For Quick Alerts
ALLOW NOTIFICATIONS  
For Daily Alerts

ಅಯ್ಯಯ್ಯೋ ಫೋನ್ ಸಹವಾಸವೇ ಬೇಡ! ಏನಿದರ ರಹಸ್ಯ?

By manu
|

ಸುಮಾರು ಮೂವತ್ತು ವರ್ಷ ಹಿಂದೆ ಮನೆಗೊಂದು ಲ್ಯಾಂಡ್ ಲೈನ್ ಹೊಂದುವುದೇ ಬಹಳ ತ್ರಾಸದಾಯಕ ಮತ್ತು ಪ್ರತಿಷ್ಟೆಯ ಸಂಗತಿಯಾಗಿತ್ತು. ತಂತ್ರಜ್ಞಾನದಲ್ಲಿ ಬೆಳವಣಿಗೆಯಾಗುತ್ತಿದ್ದಂತೆ ಇಂದು ನಮ್ಮೆಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್‌ಗಳಿವೆ.

ನಮ್ಮ ಗೆಳೆಯನಾಗಿ, ಆತ್ಮೀಯ ಸಲಹೆಗಾರನಾಗಿ, ಛಾಯಾಗ್ರಾಹಕನಾಗಿ, ದಾರಿತೋರುಕನಾಗಿ, ಸಂದೇಶವಾಹಕನಾಗಿ, ಅಂಚೆಯಣ್ಣನಾಗಿ, ಟಾರ್ಚ್ ದೀಪ ತೋರುವವನಾಗಿ, ಸ್ನೇಹಿತನ ನಡುವಣ ಸೇತುವೆಯಾಗಿ ಇದು ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ಉಪಕಾರಿಯಾದರೂ ಕೆಲವು ವಿಷಯಗಳಲ್ಲಿ ಮನೆಗೆ ಮಾರಿಯಾಗಿದೆ.

ನಿತ್ಯವೂ ತಮ್ಮ ತಮ್ಮ ಫೋನುಗಳಲ್ಲಿ ವ್ಯಸ್ತರಾಗುವ ನಾವೆಲ್ಲಾ ಮನೆಯಲ್ಲಿ ಎಲ್ಲರೊಂದಿಗೆ ಕುಳಿತು ಜೊತೆಯಾಗಿ ಊಟ ಮಾಡುವಾಗಲೂ ನಮ್ಮ ದೃಷ್ಟಿಗಳು ನಮ್ಮ ಫೋನಿನತ್ತಲೇ ನೆಟ್ಟಿರುತ್ತವೆ. ನಮ್ಮ ಕಣ್ಣುಗಳು ದಿನದಲ್ಲಿ ಮೊತ್ತ ಮೊದಲನೆಯದಾಗಿ ಮತ್ತು ಕಟ್ಟ ಕಡೆಯದಾಗಿ ನೋಡುವುದೇ ಈ ಫೋನಿನ ಪರದೆಯನ್ನು. ಇನ್ನು ಪರೋಕ್ಷವಾಗಿ ದಿನದ ಇಪ್ಪತ್ತನಾಲ್ಕು ಗಂಟೆ ಕೈಯಲ್ಲಿ ಹಿಡಿದುಕೊಂಡೇ ಇರುವುದರಿಂದ ಕ್ರಿಮಿಗಳು ಆವರಿಸಿಕೊಳ್ಳುವ ಸಂಭವ ತುಂಬಾ ಹೆಚ್ಚು. ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ ಸ್ಮಾರ್ಟ್ ಯೋಗ!

ಒಂದು ಸಮೀಕ್ಷೆಯ ಪ್ರಕಾರ ನಮ್ಮ ಮೊಬೈಲು ಫೋನುಗಳ ಮೇಲೆ ಶೌಚಾಲಯದ ಕಮೋಡ್ ನ ಕುಳಿತುಕೊಳ್ಳುವ ಕವಚದ ಮೇಲಿರುದಕ್ಕಿಂತಲೂ ಹೆಚ್ಚಿನ ಸೂಕ್ಷ್ಮಾಣು ಮತ್ತು ಕ್ರಿಮಿಗಳು ನಮ್ಮ ಮೊಬೈಲು ಫೋನುಗಳ ಮೇಲಿರುತ್ತವೆ. ಪದೇ ಪದೇ ಒರೆಸುತ್ತಿದ್ದರೂ ಈ ಕ್ರಿಮಿಗಳು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಬನ್ನಿ ಇನ್ನಷ್ಟು ಮಾಹಿತಿಯನ್ನು ಸ್ಲೈಡ್ ಶೋ ಮೂಲಕ ಓದಿ ಮೊಬೈಲ್ ಫೋನ್‌ಗಳು ಮಿದುಳಿಗೆ ಮಾರಕ ಹೇಗೆ?

ನಿಮ್ಮ ಮೊಬೈಲಿನ ಮೇಲೆ ಕ್ರಿಮಿಗಳು ಬರುವುದಾದರೂ ಹೇಗೆ?

ನಿಮ್ಮ ಮೊಬೈಲಿನ ಮೇಲೆ ಕ್ರಿಮಿಗಳು ಬರುವುದಾದರೂ ಹೇಗೆ?

ನಿಮ್ಮ ಸ್ಮಾರ್ಟ್ ಫೋನಿನ ಬಳಕೆ ಎಷ್ಟು ಹೆಚ್ಚೋ ಅಷ್ಟೇ ಹೆಚ್ಚು ನೀವು ಅದನ್ನು ಮುಟ್ಟುತ್ತಲೇ ಇರಬೇಕಾಗುತ್ತದೆ. ಪ್ರತಿ ಬಾರಿ ಮುಟ್ಟಿದಾಗಲೂ ಪರದೆಯ ಮೇಲೆ ನಾವು ಕ್ರಿಮಿಗಳನ್ನು ದಾಟಿಸುತ್ತಾ ಅವುಗಳ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗುತ್ತೇವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಬೈಲಿನ ಮೇಲೆ ಕ್ರಿಮಿಗಳು ಬರುವುದಾದರೂ ಹೇಗೆ?

ಮೊಬೈಲಿನ ಮೇಲೆ ಕ್ರಿಮಿಗಳು ಬರುವುದಾದರೂ ಹೇಗೆ?

ಪರದೆಯ ಮೇಲಿರುವ ಅವುಗಳನ್ನು ಸುಲಭವಾಗಿ ತೊಡೆಯಬಹುದಾದರೂ ಅತಿ ಕಿರಿದಾದ ಅಂಚು ಮತ್ತು ಸ್ಪೀಕರ್, ಮೈಕ್ರೋಫೋನ್, ಸಿಮ್ ಸ್ಲಾಟ್, ಆಡಿಯೋ ಜಾಕ್ ಸ್ಲಾಟ್ ಇರುವೆಡೆಗಳಲ್ಲಿ ಇವು ಸುಲಭವಾಗಿ ನುಸುಳಿ ಬಿಟ್ಟರೆ ಅವುಗಳನ್ನು ನಿವಾರಿಸುವುದು ಭಾರೀ ಕಷ್ಟ.

ಊಟವಾದ ಬಳಿಕ ಪರದೆಯನ್ನು ಮುಟ್ಟುವುದು

ಊಟವಾದ ಬಳಿಕ ಪರದೆಯನ್ನು ಮುಟ್ಟುವುದು

ಇಂದು ನಮಗೆಲ್ಲಾ ಸ್ಮಾರ್ಟ್ ಫೋನುಗಳನ್ನು ಬಿಟ್ಟಿರದೇ ಇರಲು ಒಂದು ಘಳಿಗೆ ಸಾಧ್ಯವಿಲ್ಲ. ಹೋಟೆಲಿನಲ್ಲಿ ಸುಮ್ಮನೇ ಒಂದು ದೃಷ್ಟಿ ಸುತ್ತಲೂ ಬೀರಿ. ಊಟ ಮಾಡುತ್ತಿರುವವರಲ್ಲಿ ಕೆಲವರಾದರೂ ಊಟದ ನಡುವೆಯೇ ಪರದೆಯನ್ನೂ ವೀಕ್ಷಿಸುತ್ತಿರುತ್ತಾರೆ. ಊಟದ ಬಳಿಕ ಕೈ ಒರೆಸುವಷ್ಟೂ ಪುರುಸೊತ್ತು ಕೊಡದೇ ಮೊಬೈಲನ್ನು ಕೈಗೆ ತೆಗೆದುಕೊಂಡು ಮತ್ತೆ ಪರದೆಯನ್ನು ಮುಟ್ಟುವ ಮೂಲಕ ಕೈಯಲ್ಲಿ ಇನ್ನೂ ಉಳಿದಿರಬಹುದಾದ ಎಣ್ಣೆಯ ಪಸೆ, ಆಹಾರದ ಸೂಕ್ಷ್ಮ ತುಣುಕುಗಳು ಮೊದಲಾದವು ಪರದೆಯ ಮೇಲೆ ದಾಟುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಊಟವಾದ ಬಳಿಕ ಪರದೆಯನ್ನು ಮುಟ್ಟುವುದು

ಊಟವಾದ ಬಳಿಕ ಪರದೆಯನ್ನು ಮುಟ್ಟುವುದು

ಈ ಪರದೆಯನ್ನು ಒರೆಸುವಾಗ ಈ ಪಸೆಗಳು ಅಂಚುಗಳ ಬಿರುಕುಗಳಲ್ಲಿ ಇಳಿದು ಬ್ಯಾಕ್ಟೀರಿಯಾಗಳಿಗೆ ಮೃಷ್ಟಾನ್ನ ಭೋಜನ ದೊರಕಿಸುತ್ತವೆ. ಇವನ್ನು ಉಂಡ ಬ್ಯಾಕ್ಟೀರಿಯಾಗಳು ಕಡೆಗೊಮ್ಮೆ ಅಗಾಧವಾಗಿ ಅಭಿವೃದ್ದಿ ಹೊಂದಿ ನಿಮ್ಮನ್ನು ಕಾಯಿಲೆಗೆ ಗುರಿಪಡಿಸುವ ಮೂಲಕ ಉಂಡ ಮನೆಗೆ ದ್ರೋಹ ಬಗೆಯುತ್ತವೆ.

ಶೌಚಾಲಯದಲ್ಲಿ ಅಥವಾ ಹೊರಬಂದ ತಕ್ಷಣ ಮುಟ್ಟುವುದು

ಶೌಚಾಲಯದಲ್ಲಿ ಅಥವಾ ಹೊರಬಂದ ತಕ್ಷಣ ಮುಟ್ಟುವುದು

ಯುವಜನರಲ್ಲಿ ಕೆಲವರಿಗೆ ಶೌಚಾಲಯದಲ್ಲಿಯೂ ಸ್ಮಾರ್ಟ್ ಫೋನ್ ಬಿಟ್ಟಿರಲಾಗದು. ಈ ಪರಿಯಿಂದ ಮೊಬೈಲು ಎಲ್ಲಿ ಬೀಳಬಾರದೋ ಅಲ್ಲಿ ಬೀಳುವುದು ಸಹಾ ಉಂಟು. ಶೌಚಾಲಯದಲ್ಲಿ ಕ್ರಿಮಿಗಳು ಪರದೆಯ ಮತ್ತು ಅಂಚುಗಳ ಮೂಲಕ ಬಿರುಕುಗಳ ಒಳಗೆ ತೂರಿಕೊಳ್ಳುವ ಸಂಭವ ತುಂಬಾ ಹೆಚ್ಚು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶೌಚಾಲಯದಲ್ಲಿ ಅಥವಾ ಹೊರಬಂದ ತಕ್ಷಣ ಮುಟ್ಟುವುದು

ಶೌಚಾಲಯದಲ್ಲಿ ಅಥವಾ ಹೊರಬಂದ ತಕ್ಷಣ ಮುಟ್ಟುವುದು

ಅದರಲ್ಲೂ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವಾಗ ಸ್ಮಾರ್ಟ್ ಫೋನಿನ ಬಳಕೆಯಿಂದ ಕ್ರಿಮಿಗಳು ದಾಟುವ ಸಂಭವ ಸಾವಿರಾರು ಪಟ್ಟು ಹೆಚ್ಚುತ್ತದೆ. ಅಲ್ಲದೇ ಸಾರ್ವಜನಿಕ ಶೌಚಾಲಯದಲ್ಲಿ ಸಾವಿರಾರು ಜನರು ಬಂದು ಹೋಗುತ್ತಿರುವುದರಿಂದ ವಿವಿಧ ಬಗೆಯ ಕ್ರಿಮಿಗಳೂ ಆಗಮಿಸಬಹುದು, ಅವುಗಳಲ್ಲಿ ಕೆಲವು ಮಾರಕವೂ ಆಗಿರಬಹುದು.

ಸಾರ್ವಜನಿಕ ಸಾರಿಗೆಯಲ್ಲಿ ಪಯಣಿಸುತ್ತಿರುವಾಗ ಬಳಸುವುದು

ಸಾರ್ವಜನಿಕ ಸಾರಿಗೆಯಲ್ಲಿ ಪಯಣಿಸುತ್ತಿರುವಾಗ ಬಳಸುವುದು

ಬಸ್, ರೈಲು ಮೊದಲಾದ ಸಾರ್ವಜನಿಕ ಸಾರಿಗೆಗಳಲ್ಲಂತೂ ಜನರು ಒಂದು ಕ್ಷಣ ಬಿಡದೇ ತಮ್ಮ ಮೊಬೈಲುಗಳನ್ನು ಬಳಸುವುದನ್ನು ಗಮನಿಸಬಹುದು. ಇನ್ನೂ ಕೆಲವರು ತಮ್ಮ ಹೆಡ್ ಫೋನುಗಳನ್ನು ಅತ್ಯಧಿಕ ದನಿಗೇರಿಸಿ ಇತರರಿಗೆ ಇಲಿ ಕಿಚಿಗುಟ್ಟುವ ಶಬ್ದದಿಂದ ಕಿರಿಕಿರಿ ಏರಿಸುತ್ತಾ ತಾವೂ ಓಲಾಡುತ್ತಾ ಬೇರೆಯೇ ಲೋಕದಲ್ಲಿ ವಿಹರಿಸುತ್ತಿದ್ದಂತಿದ್ದರೆ ಇತ್ತ ಸಾವಿರಾರು ಜನರು ಮುಟ್ಟಿದ ಕಂಭ, ಹಿಡಿಕೆ, ಸೀಟ್ ಮೇಲಿರುವ ಅಡ್ಡಕಂಬಿ ಮೊದಲಾದವುಗಳನ್ನು ಮುಟ್ಟುವುದರಿಂದ ನಂತರ ಅದೇ ಬೆರಳುಗಳಿಂದ ಸ್ಮಾರ್ಟ್ ಫೋನನ್ನು ಮುಟ್ಟುವುದರಿಂದ ನಿಮ್ಮ ಮೊಬೈಲು ಶೀಘ್ರವೇ ಕ್ರಿಮಿಗಳ ಆಗರವಾಗುತ್ತದೆ. ಶೌಚಾಲಯದಲ್ಲಾದರೆ ಕೈ ತೊಳೆಯಲು ನೀರಾದರೂ ಇರುತ್ತದೆ. ಇಲ್ಲಿ ಅದಕ್ಕೆ ಯಾವುದೇ ವ್ಯವಸ್ಥೆ ಇರುವುದಿಲ್ಲವಾದುದರಿಂದ ಕ್ರಿಮಿಗಳು ದಾಟುವ ಸಂಭವ ಬಹಳಷ್ಟು ಹೆಚ್ಚುತ್ತದೆ.

ನಿಮ್ಮ ಬೆವರಿನ ಮೂಲಕ ದಾಟಬಹುದು

ನಿಮ್ಮ ಬೆವರಿನ ಮೂಲಕ ದಾಟಬಹುದು

ಇಂದು ಫೋನ್ ಕರೆಗಳು ನಿತ್ಯದ ಭಾಗವಾಗಿಬಿಟ್ಟಿವೆ. ಕೆಲವು ಕರೆಗಳಂತೂ ಅರ್ಧ ಘಂಟೆ, ಒಂದು ಘಂಟೆಗೂ ವಿಸ್ತರಿಸಬಹುದು. ಪ್ರತಿ ಬಾರಿ ಫೋನ್ ಕಿವಿಯಲಿಟ್ಟಾಗ ಬೆವರು ನೇರವಾಗಿ ಸ್ಪೀಕರಿನೊಳಗೆ ನುಸುಳುವ ಸಾಧ್ಯತೆ ಹೆಚ್ಚು. ಅಲ್ಲದೇ ಬೆರಳುಗಳಲ್ಲಿರುವ ಬೆವರಿನ ಮೂಲಕವೂ ಬೆವರು, ತನ್ಮೂಲಕ ಕ್ರಿಮಿಗಳು ನಿಮ್ಮ ಫೋನಿನೊಳಗೆ ಸುಲಭ ದಾಖಲಾತಿ ಪಡೆಯುತ್ತವೆ.

ಸಾಕುಪ್ರಾಣಿಗಳೊಂದಿಗೆ ಆಡುವಾಗಲೂ ಸ್ಮಾರ್ಟ್ ಫೋನ್ ಬಳಸುವುದು

ಸಾಕುಪ್ರಾಣಿಗಳೊಂದಿಗೆ ಆಡುವಾಗಲೂ ಸ್ಮಾರ್ಟ್ ಫೋನ್ ಬಳಸುವುದು

ನಿಮ್ಮ ಸಾಕುಪ್ರಾಣಿಗಳಲ್ಲಿ ಕ್ರಿಮಿಗಳ ಪ್ರಮಾಣ ಹೆಚ್ಚಿರುತ್ತದೆ. ಅವುಗಳ ಮೈಮೇಲೆ ಇರುವ ದಟ್ಟನೆಯ ಕೂದಲು ಸಹಾ ಇದಕ್ಕೆ ಪೂರಕವಾಗಿದೆ. ಪ್ರಾಣಿಗಳನ್ನು ಮುಟ್ಟಿದ ಬಳಿಕ ಕೈ ತೊಳೆದೇ ನಿಮ್ಮ ಸ್ಮಾರ್ಟ್ ಫೋನನ್ನು ಮುಟ್ಟುತ್ತೀರೆಂದು ಯಾವುದೇ ಖಾತ್ರಿ ಇರುವುದಿಲ್ಲವಾದುದರಿಂದ ಪ್ರಾಣಿಗಳ ಕ್ರಿಮಿಗಳೂ ಫೋನ್ ಒಳಗೆ ದಾಖಲು ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಅಂದರೆ ಈಗ ನಿಮ್ಮ ಫೋನ್ ನೊಳಗೆ ಪ್ರಾಣಿಜನ್ಯ ಬ್ಯಾಕ್ಟೀರಿಯಾಗಳೂ ಆಗಮಿಸಿ ಒಳಗೆ ವಿವಿಧ ಬ್ಯಾಕ್ಟೀರಿಯಾದ ಕಾಲೋನಿಗಳೇ ಏಳಲು ಸಾಧ್ಯವಾಗಬಹುದು.

ಬೇರೆಯವರು ನಿಮ್ಮ ಫೋನನ್ನು ಮುಟ್ಟಿದಾಗ

ಬೇರೆಯವರು ನಿಮ್ಮ ಫೋನನ್ನು ಮುಟ್ಟಿದಾಗ

ನಿಮ್ಮ ಫೋನನ್ನು ನೀವು ಮಾತ್ರವೇ ಉಪಯೋಗಿಸುತ್ತೀರೆಂದು ಹೇಳಲಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅದನ್ನು ಬೇರೆಯವರ ಕೈಗೆ ಕೊಡಬೇಕಾಗುತ್ತದೆ. ನಿಮಗೆ ಬಂದ ಕರೆಯನ್ನು ಇತರಿಗೆ ಮಾತನಾಡಲು ನೀಡಿದಾಗ, ನಿಮ್ಮ ಫೋಟೋ ತೆಗೆಯಲು ಬೇರೆಯವರ ಸಹಾಯ ಪಡೆದಾಗ ಅಥವಾ ಬೇರಾವುದೋ ಕಾರಣಕ್ಕೆ ಇತರರು ನಿಮ್ಮ ಫೋನನ್ನು ಮುಟ್ಟುವಾಗ ಅವರಿಂದ ಕ್ರಿಮಿಗಳು ನಿಮ್ಮ ಫೋನಿಗೆ ದಾಟಬಹುದು. ಒಂದು ಸಂಶೋಧನೆಯ ಪ್ರಕಾರ 82% ಜನರ ಕೈಗಳು ಕ್ರಿಮಿಗಳಿಂದ ಕೂಡಿರುತ್ತವೆ. ಅಂದರೆ ನಿಮ್ಮ ಫೋನಿಗೆ ಕ್ರಿಮಿಗಳು ಆಗಮಿಸುವ ಸಾಧ್ಯತೆಯೂ 82% ಹೆಚ್ಚು.

ನೀವು ಫೋನನ್ನು ಬೇರೆಲ್ಲೋ ಇಟ್ಟಿದ್ದಾಗ

ನೀವು ಫೋನನ್ನು ಬೇರೆಲ್ಲೋ ಇಟ್ಟಿದ್ದಾಗ

ನಿಮ್ಮ ಕೆಲಸದ ಸ್ಥಳವನ್ನು ನೀವು ಅಚ್ಚುಕಟ್ಟಾಗಿಟ್ಟಿದ್ದರೂ ನೀವು ಭೇಟಿ ನೀಡುವ ಇತರರು ತಮ್ಮ ಕೆಲಸದ ಸ್ಥಳಗಳನ್ನು ಅಚ್ಚುಕಟ್ಟಾಗಿಟ್ಟಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಅಂತಹ ಸ್ಥಳಗಳಲ್ಲಿ ವಿವಿಧ ಕ್ರಿಮಿಗಳು ಈಗಾಗಲೇ ಮನೆ ಮಾಡಿಕೊಂಡಿರುತ್ತವೆ. ಮೇಜು, ಡೆಸ್ಕು, ಚೀಲ, ಡ್ರಾವರ್, ಜೇಬು ಮೊದಲಾದ ಹತ್ತು ಹಲವು ಸ್ಥಳಗಳಲ್ಲಿ ಫೋನುಗಳನ್ನಿರಿಸಿದಾಗ ಅಲ್ಲಿಂದ ಕೆಲವು ಕ್ರಿಮಿಗಳು ತಮ್ಮ ಹಳೆಜಾಗದಿಂದ ಬೆಚ್ಚನೆಯ ನಿಮ್ಮ ಮೊಬೈಲಿನೊಳಗೆ ದಾಟಿಕೊಂಡುಬಿಡುತ್ತವೆ.

English summary

How dirty is your phone?

Let’s admit it, in this day and age, we feel handicapped without our smartphone. It is our friend, philosopher, guide and so much more! We practically live with it 24×7 but how many times do we clean it? No, simply wiping it does not get rid of germs. Our phone is perhaps one of our dirtiest possessions with bacteria all over it. In fact, it is likely to have more germs than on a toilet seat.
X
Desktop Bottom Promotion