯರಹಿತವೇ?

ಈ ಪ್ಲಾಸ್ಟಿಕ್ ಬಾಟಲಿಗಳು ನಿಜಕ್ಕೂ ಅಪಾಯರಹಿತವೇ?

ಪ್ಲಾಸ್ಟಿಕ್ ಅನ್ನು ಒಂದು ರಾಕ್ಷಸನಂತೆ ನೋಡುವ ಸಮಾಜ ಪ್ಲಾಸ್ಟಿಕ್ ಹೊರತಾಗಿ ಬದುಕುವುದು ಕಷ್ಟ. ಏಕೆಂದರೆ ಪ್ಲಾಸ್ಟಿಕ್ಕಿನ ಒಂದು ಮುಖ್ಯ ಗುಣ ಇದರ ಮರುಬಳಕೆ. ಆದರೆ ಜನತೆ ಪ್ಲಾಸ್ಟಿಕ್ ಅನ್ನು ಮರುಬಳಕೆಗೆ ಸಂಗ್ರಹಿಸಿ ನೀಡದೇ ಹಾಗೇ ತ್ಯಾಜ್ಯದಲ್ಲಿ ಎಸೆಯುವುದು ವಾತಾವರಣದ ಪ್ರದೂಷಣೆಗೆ ಮುಖ್ಯ ಕಾರಣವಾಗಿದೆ. ನೀರಿನ ಬಾಟಲಿಗಳೂ ಇದಕ್ಕೆ ಹೊರತಲ್ಲ. ಪ್ಲಾಸ್ಟಿಕ್ಕನ್ನು ಮರುಬಳಕೆ ಮಾಡಬಹುದಾದರೂ ಪೂರ್ಣವಾಗಿ ಇದನ್ನೇ ಹಾಕಲು ಸಾಧ್ಯವಿಲ್ಲ. ಒಂದು ಬಾರಿ ನಿರ್ಮಿತವಾದ ಪ್ಲಾಸ್ಟಿಕ್ ಅನ್ನು ಕೊಂಚ ಪ್ರಮಾಣದಲ್ಲಿ ಹೊಸ ಕಚ್ಚಾವಸ್ತುವಿನೊಡನೆ ಸೇರಿಸಿ ನಿರ್ಮಿಸಲಾಗುತ್ತದೆ.

ಪ್ಲಾಸ್ಟಿಕ್ ಮರುಬಳಕೆ

ಪ್ಲಾಸ್ಟಿಕ್ ಮರುಬಳಕೆ

ಪ್ರತಿಬಾರಿಯೂ ಪ್ಲಾಸ್ಟಿಕ್ ಮರುಬಳಕೆಯಾಗುತ್ತಿದ್ದಂತೇ ಹಳೆಯ ಪ್ಲಾಸ್ಟಿಕ್ ಮತ್ತೊಮ್ಮೆ ಕರಗಿ ಹೊಸ ಬಾಟಲಿಯಾಗಿ ಬರುತ್ತದೆ. ಈ ಪ್ಲಾಸ್ಟಿಕ್ ಪ್ರತಿಬಾರಿ ಕರಗಿದ್ದಷ್ಟೂ BPA ಬಿಡುಗಡೆಯಾಗುವ ಪ್ರಮಾಣ ಹೆಚ್ಚಾಗುತ್ತದೆ. ಅಂದರೆ ಬಾಟಲಿ ಹಳೆಯ ಪ್ಲಾಸ್ಟಿಕ್ಕಿನಿಂದ ತಯಾರಾದಷ್ಟೂ ಹೆಚ್ಚು ಅಪಾಯಕಾರಿಯಾಗಿದೆ. ಪ್ಲಾಸ್ಟಿಕ್ಕನ್ನು ಮಣ್ಣಿನಲ್ಲಿ ಹೂತರೆ ಈ ರಾಸಾಯನಿಕ ಮಣ್ಣಿನ ಮೂಲಕ ಸಸ್ಯಗಳು ಹೀರಿ ಆಹಾರದಲ್ಲಿ ಸೇರುವ ಅಪಾಯವಿದೆ. ಇದೇ ಪ್ರಕ್ರಿಯೆ ಮುಂದುವರೆದರೆ ಮುಂದಿನ ಜನಾಂಗ ಕುಡಿಯುವ ಜೀವಜಲವೂ ಪ್ಲಾಸ್ಟಿಕ್ಕಿನ ರಾಸಾಯನಿಕದಿಂದ ಕಲುಷಿತಗೊಂಡಿರುತ್ತದೆ.

ಬಾಟಲಿ ಮೇಲೆ ಮುದ್ರಿತವಾಗಿರುವ ನೀರೇ ಬಾಟಲಿಯೊಳಗೂ ಇರುತ್ತದೆಯೇ?

ಬಾಟಲಿ ಮೇಲೆ ಮುದ್ರಿತವಾಗಿರುವ ನೀರೇ ಬಾಟಲಿಯೊಳಗೂ ಇರುತ್ತದೆಯೇ?

ವಾಸ್ತವವಾಗಿ ಇದೊಂದು ಜಾಹೀರಾತು ತಂತ್ರ ಮಾತ್ರವಾಗಿದೆ. ಸರಿಸುಮಾರು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಷ್ಟೂ ವಿಧದ ಬಾಟಲಿ ನೀರು ಜಲಪಾತದಿಂದಲ್ಲ, ಬದಲಿಗೆ ನೀರಿನ ಸಂಸ್ಕರಣಾ ಘಟಕದಿಂದ ಬಂದಿದ್ದಾಗಿದೆ. ಕೆಲವು ಸಂಸ್ಥೆಗಳು ಮಾತ್ರ ಜಲಪಾತದ ನೀರನ್ನು ಸಂಸ್ಕರಿಸಿ ನೀರನ್ನು ನೀಡುತ್ತೇವೆಂದು ಖಡಾಖಂಡಿತವಾಗಿ ಹೇಳಿದರೂ ಅವರು ಒದಗಿಸಿದ ಎಲ್ಲಾ ನೀರೂ ಜಲಪಾತದಿಂದಲೇ ಬಂದಿದ್ದು ಎಂಬ ವಿಷಯವನ್ನು ಪ್ರಮಾಣಿಸಲು ಸಾಧ್ಯವಿಲ್ಲ.

ಬಾಟಲಿ ನೀರು ಹೇಗಿರುತ್ತದೆ?

ಬಾಟಲಿ ನೀರು ಹೇಗಿರುತ್ತದೆ?

ಹೆಚ್ಚಿನ ಸಂಸ್ಥೆಗಳು ಇದಕ್ಕೆ ಉಪಯೋಗಿಸುವ ನೀರು ಎಂದರೆ ಮುನಿಸಿಪಾಲಿಟಿ ಒದಗಿಸುವ ನಲ್ಲಿ ನೀರು. ಈ ನೀರನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಅಲ್ಟಾವಯೋಲೆಟ್ ಕಿರಣಗಳ ಮೂಲಕ ಹಾಯಿಸಿ ಅದರಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದುಬಿಡುವ ತಂತ್ರಜ್ಞಾನವನ್ನು ಅನುಸರಿಸುತ್ತಾರೆ. ಬಳಿಕ ಕೆಲವು ಫಿಲ್ಟರ್‌ಗಳನ್ನು ಅಳವಡಿಸಿ ದೊಡ್ಡ ಗಾತ್ರದ ಕಲ್ಮಶಗಳನ್ನು ತೆಗೆದುಬಿಡಲಾಗುತ್ತದೆ. ಹೀಗೇ ಲಭ್ಯವಾದ ನೀರಿನ ಬೆಲೆ ಲೀಟರಿಗೆ ಕೆಲವು ಪೈಸೆಗಳು ಮಾತ್ರ. ಮಾರಾಟ ಬೆಲೆ ಸುಮಾರು ಇಪ್ಪತ್ತು ರೂಪಾಯಿಯ ಆಸುಪಾಸು ಇರುತ್ತದೆ. ಅಂದರೆ ಇದರ ಲಾಭದ ಶೇಖಡಾವಾರು ಸುಮಾರು ಹತ್ತು ಸಾವಿರ ಆಗುತ್ತದೆ. ಬೆಚ್ಚಿ ಬಿದ್ದಿರಾ? ಹೌದು, ಇದೇ ಕಾರಣಕ್ಕೆ ದೊಡ್ಡ ದೊಡ್ಡ ಸಂಸ್ಥೆಗಳೂ ಕುಡಿಯುವ ನೀರಿನ ಬಾಟಲಿಗಳನ್ನು ಒದಗಿಸಲು ಮಾರುಕಟ್ಟೆಯಲ್ಲಿ ಮುನ್ನುಗ್ಗುತ್ತವೆ.

BPA ನಿಂದ ಮಾತ್ರವಲ್ಲ ಅಪಾಯ, ಬೇರೆಯೂ ಇವೆ

BPA ನಿಂದ ಮಾತ್ರವಲ್ಲ ಅಪಾಯ, ಬೇರೆಯೂ ಇವೆ

ಯಾವಾಗ FDA ಈ ವಿಷದ ಬಗ್ಗೆ ಮಾಹಿತಿ ನೀಡಿತೋ, ಆಗ ಎಲ್ಲಾ ಸಂಸ್ಥೆಗಳು ತಮ್ಮ ವ್ಯಾಪಾರ ಕಳೆದುಕೊಳ್ಳುವ ಭಯದಿಂದ ಕೂಡಲೇ ಬಾಟಲಿಗೆ ಉಪಯೋಗಿಸುವ ಪ್ಲಾಸ್ಟಿಕ್ ಗುಣಮಟ್ಟವನ್ನು ಕಠಿಣಗೊಳಿಸಿ ನಮ್ಮ ಬಾಟಲಿಗಳಲ್ಲಿ BPA ಇಲ್ಲ ಎಂದು ಪ್ರಚಾರ ಮಾಡತೊಡಗಿದವು. (ಫ್ರಿಜ್ಜಿನ ಬಾಗಿಲಿಗೆ ಉಪಯೋಗಿಸುವ ನಾರು CFC-chlorofluorocarbon ಓಜೋನ್ ಪದರಕ್ಕೆ ಹಾನಿಕರ ಎಂದು ಗೊತ್ತಾದ ತಕ್ಷಣ ಫ್ರಿಜ್ಜಿನ ಸಂಸ್ಥೆಗಳು ಈ ನಾರನ್ನು ಬದಲಿಸಿ ಬೇರೆ ಕಚ್ಚಾವಸ್ತು ಉಪಯೋಗಿಸಿದ ಕೂಡಲೇ ಈ ಫ್ರಿಜ್ಜನ್ನು ತಯಾರಿಸುವಲ್ಲಿ CFC ಬಳಸಿಲ್ಲ, ಇದು ವಾತಾವರಣಕ್ಕೆ ಹಿತಾಕರ ಎಂಬ ಜಾಹೀರಾತುಗಳನ್ನು ನೀಡಲ್ಲಿಲ್ಲವೇ? ಹಾಗೇ ಇದು ಕೂಡಾ) BPA ನಿಂದ ಮಾತ್ರ ಮುಕ್ತವಾದರೆ ಸಾಕೇ? ಬೇರೆ ಹಾನಿಕಾರಕ ರಾಸಾಯನಿಕಗಳಿಲ್ಲವೇ? ಇವೆ. ಆದರೆ Phthalates ಎಂಬ ಇನ್ನೊಂದು ರಾಸಾಯನಿಕ ಪ್ಲಾಸ್ಟಿಕ್ ಬಿಸಿಯಾದ ಕೂಡಲೇ ಆಹಾರದಲ್ಲಿ ಸೇರುತ್ತದೆ. ಇದೇ ಕಾರಣಕ್ಕೆ ಮೈಕ್ರೋವೇವ್ ಓವನ್‌ನಲ್ಲಿ ಉಪಯೋಗಿಸಲು ಸುರಕ್ಷಿತ ಎಂಬ ಮುದ್ರೆಯಿಲ್ಲದ ಯಾವುದೇ ಪ್ಲಾಸ್ಟಿಕ್ ಬಿಸಿ ಮಾಡಿದರೆ ಈ ಅಪಾಯಕರ ರಾಸಾಯನಿಕ ಆಹಾರದ ಮೂಲಕ ದೇಹವನ್ನು ಸೇರುತ್ತದೆ. ಇದು ಕ್ಯಾನ್ಸರ್ ಕಣಗಳನ್ನು ಉತ್ತೇಜಿಸಿ ವಿವಿಧ ಕ್ಯಾನ್ಸರ್‌ಗೆ ಮೂಲವಾಗಬಲ್ಲುದು. ನೀರಿನ ಬಾಟಲಿಯ ಪ್ಲಾಸ್ಟಿಕ್ ಸಹಾ ಮೈಕ್ರೋವೇವ್ ಓವನ್ ಸುರಕ್ಷಿತ ಪ್ಲಾಸ್ಟಿಕ್ ಅಲ್ಲ. ಹಾಗಾಗಿ ಬಿಸಿ ಮಾಡುವುದುದಿರಲಿ, ಬಿಸಿಲಿನಲ್ಲಿಟ್ಟ ಬಾಟಲಿಯಿಂದಲೂ ವಿಷಕಾರಿ ರಾಸಾಯನಿಕ ನೀರಿನಲ್ಲಿ ಸೇರಬಹುದು.

ಅಮೇರಿಕಾದಲ್ಲಿ ಬಾಟಲಿ ನೀರಿಗೆ ಬಹಿಷ್ಕಾರ

ಅಮೇರಿಕಾದಲ್ಲಿ ಬಾಟಲಿ ನೀರಿಗೆ ಬಹಿಷ್ಕಾರ

ಈ ಅಪಾಯವನ್ನು ಮನಗಂಡ ಹಲವು ಸಂಸ್ಥೆಗಳು ಬಾಟಲಿ ನೀರನ್ನು ಉಪಯೋಗಿಸುವುದನ್ನೇ ಬಿಟ್ಟಿವೆ. ಇವುಗಳಲ್ಲಿ ಪ್ರಮುಖವಾಗಿ ಗ್ರಾಂಡ್ ಕಾನ್ಯನ್ ನ್ಯಾಷನಲ್ ಪಾರ್ಕ್, Chez Panisse ಹೋಟೆಲ್, ನ್ಯೂಯಾರ್ಕ್ ನಗರದ Fashion Week ಸಂಸ್ಥೆ ಮೊದಲಾದವು. ಅಮೇರಿಕಾದ ಮಿನ್ನೆಪಾಲಿಸ್ ನಗರದ AVEDA ಸಂಸ್ಥೆ ನ್ಯೂಯಾರ್ಕ್ ನಗರದ ವಾತಾವರಣ ಸಂರಕ್ಷಣಾ ಸಂಸ್ಥೆಯೊಂದಿಗೆ ಜಂಟಿಯಾಗಿ ನ್ಯೂಯಾರ್ಕ್ ನಗರದ ಹಲವೆಡೆ ಉಚಿತವಾಗಿ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿ ರಹಿತವಾಗಿ ನೀಡಲು ಮುಂದೆ ಬಂದು ಸ್ವಚ್ಛನೀರನ್ನು ಕುಡಿಯಲು ಪ್ರೇರಣೆ ನೀಡಿದೆ.

ಬಾಟಲಿ ನೀರು ಸಂಪೂರ್ಣವಾಗಿ ಬ್ಯಾಕ್ಟೀರಿಯಾದಿಂದ ಮುಕ್ತವೇ

ಬಾಟಲಿ ನೀರು ಸಂಪೂರ್ಣವಾಗಿ ಬ್ಯಾಕ್ಟೀರಿಯಾದಿಂದ ಮುಕ್ತವೇ

ಪ್ರತಿಬಾರಿ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಿದಾಗ ಅದರ ಮೂಲಕ ಬ್ಯಾಕ್ಟೀರಿಯಾಗಳು ಪ್ರವೇಶ ಪಡೆಯುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಏಕೆಂದರೆ ಮಾರುಕಟ್ಟೆಯಲ್ಲಿ ಬಂದ ಬಳಿಕ ಮರುಬಳಕೆಯಾಗುವವರೆಗೆ ಪ್ಲಾಸ್ಟಿಕ್ ಬಾಟಲಿ ಎಲ್ಲೆಲ್ಲೋ, ಯಾವ್ಯಾವುದೋ ಕಸ ಕಲ್ಮಶಗಳ ಸ್ನಾನ ಮಾಡಿ ಬಂದಿರುತ್ತದೆ. ಮರುಬಳಕೆ ಮಾಡುವವರು ಪ್ರತಿ ಬಾಟಲಿಯನ್ನೂ ಸ್ವಚ್ಛವಾಗಿ ತೊಳೆದು ಮರುಬಳಕೆ ಮಾಡುತ್ತಾರೆ ಎನ್ನುವುದು ಮೊಲದ ಕೊಂಬಿನಷ್ಟೇ ಸತ್ಯ. ಅಮೇರಿಕಾದಲ್ಲಿ ಒಂದು ಶಾಲೆಗೆ ಒದಗಿಸಿದ್ದ ಬಾಟಲಿ ನೀರಿನಲ್ಲಿ ನಲ್ಲಿ ನೀರನ್ನು ಕೊಂಚ ಕುದಿಸಿದಂತೆ ಮಾಡಿದಾಗ ಇರುವಷ್ಟೇ ಬ್ಯಾಕ್ಟೀರಿಯಾಗಳಿದ್ದುದು ಕಂಡುಬಂದಿದೆ. ಅಮೇರಿಕಾದಲ್ಲೇ ಹಾಗಿರಬೇಕಾದರೆ ಭಾರತದಲ್ಲಿನ ಬಾಟಲಿ ನೀರಿನಲ್ಲಿ ಇನ್ನೆಷ್ಟು ಬ್ಯಾಕ್ಟೀರಿಯಾಗಳಿರಬಹುದು ಎಂದು ಊಹಿಸಬಹುದು.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Is it safe to drink water from plastic bottles?

Drinking water from a plastic water bottle poses serious health risks to you and your family. Let's take a look at some of these dangers to give you a better idea of why bottled water is not the healthy choice you've been led to believe it is.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X